ಫ್ಯೂಷನ್ ಸಿನೆಮಾರಂಗ: ಹೃದಯಸ್ಪರ್ಶಿ ದಿಲ್ ಬೆಚಾರಾ
Team Udayavani, Sep 3, 2020, 6:40 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸುಶಾಂತ್ ಸಿಂಗ್ ರಜಪೂತ್ ಮತ್ತು ಸಂಜನಾ ಸಿಂ ಅಭಿನಯದ “ದಿಲ್‌ಬೆಚಾರಾ’ ಹಿಂದಿ ಚಲನಚಿತ್ರ ಜು.24ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಗೊಂಡಿತು.
ಟ್ರೈಲರ್ ಬಿಡುಗಡೆಯಾದಾಗ ಅತಿ ಹೆಚ್ಚು ವಿಕ್ಷಣೆಯೊಂದಿಗೆ ದಾಖಲೆ ನಿರ್ಮಿಸಿದ ಈ ಚಲನಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇದ್ದದ್ದು ನಿಜ. ನಿರೀಕ್ಷೆಯನ್ನು ಹುಸಿ ಮಾಡದೆ “ದಿಲ್ ಬೆಚಾರಾ’ ಮನಸೂರೆಗೊಂಡಿದೆ.
ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನಿರ್ಮಾಣದ, ಮುಖೇಶ್ ಛಾಬ್ರಾ ನಿರ್ದೇಶನದ ಈ ಚಲನಚಿತ್ರ ಕಡೆ ಕ್ಷಣದಲ್ಲಿ ಪ್ರೇಕ್ಷಕರ ಕಣ್ಣು ತೇವಗೊಳ್ಳುವಂತೆ ಮಾಡುತ್ತದೆ.
ಸುಶಾಂತ್ ಎಂಬ ಅತ್ಯದ್ಭುತ ನಟ ಇಂತಹ ಸಿನೆಮಾವನ್ನು ನೀಡಲು ಇನ್ನೂ ಇಲ್ಲವಲ್ಲ ಎಂಬ ಕೊರಗು ಒಂದು ಕ್ಷಣವಾದರೂ ಮನವನ್ನು ಕೊರೆಯುತ್ತದೆ.
ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮ್ಯಾನಿ ಅರ್ಥಾತ್ ಇಮ್ಯಾನುವೆಲ್ ರಾಜ್‌ಕುಮಾರ್ ಜೂನಿಯರ್ ಮತ್ತು ಥೈರಾಯಿಡ್ ಸಂಬಂಧಿತ
ಕ್ಯಾನ್ಸರ್‌ಗೆ ತುತ್ತಾಗಿ ಹೆಗಲಲ್ಲಿ ಆಮ್ಲ ಜನಕದ ಸಿಲಿಂಡರ್ ಇಟ್ಟುಕೊಂಡು ಮೂಗಿಗೆ ಪೈಪುಗಳನ್ನು ಸಿಕ್ಕಿಸಿಕೊಂಡಿರುವ ಕಿಝಿ ಬಸುರವರ ಮುಗ್ಧ ಪ್ರೀತಿಯ ಕಥೆ ಹಂದರದ ಸಿನೆಮಾವೇ “ದಿಲ್ ಬೆಚಾರಾ’.
ಕಾಯಿಲೆಯಿದ್ದರೂ ಉತ್ಸಾಹದ ಬುಗ್ಗೆಯಂತಿರುವ ಮ್ಯಾನಿ, ಕಿಝಿಯನ್ನು ಕೂಡ ಆಶಾವಾದಿಯನ್ನಾಗಿ ಬದಲಾಯಿಸುತ್ತಾನೆ. ಮತ್ತೂರ್ವ ಕ್ಯಾನ್ಸರ್ ಪೀಡಿತ ಗೆಳೆಯ ಜೆ.ಪಿ.ಗಾಗಿ ಸಿನೆಮಾವೊಂದರಲ್ಲಿ ನಟಿಸುವ ಮ್ಯಾನಿ, ಕಿಝಿ ಸಿನಿಮಾದ್ದುದ್ದಕ್ಕೂ ನಗುವಿನ ಹೂರಣವನ್ನು ತಂದಿಡುತ್ತಾರೆ. ತಲೈವಾ ರಜನೀಕಾಂತ್ ಅವರ ಅಭಿಮಾನಿಯಾದ ಮ್ಯಾನಿ, ಸಿಂಗರ್ ಅಭಿಮನ್ಯು ವೀರ್‌ನ ಅಭಿಮಾನಿಯಾದ ಕಿಝಿ, ರಜನೀಕಾಂತ್ ಪಾತ್ರ ಸಿನಿಮಾದಲ್ಲಿ ಇದೆ ಎನ್ನುವ ಕಲ್ಪನೆ ಮೂಡಿಸುತ್ತಾರೆ.
ಕಿಝಿಗಾಗಿ ಅವಳ ತಾಯಿಯೊಂದಿಗೆ ಪ್ಯಾರಿಸ್ ಪ್ರಯಾಣ ಬೆಳೆಸುವ ಮ್ಯಾನಿ. ಅಲ್ಲಿ ಕಿಝಿಯ ನೆಚ್ಚಿನ ಗಾಯಕ ಅಭಿಮನ್ಯು ವೀರ್‌ನನ್ನು ಭೇಟಿ ಮಾಡಿಸುತ್ತಾನೆ. ಸಣ್ಣ ಪಾತ್ರವಾದ ಅಭಿಮನ್ಯು ವೀರ್‌ನ ಪಾತ್ರವನ್ನು ಜೀವ ತುಂಬುವಂತೆ ಸೈಫ್ ಅಲಿಖಾನ್ ನಟಿಸಿದ್ದಾರೆ. ಅಭಿಮನ್ಯು ವೀರ್ ಅಪೂರ್ಣ ಮಾಡಿದ್ದ ಹಾಡನ್ನು ತಾನು ಪೂರ್ಣಗೊಳಿಸುವುದಾಗಿ ಮ್ಯಾನಿ ಕಿಝಿಗೆ ಮಾತು ಕೊಡುತ್ತಾನೆ. ಜವಾಬ್ದಾರಿಯುತ ತಂದೆ-ತಾಯಿಯರು ಹೇಗಿರುತ್ತಾರೆ ಎಂಬುವುದನ್ನು ಕಿಝಿಯ ತಂದೆ- ತಾಯಿಯ ಪಾತ್ರವೂ ಸಿನಿಮಾದಲ್ಲಿ ಚಿತ್ರಿಸಿದೆ.
ಕಿಝಿಯ ಜೀವನದಲ್ಲಿ ಭರವಸೆ ತುಂಬುವ ಮ್ಯಾನಿ ತಾನು ಸಾಯುವ ಹಂತ ತಲುಪುವಾಗ, ತಾನು ಅಗಲಿದ ಅನಂತರ ತನ್ನ ಗೆಳೆಯರು ತನ್ನ ಬಗ್ಗೆ ಯಾವ ಮಾತುಗಳನ್ನು ಆಡುತ್ತಾರೆ ಎಂದು ಮೊದಲೇ ಕೇಳುತ್ತಾನೆ. ಜೆ.ಪಿ. ಯು ತನ್ನ ಕಣ್ಣುಗಳನ್ನು ಕಳೆದುಕೊಂಡ ನಂತರ ಕಿಝಿಯ ಪ್ರೋತ್ಸಾಹದಿಂದ ಪೂರ್ಣಗೊಳ್ಳುವ ಸಿನೆಮಾ ಮ್ಯಾನಿಯ ನಿಧನ ಅನಂತರ ಬಿಡುಗಡೆ ಯಾಗುತ್ತದೆ. ವಿಷಾದವೆನ್ನುವಂತೆ ದಿಲ್ ಬೆಚಾರಾ’ ಚಲನಚಿತ್ರವೂ ಕೂಡ ಸುಶಾಂತ್ ಸಿಂಗ್ ಅವರು ಆಗಲಿದ ಅನಂತರವೇ ಬಿಡುಗಡೆಯಾಗಿದೆ.
ಸುಶಾಂತ್ ಸಿಂಗ್ ಅಭಿನಯದ ಈ ಕೊನೆಯ ಚಿತ್ರ ಮರೆಯಾದ ಅದ್ಭುತ ನಟನನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡುವುದು ಸತ್ಯ. ಸುಶಾಂತ್ ಇನ್ನಿಲ್ಲ ಎನ್ನುವ ಕಾರಣದಿಂದಲೋ ಏನೋ ಬಹಳಷ್ಟು ಪ್ರಸಿದ್ಧಿ ಪಡೆದ ದಿಲ್ ಬೆಚಾರಾ’ ಒಂದು ಉತ್ತಮ ಸಿನಿಮಾ ಎನ್ನುವುದರಲ್ಲಿ ಎರಡು ಮಾತಿಲ್ಲ.
ಹರ್ಷಿತ್ ಶೆಟ್ಟಿ ಮುಂಡಾಜೆ, ಎಂ.ಕಾಂ., ಸ.ಪ್ರ.ದ., ಬೆಳ್ತಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.