ಪ್ರಕೃತಿಯನ್ನು ಪ್ರೀತಿಸಿ, ಉಳಿಸಿ ಬೆಳೆಸೋಣ


Team Udayavani, Jun 5, 2020, 1:15 PM IST

ಪ್ರಕೃತಿಯನ್ನು ಪ್ರೀತಿಸಿ, ಉಳಿಸಿ ಬೆಳೆಸೋಣ

ಸಾಂದರ್ಭಿಕ ಚಿತ್ರ

ಗಿಡ, ಮರ-ಬೆಳೆಸಿ-ಪರಿಸರ ಉಳಿಸಿ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಇಂದಿನ ಬದಲಾದ ವಾತಾವರಣ ಮತ್ತು ದಿನೇದಿನೆ ಸಾಕಷ್ಟು ಏರಿಳಿಕೆಯಾಗುತ್ತಿರುವ ಹವಾಮಾನ. ಇನ್ನೊಂದೆಡೆ ಲಾಕ್‌ಡೌನ್‌ ಪರಿಣಾಮ ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆಯಾದರೂ ಇದು ನಿರಂತರವಲ್ಲ ಎಂಬುದೇ ಬೇಸರ.

ಜೂನ್‌ 5 ಬಂತೆಂದರೆ ಸಾಕು ಎಲ್ಲರ ಸ್ಟೇಟಸ್‌ಗಳಲ್ಲೂ ಪರಿಸರ ಸಂರಕ್ಷಣೆಯ ವಿಚಾರಗಳು ವಿಜೃಂಭಿಸುತ್ತವೆ. ಪರಿಸರ ಸಂರಕ್ಷಣೆ ಎಂಬುದು ಒಂದೇ ದಿನಕ್ಕೆ ಸೀಮಿತವಾಗಿರದೆ ಪ್ರತಿನಿತ್ಯದ ಕಾಯಕವಾದರೆ ಸಂಭವಿಸುವಂತಹ ವಿಕೋಪವನ್ನು ತಡೆಯಬಹುದು. ನಮ್ಮ ಸುತ್ತ ¤ಮುತ್ತಲಿನ ಪರಿಸರ ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ಪರಿಸರಕ್ಕೆ ಹಾನಿಯಾದರೆ ನಮಗೆ ಹಾನಿಯಾದಂತೆ.

ಜೂನ್‌ 5 ರಂದು ವಿಶ್ವ ಪರಿಸರ ದಿನವನ್ನು ಕೊಂಡಾಡುವವರ ಪೈಕಿ ಯುವಕರೇ ಹೆಚ್ಚು! ಆದರೆ ಅದೇ ವಿದ್ಯಾವಂತರೇ ಇಂದು ಹೆಚ್ಚು ಪರಿಸರವನ್ನು ಹಾಳು ಮಾಡುತ್ತಿರುವುದು ಶೋಚನೀಯ. ನಮ್ಮ ಪೂರ್ವಜರು ಪ್ರಕೃತಿ ಜತೆಗೆ ಬದುಕಿದವರು. ಆದರೆ ನಾಗರಿಕತೆ ಬೆಳೆದಂತೆ ಪ್ರಕೃತಿಯ ಮಾರಣಹೋಮವೇ ನಡೆಯುತ್ತಿದೆ. ಪರಿಸರದ ಕಾಳಜಿ ಯಾರಿಗೂ ಇಲ್ಲವಾಗಿದೆ. ಪ್ರತಿ ವರ್ಷ ಜೂನ್‌ 5 ರಂದು ನಾವೆಷ್ಟು ಪರಿಸರವನ್ನು ಹಾನಿ ಮಾಡಿದ್ದೇವೆ ಎಂದು ಲೆಕ್ಕಾಚಾರ ಮಾಡುವಂತಾಗಿದೆ.

ಭೂಮಿಯ ಪ್ರತಿಯೊಂದು ಘಟಕವೂ ಸಹ ಭೌತಿಕ ಪರಿಸರದ ಮೇಲೆ ಅವಲಂಬಿತವಾಗಿದೆ. ಸಸ್ಯ, ಪ್ರಾಣಿ ಸೂಕ್ಷ್ಮಜೀವಿಗಳು ಮಳೆ, ಗಾಳಿ, ಮಣ್ಣು ಪ್ರತಿಯೊಂದು ಜತೆಗೂಡಿ ಒಂದು ಸುಂದರವಾದ ಪರಿಸರದ ನಿರ್ಮಾಣವಾಗಿತ್ತು. ಸ್ವಾತಂತ್ರ್ಯದ ಸಮಯದಲ್ಲಿ ದೇಶದಲ್ಲಿ ಶೇ. 75% ರಷ್ಟು ಜನರು ಪರಿಸರವನ್ನು ನಂಬಿಕೊಂಡಿದ್ದು ಮಳೆಯನ್ನೇ ಕೃಷಿಗೆ ನೆಚ್ಚಿಕೊಂಡಿದ್ದರು ಮಾತ್ರವಲ್ಲದೆ ಪ್ರಕೃತಿಯನ್ನು ಅನುಸರಿಸುತ್ತಿದ್ದರು. ಅದರಿಂದ ಆಗುವ ಪ್ರಯೋಜನ ಪ್ರಕೃತಿಯಲ್ಲಿ ಅಪಾರವಾಗಿತ್ತು. ಮಾನವರಲ್ಲಿ ಜಾತಿ-ಧರ್ಮ ಭೇದ-ಭಾವಗಳಿದ್ದರೆ ಗಿಡಮರಗಳು ಭೇದ-ಭಾವಗಳಿಲ್ಲದೆ ಬೆಳೆದು ಮಳೆ, ಗಾಳಿ, ಖನಿಜಗಳು ಈ ರೀತಿ ಅಪಾರವಾಗಿ ಉಳಿದಿತ್ತು.

ಕೆಲವರಿಗೆ ಸೂರ್ಯನಿಂದ ಬರುವ ಬಿಸಿಲು ಇರುವ ಸಂದರ್ಭದಲ್ಲಿ ಈ ಪರಿಸರವೇ ತಂದೆಯ ರೀತಿ ಪೋಷಣೆ ಮಾಡುತ್ತಿತ್ತು. ಆದರೆ ಇಂದು ಪರಿಸರವನೆಲ್ಲ ನಾಶಪಡಿಸುತ್ತಿದ್ದಾರೆ. ಸೊಗಸಾಗಿ ಬೆಳೆದುನಿಂತ ಪ್ರತಿಯೊಂದು ಮರವನ್ನು ಸಹ ಈ ದಿನಗಳಲ್ಲಿ ಜನರು ಕಡಿದು ಬಿಡುತ್ತಿದ್ದಾರೆ. ಎಷ್ಟೇ ಕಡಿದರೂ ಮತ್ತೂಮ್ಮೆ ಚಿಗುರುವ ಗಿಡಮರವದು. ನಾವೆಲ್ಲ ಪ್ರತಿದಿನ ಪ್ಲಾಸ್ಟಿಕ್‌ ಬಳಕೆ ಮಾಡಿ ಪರಿಸರವನ್ನೆಲ್ಲ ನಾಶಪಡಿಸುತ್ತಿದ್ದೇವೆ. ಜಲ, ವಾಯು ಮಾಲಿನ್ಯದಿಂದಾಗಿ ಅನೇಕ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಶುದ್ಧ ಗಾಳಿ, ನೀರನ್ನು ಹಣಕೊಟ್ಟು ಖರೀದಿಸುವ ಪರಿ ಸ್ಥಿತಿ ನಿರ್ಮಾ ಣ ವಾ ಗಿದೆ. ಮರಗಳ ನಾಶದಿಂದ ಪರಿಸರವನ್ನು ಸರ್ವನಾಶ ಮಾಡಿದಂತಾಗುತ್ತದೆ. ಈಗಲೇ ನಾವೆಲ್ಲ ಕೈಜೋಡಿಸಿ ಗಿಡ-ಮರಗಳನ್ನು ಬೆಳೆಸಿ ಭಾರತವನ್ನು ಒಂದು ಸುಂದರವಾದ ದೇಶವನ್ನಾಗಿ ನಿರ್ಮಿಸೋಣ.

– ಪ್ರಭಾಕರ ಪಿ., ಶ್ರೀ ಸಿದ್ಧಾರ್ಥ ಮಾಧ್ಯಮ
ಅಧ್ಯಯನ ಕೇಂದ್ರ, ತುಮಕೂರು.

ಟಾಪ್ ನ್ಯೂಸ್

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.