UV Fusion: ಮಡಿಕೇರಿಯ ಸಾಂಪ್ರದಾಯಿಕ ಕರಗೋತ್ಸವ


Team Udayavani, Oct 30, 2024, 3:02 PM IST

6-karaga

ನಾಡಹಬ್ಬ ದಸರಾಕ್ಕೆ ಅದರದ್ದೇ ಆದ ಹಿನ್ನೆಲೆಯಿದ್ದು ಒಂದೊಂದು ಭಾಗದಲ್ಲಿಯೂ ಒಂದೊಂದು ರೀತಿಯಾಗಿ ಆಚರಿಸಲಾಗುವುದು. ಮಡಿಕೇರಿ ದಸರಾ ಜನೋತ್ಸವದಲ್ಲಿ ಶಕ್ತಿ ದೇವತೆಗಳ ಕರಗೋತ್ಸವದ ಪರಂಪರೆಹಿಂದಿನಿಂದಲೂ ರೂಢಿಯಲ್ಲಿದ್ದದ್ದು. ದಸರಾ ಆರಂಭವಾಗುವುದೇ ಕರಗಪೂಜೆಯಿಂದ. ಮಡಿಕೇರಿಯ ದಸರಾ  ವಿಶ್ವವಿಖ್ಯಾತಿಗಳಿಸಿ ಜನರ ಉತ್ಸವವಾಗಿ ಮಾರ್ಪಟ್ಟಿದೆ. ದಸರಾ ದಿನ ಮಡಿಕೇರಿ ಅಕ್ಷರಶಃ ಹಗಲಾಗಿರುತ್ತದೆ ಎನ್ನಬಹುದು.

ಹಿನ್ನೆಲೆ ಏನು?

ಕೊಡಗು ಜಿಲ್ಲೆಯ ಕೇಂದ್ರ ಮಡಿಕೇರಿಯ ನಾಲ್ಕು ಶಕ್ತಿ  ದೇವತೆಗಳು  ನಾಡಿನಲ್ಲಿ ತಲೆದೋರಿದ್ದ ಸಾಂಕ್ರಾಮಿಕ ರೋಗವನ್ನು ಮತ್ತು ಜನಸಾಮಾನ್ಯರ ಕಷ್ಟಕೋಟಲೆಗಳನ್ನು ದೂರ ಮಾಡಿ ಆರೋಗ್ಯಕರ ವಾತಾವರಣ ಮೂಡಿಸಿದ್ದನ್ನು ಮನಗಂಡ ಮುಖಂಡರು ಹಾಗೂ ಶಕ್ತಿ ದೇವತೆಗಳ ದೇವಾಲಯಗಳ ಪ್ರಮುಖರು ಪ್ರತಿ ವರ್ಷ ಕರಗೋತ್ಸವವನ್ನು ನಡೆಸಲು ನಿರ್ಧರಿಸಿದರು. ಶಕ್ತಿ ದೇವತೆಗಳನ್ನು  ಸುಪ್ರೀತಗೊಳಿಸಿ ಅನುಗ್ರಹ ಪಡೆಯುವ ಸಲುವಾಗಿ ದಸರಾ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಿ ಅದನ್ನು ಕಾರ್ಯರೂಪಕ್ಕೂ ತರಲಾಯಿತು.

ಯುದ್ಧ ಸಂದರ್ಭದಲ್ಲೂ ಕರಗೋತ್ಸವ

ವಿಶೇಷವೆಂದರೆ 2ನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್‌ ಸರ್ಕಾರ ಎÇÉಾ ಉತ್ಸವಗಳನ್ನು  ಬಹಿಷ್ಕರಿಸಿದಾಗಲೂ ಮಡಿಕೇರಿ ದಸರಾ ಪಲ್ಲಕ್ಕಿಗಳು ಮತ್ತು ಕರಗೋತ್ಸವ ಮಾತ್ರ ನಿಲ್ಲಲಿಲ್ಲ. 1962 ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲೂ ಕರಗಗಳನ್ನು ಹೊರಡಿಸುವುದನ್ನು ಸ್ಥಗಿತಗೊಳಿಸಲಿಲ್ಲ. ನಂತರದ ವರ್ಷಗಳಿಂದ ಬೇರೆ ಬೇರೆ ದೇವಾಲಯ ಸಮಿತಿಗಳು ಪಲ್ಲಕ್ಕಿಗಳನ್ನು ಮೆರವಣಿಗೆಯಲ್ಲಿ ಹೊತ್ತು ತರಲು ಆರಂಭಿಸಿದಾಗ  ಮಡಿಕೇರಿ ದಸರಾ ಉತ್ಸವದ ಮೆರುಗು ಹೆಚ್ಚುತ್ತಾ ಬಂತು.

ಮೆರವಣಿಗೆಯ ಇತಿಹಾಸ

ಆರಂಭದಲ್ಲಿ ಪೇಟೆ ಶ್ರೀ ರಾಮ ಮಂದಿರ  ಮತ್ತು ಗಣಪತಿ ಪ್ರತಿಷ್ಠಾನ ಸಮಿತಿಗಳು ತಾವೇ ಮುಂದಾಗಿ ದೇವರ ಭಾವ ಚಿತ್ರಗಳನ್ನು ಹಿಡಿದು ನಗರದಲ್ಲಿ ಮೆರವಣಿಗೆ ನಡೆಸುತ್ತಿದ್ದರು.

1958ರಲ್ಲಿ ದೂರದ ರಾಜಸ್ಥಾನದಿಂದ ಬಂದು ಮಡಿಕೇರಿಯಲ್ಲಿ ನೆಲೆನಿಂತ ದೈವಭಕ್ತ ಶ್ರೀ ಭೀಮ್‌ಸಿಂಗ್‌ ದೇಚೂರಿನ ರಘುರಾಮ ಮಂಟಪವನ್ನು ಆರಂಭಿಸಿದರು. ಈ ಮಂಟಪ ಪೇಟೆ ಶ್ರೀ ರಾಮಮಂದಿರ ಮಂಟಪದ ನಂತರ ಸಾಗುತ್ತಿತ್ತು. ದಸರಾ ಆಚರಣಾ ಕ್ರಮಕ್ಕೆ ಒಂದು ಉತ್ತಮ ಧಾರ್ಮಿಕ ಶಿಸ್ತನ್ನು ರೂಪಿಸಿದ ಪ್ರಪ್ರಥಮ ಕೀರ್ತಿ ಕಾಲೇಜು ರಸ್ತೆಯ ಶ್ರೀ ರಾಮ ಮಂದಿರಕ್ಕೆ ಸಲ್ಲುತ್ತದೆ.

ದಸರಾ  ಉತ್ಸವ ಈಗ ಒಂದು ಧಾರ್ಮಿಕ ಶಿಸ್ತನ್ನು  ಅನುಸರಿಸಿ ನಡೆಯುತ್ತಿದೆ. ವಿಜಯದಶಮಿಯಂದು ಪೇಟೆ ಶ್ರೀ ರಾಮ ಮಂದಿರದ ಮಂಟಪ ಮಂಗಳವಾದ್ಯಗಳೊಂದಿಗೆ ತನ್ನಲ್ಲಿಗೆ ಕಲಶದೊಂದಿಗೆ  ಬಾರದ ಹೊರತು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಕರಗ ಹೊರಡುವಂತಿಲ್ಲ. ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಕರಗ ಹೊರಡದ ಹೊರತು ದಶಮಂಟಪಗಳಲ್ಲಿ ಯಾವ ಮಂಟಪವೂ ಹೊರಡುವಂತಿಲ್ಲ ಮತ್ತು ಇತರ ಕರಗಗಳು ಮೆರವಣಿಗೆ ಬರುವಂತಿಲ್ಲ. ಮೂರು ಕರಗಗಳು ಮತ್ತು ದಶಮಂಟಪಗಳು ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಪೂಜೆಯನ್ನು ಸ್ವೀಕರಿಸಿದ ಅನಂತರವೇ ಬನ್ನಿ ಕುಡಿಯಲು ಹೊರಡಬೇಕೆಂಬ ನಿಯಮವಿದೆ.

ವಿಜಯದಶಮಿಯಂದು ಶ್ರೀ ಪೇಟೆ ರಾಮಮಂದಿರದ ಕಲಶ ಹೊತ್ತ ಪಲ್ಲಕಿ ಮೆರವಣಿಗೆಯಲ್ಲಿ ಹೊರಟು ಶ್ರೀ ಚೌಟಿ ಮಾರಿಯಮ್ಮ ದೇವಾಲಯವನ್ನು ತಲುಪಿ ಅಲ್ಲಿ ಕರಗ ಪೂಜೆ ಸ್ವೀಕರಿಸಿ, ಅನಂತರ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಪೂಜೆ ಸ್ವೀಕರಿಸುತ್ತದೆ. ಶ್ರೀ ದಂಡಿನ ಮಾರಿಯಮ್ಮ ದೇವಾಲಯಕ್ಕೆ ಬಂದಾಗ ಅದೇ ಸಮಯದಲ್ಲಿ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಕರಗ ಹೊರಟು ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ಶ್ರೀ ಪೇಟೆ ರಾಮಮಂದಿರದ ಕಲಶ ಪೂಜೆಗೆ ಅಣಿಯಾಗುತ್ತದೆ. ಒಟ್ಟಿನಲ್ಲಿ ಜನೋತ್ಸವವಾಗಿ ವಿಜೃಂಭಿಸುತ್ತಿರುವ ಮಡಿಕೇರಿ ದಸರಾಕ್ಕೆ ತನ್ನದೇ ಆದ ಇತಿಹಾಸವಿದ್ದು, ನಗರದ ನಾಲ್ಕು  ಶಕ್ತಿ ದೇವತೆಗಳ ಕರಗೋತ್ಸವದ ಪಾತ್ರವೇ ಇಲ್ಲಿ ಪ್ರಮುಖ.

ಕರಗ ಸಂಚಾರ ಆರಂಭ

ಮಹಾಲಯ ಅಮಾವಾಸ್ಯೆಯ ಅನಂತರದ ದಿನಗಳಲ್ಲಿ ನಾಲ್ಕೂ ಶಕ್ತಿ ದೇವತೆಗಳ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಕರಗ ಕಟ್ಟಲು ಪಂಪಿನ ಕೆರೆಗೆ ತೆರಳಲಾಗುತ್ತದೆ. ಅಲ್ಲಿ ಹೂವಿನ ಅಲಂಕಾರವಾದ ಅನಂತರ ಶಾಸ್ತ್ರೋಕ್ತವಾಗಿ ಪೂಜೆ ಪುರಸ್ಕಾರ ಮುಗಿಸಿ ನಾಲ್ಕು ಕರಗಗಳು  ನಗರ ಸಂಚಾರ ಆರಂಭಿಸುತ್ತವೆ. ಮಹದೇವಪೇಟೆ ರಸ್ತೆಯಲ್ಲಿ ಮನೆ ಮನೆಗಳಲ್ಲಿ ಪೂಜೆ ಸ್ವೀಕರಿಸುವ ಕರಗಗಳು ಇತಿಹಾಸ ಪ್ರಸಿದ್ಧ ಶ್ರೀ ಚೌಡೇಶ್ವರಿ ದೇವಾಲಯ ಹಾಗೂ ಪೇಟೆ ಶ್ರೀ ರಾಮಮಂದಿರ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತವೆ.

ಪೂಜಾ ವಿಧಿವಿಧಾನ ಹಿನ್ನೆಲೆ

ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳ ಕರಗ ಮಹೋತ್ಸವಕ್ಕೆ ಎಲ್ಲ ರೀತಿಯ ಮೇಲ್ವಿಚಾರಣೆಯನ್ನು ಮಡಿಕೇರಿ ನಗರ ನಿವಾಸಿ ಮಧುರೈಯ್ಯರವರು ಸುಮಾರು 25 ವರ್ಷಗಳಿಂದ ಮಾಡಿಕೊಂಡು ಬಂದವರು. 1996-97ರ ತನಕ ಅವರ ತಂದೆ ಪೂಜಾರಿ ಚಾಮಿಯವರು ಈ ಮಹತ್ತರ ಜವಬ್ದಾರಿಯನ್ನು ಮಾಡಿಕೊಂಡು ಬಂದಿದ್ದರು. ಅವರಿಗಿಂತ ಮೊದಲು ಅವರ ತಂದೆ, ಅವರ ಅಣ್ಣ ಹೀಗೆ ತಮಿಳುನಾಡಿನಿಂದ ಬಂದು ಮಡಿಕೇರಿಯಲ್ಲಿ ನೆಲೆಸಿದ ತೆಲುಗು ಮಾತಾಡುವ ಗೌಳಿ ವಂಶಸ್ಥರಾದ ಇವರ ಕುಟುಂಬಸ್ಥರೇ ನಾಲ್ಕು ಶಕ್ತಿ ದೇವತೆಗಳ ಕರಗವನ್ನು  ಕಠಿಣ ವೃತದೊಂದಿಗೆ ಹೊರುವುದು ಹಾಗೂ ಅದರ ಸಕಲ ಮೇಲ್ವಿಚಾರಣೆಯ ಹೊಣೆಯನ್ನು ಹೊತ್ತುಕೊಂಡು ಬಂದಿರುವುದು ವಾಡಿಕೆ.

ಸಾಂಕ್ರಾಮಿಕ ರೋಗ ನಿವಾರಣೆಗಾಗಿ ಕರಗ ಪೂಜೆ

ಈ ಕರಗ ಉತ್ಸವದ ಸ್ಥಾಪನೆ 1791ನೇ ಇಸವಿಯಲ್ಲಿ ದೊಡ್ಡವೀರರಾಜೇಂದ್ರ ಆ ಸಂದರ್ಭದಲ್ಲಿ ರಾಜ್ಯಕ್ಕೆ ಮಾರಿಯಾಗಿ ಕಾಡಿದ ಕೆಲವೊಂದು ಸಾಂಕ್ರಾಮಿಕ ರೋಗಗಳನ್ನು ರಾಜ್ಯದಿಂದ ನಿರ್ಮೂಲನೆ ಮಾಡುವ ಸಲುವಾಗಿ ನಗರದ ದೊಡ್ಡ ಬೀದಿಗಳಲ್ಲಿ 9 ದಿನಗಳ ಕಾಲ ಚೋಳರ ಕಾಲದಲ್ಲಿ ತಮಿಳುನಾಡಿನಿಂದ ಬಂದು ಇಲ್ಲಿ ನೆಲೆಸಿದ ತೆಲುಗು ಮಾತಾಡುವ ಗೌಳಿ ವಂಶಸ್ಥರಿಗೆ ನಗರದ ನಾಲ್ಕು ಶಕ್ತಿ ದೇವತೆಗಳ ಕರಗವನ್ನು ಹೊತ್ತು ಮನೆಮನೆಗೆ ತೆರಳಿ ಈ ಮೂಲಕ ನಗರದ ಮನೆಗಳಿಗೆ ಮಾರಿಯಾಗಿ ಕಾಡುತ್ತಿದ್ದ ಸಾಂಕ್ರಾಮಿಕ ರೋಗಗಳನ್ನು ನಿವಾರಿಸುವಂತೆ ಶಕ್ತಿ ದೇವತೆಗಳನ್ನು ವರ್ಷಕ್ಕೆ ಒಮ್ಮೆ ತಲೆಯ ಮೇಲೆ ಹೊತ್ತು ನಗರ ಪ್ರದಕ್ಷಿಣೆ ಹಾಕುವಂತಹ ದೈವತಾ ಕಾರ್ಯದ ಸಂಪೂರ್ಣ  ಜವಬ್ದಾರಿಯನ್ನು ನೀಡಿದರು ಎನ್ನುವುದು ಇತಿಹಾಸ.

ಕರಗಕ್ಕೆ ಗೌಳಿ ವಂಶಸ್ಥರ ಕೊಡುಗೆ

ಹೀಗೆ ಗೌಳಿ ವಂಶಸ್ಥರ ಯಾದವ ಕುಲದ ಹಿರಿಯರು ಅಂದಿನಿಂದ ಇಂದಿನವರೆಗೆ ಕರಗ ಉತ್ಸವವನ್ನು ಆಚರಿಸುತ್ತಾ ಬಂದಿದ್ದು ಕಳೆದ 25 ವರ್ಷಗಳಿಂದ ಅವರ ವಂಶದ ಹಿರಿಯರಾದ ಮಧುರೈಯ್ಯರವರು ಇದೀಗ ಕರಗ ಉತ್ಸವದ ಸಕಲ ಮೇಲ್ವಚಾರಣೆಯ ಜವಬ್ದಾರಿಯನ್ನು ನಿಭಾಯಿಸುತ್ತಾ ಬಂದಿದ್ದು ಈ ವರ್ಷವು ಅವರ ಮುಂದಾಳತ್ವದÇÉೇ ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ನಗರ ಪ್ರದಕ್ಷಿಣೆ ಹಾಕಲಿದೆ ಎನ್ನುವುದು ವಿಶೇಷ.

ಏನೇ ಇರಲಿ ಇರಲಿ ಶಕ್ತಿದೇವತೆಗಳು ನಾಡಿಗೆ ಬಂದಿರುವ ಕಳಂಕವನ್ನು ತೊಡೆದು ನಂಬಿ ಬಂದ ಜನರ ಕೈಹಿಡಿದು ಮುನ್ನಡೆಸಲಿ. ಎಲ್ಲರ ಆಶಯಗಳನ್ನು ಈಡೇರಿಸಲಿ. ದಸರಾ ಕೇವಲ ಜನೋತ್ಸವವಾಗದೆ ಜನರ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವ ದಾರಿಯಾಗಲಿ.

- ಚಂದನ್‌ ನಂದರಬೆಟ್ಟು

ಮಡಿಕೇರಿ

ಟಾಪ್ ನ್ಯೂಸ್

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.