Honesty: ಪ್ರಾಮಾಣಿಕರಿಗಿದು ಕಾಲವಲ್ಲ…


Team Udayavani, Apr 18, 2024, 3:59 PM IST

18

ನಾನು ದಿನನಿತ್ಯ ಜೀವನದಲ್ಲಿ ಎಷ್ಟೋ ಸನ್ನಿವೇಶಗಳಲ್ಲಿ, ಎಷ್ಟೋ ಪ್ರಾಮಾಣಿಕ ವ್ಯಕ್ತಿಗಳನ್ನ ನೋಡಿದ್ದೀನಿ. ಆದರೆ ಪ್ರಾಮಾಣಿಕರಿಗಿದು ಕಾಲವಲ್ಲ ಅಂತಾರಲ್ಲ ಅದು ನಿಜ ಅನಿಸುತ್ತೆ.

ನನ್ನ ಅನುಭವದ ಮಾತುಗಳನ್ನೆ ಇಲ್ಲಿ ಹಂಚಿಕೋಳ್ತೆನೆ. ಅದೇನಪ್ಪಾ ಅಂದ್ರೆ, ಸಮಾಜದಲ್ಲಿ ಕೆಲವು ವ್ಯಕ್ತಿಗಳು ಬೇರೆಯವರ ತಪ್ಪು ಹುಡುಕೋಕೆ ಅಂತಾನೆ ಹುಟ್ಟಿರುತ್ತಾರೆ. ಅಂತಹವರು ತಾವು ಒಳ್ಳೆಯವರಾಗಬೇಕು ಅನ್ನೋ ಕಾರಣಕ್ಕೆ ಬೇರೆಯವರನ್ನ ಯಾವಾಗಲೂ ದೂರುತ್ತಲೇ ಇರುತ್ತಾರೆ.

ಒಬ್ಬ ವ್ಯಕ್ತಿ ಯಾರನ್ನಾದರೂ ಪ್ರಭಾವಿತಗೊಳಿಸ್ತಾನೆ ಅಂದ್ರೆ ಆ ಪ್ರಭಾವ ಸಕಾರಾತ್ಮಕ ಚಿಂತನೆಗಳಿಂದ ಕೂಡಿರಬೇಕೇ ಹೊರತು ಒಬ್ಬರ ವೈಯಕ್ತಿಕ ಅಂಶಗಳನ್ನಲ್ಲ ಅನ್ನೋದು ಎಷ್ಟು ಸತ್ಯವೋ. ಒಬ್ಬರ ಬಗ್ಗೆ ಮಾತನಾಡುವ ಹಕ್ಕು ನಮಗಿಲ್ಲ ಅನ್ನೋದು ಅಷ್ಟೇ ಸತ್ಯ.

ಯಾರೊಬ್ಬರಿಗೆ ಹತ್ತಿರವಾಗಲೂ ಅಥವಾ ತಮ್ಮ ಸ್ವಹಿತಾಸಕ್ತಿಗಾಗಿ, ತಾವು ಒಳ್ಳೆಯವರಾಗಲೂ ಬೇರೆಯವರನ್ನು ಅತಿ ಕೆಳಮಟ್ಟದಲ್ಲಿ ಗುರುತಿಸುವುದು ತಪ್ಪೆಂದು ತಿಳಿದು ತಪ್ಪು ಮಾಡುವ ಜನರು ಪ್ರಸ್ತುತ ದುನಿಯಾದಲ್ಲೇನು ಕಡಿಮೆ ಇಲ್ಲಾ ಬಿಡಿ.

ನನ್ನಲ್ಲೊಂದು ಪ್ರಶ್ನೆಯುಂಟು ಈ ವೃತ್ತಿ ಜೀವನದಲ್ಲಿ ಬಕೆಟ್‌ ಹಿಡಿಯುವುದು ಅಂತಾರಲ್ಲ, ಇದರ ವ್ಯಾಖ್ಯಾನವಿನ್ನು ನನಗೆ ಅರ್ಥವಾಗುತ್ತಿಲ್ಲ. ನಾನು ಹಲವಾರು ಜನರನ್ನು ಬಕೆಟ್‌ ಹಿಡಿಯೋದು ಅಂದ್ರೆ ಏನು ಅಂತ ಪ್ರಶ್ನೆ ಮಾಡಿದ್ದೀನಿ ಅವರವರ ವ್ಯಾಖ್ಯಾನ ಅವರು ಕೊಟ್ರಾ ಬಿಡಿ. ಆದರೆ ಅವರೆಲ್ಲ ಕೊಟ್ಟ ವ್ಯಾಖ್ಯಾನದಲ್ಲಿ ಸಾಮಾನ್ಯವಾಗಿ ಇದ್ದ ಒಂದು ಅಂಶವೆಂದರೆ ತಮ್ಮ ಕೆಲಸ ಸಾಧಿಸ್ಕೊಳ್ಳೊಕೆ ಅಧಿಕಾರ, ಅಂತಸ್ತು ಇರೋರ ಹತ್ರ ನೈಸ್‌ ಆಗಿ ಮಾತಾಡ್ತಾ, ಚೆನ್ನಾಗಿ ಇರೋದು ಅಂತ.

ಬಕೆಟ್‌ ಹಿಡಿಯೋ ವಿಚಾರದ ಬಗ್ಗೆ ಮೌಖೀಕವಾಗಿ ಬಂದ ಉತ್ತರಗಳು ಸಮಂಜಸವೆನಿಸಲ್ಲ. ಆಗ ನಾನು ಆಯ್ಕೆ ಮಾಡಿಕೊಂಡ ವಿಧಾನ ಯಾರು? ಯಾರೊಂದಿಗೆ? ಹೇಗೆ ನಡೆದುಕೊಳ್ತಾರೆ ಅನ್ನೋದನ್ನ ಅವಲೋಕಿಸುವುದು.

ಗಮನವಿರಲಿ ನನ್ನ ಉದ್ದೇಶ ವ್ಯಾಖ್ಯಾನ ತಿಳಿದುಕೊಳ್ಳುವುದು ಮಾತ್ರವಾಗಿತ್ತು. ಆದರೆ ಅವಲೋಕನದ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳ ವ್ಯಕ್ತಿತ್ವ ಕಂಡು ಅಸಹ್ಯವೆನಿಸಿತು. ಒಬ್ಬ ವ್ಯಕ್ತಿ ಯಾರೊಬ್ಬರೊಂದಿಗೆ ಮಾತನಾಡಿದರೆ, ನಕ್ಕರೆ, ಏನೇ ಮಾಡಿದ್ರು ಅಯ್ಯೋ ಬಿಡಿ ಅವರು ಮೇಲಧಿಕಾರಿಗೆ ಬಕೆಟ್‌ ಹಿಡಿದು ಕೆಲಸ ಸಾಧಿಸ್ಕೋತಾರೆ ಅಂತ ಮಾತಾಡೋರು.

ಹೀಗೆ ಹೇಳಿದ ವ್ಯಕ್ತಿಗಳು ನಿಜಕ್ಕೂ ಸಾಚಾ ಆಗಿದ್ರೆ ತಮ್ಮ ಕೆಲಸ ಸಾಧಿಸ್ಕೊಳ್ಳೊಕೆ ತಾವು ಬೇರೆಯವ್ರ ಸಹಾಯ ಕೇಳ್ತಾರಲ್ಲ ಅದು ಸರೀನಾ? ಅಥವಾ ಅಂತಹ ವ್ಯಕ್ತಿಗಳು ಕೇಳಿದ್ರೆ ಅದು ಸಹಾಯ ಅಂತ ಮಾತ್ರ ಕರಿಬೇಕಾ. ಬೇರೆಯವ್ರ ಯಾವುದೋ, ಏನೋ ವಿಷಯಕ್ಕೆ ಯಾರದೋ ಹತ್ರ ಕೇಳಿರೋ ಸಹಾಯವನ್ನಾ ಇವರು ಬಕೆಟ್‌ ಹಿಡಿಯೋದು ಅಂತ ವ್ಯಾಖ್ಯಾನಿಸ್ತಾರೆ ಅಂದ್ರೆ ಇವರು ಬೇರೆಯವ್ರ ಹತ್ರ ಕೇಳಿ ಪಡೆಯೋ ಸಹಾಯವನ್ನ ಏನಂತ ವ್ಯಾಖ್ಯಾನಿಸಬೇಕು? ಎರಡು ತಲೆ ಹಾವುಗಳು ಅಂತಾರಲ್ಲ ಆ ಮಾತನ್ನ ಇಂತಹ ವ್ಯಕ್ತಿಗಳಿಗೆ ಅಂತಾನೆ ಹೇಳಿರಬೇಕು ಅನಿಸುತ್ತೆ.

ಆದರೆ ಒಬ್ಬರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಿ ತಾವು ಒಳ್ಳೆಯವರಾಗಲೂ ಹೀಗೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಾವು ಸರಿಯಾಗಿದ್ದರೂ ಕೂಡ ಬೇರೆಯವರ ಬಗ್ಗೆ ನಾವು ಮಾತನಾಡ ಕೂಡದು ಅಲ್ಲವೇ! ಯಾಕೆಂದರೆ ಒಬ್ಬರ ಬಗ್ಗೆ ಮಾತನಾಡಲು ಯಾರು ಯಾರಿಗೂ ಹಕ್ಕು ನೀಡಿರುವುದಿಲ್ಲ.

ವಾಕ್‌ ಸ್ವಾತಂತ್ರ ಇದೆ ಸರಿ. ಎಲುಬಿಲ್ಲದ ನಾಲಿಗೆ ಅಂತ ಕಂಡು ಕಂಡವರಲ್ಲಿ ತಪ್ಪನ್ನೇ ಹುಡುಕುವ ಹುಚ್ಚು ಸಾಹಸ ಅಗತ್ಯವಿಲ್ಲ ಎನ್ನುವುದು ನನ್ನ ಅನಿಸಿಕೆ. ಎಲ್ಲರಲ್ಲೂ ಒಂದು ವಿಶೇಷ, ಒಳ್ಳೆಯ ಗುಣವಿದ್ದೇ ಇರುತ್ತದೆ. ಅಂತಹ ಗುಣಗಳನ್ನು ಅಳವಡಿಸಿಕೊಂಡು ಸರ್ವರೊಳಗೊಂದನ್ನು ಕಲಿತು ಸರ್ವಜ್ಞನಾಗಲು ಪ್ರಯತ್ನಿಸಿ.

ಮನುಷ್ಯರಾಗಿ ಮನುಷ್ಯರನ್ನು ಆದರದಿಂದ, ಗೌರವದಿಂದ, ವಿಶ್ವಾಸದಿಂದ ಕಾಣೋ ಪ್ರವೃತ್ತಿ ರೂಢಿಸಿಕೊಳ್ಳೋಣ. ಅದು ಅಲ್ಲದೇ ಮನುಷ್ಯ ಮನುಷ್ಯರನ್ನು ನಂಬದೇ ವಸ್ತುಗಳನ್ನು ನಂಬಲಾಗುವುದೇ? ಬೇರೆಯವರನ್ನು ದೂರುವುದರಲ್ಲಿ, ಬೇರೆಯವರ ತಪ್ಪು ಕಂಡು ಹಿಡಿಯುವುದರಲ್ಲಿ ಕಾಲಹರಣ ಮಾಡುವ ಮುನ್ನ ನಮ್ಮಲ್ಲಿರುವ ಅಸಂಖ್ಯಾತ ತಪ್ಪುಗಳನ್ನು ತಿದ್ದಿಕೊಳ್ಳುವತ್ತ ಗಮನ ಹರಿಸೋಣ.

ನಮ್ಮಲ್ಲೇ ನಕಾರಾತ್ಮಕ ಅಂಶಗಳನ್ನು ತುಂಬಿಕೊಂಡು ಬೇರೆಯವರ ಮೇಲೆ ಪ್ರಭಾವ ಬೀರುವ ಹುಚ್ಚು ಸಾಹಸ ಬೇಡ. ಯಾಕೆಂದರೆ ಪ್ರತಿಯೊಬ್ಬರಿಗೂ ನಂಬಿಕೆ, ವಿಶ್ವಾಸವೇ ಜೀವನದ ಜೀವಾಳವಾಗಿರುತ್ತದೆ. ನಮ್ಮ ಸ್ವಾರ್ಥ ಸಾಧನೆಗೆಂದು ಬೇರೆಯವರ ಮೇಲೆ ಕೂರಿಸುವ ಗೂಬೆಯಿಂದ ಒಬಅºರ ಜೀವನದ ನೆಮ್ಮದಿಯೇ ಹಾಳಾಗಬಹುದಲ್ಲವೇ ಎಂಬ ಸಣ್ಣ ತಿಳುವಳಿಕೆಯಿರಲಿ. ಎಲ್ಲರಲ್ಲೂ ನನ್ನ ಕೋರಿಕೆ ಇಷ್ಟೇ ಏನಾದರೂ ಆಗಿ ಮೊದಲು ಮನುಷ್ಯತ್ವವಿರುವ ಮಾನವರಾಗಿ.

-ವಿದ್ಯಾ ಹೊಸಮನಿ

ಉಪನ್ಯಾಸಕಿ, ಬೆಂಗಳೂರು

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.