Tour Circle: ಗೋವಾದಲ್ಲಿ ಕಳೆದ ಕ್ಷಣಗಳು


Team Udayavani, Oct 11, 2023, 7:15 AM IST

10–fusion-goa-tour

ಮನುಷ್ಯ ಜೀವನದಲ್ಲಿ ಸಂಚಾರಿ ಆಗಲು ಬಯಸುತ್ತಾನೆ. ಎಲ್ಲಾ ರೀತಿಯ ಒತ್ತಡಗಳನ್ನು ಮರೆತು, ಪ್ರಕೃತಿ, ಸ್ಥಳದ ಪ್ರಸಿದ್ಧತೆಗಳು ತಿಳಿಯುವ ಸಲುವಾಗಿ ಪ್ರವಾಸಕ್ಕೆ ತೆರಳುವ ಅನೇಕರ ಸಾಲಿನಲ್ಲಿ ನಾನು ಕೂಡ ಒಬ್ಬಳೆನ್ನಬಹುದು.

ನನ್ನ ಕುಟುಂಬದ ಸದಸ್ಯರೊಂದಿಗೆ ಸಮಯವನ್ನು ಕಳೆಯಲು, ಕಾಲೇಜಿನ ಪರೀಕ್ಷೆ ಮುಗಿದ ಮರುದಿನವೇ ಗೋವಾಕ್ಕೆ ತೆರಳಿದ್ದೆವು. ಪರೀಕ್ಷೆ ನಡೆಯುತ್ತಿರುವ ದಿನಗಳಿಂದಲೂ ಮನೆಯಲ್ಲಿ ಅಲ್ಲಿ ಯಾವ ರೀತಿ ಮೋಜು-ಮಸ್ತಿ ಮಾಡಬಹುದೆಂಬ ಆಲೋಚನೆ ಇದ್ದೇ ಇತ್ತು. ಆ ಕ್ಷಣವನ್ನು ನೆನೆದಾಗ ಇಡೀ ರಾತ್ರಿ ನಿದ್ದೆ ಬಾರದೆ ಕಾಡಿದ್ದು ಇದೆ.

ಗೋವಾ ಪ್ರವಾಸಕ್ಕೆ ನನ್ನ ತಾಯಿ, ಅಜ್ಜಿ ಹಾಗೂ ತಮ್ಮ ಹೋಗಿದ್ದೆವು. ಮೊದಲು ರೈಲು ಮಾರ್ಗವಾಗಿ ಹೋಗಬೇಕೆಂದು ಯೋಚನೆ ಮಾಡಿದ್ದೆವು, ಆದರೆ ಮೊದಲು ಒಮ್ಮೆ ಗೋವಾಗೆ ಹೋದ ಅನುಭವ ಇದ್ದ ಕಾರಣ ಅದೇ ಮಾರ್ಗವಾಗಿ ಹೋಗುವ ಯೋಚನೆ ಇತ್ತು. ಆದರೆ ರೈಲ್ವೇ ಸ್ಟೇಷನ್‌ನಲ್ಲಿ ವಿಚಾರಿಸಿದಾಗ ಯಾವುದೇ ಇಲ್ಲ ರೈಲು ರದ್ದು ಆದ ಮಾಹಿತಿ ಸಿಕ್ಕಿತು. ಬೇರೆ ರೈಲು ಇತ್ತು, ಆದರೆ ಬೇರೆ ರೈಲು ಅದರ ಸಮಯಕ್ಕೆ ತುಂಬಾ ಕಾಯಬೇಕು ಮತ್ತು ಗೋವಾಕ್ಕೆ ತಲುಪಲು ರಾತ್ರಿ ಆಗುತ್ತದೆ ಎಂಬ ಆಲೋಚನೆ  ಬಂತು.

ಅನಂತರ ರಿಕ್ಷಾ ಮಾಡಿಕೊಂಡು ಸರಕಾರಿ ಬಸ್‌ ನಿಲ್ದಾಣದಲ್ಲಿ ಅಂಕೋಲಕ್ಕೆ ಟಿಕೆಟ್‌ ಮಾಡಿ, ಅಂಕೋಲದಿಂದ ಮಾಡಗಾವ್‌ಗೆ ತೆರಳಿ, ಕೊಲ್ವ ಬೀಚಿಗೆ ಸಮೀಪದಲ್ಲಿರುವ ನಾವು ಬುಕ್‌ ಮಾಡಿದ ಹೋಟೆಲ್‌ಗೆ ತಲುಪಿದೆವು. ಹೋಗುವಾಗ ಏಳು ಗಂಟೆ ಸಮಯವಾಗಿತ್ತು. ಇನ್ನು ಸಮುದ್ರದಲ್ಲಿ ಆಟವಾಡಲು ಸಾಧ್ಯವಾಗದೆ ಹೊಟೇಲ್‌ ಊಟವನ್ನು ಮಾಡಿ, ನಾಳಿನ ಪ್ರೇಕ್ಷಣೀಯ ಸ್ಥಳಗಳ  ವೀಕ್ಷಿಸುವ ಸಲುವಾಗಿ ಬೇಗ ಬೇಗ ಮಲಗಿದೆವು.

ಬೆಳಗ್ಗೆ ಸಹಜದಂತೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ನಾರ್ತ್‌ ಗೋವಾಕ್ಕೆ ತೆರಳಿದೆವು. ಮೊದಲು ಹೋದಂದೆ ಡಾಲ್ಫಿನ್‌ ವೀಕ್ಷಣೆಗಾಗಿ ಮಂಡವಿನದಿಯಲ್ಲಿ ಬೋಟಿನ ವಿಹಾರವನ್ನು ಮಾಡುತ್ತಾ ಗೋವಾದ ಹಳೆಯ ಜೈಲು ಹಾಗೂ ಒಬ್ಬ ಶ್ರೀಮಂತ ವ್ಯಕ್ತಿಯ ಭವ್ಯವಾದ ಬಂಗಾಲೆ ಹಾಗೂ ಡಾಲ್ಫಿನ್‌ ತುಂಬ ಹತ್ತಿರದಲ್ಲಿ ನೋಡಿದ ಅನುಭವ  ಮೈ ನವಿರು ಹುಟ್ಟಿಸುತ್ತದೆ.

ಅನಂತರದಲ್ಲಿ ತಾಜ್‌ ಬೀಚ್‌ಗೆ ಹೋದೆವು. ಶ್ರೀಮಂತ ವ್ಯಕ್ತಿಗಳು ಹೋಗುವ ಬೀಚ್‌ ಎಂದೇ ಪ್ರಸಿದ್ಧಿ ಹೊಂದಿದ್ದು ಹಾಗೂ ಇಲ್ಲಿನ ಒಂದು ಕಲ್ಲಿನಲ್ಲಿ ಕೋಟೆಯಲ್ಲಿ, ಕಟ್ಟಿರುವ ಸ್ಮಾರಕದಲ್ಲಿ ಹಲವಾರು ಸಿನೆಮಾ ಶೂಟಿಂಗ್‌ಗಳು ಕೂಡ ಇಲ್ಲಿ ನಡೆದಿದೆ ಎಂದು ಟೂರಿಸ್ಟ್‌ ಗೈಡ್‌ ಹೇಳಿದರು.

ಅನಂತರದಲ್ಲಿ ನಾವು ಸ್ನೋ ಪಾರ್ಕಿಗೆ ಹೋಗಿದ್ದೆವು. ಅಲ್ಲಿ ಹೊರಗೆ ನೋಡುವಾಗಲೇ ಜನಸಾಗರ ಹಾಗೂ ಅಲ್ಲಿ 5 ಸೆಲ್ಸಿಯಸ್ ತಾಪಮಾನ ಇರುವುದರಿಂದ ಎಲ್ಲರಿಗೂ ಜಾಕೆಟ್, ಗ್ಲೌಸ್‌, ಟೋಪಿ, ಶೂಗಳನ್ನು ನೀಡಿದರು. ಅದರ ಒಳಗೆ ಹೋದಾಗ ಮಂಜುಗಡ್ಡೆಯನ್ನು ಮಾಡಿದ ಕಲಾ ಕೃತಿಗಳು, ಡಿಜೆ, ಲೈಟ್‌ಗಳು ವಿಭಿನ್ನ ಬಗೆಯ ಸಂಗೀತಗಳು ನಮ್ಮನ್ನು ಅಲ್ಲಿಂದ  ಹೊರಗೆ ತೆರಳಲು ಬಿಡುತ್ತಿರಲಿಲ್ಲ.

ಆದರೆ ಭಾಗ ಬೀಚ್‌ ನೋಡಲು ಇದ್ದ ಕಾರಣ ಆತುರವಾಗಿ ತುಂಬಾ ಹತ್ತಿರಲಿದ್ದ, ಹತ್ತು ನಿಮಿಷಗಳ ದಾರಿ, ಸಮುದ್ರವನ್ನು ನೋಡಿ ಬಾದಾಮಿ ಕುಲ್ಫಿಯನ್ನು ಸವಿದೆವು.

ಅನಂತರ ಮಾಂಡವಿ ನದಿಯಲ್ಲಿ ಕ್ಯೂಸ್‌ ನಲ್ಲಿ ಹೋದೆವು. ಅದು ತುಂಬಾ ಅದ್ಭುತವಾಗಿತ್ತು. ಕ್ಯೂಸ್‌ ನಲ್ಲಿ ನಿಂತು ಸಮುದ್ರ ನೋಡಿದಾಗ ನೀರಿನ ಮೇಲೆ ಅಲೆಗಳ ಮೇಲೆ ನಿಂತ ಅನುಭವ ನೀಡಿತು ಹಾಗೂ ಕ್ಯೂಸ್‌ ನಲ್ಲಿ ಹಲವಾರು ರೀತಿಯ ಗೋವಾದ ಸಾಂಪ್ರದಾಯಿಕ ನೃತ್ಯ ಪ್ರಕಾರಗಳ ಬಗ್ಗೆ ಕಲಾವಿದರು ರಂಜಿಸಿದರು. ಒಂದು ಗಂಟೆಗಳ ಕಾಲ ಆ ಕ್ಯೂಸ್‌ ನಲ್ಲಿ ಆನಂದದ ಕ್ಷಣಗಳನ್ನು ಕಳೆದು ತದನಂತರ ಹೋಟೆಲ್‌ ಗೆ ಹೋದೆವು.

ಮರುದಿನ ವಿವಿಧ ರೀತಿಯ ಮೀನಿನ ಸಂಗ್ರಹಾಲಯಕ್ಕೆ ಹೋದೆವು. ಅದರಲ್ಲಿ ವಿವಿಧ ಬಗೆಯ ಮೀನುಗಳು, ವಿವಿಧ ರೀತಿಯ ಭಯವನ್ನು ಹುಟ್ಟಿಸುವ ಭೂತಗಳ ವಿವಿಧ ಬಗೆಯ ವಿನ್ಯಾಸಗಳು ಅಲ್ಲಿದ್ದವು.

ಕೆಲವೊಂದು ವಿನ್ಯಾಸವನ್ನು  ಹೆದರಿಸಿದರೆ, ಕೆಲವೊಂದು ಟಿವಿ, ಸಿನೆಮಾದಲ್ಲಿ ನೋಡಿದ ಅನುಭವ ನೀಡಿತು. ಅದೇ ಸಂಗ್ರಹಾಲಯದಲ್ಲಿ ಒಂದು ವೀಡಿಯೋ ತೋರಿಸಿದರು. ಮೊದಲು ಕುಳಿತುಕೊಳ್ಳುವಾಗ ಸೀಟ್‌ ಬೆಲ್ಟ್ ಹಾಗೂ ಕ್ಲಾಸ್‌ ನೀಡಿದರು. ಅದೇ ರೀತಿ ಕುಳಿತುಕೊಳ್ಳುವ ಆಸನಗಳ ಚಲನೆಗಳು ಮುಂದೆ ಬರುವ ಅನುಭವ ಒಮ್ಮೆ ಭಯ ನೀಡಿದರೂ ಉತ್ಸಾಹಭರಿತವಾಗಿತ್ತು.

ತದನಂತರದಲ್ಲಿ ಪೊಂಡದ  ಮರಗಳ ವಿವಿಧ ಮಾಹಿತಿಗಳ ಬಗ್ಗೆ ತಿಳಿಸಲು ಇರುವ ಶಹಕರಿ ಸ್ಪೀಸ್‌ ಫಾರ್ಮ್ ಗೆ ಹೋದೆವು. ಬಿಗ್‌ ಫೂಟ್‌ ಎಂಬ ಮ್ಯೂಸಿಯಂ ಗೆ ಹೋಗಿದ್ದೆವು. ಹಾಗೂ ಸಂತರ ದೇವಾಲಯ, ಗೋವಾದ ಕಲೆಗಳು, ಸಂಸ್ಕೃತಿಗಳನ್ನು ಬಿಂಬಿಸುವ ಕಲಾ ಮೂರ್ತಿಗಳು, ಇದು ಹಿಂದಿನ ಕಾಲದ ಕಲಾ ನೈಜತೆಯನ್ನು ನೀಡಿದವು. ಗೋವಾದ ಪುರಾತನ ಚರ್ಚಿನಲ್ಲಿ ಫಾರ್ದ ಪ್ರಾಸ್ಸಿಸ್‌ ಸೇವಿರ್ಯ ಅವರ ಮೃತ ದೇಹವನ್ನು ವೀಕ್ಷಣೆ ಮಾಡಿ ಹೊಸ ಚರ್ಚ್‌ಅನ್ನು ವೀಕ್ಷಣೆ ಮಾಡಿದೆವು.

ಹಿಂದೆ ಯಾವ ರೀತಿ ವಸ್ತುಗಳನ್ನು ಬಳಸುತ್ತಿದ್ದರು ಪ್ರವಾಸಿಗರಿಗೆ ವೀಕ್ಷಣೆಗೆ ತೆರೆದಿಟ್ಟಿದ್ದರು. ಕೊಲ್ವ ಬೀಚಿನಲ್ಲಿ ಆಟ ಆಡಿದೆವು. ಮರುದಿನ ಗೋವಾದಿಂದ ಪ್ರವಾಸದ ಹಲವಾರು ನೆನಪುಗಳನ್ನು ಹೊತ್ತು ಉಡುಪಿಗೆ ಬಂದೆವು.

-ದೇವಿಶ್ರೀ ಶಂಕರಪುರ

ಆಳ್ವಾಸ್‌, ಮೂಡುಬಿದಿರೆ

 

ಟಾಪ್ ನ್ಯೂಸ್

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-uv-fusion

Discipline: ಬದುಕಿನಲ್ಲಿ ಶಿಸ್ತಿರಲಿ

14-uv-fusion

Mother: ಅಮ್ಮನ ಜೀವನವೇ ಆದರ್ಶ

13-uv-fusion

Childhood Days: ಮರಳಿ ಬಾರದ ಬಾಲ್ಯ ಜೀವನ

12-uv-fusion

UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್‌

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.