Election Polls: ಜವಾಬ್ದಾರಿಯುತ ನಾಗರಿಕರಾಗೋಣ
Team Udayavani, Mar 10, 2024, 8:15 AM IST
ಪ್ರಸ್ತುತ ವಿದ್ಯಮಾನದಲ್ಲಿ ರಾಜಕಾರಣಿಗಳು ಪ್ರಜೆಗಳನ್ನು ಪಕ್ಷದ ಕಾರ್ಯಕರ್ತರು ಎಂದು ಪರಿಗಣಿಸಿ ತಮ್ಮ ತಮ್ಮ ರಾಜಕೀಯ ದಾಳಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಜಾತಿ ಬೇದ ಭಾವಗಳಿಂದ ಜನರಲ್ಲಿ ವೈಶ್ಯಮ್ಯ ಹುಟ್ಟುಹಾಕಿ ತಮ್ಮ ತಮ್ಮ ಕಾರ್ಯಗಳನ್ನು ಸಾಧಿಸುತ್ತಿದ್ದಾರೆ.
ಬಿ.ಆರ್. ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ಜಾತಿ ಬೇಧ ಭಾವಗಳ ತಾರತಮ್ಯ ಹೋಗಲಾಡಿಸಲು, ಸರ್ವರಿಗೂ ಸಮಬಾಳು ಸಮಪಾಲು ಎಂಬ ಕಲ್ಪನೆಯನ್ನು ಪ್ರಸ್ತುತಪಡಿಸಿದರು. ಹೀಗಿರುವಾಗ ರಾಜಕಾರಣಿಗಳು ಆಯಾ ಕ್ಷೇತ್ರದ ಪ್ರಬಲ ಸಮುದಾಯಗಳನ್ನು ಗುರುತಿಸಿಕೊಂಡು ತಮ್ಮ ಮತಬ್ಯಾಂಕ್‌ಗಳಾಗಿ ನಿರ್ಮಿಸುತ್ತಿದ್ದಾರೆ. ಜನರಲ್ಲಿ ಇದು ನಮ್ಮ ಜಾತಿಯ ಪಕ್ಷ ಎಂಬ ಮನೋಭಾವನೆ ಬಿತ್ತುತ್ತಿದ್ದಾರೆ.
ಇಂದು ದೇಶದ ಪ್ರಜೆಗಳೆಲ್ಲರೂ ಮತ ಚಲಾಯಿಸುವ ಹಕ್ಕನ್ನು ಮಾರಿಕೊಂಡಿದ್ದು, ಉತ್ತಮ ನಾಯಕನನ್ನು ಆಯ್ದುಕೊಳ್ಳುವ ಸಾಮರ್ಥ್ಯವನ್ನು ಸಹ ಮರೆತಿದ್ದಾರೆ. ಚುನಾವಣೆ ಬಂದರೆ ಸಾಕು ಪ್ರಚಾರಕ್ಕೆಂದು ಅಲೆದಾಡುವುದರಿಂದ ಹಿಡಿದು ನಾಯಕನ ವಿಜಯದ ಸಂಭ್ರಮಾಚರಣೆಯವರೆಗೂ ಅವರ ಪಕ್ಕದಲ್ಲೇ ನಿಂತು ಕಾರ್ಯನಿರ್ವಹಿಸುವ ಪ್ರಜೆಗಳು ಚುನಾವಣೆ ಮುಗಿದ ಬಳಿಕ ತಮ್ಮ ಸುತ್ತಲಿನ ಜನರ ಜತೆ ವೈಷ್ಯಮದ ಮನೋಭಾವನೆ ಬೆಳೆಸಿಕೊಂಡು ಅನೇಕ ಗೊಂದಲಗಳ ಸೃಷ್ಟಿಗೆ ಕಾರಣೀಕರ್ತರಾಗುತ್ತಾರೆ.
ಈ ಸಂದರ್ಭಗಳಲ್ಲಿ ಅನೇಕ ಪಕ್ಷದ ಕಾರ್ಯಕರ್ತರ ಕೊಲೆ, ಗಲಭೆಗಳ ಸೃಷ್ಟಿ, ಸಾವು ನೋವುಗಳನ್ನು ಎದುರಾಗುತ್ತವೆ. ಇಷ್ಟೆಲ್ಲಾ ನಡೆದರೂ ಏನೂ ಆಗದಂತೆ ಮೂಖ ಪ್ರೇಕ್ಷಕರಾಗುವರು ರಾಜಕಾರಣಿಗಳು.
ಪ್ರಚಾರದ ಸಂದರ್ಭ ಬೇಕಾಬಿಟ್ಟಿ ದುಡ್ಡು ಸುರಿದು ಆಯ್ಕೆಯಾದ ರಾಜಕಾ ರಣಿಗಳು ಜನರಿಗೆ ಎಷ್ಟರ ಮಟ್ಟಿಗೆ ನಿಸ್ವಾರ್ಥ ಸೇವೆ ನೀಡಬಲ್ಲರು. ಚುನಾವಣೆಯಲ್ಲಿ ಸುರಿದ ದುಡ್ಡನ್ನು ಐದು ವರ್ಷಗಳಲ್ಲಿ ಹೇಗಾದರೂ ಮಾಡಿ ವಸೂಲಿ ಮಾಡಿಕೊಳ್ಳಬೇಕು ಎಂಬುದೇ ಅವರ ಗುರಿಯಾಗಿರುತ್ತದೆ. ಇದೆಲ್ಲದರ ಹೊರತಾಗಿ ಸ್ವಲ್ಪ ನೀತಿಯುಕ್ತ ರಾಜಕಾರಣಿಗಳು ಮಾತ್ರ ಜನರಿಗೆ ಪರೋಪಕಾರಿ ಕೆಲಸ ಮಾಡುತ್ತಾರೆ.
ಪ್ರಜೆಗಳು ಜಾಗರೂಕರಾಗಿ ನೇತಾರಗಳ ಆಯ್ಕೆ ಮಾಡಬೇಕಾಗಿದೆ. ಈ ಒಂದು ಕಾರ್ಯದಿಂದ ದೇಶದ ಉನ್ನತಿ, ಆರ್ಥಿಕ ಅಭಿವೃದ್ಧಿ, ಮೂಲ ಸೌಕರ್ಯಗಳ ಪೂರೈಕೆ, ಉನ್ನತ ಗುಣಮಟ್ಟದ ಜೀವನ ಶೈಲಿ, ಹೀಗೆ ಎಲ್ಲ ರೀತಿಯಿಂದಲೂ ಪ್ರಜೆಗಳು ಉನ್ನತ ಜೀವನ ಸಾಧಿಸಬಹುದು. ನಾವೆಲ್ಲರೂ ಮತದಾನ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸೋಣ.
ಮಡು ಮೂಲಿಮನಿ
ಧಾರವಾಡ ವಿ.ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.