ಅಲೋಪೆಸಿಯಾದಿಂದ ಬಳಲುತ್ತಿದ್ದ ಗೆಳತಿಗೆ ಇದಕ್ಕಿಂತ ಹೆಚ್ಚಿನ ಪ್ರೀತಿ ಸಾಧ್ಯವೇ…?


Team Udayavani, Jul 30, 2020, 7:20 PM IST

Digitallll

ಜಗತ್ತಿನಲ್ಲಿ ಬೆಲೆ ಕಟ್ಟಲಾಗದ  ವಸ್ತು ಇದ್ದರೆ ಅದು ಪ್ರೀತಿ, ಮಮತೆ, ವಾತ್ಸಲ್ಯ. ಇವುಗಳಿಗೆ ಯಾರಿಂದಲೂ ಬೆಲೆಕಟ್ಟಲಾಗದು.

ಜಗತ್ತಿನಲ್ಲಿ ಆಸ್ತಿ ಅಂತಸ್ತು, ನೆಮ್ಮದಿ ಇಲ್ಲವಾಗಿ, ಸಾವಿನ ದವಡೆಯತ್ತ ಹೋಗುತ್ತಿದ್ದರೂ ಕಡೆಗೆ ಪ್ರೀತಿಯೊಂದಿದೆ ಎಂಬ ಕಾರಣಕ್ಕೆ ಜೀವ ಉಳಿಸಿದ ಅದೆಷ್ಟೋ ನಿದರ್ಶನ ನಮ್ಮ ಮುಂದೆ ಇದೆ.

ಒಂದರ್ಥದಲ್ಲಿ ಪ್ರೀತಿ ಅಥವ ನಮ್ಮವರು ಎಂಬುದು ಜೀವನದ ಆಮ್ಲಜನಕ. ಅದು ಹೆತ್ತ ತಾಯಿ- ತಂದೆಯಿಂದ ಆಗಿರಬಹುದು, ಗೆಳೆಯರಾಗಿರಬಹುದು ಅಥವ ಕೈ ಹಿಡಿದ ಮಡದಿಯಿಂದಲೇ ಆಗಿರಬಹುದು.

ಇಲ್ಲೊಂದು ಕಥೆ ಇದೆ. ಬಹುಶ ಇದು ಭಾವನೆಯ ಅಂತಃಕರಣದಲ್ಲಿನ ಆಳವಾಗಿರಬಹುದು.

ಬಲಿಷ್ಠವಾದ ಮರ ಮೇಲೇಳಿಬರಲು ನೆರವಾದ ತಾಯಿ ಬೇರಿನಂತಹ ಅಚಲ ಕಾಳಜಿ ಮತ್ತು ಅನೋನ್ಯ ಸಂಬಂಧವೂ ಆಗಿರಬಹುದು. ಅಂತು ಇಂತಹ ನಡೆ ಬತ್ತಿಹೋದ ಇಳೆಯಲ್ಲಿ ನೀರು ಚಿಮ್ಮಿದಷ್ಟು ಸಂತೋಷವನ್ನು ದಯಪಾಲಿಸುತ್ತದೆ.

ಜಗತ್ತಿನಲ್ಲಿನ ಕಾಯಿಲೆಗಳಲ್ಲಿ ಬೊಕ್ಕತಲೆ ಅಥವ ಅಲೋಪೆಸಿಯಾ ಒಂದು. ಇದು ಕೆಲವರಿಗೆ ಗಂಭೀರ ಸ್ವರೂಪದಲ್ಲಿದ್ದರೆ, ಕೆಲವರಿಗೆ ಲಘುವಾಗಿರುತ್ತದೆ.

ಅದರಲ್ಲೂ ಪುರಷರಲ್ಲಿ ಇದು ಸಾಮಾನ್ಯವಾಗಿ ಹೆಚ್ಚು ಕಂಡುಬರುತ್ತದೆ. ಇದಕ್ಕೆ ಹಾರ್ಮೋನುಗಳ ಕಾರಣ ಸೇರಿದಂತೆ ನಾನಾ ವ್ಯಾಖ್ಯಾನ ವೈದ್ಯಕೀಯ ಕ್ಷೇತ್ರ ನೀಡುತ್ತದೆ. ಒಳ್ಳೆಯ ಕೂದಲು ಬೇಕು ಎಂದು ಹಂಬಲಿಸುವುದು ಸಾಮಾನ್ಯ. ಅದರಲ್ಲೂ ಯುವತಿಯರು ನೀಲವಾಗ ಕೂದಲಿಗೆ ಮನಸ್ಸು ಮಾಡುತ್ತಾರೆ. ಸಣ್ಣ ಕೂದಲಿದ್ದು ಅದನ್ನು ನೀಲ ಜಡೆಯಾಗಿ ಪರಿವರ್ತಿಸಿಕೊಳ್ಳಲು ಹಲವು ಬಗೆಯ ತೈಲಗಳೂ ಮಾರುಕಟ್ಟೆಯಲ್ಲಿವೆ.

ಅಲೋಪೆಸಿಯಾ ಎನ್ನುವುದು ರೋಗ ನಿರೋಧಕ ಶಕ್ತಿಯು ಕೂದಲಿನ ಕಿರುಚೀಲಗಳ ಮೇಲೆ ದಾಳಿ ಮಾಡಿ ಕೂದಲು ಉದುರಲು ಕಾರಣವಾಗುತ್ತದೆ. ಕೆಲವೊಮ್ಮೆ ಇದು ಸಣ್ಣ ಸಣ್ಣ ತೇಪೆಗಳಾಗಿರಬಹುದು. ಆದರೆ ಇತರ ಸಮಯಗಳಲ್ಲಿ ಈ ತೇಪೆಗಳು ವಿಸ್ತರಿಸಲ್ಪಡುತ್ತದೆ.
ಆದರೆ ಅಲೋಪೆಸಿಯಾ ಕಾಯಿಲೆ ಇದ್ದರಿಗೆ ಕೂದಲನ್ನು ಹೊಂದಲು ಸಾಧ್ಯವಾಗುವುದಿಲ್ಲ. ಅಲ್ಲಲ್ಲಿ ಪ್ಯಾಚಸ್‌ ರೂಪದಲ್ಲಿ ಕೂದಲನ್ನು ಕಳೆದುಕೊಳ್ಳುವುದು ಇದರ ಲಕ್ಷಣ. ಅಂದರೆ ಅಲ್ಲಲ್ಲಿ ಕೂದಲು ಕೆಲವು ಕಡೆ ಖಾಲಿ.

ಈ ರೋಗದಿಂದ ಬಳಲುತ್ತಿದ್ದ ತನ್ನ ಪ್ರೇಯಸಿಯನ್ನು ಕೂದಲನ್ನು ಯುವನೊಬ್ಬ ಟ್ರಿಮ್‌ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಒಂದು ನಿಮಿಷದ ವೀಡಿಯೋದಲ್ಲಿ ಗೆಳೆಯ ತನ್ನ ಗೆಳತಿಯ ತಲೆ ಬೋಳಿಸಿಕೊಳ್ಳುವುದನ್ನು ತೋರಿಸುತ್ತದೆ. ಅಲೋಪೆಸಿಯಾದಿಂದ ಬಳಲುತ್ತಿದ್ದ ತನ್ನ ಹುಡುಗಿಯ ತಲೆ ಕೂದಲನ್ನು ಟ್ರಿಮ್‌ ಮಾಡುತ್ತಾನೆ. ಹುಡುಗಿಗೆ ತನ್ನ ಕೂದಲ ಮೇಲೆ ಇರುಷ್ಟೇ ಪ್ರೀತಿ ಹುಡುಗನಿಗೂ.

ತನ್ನವಳ ಕೂದಲನ್ನು ಬಾಚಬೇಕು, ತಲೆ ಕೂದಲ ಸ್ಪರ್ಶವನ್ನು ಅನುಭವಿಸಬೇಕು. ಸಮಾರಂಭಗಳಿಗೆ ಹೊರಟಾಗ ಜಡೆತುಂಬಾ ಹೂವುಗಳು ಘಮಘಮಿಸಬೇಕು ಇತ್ಯಾದಿ ಕನಸು ಪ್ರತಿ ಹುಡುಗನಿಗೂ ಇರುತ್ತದೆ. ಇದು ವಾಸ್ತವ ಹಾಗೂ ಸಾಮಾನ್ಯ. ಇಲ್ಲಿ ಈ ಎಲ್ಲ ಕನಸನ್ನು ಕಂಡಿದ್ದ ಯುವಕ ಸ್ವತಃ ಕೈಯಿಂದ ಹುಡುಗಿಯ ತಲೆ ಸಂಪೂರ್ಣವಾಗಿ ಕ್ಷೌರ ಮಾಡುತ್ತಾನೆ. ಬಳಿಕ ಆತ ಇದ್ದಕ್ಕಿದ್ದಂತೆ ಟ್ರಿಮ್ಮರ್‌ ಅನ್ನು ತನ್ನ ತಲೆಯ ಕಡೆಗೆ ತೆಗೆದುಕೊಂಡು ಅವನ ತಲೆ ಬೋಳಿಸಲು ಪ್ರಾರಂಭಿಸುತ್ತಾನೆ.

ಅದನ್ನು ನೋಡಿ ಅವಳು ಆಘಾತಕ್ಕೊಳಗಾಗುತ್ತಾಳೆ. ಅವನ ಪ್ರೀತಿಗೆ ಸೋತು ಅವಳ ಕಣ್ಣೀರ ಕಟ್ಟೆ ಒಡೆಯುತ್ತದೆ. ಗೆಳತಿಗೆ ಬೆಂಬಲ ತೋರಿಸಲು ಹುಡುಗ ತಲೆ ಬೋಳಿಸಿಕೊಂಡ. ಅವಳು ಅಳುತ್ತಿದ್ದಂತೆ ಅವನು ಅವಳ ಕೆನ್ನೆಗೆ ಮುತ್ತನ್ನು ಇಡುತ್ತಾನೆ. ಈ ದೃಶ್ಯ ಒಂದರೆಕ್ಷಣ ಮನಸ್ಸನ್ನು ಭಾರವೆನಿಸುತ್ತದೆ. ಈ ವೀಡಿಯೋ 10 ಗಂಟೆಗಳ ಅವಧಿಯಲ್ಲಿ 30 ಲಕ್ಷ ವೀಕ್ಷಣೆಯನ್ನು ಪಡೆದಿದೆ. ಈ ವೀಡಿಯೋ ಅನ್ನು ರೆಕ್ಸ್‌ ಚಾಪ್‌ಮೆನ್‌ ಅವರು ಹಂಚಿಕೊಂಡಿದ್ದಾರೆ.

ಟಾಪ್ ನ್ಯೂಸ್

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.