UV Fusion: ಅನುಕ್ತ ಭಾವನೆಗಳಿಗೆ ಸ್ಪಂದಿಸುವುದೇ ಜೀವನ


Team Udayavani, Sep 7, 2024, 3:00 PM IST

9-uv-fusion

ಮನುಷ್ಯಜೀವಿ ಅನಾದಿ ಕಾಲದಿಂದಲೂ ಸ್ನೇಹಜೀವಿ. ಹುಟ್ಟಿದಾಗಿಂದ ಮೋಕ್ಷದ ತನಕ ಕೂಡ ಹಲವಾರು ತರಹದ ಸ್ನೇಹ ಸಂಬಂಧಗಳ ಬೆಸುಗೆಯಲ್ಲಿ ಆತ ಜೋಡಣೆಯಾಗಿ ಬದುಕಿರುತ್ತಾನೆ. ಜತೆ ಜತೆಗೆ ತನಗರಿವಿಲ್ಲದಂತೆಯೇ ಹಲವಾರು ಭಾವನಾತ್ಮಕ ಸಂಕೋಲೆಗಳಲ್ಲಿ ಬಂಧಿಯಾಗಿರುತ್ತಾನೆ. ಪುರಾತನ ಭಾರತೀಯ ಸಂಪ್ರದಾಯದಲ್ಲಿ ಅವಿಭಕ್ತ ಕುಂಟುಂಬವು ಒಂದು ಮಮತೆಯ ಶಕ್ತಿಯಾಗಿತ್ತು ಮತ್ತು ವಿವಿಧ ಭಾವನೆಗಳಿಗೆ ವಿವಿಧ ರೀತಿಯಲ್ಲಿ ಸ್ಪಂದಿಸಿ ಪರಿಹಾರ ನೀಡುತ್ತಿತ್ತು.

ಹಿರಿಯ ಜೀವಿಗಳ ಜೀವನ ಮೌಲ್ಯದ ಮಾರ್ಗದರ್ಶನಗಳು, ತಂದೆಯವರಿಂದ ಕಲಿಯುತ್ತಿದ್ದ ವ್ಯಾಪಾರ ವಹಿವಾಟುಗಳ ಉಪಯುಕ್ತ ಮಾಹಿತಿಗಳು, ತಾಯಿಯಿಂದ ಕಲಿಯುತ್ತಿದ್ದ ಕರುಣೆ, ಪ್ರೀತಿ, ವಾತ್ಸಲ್ಯ ಮತ್ತು ಸಹೋದರ ಸಹೋದರಿಯರಿಂದ ಪಡೆಯುತ್ತಿದ್ದ ಸ್ನೇಹ ಸಹಕಾರ ಇವೆಲ್ಲದರ ಸಮಾನ ಪ್ರಮಾಣದ ಹೂರಣದಲ್ಲಿ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಬಹಳ ಅರ್ಥಪೂರ್ಣವಾಗಿ ವಿಕಸಿತಗೊಳಿಸಿಕೊಳ್ಳುತಿದ್ದ.

ಆದರೆ ಕಾಲ ಬದಲಾದಂತೆ ಆಧುನಿಕ ಯುಗದಲ್ಲಿ ಅವಿಭಕ್ತ ಕುಟುಂಬಗಳ ವೈಶಿಷ್ಟತೆಯ ವೈಭವ ನಶಿಸಿಹೋಗಿ ವಿಭಕ್ತ ಕುಟುಂಬವಾಗಿ ಮನುಷ್ಯ ಒಬ್ಬಂಟಿಯಾಗಿ ಭಾವನೆಗಳೇ ಸಿಗದೇ ನಿರ್ಗತಿಕನಾಗಿ ಬಿಟ್ಟಿದ್ದಾನೆ. ನಗರೀಕರಣದ ವ್ಯಾಮೋಹಕ್ಕೆ ಜೋತು ಬಿದ್ದು ಯಾಂತ್ರಿಕ ಬದುಕಿಗೆ ಬಲಿಯಾಗುತ್ತಿದ್ದಾನೆ. ತಂತ್ರಜ್ಞಾನದಲ್ಲೇ ಮುಳುಗಿ ಎದ್ದು ತನ್ನವರ ನಿರಂತರ ಹುಡುಕಾಟದಲ್ಲಿ ಹಲವಾರು ಬಾರಿ ಭಾವನಾತ್ಮಕವಾಗಿ ನೋವನ್ನು ಅನುಭವಿಸುತ್ತಿರುತ್ತಾನೆ.

ಹೇಗೆ ಚಿಕ್ಕ ಚಿಕ್ಕ ವಿಷಯಗಳು ಅದರಲ್ಲಿ ಬರುವ ವ್ಯಕ್ತಿಗಳು ಖುಷಿ ಕೊಡುತ್ತಾರೋ ಹಾಗೆಯೇ ನೋವನ್ನು ಕೂಡ ಕೆಲವೊಂದು ವಿಷಯಗಳು ವ್ಯಕ್ತಿಗಳು ಕೊಟ್ಟು ಹೋಗಿರುತ್ತಾರೆ. ಇಂತಹ ಸಂಧರ್ಭದಲ್ಲಿ ಮನುಷ್ಯ ಹಲವಾರು ದಾರಿಗಳಲ್ಲಿ ಸುಪ್ತ ಭಾವನೆಗಳನ್ನು ಹುಡುಕುವ ಪ್ರಯತ್ನ ಮಾಡುತ್ತಾನೆ. ಹಲವಾರು ಬಾರಿ ಸೋತರೂ ಕೊನೆಗೆ ಆತನ ಭಾವನೆಗಳಿಗೆ ಸ್ಪಂದಿಸುವ ಕೆಲವೊಂದು ಜೀವಗಳು ದೊರಕುತ್ತದೆ.ಅಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ.

ಭಾವನೆಗಳಿಗೆ ಸ್ಪಂದಿಸಿ ಪರಿಹಾರ ನೀಡುತ್ತಾರೆ. ಭಾವನಾತ್ಮಕವಾಗಿ ನೊಂದು ಬೆಂದ ವ್ಯಕ್ತಿ ಈ ನಿಷ್ಕಲ್ಮಶ ವ್ಯಕ್ತಿತ್ವದಲ್ಲಿ ಬೆರೆತು ವಿಕಸಿತಗೊಳ್ಳುತ್ತಾನೆ. ಇಂತಹ ಅನುಕ್ತ ಭಾವನೆಗಳಿಗೆ ಸ್ಪಂದಿಸುವ ಮನಸ್ಸುಗಳು ಇವಾಗಲೂ ನಮ್ಮೊಂದಿಗೆ ಇವೆ ಆದರೆ ನಾವು ಸರಿಯಾಗಿ ಹುಡುಕಬೇಕಷ್ಟೆ. ಈ ಹಲವಾರು ರೀತಿಯ ಅನುಕ್ತ ಭಾವನೆಗಳ ಸಮ್ಮಿಶ್ರಣದ ಬಣ್ಣದಾಯಕ ಬದುಕು ನಮ್ಮದಾಗಲಿ.  ಪ್ರಸಾದ್‌ ಆಚಾರ್ಯ ಕುಂದಾಪುರ

ಟಾಪ್ ನ್ಯೂಸ್

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.