Krishna Janmashtami: ಜನಮನದ ಹಬ್ಬ – ಕೃಷ್ಣ ಜನ್ಮಾಷ್ಟಮಿ


Team Udayavani, Sep 6, 2023, 7:00 AM IST

7-krishna

ಕೃಷ್ಣ ಜನ್ಮಾಷ್ಟಮಿ ಮಹಾವಿಷ್ಣುವಿನ ದಶವತಾರಗಳಲ್ಲಿ ಒಂದಾದ ಕೃಷ್ಣಾವತಾರದ ನೆನಪಿಗಾಗಿ ಅಥವಾ ಶ್ರೀಕೃಷ್ಣ ಜನ್ಮ ಸ್ಮರಣಾರ್ಥ ಆಚರಿಸುವ ಹಬ್ಬವಾಗಿದೆ. ಹಲವಾರು ಕಡೆ ವಿವಿಧ ಹೆಸರುಗಳಿಂದ ಜನ್ಮಾಷ್ಟಮಿಯು ಪ್ರಸಿದ್ಧಿ ಪಡೆದಿದೆ. ಕೃಷ್ಣ ಜನಿಸಿದ ಈ ಶುಭದಿನವನ್ನು ಗೋಕುಲಾಷ್ಟಮಿ ಎಂದೂ ಕರೆಯಲಾಗುತ್ತದೆ. ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣಾಷ್ಟಮಿ ಎಂದೂ, ಸೌರಮಾನ ರೀತಿಯಲ್ಲಿ ಸಿಂಹ ಮಾಸದ ರೋಹಿಣೀ ನಕ್ಷತ್ರದ ದಿನ ಆಚರಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ  ಬರುವ ಕೃಷ್ಣ ಪಕ್ಷದ ಅಷ್ಟಮಿಯು ಶ್ರೀಕೃಷ್ಣನ ಜನನ ದಿನ.

ಮಧುರೆಯ ರಾಜನಾದ ಕಂಸ, ತನ್ನ ತಂಗಿ ದೇವಕಿಯ ವಿವಾಹದ ಅನಂತರ ಮೆರವಣಿಗೆಯಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ಇವಳ 8ನೇ ಮಗನಿಂದ ನಿನಗೆ ಮರಣ ಬರಲಿದೆ ಎಂಬ ಅಶರೀರವಾಣಿಯೊಂದು ಕೇಳಿಸುತ್ತದೆ. ಇದರಿಂದ ಭಯಭೀತಗೊಂಡ ಕಂಸ ತಂಗಿ ಬಾವರನ್ನೇ ಕೊಲ್ಲಲು ಧಾವಿಸಿದಾಗ ದೇವಕಿ ಅಣ್ಣನ ಬಳಿ ಪತಿಯ ಜೀವ ಭಿಕ್ಷೆ  ಬೇಡುತ್ತಾಳೆ.

ಈ ಸಂದರ್ಭದಲ್ಲಿ ದೇವಕಿ ಜನಿಸಿದ ಎಲ್ಲ ಮಕ್ಕಳನ್ನೂ ನಿನಗೇ ಒಪ್ಪಿಸುತ್ತೇನೆ ಆದರೆ ನನ್ನ ಪತಿಯನ್ನು ಬಿಟ್ಟು ಬಿಡು ಎಂದು ಅಂಗಲಾಚಿ ಬೇಡಿಕೊಳ್ಳುತ್ತಾಳೆ. ಆಗ ದುರುಳನಾದ ಕಂಸನು ಅವರನ್ನು ಕಾರಾಗೃಹಕ್ಕೆ ತಳ್ಳುತ್ತಾನೆ. ತದನಂತರದಲ್ಲಿ ಆತನು ಜನಿಸಿದ ಏಳು ಮಕ್ಕಳನ್ನೂ ಕೊಂದದ್ದರಿಂದ ಆತನ ಪಾಪದ ಕೊಡವು ತುಂಬಿ ತುಳುಕುತ್ತಿರುತ್ತದೆ.

ಈ ಸಂದರ್ಭದಲ್ಲಿ ದೇವಕಿಯು 8ನೇ ಮಗುವಿಗೆ ಜನ್ಮನೀಡುತ್ತಾಳೆ. ಮೊದಲೇ ಕೇಳಿಬಂದ ಅಶರೀರ ವಾಣಿಯಂತೆ ವಸುದೇವನು ತನಗೆ ಜನಿಸಿದ ಗಂಡು ಮಗುವನ್ನು ಯಶೋದೆಯ ಬಳಿ ಇಟ್ಟು ಯಶೋದೆಯ ಬಳಿ ಇರುವ ಹೆಣ್ಣು ಮಗುವನ್ನು ಕಾರಾಗೃಹಕ್ಕೆ ಕರೆತಂದು ದೇವಕಿಯ ಬಳಿ ಮಲಗಿಸುತ್ತಾನೆ. ಮಗು ಜನಿಸಿದ ವಿವರ ಕೇಳಿ  ಕಂಸ ಓಡೋಡಿ ಬರುತ್ತಾನೆ.

ಹಸುಗೂಸನ್ನು ಕೊಲ್ಲಲು ಬಂಡೆಗೆ ಅಪ್ಪಳಿಸಿದಾಗ ಆ ಕೂಸು ಆಕಾಶಕ್ಕೆ ನೆಗೆದು ವಿಷ್ಣುವಿನ ಸಹಾಯಕಿ ಯೋಗಮಾಯೆಯ ರೂಪತಳೆದು ನಿನ್ನನ್ನು ಸಂಹರಿಸುವ ಶಿಶು ಜನ್ಮವೆತ್ತಿ ಬೆಳೆಯುತ್ತಿದೆ ಎಂದು ಹೇಳಿ ಮಾಯವಾದಳು ಇದನ್ನು ಕೇಳಿದ ಕಂಸನು ಭಯಭೀತನಾಗುತ್ತಾನೆ. ಹರಿಯು ಜನಿಸಿದ ಈ ಶುಭಗಳಿಗೆಯನ್ನೇ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುತ್ತೇವೆ.

ಇತ್ತ ನಂದಗೋಕುಲದಲ್ಲಿ ನಂದರಾಜನ ಮನೆಯಲ್ಲಿ ಆ ಹಸುಗೂಸು ಬೆಳೆಯುತ್ತಿರುತ್ತದೆ. ಕಂಸನು ಹರಿಯನ್ನು ಹರಣ ಗೈಯಲು ಬಗೆ ಬಗೆಯ ಪ್ರಯತ್ನ ಮಾಡಿದರೂ ಆತನ ಯಾವ ಪ್ರಯತ್ನವೂ ಸಫ‌ಲವಾಗುವುದಿಲ್ಲ. ಮುರಾರಿಯ ಬಾಲಲೀಲೆಗಳನ್ನು ವಿವರಿಸಲು ಪುಟಗಳು ಸಾಲದು. ಕೃಷ್ಣನು ಹಲವಾರು ರೀತಿಯಲ್ಲಿ ತನ್ನ ಬಾಲ ಲೀಲೆಗಳನ್ನು ತೋರಿಸುತ್ತಾ ಬೆಳೆಯುತ್ತಾನೆ. ಕೊನೆಗೆ ಈತನೇ ತನ್ನ ಮಾವನಾದ ಕಂಸನನ್ನು ವಧಿಸುತ್ತಾನೆ.

ಅಷ್ಟಮಿಯಂದು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮಿಂದು ಶುಚಿಭೂìತನಾಗಿ ತಳಿರು, ತೋರಣ ಸಾರಣಾದಿಗಳಿಂದ ಮನೆಯನ್ನು ಸಿಂಗರಿಸಿ,  ವ್ರತ ಸಂಕಲ್ಪ ಮಾಡಿ ಶ್ರೀಕೃಷ್ಣನ ಕಥಾಶ್ರವಣ ಮಾಡಿ ರಾತ್ರಿ ವಿಶೇಷ ಪೂಜೆ ಸಲ್ಲಿಸುವುದು ಈ ಹಬ್ಬದ ವೈಶಿಷ್ಟ್ಯ.

ಉಡುಪಿ, ಮಧುರಾ, ವೃಂದಾವನ, ಮುಂತಾದೆಡೆಗಳಲ್ಲಿ ಕೃಷ್ಣನ ಮೂರ್ತಿಯನ್ನು ಉಯ್ನಾಲೆಯಲ್ಲಿಟ್ಟು ಲಾಲಿ ಹಾಡಿ ತೂಗಲಾಗುವುದು. ಅನಂತರ ಕೃಷ್ಣನ ಜನ್ಮೋತ್ಸವವನ್ನು ಆಚರಿಸಿ ನಾಮಕರಣ, ಪೂಜೆ, ನೈವೇದ್ಯ, ಭಜನೆ ಮೊದಲಾದ ಕಾರ್ಯಕ್ರಮಗಳು ನಡೆಯುತ್ತದೆ. ಬೃಂದಾವನದಲ್ಲಿ ಇಂದಿಗೂ ಕೂಡ ಅಂದಿನ ಗೋಪಿಯರು ವರ್ತುಲಾಕಾರದಲ್ಲಿ ನರ್ತಿಸಿದಂತೆ ಹೆಣ್ಣು ಮಕ್ಕಳು ಶ್ರೀಕೃಷ್ಣನ ಮೂರ್ತಿಯ ಸುತ್ತಲೂ ಸುತ್ತುಗಟ್ಟಿ ನರ್ತಿಸುವುದು ಕಾಣಸಿಗುತ್ತದೆ.

ಹೀಗೆ ಜೀವನದ ಕಲುಷಿತ ಕಾಳರಾತ್ರಿಯಲ್ಲಿ ಎಲ್ಲರನ್ನೂ ಪವಿತ್ರಾತ್ಮರನ್ನಾಗಿ ಮಾಡುವ ಶ್ರೀಕೃಷ್ಣ ಜನ್ಮಾಷ್ಟಮಿ ಭಾರತದ ಎಲ್ಲ ಭಾಗಗಳಲ್ಲೂ ಆಚರಿಸಲ್ಪಡುವ ಜನಪ್ರಿಯ ಹಬ್ಬವಾಗಿದೆ.

ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಹಾರೈಕೆಗಳು.

ಕಾರ್ತಿಕ್‌ ಕುಮಾರ್‌ ಕೆ., ಕಡೆಕಲ್ಲು, ಏತಡ್ಕ

ಟಾಪ್ ನ್ಯೂಸ್

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.