ಜಿಮ್ಮಿ ಜಾರ್ಜ್‌ನ ಕೌಂಟರ್ ಅಟ್ಯಾಕ್
Team Udayavani, Jul 10, 2020, 1:12 PM IST
1960-1970ರ ದಶಕದಲ್ಲಿ ಭಾರತದಲ್ಲಿ ವಾಲಿಬಾಲ್ ಎಂಬ ಕ್ರೀಡೆ ಚಿಗುರುತ್ತಿದ್ದ ಸಮಯವದು. ಇನ್ನೂ ಇಲ್ಲಿ ವಿಶ್ವ ದರ್ಜೆಯ ಆಟಗಾರರ ಹಾಗೂ ಆಟಗಾರರನ್ನು ರೂಪಿಸುವ ಅಕಾಡೆಮಿಯಾಗಲಿ, ತರಬೇತುದಾರರಾಗಲಿ ಇದ್ದಿರಲಿಲ್ಲ. ಕ್ಯೂಬಾ, ಅಮೆರಿಕಾ, ಇಟಲಿ, ಫ್ರಾನ್ಸ್, ಬ್ರೆಜಿಲ್ ಮುಂತಾದ ಬಲಾಡ್ಯ ತಂಡ ಗಳ ಎದುರು ಸ್ಪರ್ಧಿಸುವ ಅವಕಾಶ ಇರಲಿಲ್ಲ.
ಭಾರತದಲ್ಲಿ ವಾಲಿಬಾಲ್‌ನ ಹೊಸಶಕೆ
ಯಾವಾಗ ಜಿಮ್ಮಿ ಮೈದಾನ ಹೊಕ್ಕರೋ ಅಂದಿನಿಂದ ವಾಲಿಬಾಲ್ ಕ್ರೀಡೆಯಲ್ಲಿ ಭಾರತದ ಹೊಸ ಶಕೆ ಆರಂಭವಾಗಿತ್ತು. ಈಗಲೂ ಗೂಗಲ್‌ನಲ್ಲಿ ಭಾರತದ ಅತ್ಯುತ್ತಮ ವಾಲಿಬಾಲ್ ಆಟಗಾರ ಎಂದು ಹುಡುಕಿದರೆ ಮೊದಲು ಸಿಗುವುದು ಅದೇ ಹೆಸರು. ಎಷ್ಟೇ ಎತ್ತರದವರು ತಡೆ ಹಾಕಲಿ, ಅದನ್ನು ಬೇಧಿಸಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸುವ ಆಟ ಜಿಮ್ಮಿಯದ್ದು. ಕೌಂಟರ್ ಅಟ್ಯಾಕ್, ಸೆಕೆಂಡ್ ಪಾಸ್, ಬ್ಯಾಕ್‌ಲೈನ್‌ಗಳಲ್ಲಿ ಜಿಮ್ಮಿಗೆ ಪಾಸ್ ನೀಡಿದರೆ ಮುಗಿದೇ ಹೋಯಿತು ಎದುರಾಳಿ ಕಥೆ. ಆ ಕೈಯಲ್ಲಿ ಅದೇನೋ ಮ್ಯಾಜಿಕ್ ಇತ್ತೋ ಏನೋ. ಬ್ಲಾಕ್ ಮಾಡಿದರೆ ಟಚ್ ಔಟ್‌ನಲ್ಲಿ ಅಂಕ ಕಸಿಯುತ್ತಿದ್ದ ಜಿಮ್ಮಿ ಓಪನ್ ಬಿಟ್ಟರಂತೂ ಅಟ್ಯಾಕ್ ಲೈನ್‌ಗೆ ಚೆಂಡನ್ನು ಬಡಿದು ಮೀಸೆ ಮರೆಯಲ್ಲಿ ನಗುತ್ತಿದ್ದ. ಆ ಚಲನೆಯಾದರೂ ಎಂತಹದ್ದು? ಎದುರಾಳಿಗಳು ಈತ ಎಲ್ಲಿಗೆ ಹೊಡೆಯುತ್ತಾನೆಂದು ಬ್ಲಾಕ್‌ಗೆ ತಯಾರಾಗಿರುತ್ತಿದ್ದರೋ ಇವನು ಅದಾಗಲೇ ಚೆಂಡನ್ನು ಎದುರಾಳಿ ಅಂಕಣದೊಳಗೆ ಚಿಮ್ಮಿಸಿಯಾಗುತ್ತಿತ್ತು. ವಾಲಿಬಾಲ್ ಯಾವತ್ತೂ ತಂಡವಾಗಿ ಆಡಿದರಷ್ಟೇ ಗೆಲುವು. ಕಾಂಬಿನೇಶನ್ ಅನ್ನುವುದು ಅತ್ಯಗತ್ಯ. ಪಾಸರ್ ಮತ್ತು ಆಟಗಾರರ ಸಮನ್ವಯತೆ ಇದ್ದರಷ್ಟೇ ಅಂಕ. ಅಂತಹದರಲ್ಲಿ ಈತ ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲಿಸಿಕೊಡುವ ಅಪ್ರತಿಮ ಆಟಗಾರನಾಗಿದ್ದ.
16ರ ಪೋರ ರಾಜ್ಯದ ಪರ ಆಟ
ಜಿಮ್ಮಿ ಜಾರ್ಜ್ ಕೇರಳದ ಕಣ್ಣೂರು ಜಿಲ್ಲೆಯ ಥೊಂಡಿಲ್ ಎಂಬಲ್ಲಿ ಕುಡಕ್ಕಾಚಿರಾ ಕುಟುಂಬದಲ್ಲಿ 1955ರ ಮಾರ್ಚ್ 8ರಂದು ಜಾರ್ಜ್ ಜೋಸೆಫ್ ಮತ್ತು ಮೇರಿ ಜಾರ್ಜ್ ದಂಪತಿಯ 2ನೇ ಮಗನಾಗಿ ಜನಿಸಿದರು. ಅವರು ಲಾಂಗ್‌ಜಂಪ್ ನಲ್ಲಿ ಉತೃಷ್ಟ ಸಾಧನೆಗೈದ ಅಂಜು ಬಾಬಿ ಜಾರ್ಜ್ ಅವರ ಸೋದರ ಮಾವ. ವಿ.ವಿ. ಮಟ್ಟದ ಮಾಜಿ ಆಟಗಾರನಾಗಿದ್ದ ತಂದೆಯಿಂದ ವಾಲಿಬಾಲ್ ಅನ್ನು ಸಿದ್ಧಿಸಿಕೊಂಡರು. ಚುರುಕಾಗಿದ್ದ ಇವರು 1970ರಲ್ಲಿ ಕ್ಯಾಲಿಕೆಟ್ ವಿವಿ ತಂಡದಲ್ಲಿ ಗುರುತಿಸಿಕೊಂಡರು. ಆಗ ಅವರಿಗೆ ಬರೀ 15 ವರ್ಷ. 1971ರಲ್ಲಿ ಇವರ ಸ್ಮಾಶ್‌ಗೆ ಕೇರಳ ರಾಜ್ಯ ತಂಡದಲ್ಲಿ ಆರು ಜನರ ಬಳಗದಲ್ಲಿ ಆಡುವ ಸೌಭಾಗ್ಯ. ಅನಂತರ ಅವರು 9 ಬಾರಿ ರಾಜ್ಯವನ್ನು ಪ್ರತಿನಿಧಿಸಿದರು. 1973ರಲ್ಲಿ ಸೇಂಟ್ ಥಾಮಸ್ ಕಾಲೇಜು ಸೇರಿದರು. ಇಲ್ಲಿಂದ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಅಂಡರ್ 17ರಲ್ಲಿ ಇರುವಾಗಲೇ ಕೇರಳ ವಿ.ವಿ. ತಂಡಕ್ಕೆ ಆಯ್ಕೆಯಾಗಿದ್ದರು. ಅನಂತರ 1973ರಿಂದ 1976ರ ವರೆಗೆ 4 ವರ್ಷ ಕೇರಳ ವಿ.ವಿ.ಯನ್ನು ಪ್ರತಿನಿಧಿಸಿ, ಆ 4 ವರ್ಷ ಅಂತರ್ ವಿ.ವಿ. ಚಾಂಪಿಯನ್‌ಶಿಪ್ ಕೇರಳದ ಪಾಲಾಗಿದೆ. ಪೊಲೀಸ್ ವೃತ್ತಿ ಜಿಮ್ಮಿಯ ಕನಸಾಗಿತ್ತು. 1976ರಲ್ಲಿ ಪೊಲೀಸ್ ಹುದ್ದೆಗೆ ಇವರಿಗೆ ಕರೆ ಬಂದಿತ್ತು. ಇದಕ್ಕಾಗಿ ವೈದ್ಯಕೀಯ ಕಾಲೇಜನ್ನೇ ತೊರೆಯ ಬೇಕಾಯಿತು. ಅನಂತರ ಜಿಮ್ಮಿ ಸಾಯುವ ವರೆಗೂ ಪೊಲೀಸ್ ತಂಡದ ಲ್ಲಿದ್ದರು.
ಏಶ್ಯನ್ ಕೂಟಗಳಲ್ಲಿ ಜಿಮ್ಮಿ ಮಿಂಚು
ಟೆಹ್ರಾನ್ (1974), ಬ್ಯಾಂಕಾಕ್ (1978) ಮತ್ತು ಸಿಯೋಲ್ (1986)ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ರಾಷ್ಟ್ರೀಯ ವಾಲಿಬಾಲ್ ತಂಡಕ್ಕಾಗಿ ಆಡಿದರು. ಅಲ್ಲಿ ಭಾರತ ಕಂಚಿನ ಪದಕ ಗೆದ್ದಿತು. ಅವರು 1985 ರಲ್ಲಿ ಸೌದಿ ಅರೇಬಿಯಾದಲ್ಲಿ ಆಡಿದ ಭಾರತೀಯ ತಂಡದ ನಾಯಕರಾಗಿದ್ದರು ಮತ್ತು 1986ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಭಾರತ ಗೋಲ್ಡ್ ಕಪ್ ಅಂತಾರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಜಿಮ್ಮಿ ಹೆಸರಲ್ಲ ಬ್ರ್ಯಾಂಡ್
ಕೇರಳ ಸರಕಾರ ತಿರುವನಂತಪುರದಲ್ಲಿರುವ ತನ್ನ ಒಳಾಂಗಣ ಕ್ರೀಡಾಂಗಣಕ್ಕೆ ಜಿಮ್ಮಿ ಜಾರ್ಜ್ ಹೆಸರನ್ನಿಟ್ಟು ಗೌರವ ಸೂಚಿಸಿದೆ. ಇವರು ಓದಿದ ಸೇಂಟ್ ಥಾಮಸ್ ಕಾಲೇಜಿನ ವಾಲಿಬಾಲ್ ಕ್ರೀಡಾಂಗಣ, ಸೇಂಟ್ ಜೋಸೆಫ್ ಹೈಯರ್ ಸೆಕೆಂಡರಿ ಶಾಲೆಯ ಕ್ರೀಡಾಂಗಣ ಮತ್ತು ಪೆರಾವೂರ್ ರಸ್ತೆಗೂ ಜಿಮ್ಮಿ ಜಾರ್ಜ್ ಹೆಸರಿಡಲಾಗಿದೆ. ಜಿಲ್ಲಾ ಕೇಂದ್ರ ಕಚೇರಿ ಕಣ್ಣೂರಿನಲ್ಲಿ ಪೊಲೀಸ್ ಇಲಾಖೆ ತನ್ನ ಕಾನ್ಫರೆನ್ಸ್ ಹಾಲ್‌ಗೂ ಇವರ ಹೆಸರಿಟ್ಟು ಗೌರವ ಸಲ್ಲಿಸಿದೆ. ಇಟಲಿಯ ಒಳಾಂಗಣ ಕ್ರೀಡಾಂಗಣವನ್ನು ಇಂದಿಗೂ ಪಾಲ್ ಜಾರ್ಜ್ ಎಂದು ಕರೆಯಲಾಗುತ್ತಿದೆ. ಅವರ ನೆನಪಿಗಾಗಿ ಬ್ರೆಸ್ಸಿಯಾದ ಮಾಂಟಿಚಿಯಾರಿಯಲ್ಲಿ ವಾರ್ಷಿಕ ಕಿರಿಯ ಪಂದ್ಯಾವಳಿಯನ್ನು ಆಯೋಜಿಸ ಲಾಗುತ್ತದೆ. 1989ರಿಂದ ಉತ್ತರ ಅಮೆರಿಕದ ಕೇರಳ ವಾಲಿಬಾಲ್ ಲೀಗ್ ಜಿಮ್ಮಿ ಜಾರ್ಜ್ ಸೂಪರ್‌ಟ್ರೋಫಿ ವಾಲಿಬಾಲ್ ಎಂಬ ಹೆಸರಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸುತ್ತದೆ.
ವಿದೇಶದಲ್ಲಿ ಜಿಮ್ಮಿ ಹೆಸರು
1979ರಲ್ಲಿ ಕೇರಳ ಪೊಲೀಸರಿಂದ ರಜೆ ಪಡೆದು ಅಬುಧಾಬಿ ನ್ಪೋರ್ಟ್ಸ್ ಕ್ಲಬ್ ಪರ ಆಡಲು ಪರ್ಷಿಯನ್ ಕೊಲ್ಲಿಗೆ ಹೋದರು. 1982ರಲ್ಲಿ ಅವರು ಅಬುಧಾಬಿಯನ್ನು ತೊರೆದು ಇಟಲಿಯ ಟ್ರೆವಿ ಸೊದಲ್ಲಿರುವ ಕೊಲೆಟ್ಟೊ ಕ್ಲಬ್‌ಗ ಸೇರಿಕೊಂಡರು. ಅಲ್ಲಿ ಒಂದು ಋತು ಆಡಿ, ಅನಂತರ ಅವರು ಸಿಸ್ಟಮ್ ಇಂಪಿಯಾನಿ ಕ್ಲಬ್‌ನ ಸದಸ್ಯರಾದರು. 1983-84ರಲ್ಲಿ ಇಂಪಿಯಾನಿ ತಂಡಕ್ಕಾಗಿ ಆಡಿದರು. ಅನಂತರ ಮತ್ತೆ ಭಾರತಕ್ಕೆ ಮರಳಿದ ಅವರು ಮತ್ತೆ ಕೇರಳ ಪೊಲೀಸ್ ಕಾರ್ಯದಲ್ಲಿ ತೊಡಗಿಕೊಂಡರು.
32ಕ್ಕೇ ಮೃತ್ಯು ವಶ
1985ರಲ್ಲಿ ಕಾನ್ಪುರದಲ್ಲಿ ಜೀವಿತದ ಕೊನೆಯ ರಾಷ್ಟ್ರೀಯ ಚಾಂಪಿಯನ್ ಶಿಪ್ ಆಡಿದರು. ಅನಂತರ ಅರಿಟಲ್ ತಂಡಕ್ಕಾಗಿ ಆಡಲು ಇಟಲಿಗೆ ಹಿಂದಿರುಗಿದರು. 1987-88ರಲ್ಲಿ ಅವರು ಬ್ರೆಸ್ಸಿಯಾದ ಮಾಂಟಿcಯಾರಿಯಲ್ಲಿ ಯುರೋಸ್ಟೈಲ್-ಯುರೋಸಲಾ ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು ಮತ್ತು ಆ ಅವಧಿಯಲ್ಲಿ 32ರ ಹರೆಯದ ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದರು. ಈ ಸಂದರ್ಭ ಅವರ ಪತ್ನಿ 6 ತಿಂಗಳ ಗರ್ಭಿಣಿಯಾಗಿದ್ದರು. ಭಾರತವನ್ನು ವಾಲಿಬಾಲ್‌ನಲ್ಲಿ ವಿಶ್ವದರ್ಜೆಯ ತಂಡವಾಗಿಸುವ ಕನಸು ಹೊತ್ತಿದ್ದ ಅಪ್ಪಟ ಕೇರಳ ಮಣ್ಣಿನ ಮಗ, ಪಕ್ಕದ ಮನೆಯವನೇ ಅನಿಸುವಷ್ಟು ಆತ್ಮೀಯತೆಯ ಸಾಕಾರಮಾರ್ತಿಯಂತಿದ್ದ ಜಿಮ್ಮಿ ಇಂದಿಗೂ ವಾಲಿಬಾಲ್ ಆಡುವವರ ಪಾಲಿನ ದೇವರಾಗಿ ಉಳಿದಿದ್ದಾರೆ. ಇವರಿದ್ದರೆ ಗೆಲುವು ನಮ್ಮದೇ ಎಂದು ಬೀಗುತ್ತಿದ್ದ ಕೇರಳ ರಾಜ್ಯ ತಂಡವಂತೂ ತತ್ತರಿಸಿ ಹೋಗಿತ್ತು. ಇವರ ಹೆಸರು 33 ವರ್ಷಗಳ ಅನಂತರವೂ ಭಾರತದ ವಾಲಿಬಾಲ್ ಅಂಕಣಗಳಲ್ಲಿ ಈಗಲೂ ಪ್ರತಿನಿಧಿಸುತ್ತದೆ ಎಂದರೆ ಅವರ ಆಟದ ಪ್ರಭೆ ಕಲ್ಪನೆಗೂ ಮೀರಿದ್ದು.ಸಾಧನೆಗೆ ಸಂದ ಗೌರವ ವಾಲಿಬಾಲ್‌ನಲ್ಲಿ 21ನೇ ವಯಸ್ಸಿನಲ್ಲೇ ಅರ್ಜುನ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ವಾಲಿಬಾಲ್ ಆಟಗಾರ. ಅವರಿಗೆ 1975ರಲ್ಲಿ ಜಿ.ವಿ. ರಾಜಾ ಪ್ರಶಸ್ತಿ ಮತ್ತು 1976ರಲ್ಲಿ ಕೇರಳದ ಅತ್ಯುತ್ತಮ ಕ್ರೀಡಾಪಟುಗಾಗಿ ಮನೋರಮಾ ಪ್ರಶಸ್ತಿಯನ್ನು ಗೆದ್ದರು. 1979-82ರವರೆಗೆ ಅಬುಧಾಬಿ ನ್ಪೋರ್ಟ್ಸ್ ಕ್ಲಬ್ ಪರ ಆಡುವಾಗ ಪರ್ಷಿಯನ್ ಕೊಲ್ಲಿ ಪ್ರದೇಶದ ಅತ್ಯುತ್ತಮ ಆಟಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2000ರಲ್ಲಿ ಮಲಯಾಳಂ ಪತ್ರಿಕೆ ಮಲಯಾಳ ಮನೋರಮಾ ಅವರನ್ನು 20ನೇ ಶತಮಾನದ ಕೇರಳದ ಅತ್ಯುತ್ತಮ ಕ್ರೀಡಾಪಟು ಎಂದು ಗೌರವಿಸಿತು. ಅನೂಪ್ ಮೆನನ್ ಮತ್ತು ಮಂಜು ವಾರಿಯರ್ ಅಭಿನಯದ 2016ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ “ಕರಿನ್‌ಕುನ್ನಮ್ 6′ ಜಿಮ್ಮಿ ಜಾರ್ಜ್ ಅವರಿಗೆ ಗೌರವ ಪೂರ್ವಕವಾಗಿ ನಿರ್ಮಿಸಿದ್ದಾಗಿದೆ.
ಹನಿ ಕೈರಂಗಳ, ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.