ಲೋಹಿತ್‌ಗೆ ಆ್ಯತ್ಲೆಟಿಕ್ ರಂಗದಲ್ಲಿ ಮಹತ್ಸಾಧನೆಯ ಕನಸು
Team Udayavani, Aug 31, 2020, 1:20 AM IST
ನಿರಂತರ ಪರಿ ಶ್ರಮ, ಸತ ತ ಪ್ರಯತ್ನವಿದ್ದರೆ ಯಾವುದೇ ಕ್ಷೇತ್ರದಲ್ಲೂ ನಾವು ಗೆಲುವನ್ನು ಸಾಧಿಸಬಹುದು.
ಈ ನಂಬಿಕೆಯಲ್ಲೇ ಸಾಗಿದ ಲೋಹಿತ್ ನೇಜಿಕಾರ್ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಕ್ರೀಡಾಕ್ಷೇತ್ರದಲ್ಲಿ ಪ್ರಜ್ವಲವಾಗಿ ಬೆಳಗುತ್ತಿದ್ದಾರೆ.
ರಿಲೇ ಆಟದಲ್ಲಿ ನಿಪುಣರಾಗಿರುವ ಅವರು ಇತರ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡಿರುವ ಅಪರೂಪದ ಸಾಧಕರಾಗಿದ್ದಾರೆ.
ಮೂಲತಃ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ನೇಜಿಕಾರಿನ ರುಕ್ಮಯ್ಯ ಗೌಡ ಹಾಗೂ ಮೀನಾಕ್ಷಿ ದಂಪತಿಯ ಪುತ್ರರಾಗಿರುವ ಲೋಹಿತ್ ನೇಜಿಕಾರ್ ಎಂಟನೇ ತರಗತಿಯಲ್ಲಿರುವಾಗ ಕ್ರೀಡಾಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ.
ಅಲ್ಲಿಂದ ಗೆಲುವಿನ ಹಾದಿಯಲ್ಲಿ ಸಾಗಿದ ಅವರು ಈ ಕ್ಷೇತ್ರದಲ್ಲಿ ಆಗಾಧ ಸಾಧನೆ ಮಾಡಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ಉಪ್ಪಿನಂಗಡಿಯ ಸ.ಹಿ.ಪ್ರಾ. ಶಾಲೆ ಮತ್ತು ಪ್ರೌಢ ಶಿಕ್ಷಣವನ್ನು ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪೂರೈಸಿದ್ದಾರೆ. ಪ್ರಸ್ತುತ ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಅಂತಿಮ ವರ್ಷದಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದಾರೆ.
ಕ್ರೀಡಾಲೋಕದಲ್ಲಿ ಅಮೋಘ ಸಾಧನೆ
200, 400 ಮೀ. ಹಾಗೂ ರಿಲೇಯಲ್ಲಿ ಲೋಹಿತ್ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. 2018-19ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಅಖೀಲ ಭಾರತ ದಕ್ಷಿಣ ವಲಯ ಆ್ಯತ್ಲೆಟಿಕ್ ಕೂಟದಲ್ಲಿ ಲೋಹಿತ್ 200 ಮೀ. ನಲ್ಲಿ ಕಂಚಿನ ಪದಕ, 4ಗಿ100 ಮೀ. ಮತ್ತು 4ಗಿ400 ಮೀ. ರಿಲೇಯಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಈ ಮೊದಲು ತಮಿಳುನಾಡಿನಲ್ಲಿ ನಡೆದ ದಕ್ಷಿಣ ವಲಯ ಕೂಟದಲ್ಲಿ 200 ಮೀ.ನಲ್ಲಿ ನಾಲ್ಕನೇ ಸ್ಥಾನ ಮತ್ತು 4ಗಿ100 ಮೀ.ನಲ್ಲಿ ಬೆಳ್ಳಿ ಗೆದ್ದಿರುವುದು ಅವರ ಮಹತ್ಸಾಧನೆಯಾಗಿದೆ. ಈ ನಡುವೆ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಹಲವು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕರ ಶ್ರಮ
ಎಂಟನೇ ತರಗತಿಯಲ್ಲಿರುವಾಗಲೇ ದೈಹಿಕ ಶಿಕ್ಷಣ ಶಿಕ್ಷಕಿ ವಂದನಾ ಅವರ ಮಾರ್ಗದರ್ಶನದಲ್ಲಿ ಲೋಹಿತ್ ತಾ| ಮಟ್ಟದಲ್ಲಿ 200 ಮೀ., 400 ಮೀ. ಮತ್ತು 600 ಮೀ.ನಲ್ಲಿ ಸ್ಪರ್ಧಿಸಿ ವೈಯಕ್ತಿಕ ಚಾಂಪಿಯನ್ ಆಗಿದ್ದರು. ತರಗತಿ ಮುಗಿದ ಬಳಿಕ ಲೋಹಿತ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದುದನ್ನು ಗಮನಿಸಿದ ತೆಂಕಿಲದ ದೈಹಿಕ ಶಿಕ್ಷಣ ಶಿಕ್ಷಕ ದಾಮೋದರ್ ಕೆ. ಮತ್ತು ಹರಿಣಾಕ್ಷಿ ಅವರು ಹೆಚ್ಚಿನ ತರಬೇತಿ ನೀಡಲು ಮುಂದಾದರು. ಅವರಿಬ್ಬರ ಸಮರ್ಥ ಸಲಹೆ, ಮಾರ್ಗದರ್ಶನದಿಂದ ಲೋಹಿತ್ ಗಮನಾರ್ಹ ನಿರ್ವಹಣೆ ನೀಡುತ್ತ ಸಾಗಿದರು. ಸದ್ಯ ಪಾಲಿಟೆಕ್ನಿಕ್‌ನ ದೈಹಿಕ ಶಿಕ್ಷಣ ಶಿಕ್ಷಕ ಎಂ.ಕೆ. ನವೀನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಲೋಹಿತ್ ಅವ ರ ಸಾಧನೆಯನ್ನು ಗುರುತಿಸಿ ಶಾಲೆ, ಕಾಲೇಜು ಹಾಗೂ ಸಂಘ ಸಂಸ್ಥೆಗಳು ಗೌರವಿಸಿವೆ. ಮುಂದಿನ ದಿನಗಳಲ್ಲಿ ಒಬ್ಬ ಉತ್ತಮ ಆ್ಯತ್ಲೀಟ್ ಆಗಿ ಅಂತಾರಾಷ್ಟ್ರಿಯ ಮಟ್ಟದಲ್ಲಿ ಮಿಂಚುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಇದರ ಜತೆ ಭಾರತೀಯ ನೌಕಾಪಡೆಗೆ ಸೇರುವ ಹೆಬ್ಬ ಯಕೆ ಅವರದ್ದಾಗಿದೆ.
-2013-14ರಲ್ಲಿ ತಾ| ಮಟ್ಟದ 200 ಮೀ. 400 ಮೀ. ಮತ್ತು 4ಗಿ100 ಮೀ. ರಿಲೇಯಲ್ಲಿ ಚಿನ್ನದ ಪದಕ
-ಕಲಬುರಗಿಯಲ್ಲಿ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಕೂಟದ 200 ಮೀ., 400 ಮೀ. ಮತ್ತು 4ಗಿ100 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ
-ದಕ್ಷಿಣ ಪ್ರ್ಯಾಂತೀಯ ಕೂಟದಲ್ಲಿ 400 ಮೀ. ನಲ್ಲಿ ದ್ವಿತೀಯ ಮತ್ತು 4ಗಿ100 ಮೀ. ರಿಲೇಯಲ್ಲಿ ಚಿನ್ನ.
- 2017-18ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ 200 ಮೀ.ನಲ್ಲಿ ತೃತೀಯ, 4ಗಿ100 ಮೀ. ನಲ್ಲಿ ಬೆಳ್ಳಿ.
- 2018-19ರಲ್ಲಿ ಹಾಸನದಲ್ಲಿ ನಡೆದ ಅಂತಾರಾಜ್ಯಕೂಟದಲ್ಲಿ 200 ಮೀ. ನಲ್ಲಿ ಕಂಚು, 4ಗಿ100 ಮೀ ಮತ್ತು 4ಗಿ400 ಮೀ.ನಲ್ಲಿ ಬೆಳ್ಳಿಯ ಪದಕ.
-ಅದೇ ವರ್ಷ ದಕ್ಷಿಣ ವಲಯ ಆ್ಯತ್ಲೆಟಿಕ್ ಕೂಟದಲ್ಲಿ 200 ಮೀ. ನಲ್ಲಿ ನಾಲ್ಕನೇ ಸ್ಥಾನ ಮತ್ತು 4ಗಿ100 ಮೀ.ನಲ್ಲಿ ಬೆಳ್ಳಿಯ ಪದಕ.
-ಬಾಗಲಕೋಟೆಯಲ್ಲಿ ನಡೆದ ರಾಜ್ಯಮಟ್ಟದ ಕೂಟದಲ್ಲಿ 100 ಮೀ., 200 ಮೀ. ಮತ್ತು 4ಗಿ100 ಮೀ. ನಲ್ಲಿ ಚಿನ್ನ 4ಗಿ400 ಮೀ. ನಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ.
-ವಿಶಾಖಪಟ್ಟಣದಲ್ಲಿ ನಡೆದ ದಕ್ಷಿಣ ವಲಯ ಕೂಟದಲ್ಲಿ 200 ಮೀ. ನಲ್ಲಿ ಕಂಚು, 4ಗಿ100 ಮೀ. ಮತ್ತು 4ಗಿ400 ಮೀ. ನಲ್ಲಿ ಬೆಳ್ಳಿಯ ಪದಕ ಪಡೆದಿರುವುದು ಇವರ ಸಾಧನೆಯನ್ನು ಎತ್ತಿ ತೋರಿಸುತ್ತದೆ.
ಚೈತ್ರಾ ಲಕ್ಷ್ಮೀ, ಬಾಯಾರು, ವೇಕಾನಂದ ಕಾಲೇಜು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.