ಕಾವ್ಯ ಮಲ್ಲಿಗೆ : ಹಡೆದಾಕೆಯ ಅರಿಕೆ
Team Udayavani, Jul 27, 2021, 12:00 PM IST
ಹಡೆದಾಕೆಯ ಅರಿಕೆ..
ನಿದಿರೆಯಮ್ಮ ಬಾರೆ ಬಾರೆ ನನ್ನ ಕಂದನ ಮಲಗಿಸು
ಜೋಗುಳದ ತಾಯೆ ಬಾರೆ ನನ್ನ ನಾಲಿಗೆಯಲ್ಲಿ ನೆಲೆಸು
ನಡೆವುದ ಕಲಿಯಲು ಹೋಗಿ, ಎರಡು ಹೆಜ್ಜೆಯನಷ್ಟೇ ಇರಿಸಿ
ಆ ಹಾಳು ನೆಲವು, ನನ್ನ ಕೂಸ ಬೀಳಿಸಿತು ಜಾರಿಸಿ
ನಿದಿರೆಯಮ್ಮ ನನ್ನ ಕಂದನ ಮಲಗಿಸು, ಎಲ್ಲ ನೋವನು ಮರೆಸಿ
ಔಷಧ ನೀಡು ನೀನು, ಅಶ್ವಿನಿ ದೇವತೆಗಳ ಕರೆಸಿ
ಜೋಗುಳದ ಪದವ ಕೇಳಿ, ತುಟಿಯಂಚಲಿ ನಗೆಯ ಬೀರಿ
ನಿದಿರೆಯಮ್ಮನ ಬರಲು ಹೇಳಿ, ಎನ್ನ ಮಡಿಲಲಿ ನಿದ್ರೆಗೆ ಜಾರಿ
ಜೋಗುಳದವ್ವ ನೀನು ನನ್ನ ಬಾಯಲಿನ್ನಷ್ಟು ಪದವ ತರಿಸು
ಕಣ್ಮುಚ್ಚಿ ಮಲಗಿರಲು ನನ್ನ ಕಂದನ ವದನ ಸೊಗಸು
ನೀನೆನಗೆ ವರವಾದೆ ತಾಯೇ, ನನ್ನ ಮಡಿಲ ತುಂಬಿಸಿ
ಮರೆಸಿದೆ ಎಲ್ಲ ನೋವ, ಈ ಕಂದನಲಿ ನಗುವ ತರಿಸಿ
ಜೋಗುಳವ ಹೇಳುವೆ, ನಿನ್ನೆದೆಯ ತಾಳಕ್ಕೆ ತಕ್ಕ ಹಾಗೆ
ಎಲ್ಲ ನೋವು ಇರಲಿ ನನಗೆ, ಬಾರದಿರಲಿ ನಿನಗಾವ ಬೇಗೆ
ಶಿವರಾಮು ವಿ ಗೌಡ
ಪಾಂಡವಪುರ (ಮಂಡ್ಯ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.