UV Fusion: ಶಿಕ್ಷಕರೊಂದಿಗಿನ ನೆನಪುಗಳು


Team Udayavani, Sep 15, 2024, 5:15 PM IST

19-uv-fusion

ಶಿಕ್ಷಕರೊಂದಿಗಿನ ಜೀವನವನ್ನು ನೆನಪಿಸಿಕೊಂಡಾಗ ಯಾರಿಗೆ ತಾನೆ ಖುಷಿಯಾಗುವುದಿಲ್ಲ ಹೇಳಿ.ಪ್ರತಿಯೊಬ್ಬರು ಸಹ ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡಾಗ ನಾವೆಲ್ಲರೂ ಕೆಲ ಸಮಯವಾದರೂ ಆ ದಿನಗಳಲ್ಲೇ ಕಳೆದು ಹೋಗುವುದು ಖಚಿತ.ನಮ್ಮ ಜೀವನವನ್ನು ಶಿಕ್ಷಕರೊಂದಿಗೆ ಕಳೆದ ಕ್ಷಣಗಳನ್ನು ಒಮ್ಮೆ ಮೆಲುಕು ಹಾಕಿದಾಗ ಎಷ್ಟೊಂದು ಸುಮಧುರ ಎಂದು ಈಗ ಅನಿಸುತಿದೆ ಅಲ್ಲವೇ? ಅಂದಿನ ತುಂಟಾಟಗಳನ್ನು ಹೆತ್ತವರಿಂದ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಆಟದ ಕಡೆಗೆ ವಾಲುತ್ತಿದ್ದ ನಮ್ಮ ಮನಸ್ಸನ್ನು ಪಾಠದ ಕಡೆಗೆ ವಾಲಿಸಲು ಶಿಕ್ಷಕರು ಪಡುತ್ತಿದ್ದ ಶ್ರಮ ಅಷ್ಟಿಷ್ಟಲ್ಲ.

ಪ್ರತಿಯೊಬ್ಬರು ತನ್ನ ಜೀವನದಲ್ಲಿ ಕಲಿಸಿಕೊಟ್ಟಂತಹ ಶಿಕ್ಷಕರನ್ನು ಮರೆಯಲು ಸಾಧ್ಯವಿಲ್ಲ.ಚಿಕ್ಕ ವಯಸ್ಸಿನಲ್ಲಿ ಹಲವು ಬಣ್ಣದ ಚೌಕಟ್ಟಿನ ಪಾಟಿಯೊಂದಿಗೆ ಗುರುಗಳ ಮಡಿಲಿನಲ್ಲಿ ಕುಳಿತು ಕಲಿತ ಆ ದಿನಗಳು ಅವಿಸ್ಮರಣೀಯ. ಯಾವುದನ್ನೂ ಮರೆತರೂ ಕಂಠಪಾಠ ಮಾಡಿಸಿ ಕನ್ನಡದ ಮಗ್ಗಿಗಳನ್ನು ಕೇಳುವಂತಹ ತುಂಬಾ ಆತ್ಮೀಯರಾದ ಗುರುಗಳನ್ನು ಖಂಡಿತವಾಗಿಯೂ ಜೀವನದ ಕೊನೆಯವರಿಗೂ ಮರೆಯಬಹುದೆ? ಯಾಕೆ ಪ್ರಶ್ನೆಯಾಗಿದೆ ಎಂದರೆ ಈ ಮಗ್ಗಿಗಳು ಎಂದಾಗ ಎಲ್ಲರು ತಪ್ಪು ಮಾಡಿರುತ್ತೇವೆ. ಹಲವು ಸಲ ಪುಸ್ತಕದಲ್ಲಿ ಐದು ಬಾರಿಯೋ ಹತ್ತು ಬಾರಿಯೋ ಶಿಕ್ಷೆಯೆಂದು ಬರೆಯಲು ಕೊಟ್ಟ ಗುರುಗಳು ಸದಾ ಮನಸ್ಸಿನಲ್ಲಿ ಉಳಿಯುತ್ತಾರೆ. ಆ ಏಟಿಗೆ ಕಲಿತಂತಹ ಸನ್ನಿವೇಶಗಳನ್ನು ಒಮ್ಮೆ ಯೋಚಿಸಿದಾಗ ಮೈಮನಗಳೆಲ್ಲ ಪುಳಕಗೊಂಡು ಅಂದಿನ ಭಯದ ಚಿತ್ರಣ ಇಂದಿನ ಸುಂದರ ನೆನಪುಗಳಾಗಿ ನುಗ್ಗಿ ಬರುತ್ತವೆ.

ಮೂರು,ನಾಲ್ಕು ಗೆರೆಗಳ ಕಾಪಿಯನ್ನು ಕೆಲವೊಮ್ಮೆ ಬರೆಯದೆ,ಹಲವು ಸಲ ಬರೆದರೂ ನೂರಾರು ತಪ್ಪುಗಳನ್ನು ತಿದ್ದುವ ಪ್ರೀತಿಯ ಬೈಗುಳ ಇಂದಿನ ಸಂಗೀತದ ಸ್ವರಗಳಾಗಿವೆ. ಪ್ರತಿಭಾಕಾರಂಜಿಯೂ, ಸ್ವಾತಂತ್ರ್ಯ ದಿನಾಚರಣೆಗೂ ಅಥವಾ ಇನ್ನಿತರ ಕಾರ್ಯಕ್ರಮಗೂ ಮಕ್ಕಳೊಟ್ಟಿಗೆ ಮಗುವಾಗಿ ಕುಣಿದಂತಹ ಶಿಕ್ಷಕರು ಅಚ್ಚುಮೆಚ್ಚು ಅಲ್ಲವೇ…? ಬಾಲ್ಯ ಕಳೆದು ದೊಡ್ಡ ತರಗತಿಗಳಿಗೆ ಹೆಜ್ಜೆ ಇಟ್ಟಂತೆ ಓದು-ಬರವಣಿಗೆ,ಪರೀಕ್ಷೆಗಳು,ಅಂಕಗಳು. ಆದರೆ ನಡೆದು ಬಂದ ಗುರುತುಗಳು ಅಚ್ಚುಗಳಾಗಿವೆ. ಆ ತರಗತಿಗಳನ್ನು ಒಮ್ಮೆ ಯೋಚಿಸಿದಾಗ ಗೇಮ್ಸ್‌ ಕ್ಲಾಸ್‌ ಪಕ್ಕ ನೆನಪಾಗುತ್ತಲ್ಲವೇ…ಅನೇಕ ಬಾರಿ ಆ ಸಮುದಾಯಕ್ಕೆ ಕ್ಲಾಸಿನಲ್ಲಿ ಕುಳ್ಳಿರಿಸಿ ಪಾಠ ಮಾಡುತ್ತಿದ್ದಂತಹ ಗುರುವನ್ನು ಖಂಡಿತವಾಗಿಯೂ ಇಂದಿಗೂ ನೆನಪಿಸುವಂತಹದು. ಜೀವನವು ವಿಸ್ತಾರಗೊಂಡತೆ ಬೆತ್ತಗಳು ಮಾಯಗೊಂಡು, ಬೈಗುಳಗಳು ಕಡಿಮೆಯಾಗಿ ವೈಚಾರಿಕತೆ,ಹಲವಾರು ಕ್ಯಾಂಪYಳು,ಒಂದಿಷ್ಟು ಲ್ಯಾಬ್‌ ಗಳಲ್ಲಿ ಪರದಾಟ,ಪರೀಕ್ಷೆಗಳು ಹೀಗೆ ಹಲವಾರು ಚಟುವಟಿಕೆಗಳಲ್ಲಿ ಸ್ನೇಹಿತರಂತೆಯೆ ಬೆರೆಯುವ ಗುರುಗಳು ಕಾಲೇಜುಗಳಲ್ಲಿ ಸಿಕ್ಕಂತಹ ಆ ಅದ್ಭುತ ಕ್ಷಣಗಳು ಕೂಡ ಜೀವನಕ್ಕೆ ಮತ್ತೂಂದು ಮರೆಯಲಾಗದ ಕ್ಷಣವೆಂದರೆ ತಪ್ಪಾಗದು.ಅದಕ್ಕೆ ಹೇಳುವಂತಹದು ನಿಜವಲ್ಲವೇ ಈ ಮಾತು…ಒಮ್ಮೆ ನೆನಪಿಸಿ ಸ್ನೇಹಿತರೆ…

ವಿದ್ಯಾರ್ಥಿ ಜೀವನದಲ್ಲಿ ಯಾವುದನ್ನೂ ಬೇಕಾದರೂ ಮರೆಯಬಹುದು ಆದರೆ ಪ್ರೀತಿ ಕೊಟ್ಟು ತಿದ್ದಿದಂತಹ ಮತ್ತು ಬೆತ್ತ ಹಿಡಿದು ಏಟು ಕೊಟ್ಟು ತಿದ್ದಿದಂತಹ ಗುರುಗಳನ್ನು ಎಲ್ಲಿ ಹೋದರೂ,ಯಾವುದೇ ಹುದ್ದೆಗಳಲ್ಲಿ ಇದ್ದರೂ ಸದಾ ಅಚ್ಚಳಿಯದ ಭಾವನೆಗಳು.ಬೆತ್ತದಲ್ಲಿ ಕೊಟ್ಟಂತಹ ಆ ಪೆಟ್ಟು ಧೈರ್ಯ,ಛಲಕ್ಕೆ ಸ್ಫೂರ್ತಿ.ಕಪ್ಪು ಹಲಗೆಯಲ್ಲಿ ಬರೆದು ಎಲ್ಲರಿಗೂ ಬರೆಯಲು ಕಲಿಸಿದಂತಹ ಆ ಕೈಗಳು ಜೀವನದಲ್ಲಿ ರಂಗು ತುಂಬುವಂತಹುಗಳು.ಕಲಿಯುವಂತಹ ಹೊತ್ತಿನಲ್ಲಿ ಹೊತ್ತಿಗೆ ಹಿಡಿಸಿ ಬರೆಯಲು ಕಲಿಸಿದ ಗುರುಗಳನ್ನು ಶಿಕ್ಷಕರ ದಿನದಂದು ಮತ್ತೂಮ್ಮೆ ನೆನಪಿಸುವಂತಹ ಸುದಿನವೆಂದೇ ಹೇಳಬಹುದು.

-ಸಂಧ್ಯಾ ಎನ್‌.

ಮಣಿನಾಲ್ಕೂರು

ಟಾಪ್ ನ್ಯೂಸ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.