ಮಳೆಯಲ್ಲೊಂದು ಲಾಂಗ್ ಡ್ರೈವ್
Team Udayavani, Jun 9, 2021, 9:00 AM IST
ಮಳೆ ಎಲ್ಲರಿಗೂ ಇಷ್ಟವಾಗುವಂತದ್ದು. ಕೆಲವರಿಗೆ ಮಳೆಯೂ ಮನೆಯಲ್ಲಿಯೇ ಕೂತು ಪ್ರಕೃತಿ ಸೊಬಗನ್ನು ಸವಿಯುವ ಕ್ಷಣ ಅನಿಸಿದರೆ ಇನ್ನೂ ಕೆಲವರಿಗೆ ಮಳೆಯಲ್ಲಿ ನೆನೆದು ಆಟವಾಡುವುದರಲ್ಲೂ ಸಹ ಒಂದು ಖುಷಿ ಇರುತ್ತದೆ. ಮಳೆ ಎಂದ ಕೂಡಲೇ ನೆನಪಾಗುವುದು ಹಲವಾರು ಸಿನೆಮಾಗಳು. ಮಳೆ ಹನಿಯ ಚುಂಬನ ಅನುಭವಿಸಲು ವಯಸ್ಸಿನ ಮಿತಿಇಲ್ಲ. ಮಕ್ಕಳು, ಯುವಕರು, ಯುವತಿಯರು ವಯಸ್ಕರು ಎಲ್ಲರೂ ಮಳೆರಾಯನ ಕುಣಿತಕ್ಕೆ ಮೈ ಮರೆಯುತ್ತಾರೆ.
ಇನ್ನೂ ಅದ್ಭುತ ಅನುಭವ ಅಂದ್ರೆ ಮಳೆಯಲ್ಲಿ ಒಂದು ಲಾಂಗ್ ಡ್ರೆ„ವ್ ಹೋಗೋದು. ಇದು ಬಹುತೇಕರಿಗೆ ಇಷ್ಟ. ತಂಪಾದ ಪ್ರಕೃತಿ ಸೌಂದರ್ಯದ ಜತೆ ಹಾಗೆ ವಿಹಾರ ಹೊರಟರೆ ಎಲ್ಲಿಲ್ಲದ ಖುಷಿ ಸಿಗುತ್ತದೆ. ಮಳೆ ಬರುವ ಹೊತ್ತಲ್ಲಿ ಬೈಕ್‌ನಲ್ಲಿ ಒಂದು ಸುತ್ತು ಹೋಗುವಾಗ ಮುಖಕ್ಕೆ ರಾಚಿ ಹೊಡೆಯುವ ಹನಿಯಲ್ಲಿ ಕಣ್ಣು ಮಿಟುಕಿಸಿ ನೋಡುತ್ತಾ ಹೋಗುವ ಉಲ್ಲಾಸ ಬೇರೆ.
ಸಂಜೆ ಹೊತ್ತು ಸಣ್ಣಗೆ ಸುರಿಯುವ ಮಳೆಯ ಜತೆ ನಡೆಯುತ್ತ ಹೋಗುವ ಆ ಖುಷಿಯೇ ಬೇರೆ. ಕೆಲವೊಮ್ಮೆ ಕಾಲೇಜು ಸಮಯದಲ್ಲಿ ಇನ್ನೇನು ಮನೆಗೆ ಹೋಗುವ ಸಂದರ್ಭ ಮಳೆ ಬಂದರೆ ಸಾಕು ಅಬ್ಟಾ! ಆ ಕ್ಷಣಕ್ಕೆ ಯಾವಾಗ ಮಳೆಯಲ್ಲಿ ನೆನೆಯುವುದೋ ಎನ್ನುವ ಕುತೂಹಲ. ಹೆಜ್ಜೆ ಹಾಕುತ್ತಾ ಕಾಯುತ್ತೇವೆ. ಒಂದು ವೇಳೆ ಕ್ಲಾಸ್‌ನಲ್ಲಿ ಶಿಕ್ಷಕರು ಪಾಠ ಮಾಡುವ ಸಮಯದಲ್ಲಿ ಮಳೆ ಬಂದ್ರೆ ಸಾಕು ಕಾತರದಿಂದ ತರಗತಿ ಮುಗಿಯುವುದನ್ನೇ ಚಡಪಡಿಸುತ್ತ ಕಾಯುವುದು ಒಂದು ಒಳ್ಳೆಯ ಅನುಭವ. ಎಲ್ಲರ ಬದುಕಿನಲ್ಲಿ ಇಂತಹ ಸನ್ನಿವೇಶ ಸಾಮಾನ್ಯವಾಗಿದೆ.
ಇನ್ನೂ ಹನಿ ಹನಿಗೆ ಮುಖವೊಡ್ಡಿ ನಿಲ್ಲುವ ಸುಖ ಬಾಚಿ ಮಳೆಯನ್ನು ಅಪ್ಪಿಕೊಳ್ಳುವ ಆ ಖುಷಿ ಏನೋ ಮನಸ್ಸಿಗೆ ನೆಮ್ಮದಿ. ನಾನು ಕೂಡ ಮಳೆ ಹನಿಯಾದರೆ ಮೋಡದ ಎದೆಯೊಳಗೆ ಬೆಚ್ಚಗೆ ಅವಿತು ಕೂರಬಹುದಿತ್ತು ಪ್ರೀತಿ ಹೆಚ್ಚಾಗಿ ಧರೆಗೆ ಮಳೆಯಾಗಿ ಸುರಿಯಬಹುದಿತ್ತು ಎನ್ನುವಂತೆ ಅನಿಸುತ್ತದೆ. ಒಂದು ಸಾರಿ ಮತ್ತೆ ಮಳೆಯ ಜತೆ ಲಾಂಗ್ ಡ್ರೆ„ವ್ ಹೋಗುವ ಆಸೆ ಬೇಕಂತಲೇ ನೆನೆದು ಬಂದು ಬಿಸಿ ಬಿಸಿ ಕಾಫಿಯನ್ನು ಕುಡಿಯುವ ಸೂಪರ್‌ಅನುಭವ ಆಕಾಶವೇ ಅಂಗೈಯಲ್ಲಿ ಬಂದಂತೆ.
-ಯು. ಎಚ್. ಎಂ. ಗಾಯತ್ರಿ
ಎಸ್‌ಎಸ್‌ಸಿಎಂಎಸ್ ತುಮಕೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.