Simple Life: ಬದುಕು ನಿರಾಡಂಬರವಾಗಿರಲಿ
Team Udayavani, Nov 27, 2024, 3:43 PM IST
ಆಡಂಬರದ ಬದುಕು ಶಾಶ್ವತವಲ್ಲವೆಂದು ಅರಿತರೂ ಜನಕ್ಕೆ ಆಡಂಬರವೆಂದರೆ ಪಂಚಪ್ರಾಣ. ದುಡಿಯುವ ಮೂರುಕಾಸಿನಲ್ಲಿ ಹಾಗಿರಬೇಕು ಹೀಗಿರಬೇಕು ಎಂದೆಲ್ಲ ಚಿಂತಿಸಿ ಆಡಂಬರದಲ್ಲಿ ಬದುಕಬೇಕೆಂಬ ಮಹದಾಸೆ ಹೊತ್ತು ಜೀವನ ಸಾಗಿಸುತ್ತಾರೆ. ಅಷ್ಟಕ್ಕೂ ಆಡಂಬರ ಬೇಕು ಎಷ್ಟುಬೇಕು ಅಷ್ಟಿರಲಿ ದುಡಿದದ್ದಕ್ಕಿಂತ ಖರ್ಚು ಹೆಚ್ಚಾದರೆ ಅದು ಅತ್ಯಾಡಂಬರವಾಗುತ್ತದೆ. ಹಾಸಿಗೆಯಿದ್ದಷ್ಟೆ ಕಾಲುಚಾಚು ಎಂದು ಹಿರಿಯರು ಹೇಳಿಲ್ಲವೆ.
ಒಬ್ಬೊಬ್ಬರ ಸ್ಥಿತಿ ಹೀಗಿರುತ್ತದೆ. ಅವರನ್ನು ನೋಡಿದರೆ ಅವರ ಮುಂದೆ ನಾವೇನೂ ಅಲ್ಲವೆಂಬ ಭಾವನೆ ಕ್ಷಣದಲ್ಲಿ ಮನದೊಳಗೆ ಹಾಯುತ್ತದೆ. ಅವರ ವೇಷ ಭೂಷಣ,ಹಾವ ಭಾವ, ಧರಿಸುವ ಕನ್ನಡಕ, ಬಳಸುವ ಬೈಕ್, ಹಾಕುವ ಶೂ ಎಲ್ಲವೂ ಬ್ರ್ಯಾಂಡೆಡ್ ಎಂದು ತೋರಿಕೆಗೆ ಸಾಕಷ್ಟು ರೂಪಾಯಿಗಳ ಖರ್ಚು ಮಾಡಿ ಬಾಳುವುದು ಅವಶ್ಯವೆ..? ಇರಲಿ ಎಲ್ಲವೂ ಬೇಕು ಇಲ್ಲದೆ ನಡೆಯುವುದಿಲ್ಲ ಹಾಗೆಂದು ಅತಿಯಾದರೂ ಕೂಡ ನಡೆಯುವುದಿಲ್ಲ. ಐದುನೂರು ದುಡಿದು ಸಾವಿರ ಖರ್ಚು ಮಾಡಿದರೆ ಹೇಗೆ ಹೀಗಾದರೆ ಅಗತ್ಯಕ್ಕಿಂತ ಖರ್ಚುಹೆಚ್ಚಾಗಿ ಸಾಲಗಾರನಾಗಬೇಕಾಗುತ್ತದೆ.
ನಡೆದಾಡುವ ದೇವರೆಂದು ಖ್ಯಾತಿಯಾದ ಸಿದ್ದೇಶ್ವರ ಸ್ವಾಮಿಗಳು ಹಾಕುವ ಬಟ್ಟೆಗೆ ಕಿಸೆಯಿಲ್ಲ ಎಂದರೆ ನಂಬಲಾದೀತೆ ನಂಬಲೆಬೇಕು ಏಕೆಂದರೆ ಜೀವನುದ್ದಕ್ಕೂ ನಿರಾಡಂಬರರಾಗಿ ಬದುಕಿದ ಮಹಾನ್ ಸಾಧಕರು ಇವರು. ಉಳಿದೆಲ್ಲವರ ಮಧ್ಯೆ ಇವರು ವಿಶೇಷವಾಗಿ ಕಾಣುವ ಮಹಾನ ಚೇತನರಿವರು. ಹಾಗೆ ನೋಡಿದರೆ ಇವರು ಐಶಾರಾಮಿ ಜೀವನದಲ್ಲಿ ಬದುಕಬಹುದಿತ್ತು ಇವರಿಗೆ ಗೊತ್ತಿದೆ ಜೀವನದಲ್ಲಿ ಎಲ್ಲವೂ ನಶ್ವರವೆಂದು ಹಾಗಾಗಿ ಸರಳತೆಯ ಹಾದಿಯಲಿ ಬದುಕಿದ ಪುಣ್ಯಾತ್ಮರಿವರು.
ನಾವು ನೀವೆಲ್ಲ ಕೇವಲ ಒಂದು ಚಿಕ್ಕ ನೌಕರಿ ಸಿಕ್ಕರೆ ಸಾಕು ದುಬಾರಿ ವೆಚ್ಚದ ಬೈಕನ್ನು ಹಾಗೂ ಬಟ್ಟೆಗಳನ್ನು ಖರಿದೀಸಿ ನಾವೆ ಗ್ರೇಟ್ ಎನ್ನುವವರ ತರ ಬಾಳಲು ಶುರುಮಾಡುತ್ತೇವೆ. ಇದೇನು ದೊಡ್ಡದಲ್ಲ ಸಾಧನೆ ಇರಬಹುದು ಆದರೆ ಆಡಂಬರ ಎಷ್ಟು ದಿನ ಹೇಳಿ, ಇದಕ್ಕೂ ಒಂದು ಕೊನೆಯಿಲ್ಲವೆ. ಆಡಂಬರದಲ್ಲಿ ಬದುಕಬೇಕೆಂದು ನನ್ನ ಸ್ನೇಹಿತರೊಬ್ಬರು ಕಳೆದ ಹತ್ತುವರ್ಷಗಳಿಂದ ನಿತ್ಯವೂ ಹೇಳುತ್ತಲೆ ಇದ್ದರೂ ವೃತ್ತಿಯಿಂದ ಇಬ್ಬರೂ ಪ್ರೌಢಶಾಲಾ ಶಿಕ್ಷಕರಿದ್ದೆವು. ದುಬಾರಿ ವಸ್ತುಗಳನು ಖರೀದಿಸಿ ಹಾಗಿರಬೇಕು..? ಹೀಗಿರಬೇಕು..? ಎಂದೆಲ್ಲಾ ಹೇಳಿ ಈಗ ಅಹಮ್ಮಿನ ಕುದುರೆಯಾಗಿದ್ದಾನೆ. ಆಡಂಬರ ಮಸ್ತಕಕೆ ಅಮಲೇರಿಸಿ ಕಡಿವಾಣವಿಲ್ಲದ ಕುದುರೆಯಂತೆ ಓಡಿಸಿ ಕೊನೆಗೊಂದು ದಿನ ಕೊಳ್ಳಕ್ಕೆ ಕೆಡುವುತ್ತದೆ.
ಸಮಾಜದಲ್ಲಿ ನಮ್ಮದೆ ವಿಶೇಷತೆಯಿಂದ ಗುರುತಿಸಿಕೊಳ್ಳಬೇಕು ನಿಜ ಆದರೆ ತೀರಾ ಶೋಕಿ ಜೀವನದಿಂದಲ್ಲ. ಇದರಿಂದ ಜನರು ನಿರಾಕರಣೆ ಹಾಗೂ ದೂಷಣೆ ಮಾಡುತ್ತಾರೆ.ಶಾಶ್ವತವಲ್ಲದ ಬದುಕಿಗೆ ಏಕಿಷ್ಟು ಆಡಂಬರ ಸತ್ತಾಗ ಚಿತೆ ಮೇಲೆ ತುಂಡು ಬಟ್ಟೆಯಿರದೆ ಮಲಗಿಸುತ್ತಾರೆ ಅದನ್ನು ತಿಳಿದು ತಿಳಿದು ಹೀಗೆ ಮೆರೆವ ಜನರಿಗೆ ಹೇಗೆ ಹೇಳಬೇಕೊ ಗೊತ್ತಾಗುತ್ತಿಲ್ಲ. ಇರುವಷ್ಟು ದಿನ ಮನುಷ್ಯ ನಿರಾಡಂಬರವಾಗಿ ಎಲ್ಲರೊಂದಿಗೆ ಬೆರೆಯುತ್ತ ಸಂತಸವನ್ನು ಹಂಚುತ್ತ , ಅವರಲ್ಲಿ ನಾವೂ ಒಂದಾಗಿ ಬದುಕನ್ನು ಸಾರ್ಥಕಗೊಳಿಸೋಣ.
ಶಂಕರಾನಂದ
ಹೆಬ್ಟಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.