Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ
Team Udayavani, Apr 24, 2024, 3:58 PM IST
ಎಲ್ಲ ಶುಭ ಸಮಾರಂಭಗಳಲ್ಲಿ ಮಲ್ಲಿಗೆ ಹೂವು ಅತ್ಯಂತ ಮಹತ್ವವನ್ನು ಪಡೆದಿದೆ. ಕೇವಲ ಶುಭ ಸಮಾರಂಭ ಮಾತ್ರವಲ್ಲ ದೇವರ ಪೂಜೆಗೂ ಮಲ್ಲಿಗೆ ಬಹಳ ವಿಶೇಷ.
ನಿಮಗೆ ಗೊತ್ತಾ ಈ ಮಲ್ಲಿಗೆಯ ನಡುವಲ್ಲಿ ದೇವರು ಮಲಗುತ್ತಾರೆ. ಆ ಸಮಯದಲ್ಲಿ ಮಲ್ಲಿಗೆಯ ಬೆಲೆ ಗಗನಕ್ಕೇರುತ್ತದೆ. ಜತೆಗೆ ಆ ಸಮಯದಲ್ಲಿ ದೇವಸ್ಥಾನದ ಒಳಗೆ ಹೋದರೆ ಮಲ್ಲಿಗೆಯ ಪರಿಮಳ ಒಂದು ರೀತಿಯ ಅಮೋಘ ಅನುಭವ ನೀಡುತ್ತದೆ ಎಂದು.
ಇಲ್ಲಿ ಯಾವುದರ ಬಗ್ಗೆ ಹೇಳುತ್ತಿದ್ದೇನೆಂದರೆ ಅದು ಬಪ್ಪನಾಡಿನಲ್ಲಿ ನಡೆಯುವ ಶಯನೋತ್ಸವದ ಕುರಿತು. ಶಯೋತ್ಸವ ಎಂದರೆ ಇಲ್ಲಿ ಭಕ್ತರು ಹರಕೆಯ ರೂಪದಲ್ಲಿ ತಂದ ಮಲ್ಲಿಗೆಯನ್ನು ದೇವರಿಗೆ ಸಮರ್ಪಿಸುತ್ತಾರೆ. ಅಂತಹ ಮಲ್ಲಿಗೆಯಲ್ಲಿ ದೇವರು ಮಲಗುವಂತಹ ಸನ್ನಿವೇಶ ಈ ಸುಂದರ ಕ್ಷಣವನ್ನು ನೋಡಲು ಎರಡು ಕಣ್ಣು ಸಾಲದು.
ಈ ಸುಂದರ ಕ್ಷಣ ನಡೆಯುವುದು ಬಪ್ಪನಾಡಿನ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ. ಶಿವರಾತ್ರಿಯಿಂದ ದೇವರಿಗೆ ಬಲಿ ಉತ್ಸವ ನಡೆದು ಕೊನೆಯ ಎಂಟು ದಿನದಲ್ಲಿ ಮೊದಲ ದಿನ ಸಸಿಹಿತ್ಲು ಭಗವತಿ ಭೇಟಿಯ ಅನಂತರ ಧ್ವಜಾರೋಹಣ ನಡೆದು ರಥೋತ್ಸವಕ್ಕಿಂತ ಮೊದಲ ಹಗಲು ರಥೋತ್ಸವದ ದಿನ ಶಯನೋತ್ಸವ ನಡೆಯುತ್ತದೆ. ಇಲ್ಲಿನ ವಿಶೇಷ ಏನೆಂದರೆ ರಥೋತ್ಸವದ ದಿನ ಸಸಿಹಿತ್ಲು ಭಗವತಿ ಭೇಟಿಯಾಗಿ ಅನಂತರ ದೇವಸ್ಥಾನವನ್ನು ನಿರ್ಮಿಸಿದ ಮುಸ್ಲಿಂ ವ್ಯಾಪಾರಿ ಬಬ್ಬ ಬ್ಯಾರಿ ಕುಟುಂಬಸ್ಥರಿಗೆ ನೀಡಿದ ಅನಂತರ ರಥೋತ್ಸವದ ನಡೆಯುತ್ತದೆ.
ಕರಾವಳಿಯ ಅನೇಕ ಕಡೆಗಳಿಂದ ಈ ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷಗಟ್ಟಲೆಯಲ್ಲಿ ಮಲ್ಲಿಗೆ ಸಲ್ಲಿಕೆಯಾಗುತ್ತದೆ. ಕಳೆದ ವರುಷ ನೋಡುವುದಾದರೆ ಸುಮಾರು ನಾಲ್ಕು ಲಕ್ಷ ಅಟ್ಟೆ ಮಲ್ಲಿಗೆ ಉಡುಪಿ, ಮಂಗಳೂರು ಭಾಗದಿಂದ ದೇವಿಗೆ ಸಮರ್ಪಿತವಾಗಿದೆ.
ಹರಕೆಯ ರೂಪದಲ್ಲಿ ಭಕ್ತರು ತಮ್ಮ ಇಚ್ಛೆಯಂತೆ ಒಂದು ಚೆಂಡು ಅಥವಾ ಒಂದು ಅಟ್ಟೆ ಮಲ್ಲಿಗೆಯನ್ನು ದೇವಿಗೆ ಸಮರ್ಪಿಸುತ್ತಾರೆ. ದುರ್ಗಾಪರಮೇಶ್ವರಿಗೆ ಶಯನದ ಅನಂತರ ಮರುದಿನ ಮುಂಜಾನೆ ಪೂಜೆ ನಡೆದು ಮಲ್ಲಿಗೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ.
ಈ ಶಯನದ ಸಂದರ್ಭದಲ್ಲಿ ಎರಡು ದಿನಗಳ ಕಾಲ ದೇವಸ್ಥಾನ ಸಂಪೂರ್ಣ ಮಲ್ಲಿಗೆಯ ಸುವಾಸನೆಯಿಂದ ಕೂಡಿರುತ್ತದೆ. ಇಂತಹ ಸುಂದರ ಕ್ಷಣವನ್ನು ನೋಡಲು ಅನುಭವಿಸುವ ಒಂದು ರೀತಿ ಹಿತವಾಗಿರುತ್ತದೆ.
ಈ ವರುಷ ಮಾರ್ಚ್ 24ರಿಂದ 31ರ ವರೆಗೆ ಬಪ್ಪನಾಡಿನ ಜಾತ್ರಾ ಮಹೋತ್ಸವ ನಡೆದಿದ್ದು, ಮಾ. 30ರಂದು ಮಧ್ಯಾಹ್ನ ಹಗಲು ರಥೋತ್ಸವದ ಅನಂತರ ಸಂಜೆ ದೇವಿಗೆ ಶಯನೋತ್ಸವಕ್ಕೆ ಮಲ್ಲಿಗೆ ಸಮರ್ಪಿಸಲಾಗಿತ್ತು. ಇಂತಹ ಅಪರೂಪದ ಸುಂದರ ಕ್ಷಣವನ್ನು ಜೀವನದಲ್ಲಿ ಒಮ್ಮೆಯಾದರೂ ಕಣ್ತುಂಬಿಕೊಳ್ಳಲೇಬೇಕು.
-ಕಾರ್ತಿಕ್ ಮೂಲ್ಕಿ
ಎಸ್‌ಡಿಎಂ ಕಾಲೇಜು ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Wandse, ಚಿತ್ತೂರು, ಇಡೂರು: ಹೊಂಡಗಳಿಗೆ ಮುಕ್ತಿ ಕೊಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.