Mobile Phones: ಸಂಬಂಧ ಕಳಚುತ್ತಿರುವ ಮೊಬೈಲ್ ಬಾಂಧವ್ಯ
Team Udayavani, Nov 6, 2024, 5:58 PM IST
ಸ್ನೇಹ, ಸಂಬಂಧಗಳು ಈಗ ಬರೀ ವಾಟ್ಸ್ ಆ್ಯಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಹೀಗೆ ಸಾಮಾಜಿಕ ಮಾಧ್ಯಮಗಳಿಗಷ್ಟೇ ಸೀಮಿತವಾಗಿದೆ. ಮಕ್ಕಳು ದೈಹಿಕ ಆಟಗಳನ್ನು ಮರೆತು ಮೊಬೈಲ್ ಆಟ, ರೀಲ್ಸ್‌ಗಳನ್ನು ನೋಡುವುದರಲ್ಲಿ ಮಗ್ನರಾಗಿದ್ದಾರೆ, ಅದರ ದಾಸರಾಗಿದ್ದಾರೆ. ಸುದೀರ್ಘವಾಗಿ ಬೆಳೆದು ಬಂದ ಒಂದು ಪರಂಪರೆಯ ಕೊಂಡಿ ಕಳಚಲು ಪ್ರಾರಂಭವಾಗಿದೆ. ತಂತ್ರಜ್ಞಾನ ಯುಗ ಎಂದು ಹೇಳಲು ಭಯವಾಗುವ ದಿನಗಳು ಬಂದು ಬಾಗಿಲ ಒಳಗಡೆ ನಿಂತು, ತನ್ನ ಪ್ರಾಬಲ್ಯ ಮೆರೆದು, ಅಸ್ತಿತ್ವ ಸ್ಥಾಪಿಸಿ ಅಪಹಾಸ್ಯ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ. ಏಕೆ ಈ ಸ್ಥಿತಿ ಬಂದೊದಗಿದೆ ಎಂಬುದನ್ನು ತಿಳಿಯಲು ಯಾರಿಗಾದರೂ ಆಸಕ್ತಿ ಇದೆಯೆ? ಸಮಯವಾದರೂ ಇದೆಯೆ?, ಇದ್ದರೂ ಅದರ ಬಗ್ಗೆ ಯೋಚಿಸುವ ವ್ಯವಧಾನ ಇದೆಯೇ ಅನ್ನುವುದು ಸಹಜ ಮಾತಾಗಿದೆ.
ರಜಾ ದಿನಗಳು ಬಂದರೆ ಸಾಕು ಮಾವನ ಮನೆ ಅರಮನೆಯಂತೆ ಕಾಣುತ್ತಿದ್ದ ದಿನಗಳು ಮರೆಯಾಗುತ್ತಿವೆ. ಎಷ್ಟೊಂದು ಸುಂದರ ದಿನಗಳು ದಸರೆಯ ಮೆರಗು ಕಂಡ ಹಾಗೆ, ಆದರೆ ಇತ್ತೀಚಿನ ಕಾಲದ ಮಕ್ಕಳು ಎಲ್ಲ ಬಾಂಧವ್ಯಗಳನ್ನು ಜಂಗಮವಾಣಿಯೊಂದಿಗೆ ಹೊಂದಿರುವುದು ವಿಷಾದನೀಯ. ತಲೆ ತಲಾಂತರದಿಂದ ಬಂದ ಆಟೋಟಗಳು ಕಣ್ಮರೆಯಾಗಿವೆ.
ಮಕ್ಕಳು ದಸರಾ ಹಬ್ಬದ ರಜೆಯ ದಿನಗಳಲ್ಲಿ ಅಜ್ಜನ ಮನೆಗೆ ಹೋಗಿ ಅಲ್ಲಿ ಆಟ ಆಡುತ್ತಾ, ಕೀಟಲೆ ಮಾಡುತ್ತಾ ಇದ್ದಂತಹ ದಿನಗಳೆಲ್ಲ ಈಗ ನೆನೆಯುವಾಗ ಒಂದು ಕನಸಿನ ರೀತಿ ಭಾಸವಾಗುತ್ತಿದೆ. ಪ್ರಸ್ತುತ ಅಜ್ಜ, ಅಜ್ಜಿ ಮತ್ತು ಮಾವನ ಬಾಂಧವ್ಯವನ್ನು ಗಾಳಿಗೆ ತೂರಿ ನಮಗೂ ಅವರಿಗೆ ಏನೂ ಸಂಬಂಧವಿಲ್ಲ ಅನ್ನುವಂತೆ ಇರುವುದು ನೋಡಿದರೆ ಬಹಳಷ್ಟು ಮನಸ್ಸಿಗೆ ಖೇದವನ್ನುಂಟು ಮಾಡುತ್ತದೆ.
ಇದನ್ನೆಲ್ಲ ನೋಡಿದರೆ ಇನ್ನು ಮುಂದೆ ಇತಿಹಾಸದ ಪುಟಗಳಲ್ಲಿ ಸಂಬಂಧಗಳ ವಿವರಗಳನ್ನು ಓದಿ ತಿಳಿದುಕೊಳ್ಳುವ ಕಾಲ ದೂರವಿಲ್ಲ ಅನ್ನಬಹುದು. ಇದನ್ನು ಸರಿಪಡಿಸಬೇಕಾಗಿದೆ. ಸಂಬಂಧಗಳ ಕೊಂಡಿಯನ್ನು ಮತ್ತೆ ಬಿಗಿಗೊಳಿಸಲು ಪೋಷಕರು ಮತ್ತು ಶಿಕ್ಷಣದ ಪದ್ಧತಿಯಿಂದ ಸಾಧ್ಯ. ಸಂಬಂಧಗಳು ಮತ್ತು ಬಾಂಧವ್ಯಗಳ ಕೊಂಡಿಗಳು ಗಟ್ಟಿಯಾಗಿಸುವತ್ತ ಹೆಜ್ಜೆ ಹಾಕೋಣ.
-ಸುನಿಲ್ ತೆಗೋರ
ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು
ಹೊಸ ಸೇರ್ಪಡೆ
BPL: ತೆರಿಗೆದಾರರು, ಸರ್ಕಾರಿ ನೌಕರರ ಕಾರ್ಡ್ ಮಾತ್ರ ರದ್ದು: ಗೊಂದಲಕ್ಕೆ ಸಚಿವರ ಸ್ಪಷ್ಟನೆ
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
Baba Budan Dargah: ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.