Aparna: ಮಾತು ಮುಗಿಸಿದ ಕನ್ನಡದ ಅಪ್ಸರೆ
Team Udayavani, Sep 12, 2024, 3:55 PM IST
ಕನ್ನಡದ ಖ್ಯಾತ ನಿರೂಪಕಿ ಅಪರ್ಣ ವಸ್ತಾರೆ ಅವರು 1966 ಜುಲೈ 7ರಂದು ಜನಿಸಿದರು. ಇವರು ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿಯವರು ತಂದೆ ಕೆ. ಎಸ್. ನಾರಾಯಣಸ್ವಾಮಿ ಸಿನಿಮಾ ಪತ್ರಕರ್ತರಾಗಿದ್ದರು. ನಟಿಯಾಗಿ ನಿರೂಪಕಿಯಾಗಿ ಕಿರುತೆರೆಯಲ್ಲಿಯೂ ಗುರುತಿಸಿಕೊಂಡು ಅದರಲ್ಲೂ ಅಚ್ಚ ಕನ್ನಡದ ನಿರೂಪಣೆಯಲ್ಲಿ ತಮ್ಮದೇ ಆದ ಚಾಪನ್ನು ಹೊತ್ತಿ ಇಂದು ನಿರ್ಗಮಿಸಿದ್ದಾರೆ.
ನಟಿ ನಿರೂಪಕಿ ಅಪರ್ಣಾ ಅವರು ಬಣ್ಣದ ಲೋಕದ ಮೇಲಿನ ಸೆಳೆತದಿಂದ ನಟನ ರಂಗಕ್ಕೆ ಆಗಮಿಸಿದರು 1985ರಲ್ಲಿ ತೆರೆಗೆ ಬಂದ ಪುಟ್ಟಣ್ಣಕಣಗಾಲ್ ನಿರ್ದೇಶನದ ಮಸಣದ ಹೂವು ಸಿನಿಮಾದ ಮೂಲಕ ಚಂದನವನಕ್ಕೆ ಆಗಮಿಸಿದರು. ಅದಾದ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು.
ಕಿರುತೆರೆಯಲ್ಲಿಯೂ ಗುರುತಿಸಿಕೊಂಡರು. ಆದರೆ ಸಿನಿಮಾಗಳಿಗಿಂತ ಅವರಿಗೆ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿದ್ದು ನಿರೂಪಣೆ. ಸರಿ ಸುಮಾರು 7,000ಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ ಹೆಗ್ಗಳಿಕೆ ಅಪರ್ಣ ಅವರದ್ದು.ಆಕಾಶವಾಣಿಯಲ್ಲಿ ನಿರೂಪಣೆ ಮಾಡಿ ಎಲ್ಲರ ಗಮನ ಸೆಳೆದ ಇವರು 1993ರಿಂದ 2010ರ ವರೆಗೂ ಆಕಾಶವಾಣಿಯಲ್ಲಿ ಕೆಲಸ ಮಾಡಿದರು.
ಆಕಾಶವಾಣಿಗೆ ಹೆಜ್ಜೆ ಇಟ್ಟದ್ದು ಬಾಲ ಕಲಾವಿದೆಯಾಗಿ ನಂತರದಲ್ಲಿ ಅವರು ಆಕಾಶವಾಣಿಗೆ ತಾತ್ಕಾಲಿಕ ಉದ್ಯೋಗಿಯಾಗಿ ಬರುತ್ತಿದ್ದರು. ಟಿ.ಎನ್. ಸೀತಾರಾಮ್ ಅವರ ಮಾಯಾಮೃಗ, ಮುಕ್ತ ಧಾರಾವಾಹಿಗಳಲ್ಲಿಯೂ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ನಟನೆಯ ಜತೆಗೆ ನಿರೂಪಣೆ. ಆರೋಗ್ಯ ಕಾರ್ಯಕ್ರಮಗಳು. ನೇರಪ್ರಸಾರದ ಕಾರ್ಯಕ್ರಮಗಳು. ಸಂದರ್ಶನಗಳನ್ನೂ ಕೂಡ ನಡೆಸಿಕೊಟ್ಟರು. ಸಿನಿಮಾಗಳಲ್ಲಿಯೂ ಕಾಣಿಸಿಕೊಂಡರು.
ಮಜಾಟಾಕೀಸ್ ಮೂಲಕ ಬೇರೆಯ ಎತ್ತರಕ್ಕೆ ಜಿಗಿದ ಅಪರ್ಣಾ, ನಾನು ನಗಿಸುವುದಕ್ಕೂ ಸೈ ಎಂದು ಒನ್ ಅಂಡ್ ಓನ್ಲೀ ವರಲಕ್ಷ್ಮೀಯಾಗಿ ಗಮನ ಸೆಳೆದರು. ನಮ್ಮ ಮೆಟ್ರೋಗೆ, ಕರ್ನಾಟಕ ರಾಜ್ಯದ ಎಲ್ಲ ಬಸ್ ನಿಲ್ದಾಣಗಳಲ್ಲಿ ಜೀವ ದನಿಯಾದವರು ಕೂಡ ಇದೇ ಅಪರ್ಣ.
ಇವರ ಪತಿ ನಾಗರಾಜ್ ವಸ್ತಾರೆ ಅವರು ಸಹ ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದ್ದಾರೆ. ಬರುವ ಅಕ್ಟೋಬರ್‌ಗೆ 58 ವರ್ಷ ಪೂರೈಸುತ್ತಿದ್ದ ಅಪರ್ಣ ಅವರು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು.
ಇವರು ನಿರೂಪಣೆ ಕುರಿತ ಶಾಲೆ ಆರಂಭಿಸುವ ಯೋಜನೆ ಹಾಕಿದ್ದರು. ಆದರೆ ಈ ಕನಸು ಕೊನೆಗೂ ಈಡೇರಲಿಲ್ಲ. ನಿರೂಪಣಾ ಜಗತ್ತು ಇನ್ನೂ ಹೀಗೆ ವ್ಯಾಪಿಸದ ಸಮಯದಲ್ಲಿ ಅದು ಒಂದು ವ್ಯಾಪಾರ ಅಬ್ಬರ ಟಿಆರ್ ಪಿ ಆಗಿರದೇ ನಿಜದ ಉದ್ಘೋಷಣೆ ನಿಜದ ಪ್ರಸ್ತುತೀಕರಣ ನಿಜದ ಕಲೆ ಅನಿಸಿಕೊಂಡಿದ್ದ ಆ ನಿಜ ಸಮಯದಲ್ಲಿ ನಿಜದ ನಿಜವಾಗಿ ಬೆಳೆದವರು ಅಪರ್ಣ ಕನ್ನಡದ ಜನಮನಗಳ ವಿವಿಧ ಭಾವಗಳ ಕಿಂಡಿಗಳನ್ನು ಬೆಸೆದು ಸಾಗಿದ ನಿರೂಪಣ ಕೊಂಡಿ ಅಬ್ಬರವಿಲ್ಲದ ಅವರ ಮೃದು ಮಾತು ಕೇಳಿಸುತ್ತಲೇ ಇದೇ ನಾವುಗಳು ಕಿವಿಕೊಡಬೇಕು ಅಷ್ಟೇ.
-ರಂಜಿತಾ ಎಚ್. ಕೆ.
ಹಾಸನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.