UV Fusion: ಆಕಾಶದಲ್ಲಿ ಹಾರುವ ಪಕ್ಷಿಯಂತಾಗೋಣ
Team Udayavani, Nov 9, 2023, 7:45 AM IST
“ಆಕಾಶಕ್ಕೆ ಏಣಿ ಹಾಕೋಕೆ ಆಗಲ್ಲ!” ಯಾರೋ ಹೇಳಿದ ಮಾತು ನೆನಪಾಯಿತು. ಹೀಗಿರುವಾಗ “ಪ್ರತಿ ಕನಸುಗಳು ನಮ್ಮ ಮನಸ್ಸಿನ ಹಿಡಿತದಲ್ಲಿರಬೇಕು’.ಯಾರೋ ಹಿರಿಯರು ಅವರ ಸಹೋದ್ಯೋಗಿಗಳಿಗೆ ಹೇಳುತ್ತಿರುವ ಮಾತಿನ ಸಂದರ್ಭ ನನ್ನ ಎದುರಿತ್ತು.
ನನಗೆ ಒಂದು ಕ್ಷಣ ಮೊಗದಲ್ಲಿ ಮಂದಹಾಸ ಬೀರಿತ್ತು. ಅದೇಕೆಂದರೆ ನನ್ನ ಮನಸಿನಲ್ಲಿ ನಡೆಯುತ್ತಿರುವ ಯೋಚನೆಗೂ, ಇಲ್ಲಿ ನಡೆಯುತ್ತಿರುವ ಸಂದರ್ಭಕ್ಕೂ ಸಾಮ್ಯತೆ ಇದೆ ಅಲ್ಲವೇ!ಎಂದು. ಹೀಗೆ ಯೋಚಿಸುತ್ತ ಹೋದರೇ, “ಎಷ್ಟೋ ಕನಸುಗಳಿಗೆ ಆಸರೆಗಳಿರುವುದಿಲ್ಲ.ಆದರೆ ಇನ್ನೆಷ್ಟೋ ಕನಸುಗಳಿಗೆ ಆಸರೆಗಳಿದ್ದರೂ, ಸಾಧಿಸುವ ಹುಮ್ಮಸ್ಸು ಇರುವುದಿಲ್ಲ.’ ಈ ಮನುಷ್ಯನಿಗೆ ಕನಸುಗಳು ಅತೀ ಆದರೆ, ದೇವರು ಕೂಡ ಒಮ್ಮೊಮ್ಮೆ ಶತ್ರುವಾಗಿ ಬಿಡುತ್ತಾನೆ. ಏಕೆಂದರೆ ಮನದಲ್ಲಿ ಸಾವಿರ ಚಿಂತೆ ಇದ್ದರೂ, ಇರುಳಲ್ಲಿ ಚಂದ್ರನನ್ನು ಮರೆತು ಹಗಲಲ್ಲಿ ನಕ್ಷತ್ರಗಳನ್ನು ಹುಡುಕುವ ಆಸೆ.
ಇನ್ನೂ ಕೆಲವೊಮ್ಮೆ ವಿಚಿತ್ರವಾಗಿ ಆಡುವುದನ್ನ ನೋಡಿದರೆ, ಹುಟ್ಟಿಸುವ ದೇವರಿಗೂ ಮಾನವನ ಬಗ್ಗೆ ತಿಳಿಯುವುದಿಲ್ಲ ಅಂತ ಅನಿಸುತ್ತದೆ.ಹೀಗೆ ಹುಟ್ಟಿದ ಮಗು ಅದರ ಪೋಷಕರ ಸ್ವಾಧೀನದಲ್ಲಿ ಬೆಳೆಯುತ್ತದೆ. ಹಾಗೆಯೇ ಪಾಲಕರ ಕನಸುಗಳು ಆ ಮಗುವಿನಲ್ಲಿ ಕಾಣುತ್ತಾರೆ. ಪಾಲಕರು ಮಕ್ಕಳಿಗೂ ಹೊಸ ಹೊಸ ಆಕಾಶದಂತೆ ವಿಶಾಲವಾದ ಕನಸುಗಳು ಕಾಣುವಂತೆ ಓಲೈಸುತ್ತಾರೆ. ಆ ಮಗು ಬೆಳೆಯುತ್ತ ಹೊಸ ಕನಸುಗಳನ್ನು ಕಾಣುತ್ತಾ, ಅದನ್ನು ಗುರಿ ತಲುಪಲು ಪ್ರಯತ್ನಿಸುತ್ತದೆ. ಆ ಪ್ರಯತ್ನ ಬೆಳೆಯುತ್ತ -ಬೆಳೆಯುತ್ತ ಕುಂಠಿತವಾಗುತ್ತದೆ. ಅದಕ್ಕೆ ಕಾರಣಗಳು ನೂರಾರು ಇರಬಹುದು.
ಆದರೆ ಕನಸನ್ನು ಕಾಣುವಾಗ ಇರುವ ಹುಮ್ಮಸ್ಸು, ಅದನ್ನು ಬಿಟ್ಟುಕೊಡುವ ಮುಂಚೆ ಏನೇ ಆಗಲಿ ನನ್ನ ಗುರಿಯನ್ನು ತಲುಪೇ ತಲುಪುತ್ತೇನೆ ಎಂಬ ಆತ್ಮವಿಶ್ವಾಸ ಏಕೆ ಇರುವುದಿಲ್ಲ?ನಮಗೆ ಕನಸುಗಳನ್ನು ಮನಸಿನಲ್ಲಿ ಹುಟ್ಟು ಹಾಕುವವರೇ ಒಂದೊಂದೊಮ್ಮೆ ನಮಗೆ ವಿಶ್ವಾಸ ತುಂಬುವುದರಲ್ಲಿ ವಿಫಲರಾಗಿರುತ್ತಾರೆ. ಇಲ್ಲಿ ಪರಿಸ್ಥಿತಿಗಳ ಕೈಗೊಂಬೆಗಳಾಗಿ ನುಜ್ಜು -ಗುಜ್ಜಾದವರೇ ಜಾಸ್ತಿ. ಕನಸುಗಳನ್ನು ಕಂಡರೆ ಅಬ್ದುಲ್ ಕಲಾಂ ಹಾಗೂ ಅಂಬೇಡ್ಕರ್ ಅವರ ರೀತಿ ಕಾಣಬೇಕು. ನಾನಾ ರೀತಿಯ ಕಷ್ಟಗಳನ್ನು ಎದುರಿಸಿ ಜೀವನದಲ್ಲಿ ಮೇಲೆ ಬಂದವರು ನಮ್ಮ ನಡುವೆ ಇದ್ದಾರೆ. ಏನೇ ಕಷ್ಟ ಬಂದರೂ ಸರಿಯೇ! “ಆಕಾಶದಲ್ಲಿ ಹಾರುವ ಪಕ್ಷಿಯಾಗೋಣ. ಕಂಡ ಕನಸುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ’.
–ದೀಕ್ಷಿತಾ ನಾಯ್ಕ
ಎಂ.ಎಂ., ಮಹಾವಿದ್ಯಾಲಯ, ಶಿರಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.