Family: ಅವಿಭಕ್ತದಿಂದ ವಿಭಕ್ತದೆಡೆಗೆ


Team Udayavani, Nov 28, 2023, 7:00 AM IST

8-uv-fusion

ಮನುಷ್ಯ ಸಂಘ ಜೀವಿ. ಒಬ್ಬಂಟಿಯಾಗಿರಲು ಸಾಧ್ಯವೇ ಇಲ್ಲ ಎನ್ನಬಹುದು. ಹಾಗೆ ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಇದ್ದವು. ಈಗಿನ ಆಧುನಿಕ ಜಗದಲ್ಲಿ ಎಲ್ಲ ಬದಲಾಗಿದೆ. ಈ ಹಿಂದೆ ಕುಟುಂಬದಲ್ಲಿ 30ರಿಂದ 40 ಮಂದಿ ಅಥವಾ ಅದಕ್ಕಿಂತ ಹೆಚ್ಚು ಮಂದಿ ಒಂದೇ ಕುಟುಂಬದಲ್ಲಿ ವಾಸಿಸುತ್ತಾ ಇದ್ದರು. ಈಗ ಒಂದು ದಂಪತಿಗೆ ಒಂದೇ ಮಗುವಾಗಿದ್ದು,ವಿಭಕ್ತ ಕುಟುಂಬವಾಗಿದೆ.

ಅವಿಭಕ್ತ ಕುಟುಂಬಗಳಲ್ಲಿ ಜನಸಂಖ್ಯೆ ಕೂಡ ಬೃಹತ್‌ ಗಾತ್ರದಲ್ಲಿ ಇರುತ್ತದೆ. ಇದು ಪಿತೃ ಪ್ರಧಾನ ಕುಟುಂಬವಾಗಿರಬಹುದು ಅಥವಾ ಮಾತೃ ಪ್ರಧಾನ ಕುಟುಂಬವಾಗಿರಬಹುದು. ಒಂದು ಕುಟುಂಬದಲ್ಲಿ ಕುಟುಂಬದ ಹಿರಿಯ ಪುರುಷ ಸದಸ್ಯ ಮುಖ್ಯಸ್ಥನಾಗಿದ್ದು, ಈ ಕುಟುಂಬದ ಸಂಪೂರ್ಣ ಜವಾಬ್ದಾರಿಗಳಾದ ಹಣಕಾಸು, ಮದುವೆ, ಹಬ್ಬಗಳು,ಶಿಕ್ಷಣ ಮುಂತಾದ ಎಲ್ಲ ಸೌಲಭ್ಯಗಳಿಗೆ ಬಗೆಗಿನ ನಿರ್ಧಾರವನ್ನು ಅವನು ತೆಗೆದುಕೊಳ್ಳುತ್ತಾನೆ.ಅದೇ ಮಾತೃ ಪ್ರಧಾನ ಈ ಎಲ್ಲ ಜವಾಬ್ದಾರಿಯನ್ನು ಹಿರಿಯ ಮಹಿಳೆ ತೆಗೆದುಕೊಳ್ಳುತ್ತಾಳೆ.

ಹಿಂದೆ ಒಂದೇ ಸೂರಿನ ಅಡಿಯಲ್ಲಿ ಮನೆ ಎಲ್ಲ ಸದಸ್ಯರು ಒಂದೇ ರೀತಿ ಆಹಾರ ವನ್ನು ಸೇವಿಸುತ್ತಾ,ಪರಸ್ಪರ ಹೊಂದಾಣಿಕೆಯೊಂದಿಗೆ ಜೀವಿಸುತ್ತಿದ್ದರು. ಈಗ ಪ್ರಸ್ತುತ ಕುಟುಂಬಗಳಲ್ಲಿ ಆಧುನಿಕತೆಯ ಪ್ರಭಾವದಿಂದ ಅಥವಾ ಹೊಂದಿಕೊಳ್ಳುವಿಗೆ ಕಷ್ಟವಾದ ಸಂದರ್ಭದಲ್ಲಿ ಕೂಡು ಕುಟುಂಬದಿಂದ ಹೊರಬಂದು ಪ್ರತ್ಯೇಕ ಜೀವನವನ್ನು ನಡೆಸುತ್ತಿದ್ದಾರೆ.

ಅವಿಭಕ್ತ ಕುಟುಂಬದಲ್ಲಿ ಮಹಿಳೆಯ ಹಿರಿಯ ಮಹಿಳಾ ಸದಸ್ಯೆ  ಊಟ,ತಿಂಡಿ,ಹಬ್ಬದ ಸಮಯದಲ್ಲಿ ಊಟ -ಉಪಚಾರಗಳ ಸಂಪೂರ್ಣ ಜವಾಬ್ದಾರಿ ಎಂದು ತೆಗೆದುಕೊಳ್ಳುತ್ತಾರೆ. ಇತರ ಮಹಿಳಾ ಸದಸ್ಯರು ಸಹಾಯ ಮಾಡುತ್ತಾ,ಕೆಲಸವನ್ನು ಸರಿಯಾಗಿ ಹಂಚಿಕೆ ಮಾಡುತ್ತಾರೆ.

ಕೆಲವೊಂದು ಸಂದರ್ಭದಲ್ಲಿ ಮಹಿಳೆಯರನ್ನು ಹೆರಿಗೆಯ ಅನಂತರದ ಸಮಯದಲ್ಲಿ ಅಥವಾ ಗರ್ಭವತಿಯ ಸಮಯದಲ್ಲಿ ನೋಡಿಕೊಳ್ಳಲು ಸಹಾಯ ಕೂಡ ಆಗುತ್ತದೆ.ಆದರೆ ವಿಭಕ್ತ ಕುಟುಂಬದಲ್ಲಿ ಹೀಗೆ ಆಗುವುದಿಲ್ಲ ಗರ್ಭವತಿ ಅಥವಾ ಹೆರಿಗೆಯ ಅನಂತರದ ಸಮಯದಲ್ಲಿ  ಅವಳನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ. ಒಂದು ವೇಳೆ ಅವಳ ತಾಯಿಯನ್ನು ಕಳೆದುಕೊಂಡಿದರೆ, ಅವಳನ್ನು ಆ ಮಗುವನ್ನು ಆರೈಕೆ ಮಾಡುವಲ್ಲಿ ಹಲವಾರು  ಸಮಸ್ಯೆಗಳು ಆಗುತ್ತದೆ.

ಅವಿಭಕ್ತ ಕುಟುಂಬದಲ್ಲಿ ಮನೆ ತುಂಬಾ ಮಕ್ಕಳು ಇರುವುದರಿಂದ ಎಲ್ಲರೊಂದಿಗೆ ಹೊಂದಾಣಿಕೆ, ಮುಕ್ತವಾಗಿ ಬೆರೆಯುವುದು, ಉತ್ತಮ ಅಭ್ಯಾಸಗಳು,ಆಟ -ಪಾಠ, ಉತ್ತಮ ನಡವಳಿಕೆಯನ್ನು ಕಲಿಯಲು ಸಹಾಯಕವಾಗುತ್ತದೆ. ಆದರೆ ವಿಭಕ್ತ ಕುಟುಂಬದಲ್ಲಿ ಮಗು ಒಂಟಿಯಾಗಿರುವುದರಿಂದ ಮಾನಸಿಕ ಖನ್ನತೆಯಿಂದ ಬಳಲುವ ಸಾಧ್ಯತೆ ಅಧಿಕವಾಗಿರುತ್ತದೆ. ಕೆಲವೊಂದು ಬಾರಿ ಅವಿಭಕ್ತ ಕುಟುಂಬದಲ್ಲಿ ಮಕ್ಕಳೊಂದಿಗೆ ಜಗಳ ಕೂಡ ವೈರತ್ವಕ್ಕೆ ತಿರುಗುವ ಸಾಧ್ಯತೆ ಕೂಡ ಇರುತ್ತದೆ.

ಅವಿಭಕ್ತ ಕುಟುಂಬದಲ್ಲಿ ಕೆಲವೊಂದು ಸೋದರತ್ವದಲ್ಲಿ ಮದುವೆ ಮಾಡಿಸುವ ಅಭ್ಯಾಸ ಇರುತ್ತದೆ. ಇದು ಹುಟ್ಟುವ ಮಕ್ಕಳಿಗೆ ಬುದ್ಧಿಮಾಂದ್ಯತೆಯನ್ನು ಉಂಟುಮಾಡುವ ಸಾಧ್ಯತೆ ಕೂಡ ಇರುತ್ತದೆ.ಇಲ್ಲಿ ಮದುವೆ ಐದರಿಂದ ಆರು ಮದುವೆಗಳು ಒಮ್ಮೆಲೆ ಸಂಭವಿಸುತ್ತದೆ.  ವಧು-ವರ ಅಭಿಪ್ರಾಯಗಳಿಗೆ ಕೆಲವೊಂದು ಬಾರಿ ಗಣನೆಗೆ ತೆಗೆದುಕೊಳ್ಳದೇ ಇರುವುದು ಕೂಡ ನೋಡಬಹುದು. ಇದರಿಂದ ಬೇರೆ ಬೇರೆ ಸಮಸ್ಯೆಗಳು ಸೃಷ್ಟಿಯಾಗುತ್ತದೆ.

ಅವಿಭಕ್ತ ಕುಟುಂಬದಲ್ಲಿ ಹಣಕಾಸು ವಿಚಾರದಲ್ಲಿ ಸಂಬಂಧಿಕರು ಸಹಾಯ ಮಾಡುತ್ತಾರೆ. ಆದರೆ ವಿಭಕ್ತ ಕುಟುಂಬದಲ್ಲಿ ಹೀಗೆ ಆಗುವುದಿಲ್ಲ, ಹಣಕಾಸು ಸಮಸ್ಯೆಗಳು ಎದುರಾದರೆ ಇಡೀ ಕುಟುಂಬವೇ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಆದರೆ ಸಕಾರಾತ್ಮಕವಾಗಿ ನೋಡುವುದಾದರೆ ಮನುಷ್ಯ ಸ್ವಾವಲಂಬಿಯಾಗಿ  ಬದುಕಲು ಸಾಧ್ಯವಾಗುತ್ತದೆ. ವಿಭಕ್ತ ಕುಟುಂಬ ವಾಗಲಿ,ಅವಿಭಕ್ತ ಕುಟುಂಬವಾಗಲಿ, ಒಂದೊಂದು ವಿಚಾರದಲ್ಲಿ ಅದು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ ಅದನ್ನು ಪರಿಶೀಲಿಸಿ ನೋಡಲು ಕಷ್ಟ ಆಗುತ್ತದೆ.

ದೇವಿಶ್ರೀ ಶಂಕರಪುರ

ಆಳ್ವಾಸ್‌ ಕಾಲೇಜು, ಮೂಡುಬಿದಿರೆ

ಟಾಪ್ ನ್ಯೂಸ್

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.