ಐಟಿ ಪದವೀಧರ ಈದೀಗ ಪ್ರಗತಿಪರ ಕೃಷಿಕ
Team Udayavani, Aug 17, 2020, 2:45 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭಾರತದ ಶೇ.70 ರಷ್ಟು ಆದಾಯ ಕೃಷಿ ಕ್ಷೇತ್ರದಿಂದ ಬರುತ್ತದೆ.
ಆದರೆ ನಮ್ಮಲ್ಲಿ ಕೃಷಿ ಎಂದರೆ ಸಾಕು ಮೂಗು ಮುರುಯುವವರೆ ಜಾಸ್ತಿ.
ಆದರೆ ಭೂಮಿ ತಾಯಿ ಕೈ ಹಿಡಿದರೆ ಅದೃಷ್ಟ ಬದಲಾದಂತೆ ಇದಕ್ಕೆ ಉದಾಹರಣೆ ಗುಜರಾತಿನ ದೇವೇಶ್ ಪಟೇಲ್.
ಐಟಿ ಪದವೀಧರನಾಗಿರುವ ಇವರು ಈದೀಗ ಪ್ರಗತಿಪರ ಕೃಷಿಕ.
37 ಹರೆಯದ ದೇವೇಶ್ ಪಟೇಲ್ ಹೇಳುವಂತೆ ಆತನಿಗೆ ಕೃಷಿ ಎಂದರೆ ಎಲ್ಲಿದಲ್ಲದ ಪ್ರೀತಿ, ಉತ್ಸಾಹ ಆದರೆ ಮನೆಯವರುಗೆ ಪದವಿ ಪಡೆಯಬೇಕು ಹಂಬಲ ಹೊಂದಿದ್ದರು ಎನ್ನುತ್ತಾರೆ.
ದೇವೇಶ್ ಪಟೇಲ್ ವಾರ್ಷಿಕವಾಗಿ 6 ಟನ್ ಅರಶಿನವನ್ನು ಬೆಳೆಯುತ್ತಾರೆ. ಸಂಪೂರ್ಣ ಸಾವಯವ ಗೊಬ್ಬರಗಳ್ನನು ಬಳಸಿಕೊಂಡು ಇವರು ಅರಶಿನ, ಶುಂಠಿ, ಗೆಣಸು ಅನ್ನು ಬೆಳೆಯುತ್ತಾರೆ. 2005ರಲ್ಲಿ ಸತ್ವ ಆರ್ಗನಿಕ್ ಸಂಸ್ಥೆ ಸ್ಥಾಪಿಸಿದ ಇವರು ಅರಶಿನ ಉಪ್ಪಿನಕಾಯಿ, ಅರಶಿನ ಲ್ಯಾಟೆ, ಶುಂಠಿ ಪುಡಿ ಸೇರಿದಂತೆ 27 ಉತ್ಪನ್ನಗಳನ್ನು ಮಾರಾಟಮಾಡುತ್ತಿದ್ದಾರೆ. ತಿಂಗಳಿಗೆ 15,000 ಆರ್ಡರ್ ಅನ್ನು ಈ ಸಂಸ್ಥೆ ಪಡೆಯುತ್ತದೆ. ಇವರ ಸ್ವತ ಉತ್ಪನ್ನವು ಆರ್ಗನಿಕ್ ಇಂಡಿಯಾದ ಎಫ್ಎಸ್‌ಎಸ್‌ಎಐ ನಿಂದ ಮಾನ್ಯತೆ ಪಡೆದಿದೆ.
ವಿದೇಶಗಳಿಗೆ ರಪ್ಪು
ಅಮೆರಿಕ ಸಹಿತ ಯುರೋಪಿನ ನಾನಾ ದೇಶಗಳಿಗೆ ಸತ್ವ ಆರ್ಗನಿಕ್ ನ ಉತ್ಪನ್ನಗಳು ಮಾರಾಟವಾಗುತ್ತವೆ. ಇದರಿಂದ ಇವರು ವಾರ್ಷಿಕವಾಗಿ 1.5 ಕೋಟಿ ಆದಾಯಗಳಿಸುತ್ತಿದ್ದಾರೆ.
ಸಾವಯವ ಕೃಷಿ
ಇವರ ಕುಟುಂಬದ ಬಳಿ ಇದ್ದ 12 ಎಕ್ರೆ ಹಾಗೂ ಸ್ನೇಹಿತರು ಮತ್ತು ಸಂಬಂಧಿಕರಿಂದ ಹೆಚುವರಿ 5 ಎಕ್ರೆ ಪಡೆದುಕೊಂಡು ಸಾವಯುವ ಕೃಷಿ ಮಾಡುತ್ತಿದ್ದಾರೆ. 1992ರ ವರೆಗೆ ರಾಸಾಯನಿಕವನ್ನು ಬಳಸಿಕೊಂಡು ಇವರ ಕುಟುಂಬ ಕೃಷಿಕಾಯಕ ಮಾಡುತ್ತಿದ್ದು 1992ರ ಅನಂತರ ಸಾವಯವ ಕೃಷಿಯತ್ತ ಮುಖಮಾಡಿದರು. ಸಾವಯವ ಕೃಷಿ ಕುರಿತು ಹೇಳುವ ದೇವೇಶ್ ಪಟೇಲ್ ಭೂಮಿಯನ್ನು ನಮ್ಮ ತಾಯಿ ಎಂದು ಪೂಜಿಸುತ್ತೇವೆ ಆಗಿರುವ ತಾಯಿ ವಿಷವೂನಿಸುವುದು ಎಷ್ಟು ಸರಿ. ಜನರಿಗೆ ತಾಜಾ ಮತ್ತು ರಾಸಯನಿಕ ಆಹಾರಗಳನ್ನು ಒದಗಿಸುವುದು ರೈತರ ಸಾಮಾಜಿಕ ಜವಾಬ್ದಾರಿಯಾಗಿದೆ.
ಸಂಸ್ಥೆಯ ಪ್ರಾರಂಭದಲ್ಲಿ ಇವರು ವಿವಿಧ ಸಂಘ-ಸಂಸ್ಥೆಗಳು ನಡೆಸುವ ಸಭೆಗಳಿಗೆ ತೆರಳಿ ಅಲ್ಲಿ ತಮ್ಮ ಉತ್ಪನ್ನದ ಕುರಿತು ಹೇಳುತ್ತಿದ್ದರು. ಅನಂತರ ಮನೆ ಮನೆಗಳಿಂದ ಆರ್ಡರ್ ಬರಲು ಆರಂಭವಾಯಿತು. ಕಾಲೇಜಿಗೆ ಹೋಗುವ ದಾರಿಯಲ್ಲಿ ಎಲ್ಲ ಮನೆಗಳಿಗೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು. ತಮ್ಮ ಪ್ರದೇಶದ ಹವಾಮಾನಕ್ಕೆ ಅನುಗುಣವಾಗಿ ಗೆಡ್ಡೆ ತರಕಾರಿಗಳನ್ನು ಬೆಳೆಯುತ್ತಾರೆ. ಆಲೂಗಡ್ಡೆ, ಅರಶಿನ, ಶುಂಠಿ, ಸಿಹಿ ಆಲೂಗಡ್ಡೆ ಬೀಟ್ರೂಟ್ ಇದರ ಜತೆಗೆ ಬದನೆಕಾಯಿ, ಗೋಧಿಯನ್ನು ಬೆಳೆಯುತ್ತಾರೆ.
ರೈತರಿಗೆ ತರಬೇತಿ
ತಾನು ಕೃಷಿಯಲ್ಲಿ ಲಾಭಗಳಿಸುದರ ಜತೆಗೆ ಇಲ್ಲಿನ 200 ರೈತರಿಗೆ ಸಾವಯವ ಕೃಷಿಯ ಕುರಿತಾಗಿ ತರಭೇತಿಯನ್ನು ನೀಡುತ್ತಿದ್ದಾರೆ. ಇದರಿಂದ ತರಭೇತಿ ಪಡೆದ ಅನೇಕ ರೈತರು ಇಂದು ಉದ್ಯಮಿಗಳಾಗಿ ಪರಿವರ್ತನೆಗೊಂಡಿದ್ದಾರೆ. ಇವರಿಂದ ತರಬೇತಿ ಪಡೆದ ಹರ್ಷದ್ ಭಾಯ್ ಪಟೇಲ್ ಕೃಷಿಯಿಂದ ತನ್ನ ಆದಾಯ ಮೂರು ಪಟ್ಟು ಹೆಚ್ಚಾಗಿದೆ ಎನ್ನುತ್ತಾರೆ.
ಇನ್ನಷ್ಟು ರೈತರನ್ನು ಸಾವಯವ ಕೃಷಿಯತ್ತ ಬರಮಾಡುವಂತೆ ಮಾಡಬೇಕೆಂಬುವುದು ಇವರ ಬಯಕೆ. ದೇಶದಲ್ಲಿ ಸಾವಯವ ಕೃಷಿ ಕುರಿತಾಗಿ ಜಾಗೃತಿ ಮೂಡುಸುವದು ಅಗತ್ಯವಾಗಿದೆ ಹಾಗೂ ಗ್ರಾಹಕರಿಗೆ ಆರೋಗ್ಯಕಾರ ಆಹಾರಗಳನ್ನು ನೀಡುವುದು ತಮ್ಮ ಜೀವಮಾನದ ಗುರಿಯಾಗಿದೆ ಎಂದು ಅವರು ಹೇಳುತ್ತಾರೆ.
ಧನ್ಯಶ್ರೀ ಬೋಳಿಯಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.