Challenges: ಸವಾಲುಗಳು ಇರುವುದು ಎದುರಿಸಲಿಕ್ಕೆ

Team Udayavani, Oct 15, 2023, 1:06 PM IST

ಸವಾಲುಗಳು ಇರುವುದು ಎದುರಿಸಲಿಕ್ಕೆ

ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಸಮಸ್ಯೆಗಳು ಬಂದಾಗ ಅದರ ಬಗ್ಗೆ ಚಿಂತಿಸುತ್ತಾ ಹತಾಶರಾಗದೆ. ಅದನ್ನು ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕಿದೆ.

ಸಮಸ್ಯೆಯಿಂದ ತೊಳಲಾಡಿದ ವ್ಯಕ್ತಿಯೊಬ್ಬ ಜೀವನದಲ್ಲಿ ತುಂಬಾ ಜುಗುಪ್ಸೆ ಹೊಂದಿದ್ದ. ಅವನಿಗೆ ತನ್ನ ಸ್ಥಿತಿಯ ಬಗ್ಗೆ ನೆನೆದರೆ ಕೋಪ ಬರುತ್ತಾ ಇತ್ತು. ನನಗೆ ಮಾತ್ರ ಏಕೆ ಹೀಗಾಗುತ್ತಿದೆ ಎಂದು ಯೋಚಿಸಿ ತಲೆ ಕೆಡಿಸಿಕೊಂಡಿದ್ದನು. ನನ್ನ ಸಮಸ್ಯೆಗೆ ಝೆನ್‌ ಗುರುಗಳನ್ನು ಕಂಡರೆ ಪರಿಹಾರ ಸಿಗಬಹುದೆಂದು ತೀರ್ಮಾನಿಸಿ ಝೆನ್‌ ಗುರು ಓರ್ವರನ್ನು ಭೇಟಿಯಾದನು. ಝೆನ್‌ ಗುರುಗಳಿಗೆ ಅವನ ಮುಖ ನೋಡಿದಾಗಲೇ ತುಂಬಾ ಸಮಸ್ಯೆ ಇರುವಂತೆ ತೋರಿತ್ತು. ಅವನು ಗುರುಗಳ ಹತ್ತಿರ “ಗುರುಗಳೇ ನನಗೆ ಜೀವನ ಸಾಕಾಗಿದೆ. ನನಗೆ ಏನಾಗಿದೆ, ನಾನು ಯಾರು?’ ಎಂದು ಬಡಬಡಿಸುತ್ತಿದ್ದ. ಗುರುಗಳು ಏನೂ ಮಾತನಾಡಲಿಲ್ಲ. ಆ ವ್ಯಕ್ತಿಯು ಗುರುಗಳ ಹತ್ತಿರ “ನನ್ನ ಸಮಸ್ಯೆಗೆ ಪರಿಹಾರ ಒದಗಿಸಿ’ ಎಂದು ಬೇಡಿಕೊಂಡ. ಆದರೆ ಗುರುಗಳು ಒಂದು ಮಾತನ್ನೂ ಆಡಲಿಲ್ಲ. ಆ ವ್ಯಕ್ತಿಗೆ ತುಂಬಾ ಕೋಪ ಬಂತು. ಗುರುಗಳ ಹತ್ತಿರ ಪರಿಹಾರ ದೊರಕುವುದಿಲ್ಲ ಎಂದು ಭಾವಿಸಿ ನನ್ನ ಸಮಸ್ಯೆಯನ್ನು ನಾನೇ ಎದುರಿಸುತ್ತೇನೆ. ಇವರ ಸಹಾಯ ನನಗೆ ಬೇಕಾಗಿಲ್ಲ ಎಂಬ ಛಲದಿಂದ ಎದ್ದು ಹೊರನಡೆದನು.

ಆಗ ಗುರುಗಳು ಆತ ನ‌ನ್ನು ಕರೆದು ಅವನ ಮುಖವನ್ನು ದಿಟ್ಟಿಸಿ ನೋಡುತ್ತಾ “ಈಗ ನಿನಗೆ ಎಲ್ಲ ಸವಾಲುಗಳನ್ನು ಎದುರಿಸುತ್ತೇನೆ ಎಂಬ ಛಲ ಬಂತು ಅಲ್ಲವೇ? ನಿನಗೆ ನೀನು ಯಾರು, ನಿನ್ನ ಶಕ್ತಿ ಏನು ಎಂಬುದು ತಿಳಿಯಿತು. ಆದ್ದರಿಂದ ಇನ್ನು ನಿನ್ನ ಸಮಸ್ಯೆ ಪರಿಹಾರವಾಗುವುದು’ ಎಂದರು.

ಜುಗುಪ್ಸೆ ಎಂಬುದು ಗೆದ್ದಲಿನಂತೆ. ಒಮ್ಮೆ ಮನಸ್ಸಿಗೆ ಆವರಿಸಲಾರಂಭಿಸಿದರೆ ಸಂಪೂರ್ಣವಾಗಿ ಪಸರಿಸುತ್ತದೆ. ಹಾಗಾಗಿ ಜುಗುಪ್ಸೆಗೊಳಗಾಗದಂತೆ ನಮಗೆ ನಾವೇ ಎಚ್ಚರಿಕೆ ವಹಿಸುವುದು ಅಗತ್ಯಗತ್ಯ. ಜೀವನದಲ್ಲಿ ಒಂದು ನಿರ್ದಿಷ್ಟ ಗುರಿ ಇರಬೇಕು. ಆ ಗುರಿ ಸಾಧಿಸುವ ಛಲ ನಮ್ಮಲ್ಲಿದ್ದಾಗ ಎಂತಹ ಸಾಧನೆಯನ್ನು ಕೂಡ ಮಾಡಬಹುದು.

ಕ್ರಿಕೆಟ್‌ ನಲ್ಲಿ ಬ್ಯಾಟ್ಸ್‌ ಮನ್‌ ಓರ್ವ ಶತಕ ಬಾರಿಸಿದರೆ, ಓರ್ವ ಬೌಲರ್‌ ನೂರು ವಿಕೆಟ್‌ ಕಿತ್ತರೆ ಅದು ಆತನ ಸಾಧನೆಗೆ ಒಂದು ಗರಿ ಮೂಡಿದಂತೆ. ಇತಿಹಾಸ ಸೃಷ್ಟಿಸಿದಂತೆ.

ಟಾಪ್ ನ್ಯೂಸ್

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯKarnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯKarnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.