ಬದುಕಿನಲ್ಲಿ ಆಶಾವಾದಿಗಳಾಗೋಣ: ಓಂಕಾರ ಕಾಕಡೆ


Team Udayavani, Jun 28, 2020, 1:30 PM IST

ಬದುಕಿನಲ್ಲಿ ಆಶಾವಾದಿಗಳಾಗೋಣ: ಓಂಕಾರ ಕಾಕಡೆ

ಕೋವಿಡ್‌-19 ವೈರಸ್‌ ಶೈಕ್ಷಣಿಕ ರಂಗದ ಮೇಲೆ ದೊಡ್ಡ ಮಟ್ಟದಲ್ಲೇ ಮಾರಕವಾಗಿದೆ. ಶೈಕ್ಷಣಿಕ ಚಟುವಟಿಕೆಗಳು ನಿಂತಿವೆ. ಶಿಕ್ಷಣ ಸಂಸ್ಥೆಗಳ ಪುನರಾರಂಭದ ಕುರಿತು ಇನ್ನೂ ಅನಿಶ್ಚಿತತೆ ಮನೆ ಮಾಡಿದೆ. ಕೆಲವು ಶಾಲೆ, ಕಾಲೇಜು, ವಿವಿಗಳು ಆನ್‌ಲೈನ್‌ ವೇದಿಕೆಗಳನ್ನು ಇದಕ್ಕೆ ಪರ್ಯಾಯವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಸಿವೆ. ಇಂಥ ಸವಾಲಿನ ಹೊತ್ತಿನಲ್ಲೇ ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ
ಡಾ| ಓಂಕಾರ ಕಾಕಡೆ ಅಧಿಕಾರ ಸ್ವೀಕರಿಸಿದ್ದಾರೆ. ಅವರೊಂದಿಗೆ ಉದಯವಾಣಿ ಪತ್ರಿಕೆಯ ಯುವಿ-ಫ್ಯೂಷನ್‌ ತಂಡದ ಸುಶ್ಮಿತಾ ಜೈನ್‌ ನಡೆಸಿದ ಮಾತುಕತೆ ಇಲ್ಲಿದೆ.

ಶಿಕ್ಷಣ ಕ್ಷೇತ್ರಕ್ಕೂ ಕೋವಿಡ್‌19 ತಂದೊಡ್ಡಿರುವ ಸವಾಲನ್ನು ಹೇಗೆ ಎದುರಿಸುತ್ತೀರಿ?
ಸದ್ಯ ಎದುರಾದ ಈ ಆರೋಗ್ಯ ಬಿಕ್ಕಟ್ಟು ಶೈಕ್ಷಣಿಕ ಕ್ಷೇತ್ರಕ್ಕೆ ದೊಡ್ಡ ಸವಾಲೆಂಬುದು ಸತ್ಯ. ಅನಿರೀಕ್ಷಿತವಾಗಿ ಎದುರಾದ ಈ ಪರಿಸ್ಥಿತಿಗೆ ಹೊಂದಿಕೊಂಡು ಹೋಗವ ಅನಿವಾರ್ಯ ಸ್ಥಿತಿಯಲ್ಲಿದ್ದೇವೆ ಮತ್ತು ಈ ಹೊತ್ತಿನ ಅಗತ್ಯವೂ ಸಹ. ಸದ್ಯದ ಮಟ್ಟಿಗೆ ಶಿಕ್ಷಣ ಇಲಾಖೆ ಆನ್‌ಲೈನ್‌ ಕ್ಲಾಸ್‌ಗಳ ಮೊರೆ ಹೋಗಿದೆ. ಈ ಒಂದು ನಿರ್ಧಾರ ಸಂಪೂರ್ಣವಾಗಿ ಯಶಸ್ವಿ ಆಗಿದೆ ಎಂದು ಹೇಳಲಿಕ್ಕಾಗದು. ಆದರೂ ಈ ಬಿಕ್ಕಟ್ಟಿನ ವೇಳೆ ತರಗತಿಗಳಿಗೆ ಪಾಲ್ಗೊಳ್ಳಲು ವಿದ್ಯಾರ್ಥಿಗಳು ತೋರುತ್ತಿರುವ ಆಸಕ್ತಿ ನಿಜಕ್ಕೂ ಸ್ವಾಗತಾರ್ಹ. ಶಿಕ್ಷಣ ಪಡೆದುಕೊಳ್ಳಲು ಅವರಿಗಿರುವ ತುಡಿತ ಇಲ್ಲಿ ವ್ಯಕ್ತವಾಗಿದೆ. ಹಾಗಾಗಿ ಸಾಂದರ್ಭಿಕತೆಗೆ ಪೂರಕವಾಗುವ ಹೊಸ ಬಗೆಯ ಆಲೋಚನೆಗಳೊಂದಿಗೆ ಸಾಗಬೇಕಿದೆ, ಸಾಗುತ್ತೇವೆ.

ನಮ್ಮ ಯುವಜನರ ಬಗ್ಗೆ ಏನು ಹೇಳುತ್ತೀರಿ?
ತ್ವರಿತವಾಗಿ ಕಲಿಯುವ ವಿಶೇಷ ಗುಣ ಈಗಿನ ವಿದ್ಯಾರ್ಥಿಗಳು ಮತ್ತು ಯುವ ಜನರ ವಿಶೇಷ ಗುಣ ಎಂದರೆ ತ್ವರಿತವಾಗಿ ಎಲ್ಲವನ್ನೂ ಕಲಿಯುವುದು. ಜತೆಗೆ ಅದನ್ನು ಅದನ್ನು ತಮ್ಮ ವ್ಯಕ್ತಿತ್ವ ವಿಕಾಸಕ್ಕೆ, ಜ್ಞಾನರ್ಜನೆಗೆ ಬಳಸಿಕೊಳ್ಳುವುದು. ಕೊರೊನಾದ ಕುರಿತು ಅವರಿಗೆ ಆತಂಕ ಇರಬಹುದು. ಆದರೆ ಸಾಧಿಸುವ ಛಲ ಕುಂದಿಲ್ಲ. ಅದೇ ವಿಶೇಷ ಹಾಗೂ ಮೆಚ್ಚುವಂಥದ್ದು. ಹತಾಶೆಯ ಮನೋಭಾವನೆಯನ್ನು ತೊಡೆದು ಹಾಕಿ ವೈಯಕ್ತಿಕವಾಗಿ ತಮ್ಮ ಬದುಕನ್ನು ಸ್ವಾವಲಂಬಿಯಾಗಿಸಿಕೊಂಡು ಸಾಮಾಜಿಕ ಮತ್ತು ಆರ್ಥಿಕವಾಗಿ ಸದೃಢವಾದ ದೇಶ ಕಟ್ಟುವ ಪರಿಕಲ್ಪನೆ ಅವರಲ್ಲಿದೆ. ಅದನ್ನು ನಾವೆಲ್ಲಾ ಬೆಂಬಲಿಸಬೇಕಷ್ಟೇ.

ಯುವಜನರಿಗೆ ಕೌಶಲದ ಅಗತ್ಯವಿದೆ ಎನಿಸುವುದಿಲ್ಲವೇ?
ಸದ್ಯ ಎಲ್ಲೆಡೆ ಕೇಳಿ ಬರುತ್ತಿರುವ ಮಾತು ಅದೇ. ಏನೆಂದರೆ ಯುವಜನರಲ್ಲಿ ಔದ್ಯೋಗಿಕ ಕೌಶಲದ ಕೊರತೆ ಇದೆ ಎಂಬುದು. ಉದ್ಯೋಗ ಕ್ಷೇತ್ರ ಪ್ರವೇಶಿಸುವವರು ಎದುರಿಸುತ್ತಿರುವ ಸಂಕಷ್ಟವಿದು. ಈ ಹಿನ್ನೆಲೆಯಲ್ಲಿ ಪ್ರತಿ ವಿಶ್ವವಿದ್ಯಾಲಯ ವಿಷಯವಾರು ಕ್ಷೇತ್ರಗಳಿಗೆ ಅನುಗುಣವಾಗಿ ಜತೆಗೆ ಉದ್ಯೋಗದಾತರ ನಿರೀಕ್ಷೆಗಳಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ರೂಪಿಸುತ್ತಿದ್ದು, ಆ ಬಗ್ಗೆ ಕಾಳಜಿ ತೋರುತ್ತಿವೆ. ಇದಕ್ಕೆ ಪೂರಕವಾಗಿ ಇನ್ನಷ್ಟು ಯೋಜನೆಗಳೊಂದಿಗೆ ಮುಂಬರುವ ದಿನಗಳಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಿದ್ದೇವೆ.

lಆನ್‌ಲೈನ್‌ ಶಿಕ್ಷಣ ಕುರಿತು ಏನು ನಿಮ್ಮ ಅಭಿಪ್ರಾಯ?
ತಂತ್ರಜ್ಞಾನದ ಮೂಲಕ ನಡೆಯುವ ಆನ್‌ಲೈನ್‌ ಕ್ಲಾಸ್‌ಗಳು ಕೇವಲ ಮೌಲ್ಯವರ್ಧನೆ ಮಾಡುವ ಪ್ರಯತ್ನ. ಆದರೆ ಅದು ಶಿಕ್ಷಕರ ಸ್ಥಾನವನ್ನು ತುಂಬದು. ಯಾಕೆಂದರೆ ತಂತ್ರಜ್ಞಾನ ಶಿಕ್ಷಕರ ಅನುಪಸ್ಥಿತಿಯನ್ನು ತುಂಬಲು ಸಾಧ್ಯವಿಲ್ಲ. ಓರ್ವ ಶಿಕ್ಷಕ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡುತ್ತಾನೆ, ತಿಳುವಳಿಕೆ ಹೇಳುತ್ತಾನೆ. ಅವನು ಬದುಕನ್ನು ಕಟ್ಟಿಕೊಳ್ಳುವಲ್ಲಿ ನೆರವಾಗುತ್ತಾನೆ. ಲಾಕ್‌ಡೌನ್‌ ಸಮಯವನ್ನು ಸದುಪಯೋಗ ಮಾಡಿಕೊಳ್ಳಲಷ್ಟೇ ಆನ್‌ಲೈನ್‌ ತರಗತಿ ನಡೆಸಿದ್ದೇವೆಯೇ ಹೊರತು ಬೇರೆ ಯಾವುದಕ್ಕೂ ಅಲ್ಲ. ಒಮ್ಮೆ ಶಾಲಾ ಕಾಲೇಜುಗಳು ಪ್ರಾರಂಭವಾದರೆ, ಮತ್ತೆ ಆ ವಿಷಯಗಳಿಗೆ ಸಂಬಂಧಪಟ್ಟಂತೆ ತರಗತಿಗಳಲ್ಲಿ ಚರ್ಚೆ ನಡೆಸುತ್ತೇವೆ. ಆದ ಕಾರಣ ವಿದ್ಯಾರ್ಥಿಗಳು ಪಠ್ಯ ಅರ್ಥವಾಗದಿದ್ದರೆ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ.

ಕೊರೊನೋತ್ತರ ಸಂದರ್ಭ ಯುವಜನರಿಗೆ ಮಸುಕಾಗಿ ಕಾಣುತ್ತಿದೆಯೇ?
ಹಾಗೇನೂ ಅಲ್ಲ, ಹಾಗೆ ಯೋಚಿಸುವುದೂ ಸೂಕ್ತ ಅಲ್ಲ. ನಾವೀಗ ಆಶಾವಾದಿಗಳಾಗಿ ಬದುಕಬೇಕು.
ಎಲ್ಲರು ಬುದ್ಧಿವಂತರಾಗಿರುವುದಿಲ್ಲ ಎಂಬುದು ಸತ್ಯ. ಆದರೆ ಕಠಿನ ಪರಿಶ್ರಮದಿಂದ ಏನನ್ನೂ ಸಾಧಿಸಬಹುದು. ಹಾಗಾಗಿ ಪ್ರತಿಯೋರ್ವ ವಿದ್ಯಾರ್ಥಿ ಮತ್ತು ಯುವಜನರು ಬದುಕಿನಲ್ಲಿ ನಿರ್ದಿಷ್ಟ ಗುರಿಗಳಿಟ್ಟುಕೊಂಡು, ಸಾಧಿಸಲು ಪ್ರಯತ್ನಿಸಬೇಕು. ಆಗ ಮಾತ್ರ ಯಶಸ್ಸು, ಕೀರ್ತಿ ಸಿಗುತ್ತದೆ. ಆದ ಕಾರಣ ಭವಿಷ್ಯದ ಕುರಿತು ಸಕರಾತ್ಮಕ ಚಿಂತನೆಗಳನ್ನು ಮಾಡುವ ಮೂಲಕ ಆಶಾವಾದಿಗಳಾಗಿ.

ಯುವಜನತೆಯ ಹೊಸ ಹರಿಕಾರ ಯುವಿ-ಪ್ಯೂಷನ್‌
ಉದಯವಾಣಿ ಹೊರತಂದಿರುವ ಯುವಿ ಪ್ಯೂಷನ್‌ ಪತ್ರಿಕ್ಯೋದಮ ಸಹಿತ ಇತರ ವಿಭಾಗದ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ. ಯುವಜನತೆಯ ಹೊಸ ಹರಿಕಾರ ಎಂದೇ ಹೇಳಬಹುದು. ವಿನೂತನ ಪ್ರಯೋಗದ ಮೂಲಕ ವಿದ್ಯಾರ್ಥಿಗಳನ್ನು ಬರವಣಿಗೆಯತ್ತ ಸೆಳೆಯುತ್ತಿರುವ ಉದಯವಾಣಿಯ ಈ ಪ್ರಯತ್ನಕ್ಕೆ ಮತ್ತಷ್ಟು ಬೆಂಬಲ ಸಿಗಲಿ, ಪರಿಕಲ್ಪನೆ ಜನಪ್ರಿಯಗೊಳ್ಳಲಿ.

ಡಾ| ಓಂಕಾರ ಕಾಕಡೆ
ಉಪ ಕುಲಪತಿಗಳು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ

ಟಾಪ್ ನ್ಯೂಸ್

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.