Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…


Team Udayavani, Mar 19, 2024, 7:45 AM IST

10-uv-fusion

ಬಹುಪಾಲು ಜನರು ಏನನ್ನೋ ಸಾಧಿಸುತ್ತೇವೆ ಎನ್ನುವ ಹಠಕ್ಕೆ ಬಿದ್ದು ನಿರಂತರ ಶ್ರಮಿಸುತ್ತಲೇ ಇರುತ್ತಾರೆ. ಅದೇ ನಿಜವಾದ ಬದುಕಿನ ಹೋರಾಟ. ಮನುಷ್ಯನಾದವನು ತನ್ನಲ್ಲಿ ಇಲ್ಲದರ ಕಡೆಗೆ ಸಾಗುತ್ತಿರಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಗೆಲುವು ದಕ್ಕಿಸಿಕೊಳ್ಳುವುದು ಸಲೀಸಲ್ಲ.

ಎಲ್ಲರಿಗೂ ಗೆಲುವಾದೀತು ಎನ್ನುವ ಖಾತರಿಯೂ ಇಲ್ಲ. ಆಯುಷ್ಯವಿಡೀ ಹಗಲಿರುಳು ದುಡಿದು ಸಾಕಷ್ಟು ಪರಿಶ್ರಮ ಪಟ್ಟರೂ ಅನಿರೀಕ್ಷಿತವಾಗಿ ಸಾಲು ಸಾಲು ಸೋಲುಗಳನ್ನು ಎದುರಿಸಿದ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ. ಗೆಲ್ಲಲು ಸಾಧ್ಯವಿಲ್ಲ ಎಂದು ನಾನು ಹೇಳುತ್ತಿಲ್ಲ. ಸಾವಿರ ಸಲ ಸೋತವರಿಗೂ ಒಂದು ಸುಂದರ ಬದುಕಿದೆ ಎನ್ನುವುದು ನನ್ನ ವಾದ.

ಪರಿಶ್ರಮ ಪಟ್ಟವರಿಗೆ ಯಾವ ರೂಪದಲ್ಲಾದರೂ ಗೆಲುವು ಪ್ರಾಪ್ತವಾಗುತ್ತದೆ. ಪ್ರತಿಯೊಬ್ಬರ ಬದುಕಿನಲ್ಲೂ ದಿನ ಕಳೆದಂತೆ ಸಮಸ್ಯೆಗಳು ಎದುರುಗೊಳ್ಳುತ್ತಾ ಹೋಗುತ್ತವೆ. ಧೃತಿಗೆಡದೆ ಎದುರಿಸಬೇಕೇ ಹೊರತು ಸೋತು ಕೈ ಚೆಲ್ಲಿ ನಮ್ಮ ಜೀವನವನ್ನೇ ಶಪಿಸುತ್ತಾ. ನಮ್ಮೊಳಗಿನ ಸಾಮರ್ಥ್ಯದ ಮೇಲೆ ಅಪನಂಬಿಕೆಯನ್ನು ಬೆಳಸಿಕೊಂಡರೆ ನಮ್ಮ ಆತ್ಮವಿಶ್ವಾಸವನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನಕ್ಕೆ ನಾವೇ ಚಾಲನೆ ಕೊಟ್ಟಂತೆ.

ಅನಿರೀಕ್ಷಿತವಾಗಿ ಉಲ್ಬಣಗೊಳ್ಳುವ ಸಮಸ್ಯೆಗಳನ್ನು ನಾವು ಹೇಗೆ ಎದುರಿಸುತ್ತೇವೆ ಎಂಬುದು ನಮ್ಮ ನಿಜವಾದ ಶಕ್ತಿಯನ್ನು ತೋರುತ್ತದೆ. ಬದುಕಿನಲ್ಲಿನ ಕಷ್ಟಕರ ಸಂದರ್ಭಗಳೇ ನಮ್ಮನ್ನು ವಿಭಿನ್ನ ಪ್ರಯತ್ನಗಳಿಗೆ ಅಣಿಗೊಳಿಸುತ್ತವೆ. ಈಗಂತೂ ಯಾವ ಸಾಧನೆಗೂ ಸರಳವಾದ ಮಾರ್ಗಗಳಿಲ್ಲ ಎನ್ನುವುದು ಕಟುಸತ್ಯ. ಒಂದು ಸಣ್ಣ ಗೆಲುವಿಗೆ ವರ್ಷಾನುಗಟ್ಟಲೆ ಆಸೆಗಳನ್ನು ಬಲಿಕೊಟ್ಟು ಸೆಣಸುತ್ತೇವೆ.

ಅರೆ ಹೊಟ್ಟೆ ಮತ್ತು ಅರೆ ನಿದ್ದೆಯಲ್ಲಿ ಶ್ರಮಿಸಿದೂ ಫ‌ಲಿತಾಂಶ ಶೂನ್ಯವಾದಾಗ ನಮ್ಮೊಳಗಿನ ಯಾತನೆಗಳು ನಮ್ಮ ಆತ್ಮ ವಿಶ್ವಾಸವನ್ನು ಕುಂದಿಸಿ ಬಿಡುತ್ತವೆ. ಎಲ್ಲೆಡೆಯೂ ಸಕ್ಕರೆಗೆ ಇರುವೆ ಮುಗಿಬೀಳುವಷ್ಟು ಸ್ಪರ್ಧೆ. ಇಂತಹ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ನಮ್ಮ ಅಂತಃಶಕ್ತಿಯನ್ನು ನಂಬಿ ಪ್ರಾಮಾಣಿಕ ಪರಿಶ್ರಮಕ್ಕೆ ಸಜ್ಜಾದಾಗ ಮಾತ್ರ ನಾವು ಗೆಲುವಿನ ಖಚಿತ ದಾರಿಯ ಜಾಡು ಹಿಡಿಯಬಹುದು. ಅದಕ್ಕೆ ತಕ್ಕುದಾದ ಕೌಶಲ, ಬುದ್ಧಿವಂತಿಕೆ ಮತ್ತು ಆತ್ಮ ವಿಶ್ವಾಸ ಬೆಳೆಸಿಕೊಂಡರೆ ಎಂತಹದ್ದೇ ಕಷ್ಟ ಬಂದರೂ ಮೆಟ್ಟಿ ನಿಲ್ಲಬಲ್ಲೆವು.

ವರ್ತಮಾನದ ಪ್ರಪಂಚದಲ್ಲಿ ಸಾಲು ಸಾಲಾಗಿ ಬರುವ ಸೋಲುಗಳು ನಮ್ಮ ಜೀವನದ ಸವಾಲುಗಳಲ್ಲ. ಅದಕ್ಕಿಂತ ಮಿಗಿಲಾಗಿ ವಿಭಿನ್ನ ಮನಸ್ಥಿತಿಯುಳ್ಳ ಜನರುಗಳ ಮಧ್ಯೆ ಬೆಳೆದು ಬದುಕು ಕಟ್ಟಿಕೊಳ್ಳಬೇಕಾಗಿರುವುದು ನನ್ನ ಪ್ರಕಾರ ಈಗಿನ ಯುವ ಸಮುದಾಯದ ದೊಡ್ಡ ಸವಾಲು. ವೈಯಕ್ತಿಕ ಲಾಭಕ್ಕಾಗಿ ಸ್ವಾರ್ಥದಿಂದ ಬದುಕುವ ಜನಗಳ ಮಧ್ಯೆ ನಾವು ಮನುಷ್ಯರಾಗಿ ಸಾಮರಸ್ಯದಿಂದ ಪರಸ್ಪರ ಒಟ್ಟುಗೂಡಿ ಬದುಕುವುದು ನಮ್ಮ ಮೂಲ ಸೂತ್ರ ಆಗಬೇಕು. ಅಂದಾದಾಗ ಖುಷಿ ಸಂತೋಷ ನೆಮ್ಮದಿಯಿಂದ ಬದುಕು ಸಮೃದ್ಧವಾಗುತ್ತದೆ.

ಪ್ರಸ್ತುತ ಕಾಲದಲ್ಲಿ ಎಲ್ಲವೂ ನಾವಂದುಕೊಂಡಂತೆ ಇಲ್ಲ ಎನ್ನುವ ವಾಸ್ತವವನ್ನು ನಾವು ಅರಿತುಕೊಳ್ಳಬೇಕು. ಒಬ್ಬ ವ್ಯಕ್ತಿಯನ್ನು ಅವರ ಜ್ಞಾನ, ಕೌಶಲ ಮತ್ತು ಸಾಮರ್ಥ್ಯದಿಂದ ಗುರುತಿಸದೇ ಅವರ ಧರ್ಮ, ಜಾತಿ, ಹಣ ಅಂತಸ್ತುಗಳಿಂದ ಅಳೆಯುವ ಪರಿಪಾಠ ಚಲಾವಣೆಯಲ್ಲಿರುವುದು ವಿಷಾದನೀಯ. ತಲೆ ತಲಾಂತರಗಳಿಂದ ರೂಢಿಯಲ್ಲಿರುವ ಜಾತೀಯತೆಯ ಸಮಸ್ಯೆ ಕ್ರಮೇಣ ಕಡಿಮೆಯಾಗಿದೆ ಎಂದು ಭಾವಿಸಿದರೂ ಅದರ ಆಳ ಮಾತ್ರ ಲೆಕ್ಕಕ್ಕೆ ಸಿಗದು.

ಎಲ್ಲರಿಗೂ ತಿಳಿದಿರುವ ಸತ್ಯವೇ. ಅದಕ್ಕಿಂತಲೂ ನೋವಿನ ಸಂಗತಿ ಎಂದರೆ ಎಲ್ಲವನ್ನೂ ವ್ಯಾವಹಾರಿಕವಾಗಿ ನೋಡುವ ಮನಸ್ಥಿತಿಯ ಮಹಾನುಭಾವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು. ಆರ್ಥಿಕವಾಗಿ ಸಧೃಡವಿರುವವರಿಗೆ ಇರುವ ಗೌರವ ಮತ್ತು ಬೆಲೆ ಬಡಪಾಯಿಗಳಿಗೆ ಸಿಗುವುದು ವಿರಳ. ಬಹಳಷ್ಟು ಜನರು ದುಡ್ಡು ಇದ್ದವರಿಗಷ್ಟೇ ಮಣೆ ಹಾಕುವುದು ಗೋಚರಿಸುತ್ತದೆ.

ಅಂದರೆ ಪ್ರಾಮಾಣಿಕತೆ ಪರಿಶ್ರಮ ಮತ್ತು ಮಾನವೀಯ ಮೌಲ್ಯಗಳಿಗಿಂತಲೂ ಹಣ ಅಂತಸ್ತಿಗೆ ಪ್ರಾಶಸ್ತ್ಯ ಇರುವುದು ಸತ್ಯ ಸಂಗತಿ. ದೊಡ್ಡವರು ಎನಿಸಿಕೊಂಡವರು ಬಡಪಾಯಿಗಳನ್ನು ಬಲು ತುತ್ಛವಾಗಿ ಕಾಣುವುದು ಈ ಕಾಲಮಾನದ ವಿಪರ್ಯಾಸ.

ಪ್ರತಿಯೊಬ್ಬರಿಗೂ ಬದುಕಲು ನೂರು ದಾರಿಗಳಿವೆ. ಸರಿಯಾದುದನ್ನು ಆಯ್ಕೆ ಮಾಡಿಕೊಳ್ಳಬೇಕು ಅಷ್ಟೇ. ಜೀವನದ ಅನಿಶ್ಚಿತ ಸವಾಲುಗಳನ್ನು ಮೆಟ್ಟಿ ನಿಂತು ವೈಫ‌ಲ್ಯಗಳನ್ನು ಅವಕಾಶಗಳಾಗಿ ಬದಲಾಯಿಸಬೇಕು ಮತ್ತು ಮುನ್ನಡೆಯಬೇಕು. ಅದೇ ನಿಜವಾದ ಸಾರ್ಥಕ ಬದುಕು.

 ಹುಸೇನಸಾಬ ವಣಗೇರಿ

ವಿವಿ, ಧಾರವಾಡ

ಟಾಪ್ ನ್ಯೂಸ್

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.