Hate-Love: ದ್ವೇಷವನ್ನು ಪ್ರೀತಿಯಿಂದ ಗೆಲ್ಲೋಣ
Team Udayavani, Sep 4, 2024, 6:08 PM IST
ದ್ವೇಷವನ್ನು ದ್ವೇಷದಿಂದಲೇ ಗೆಲ್ಲುವುದಾದರೆ ದ್ವೇಷಕ್ಕೆ ಅರ್ಥವೆ ಇರುತ್ತಿರಲಿಲ್ಲ. ಈ ಜಗತ್ತಿನಲ್ಲಿ ಹಾಗೇನಾದರೂ ನಡೆದಿದ್ದರೆ ಇಲ್ಲಿ ಕೇವಲ ನಮ್ಮೆಲ್ಲರ ಕಳೇಬರಗಳು ಮಾತ್ರ ಉಳಿದಿರುತ್ತಿದ್ದವು.
ಅರಿಷಡ್ವರ್ಗಗಳಲ್ಲಿ ಒಂದಾದ ಈ ದ್ವೇಷಭಾವ ಸರ್ವರಲ್ಲೂ ಸಹಜವಾಗಿ ಇದ್ದೆ ಇರುತ್ತದೆ. ಹಾಗೆಂದು ಅದಕ್ಕೆ ಪುಷ್ಠಿ ನೀಡುತ್ತ ನೀರೆರೆದು ಪೋಷಿಸಿದರೆ ಮುಂದೆ ಅದೇ ಹೆಮ್ಮರವಾಗುತ್ತದೆ. ಮಹಾದಾನವನಾದ ಹಿರಣ್ಯ ಕಶ್ಯಪು ನಿರ್ನಾಮವಾಗಿದ್ದು ಈ ದ್ವೇಷಭಾವದಿಂದಲೇ. ಇನ್ನು ಹಿಟ್ಲರ್, ಮುಸಲೋನಿ ಯಂತಹ ಮಹಾನುಭಾವರು ದ್ವೇಷಕ್ಕಾಗಿ, ತಮ್ಮ ಕ್ರೂರತನದಿಂದಲೇ ನಿರ್ನಾಮದ ಅಂಚಿಗೆ ತಲುಪಿದವರು.
ಹಗೆಯು ಸರಿಯಲ್ಲ. ಇರುವಷ್ಟು ಕಾಲ ಸರ್ವರಲ್ಲೂ ಪ್ರೀತಿ ವಿಶ್ವಾಸಗಳನ್ನು ತೋರಿ ಬದುಕಬೇಕೆಂಬುದು ಉಪನಿಷತ್ತುಗಳ ಆಶಯ. ಒಮ್ಮೆ ಭಗವಾನ್ ಬುದ್ಧ ತಮ್ಮ ಪ್ರವಚನದಲ್ಲಿ ಹೀಗೆ ಹೇಳುತ್ತಾರೆ, ಬುಧœನನ್ನೇ ಕೊಲೆ ಮಾಡಲು ಮುಂದಾದ ಅಂಗುಲಿಮಾಲನೆಂಬ ದುರ್ಮಾರ್ಗಿಯೊಬ್ಬ ಬೌದ್ಧ ಸನ್ಯಾಸಿಯೇ ನಿಲ್ಲು, ಎಲ್ಲಿ ಹೊರಟಿರುವೆ ಎಂದಾಗ ಭಗವಾನ ಬುದ್ಧ ನಾನು ನಿಂತಿದ್ದೇನೆ ನೀನಿನ್ನು ನಿಂತಿಲ್ಲ ಎಂಬ ಮಾತು ಅಂಗುಲಿಮಾಲನ ಧಾಷ್ಟತನವನ್ನು ಕತ್ತು ಹಿಸುಕಿದಂತಿತ್ತು. ಹೀಗೆ ಮಾತಿನ ಚಕಮಕಿ ಮುಂದುವರೆದಾಗ ಆ ದುಷ್ಟನ ವಿರೂಪವನ್ನು ನೋಡಿ ಭಯಗೊಳ್ಳದ ಸನ್ಯಾಸಿ ಅವನಲ್ಲಿನ ಆ ದುಷ್ಟತೆಯನ್ನು ಓಡಿಸಿ ಶಾಂತಿನೆಲೆಸುವಂತೆ ಮಾಡಿದನು. ಹಾಗೆ ನೋಡಿದರೆ ಅಂಗುಲಿಮಾಲನನ್ನು ದ್ವೇಷದಿಂದಲೆ ಗೆಲ್ಲಬಹುದಿತ್ತು. ಬುದ್ಧ ಪ್ರೀತಿಯೆಂಬ ಮಾರ್ಗದಿಂದ ಅವನನ್ನು ಗೆದ್ದರು.
ಹುಟ್ಟು ಉಚಿತ. ಸಾವು ಖಚಿತ ಎಂದಾದ ಮೇಲೆ ದ್ವೇಷದ ದಳ್ಳುರಿ ಉರಿಸಿ ನಾವು ಪಡೆಯುವುದು ಬರೀ ಸಾವು ನೋವುಗಳನ್ನು ಮಾತ್ರ. ನಮ್ಮಂತರಂಗದಲ್ಲಿ ನಿರಂತರ ಹಗೆಯ ಹೊಗೆಯಾಡುತ್ತಿದ್ದರೆ ಕೊನೆಗೆ ಶ್ಮಶಾನವೂ ನಮ್ಮನ್ನು ದೂರತಳ್ಳುತ್ತದೆ. ದ್ವೇಷವನ್ನು ದ್ವೇಷದಿಂದಲೆ ಸಾಧಿಸುವುದಾದರೆ ಜಗತ್ತಿನಲ್ಲಿ ಶಾಂತಿಗೆ ಬೆಲೆ ಬರುವುದೆಲ್ಲಿಂದ ಎಂಬ ಪ್ರಶ್ನೆ ಉದ್ಬವಿಸುತ್ತದೆ. ಇತರರು ನಮ್ಮನ್ನು ಪುರಸ್ಕರಿಸಲಿ ಇಲ್ಲವೆ ತಿರಸ್ಕರಿಸಲಿ ನಾವು ಮಾತ್ರ ಎಲ್ಲರನ್ನು ಪ್ರೀತಿಯಿಂದಲೇ ನೋಡಬೇಕು.
ದ್ವೇಷ ಮನೆ ಮತ್ತು ಮನಗಳನ್ನು ಕೊಲ್ಲುತ್ತದೆ ಪ್ರೀತಿ ಜಗತ್ತನ್ನು ಗೆಲ್ಲುತ್ತದೆ. ನಾವು ನೀವೆಲ್ಲ ಶಾಂತಿ ಪ್ರಿಯರಾಗೋಣ. ದ್ವೇಷವನ್ನು ತೊರೆಯೋಣ ಪ್ರೀತಿಯನ್ನು ಎರೆಯೋಣ ಸುಖೀಗಳಾಗೋಣ.
-ಶಂಕರಾನಂದ
ಹೆಬ್ಟಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.