Uv Fusion: ನನ್ನಮ್ಮ  


Team Udayavani, Oct 15, 2023, 8:00 AM IST

17-fusion

ಅಮ್ಮಾ ಎಂದಾಕ್ಷಣ ಕಣ್ಣಂಚಲ್ಲಿ  ಪ್ರೀತಿ, ಮಮತೆ, ವಾತ್ಸಲ್ಯ ಎಲ್ಲವೂ ಒಂದು ಬಾರಿ ಚಿತ್ರಪಟದಂತೆ ಹಾದು ಹೋಗುತ್ತದೆ. ಆದರೆ ಇದೆಲ್ಲದರ ಹೊರತಾಗಿ ಅಮ್ಮಾ ಎಂದರೆ ಮಾಂಸದ ಮುದ್ದೆಗೆ ಜೀವವಿತ್ತವಳು, ಜೀವಕ್ಕೆ ಜನುಮನಿತ್ತವಳು. ಆ ಜೀವವು ಹೇಗೆ ಜೀವನ ನಡೆಸಬೇಕೆಂದು ದಾರಿ ತೋರಿದವಳು. ಬಿದ್ದಾಗ ಎದ್ದೇಳು ಕುಗ್ಗಬೇಡ ಮುನ್ನುಗ್ಗು ಎಂದು ಹೇಳಿದವಳು ಅಮ್ಮ. ನಾವು ಗೆದ್ದಾಗ ಖುಷಿ ಪಟ್ಟು ಬೆನ್ನು ತಟ್ಟಿ ಹಿಗ್ಗ ಬೇಡ ಎಂದು ಕಿವಿಮಾತು ಹೇಳಿದವಳು ನಮ್ಮಮ್ಮ. ಅಮ್ಮ ಎಂಬ ಪದವು ಎರಡಕ್ಷರದಿ ಅಡಗಿದೆ. ಆಕೆ ಪ್ರೀತಿ, ಆರೈಕೆ, ಸಹನೆ, ಮಮತೆ, ವಾತ್ಸಲ್ಯ ತೋರುವ ಕರುಣಾಮಯಿ.

ಪ್ರತಿ ಹೆಜ್ಜೆಯಲ್ಲೂ ನಮ್ಮ ಜತೆಗೆ ಇರುವವಳು ತಾಯಿ. ತಂದೆ ತಾಯಿಗೆ ಮಗಳಾಗಿ, ಗಂಡನಿಗೆ ಮಡದಿಯಾಗಿ, ಹಿರಿಯರಿಗೆ ಸೊಸೆಯಾಗಿ, ಮಕ್ಕಳಿಗೆ ತಾಯಿಯಾಗಿ ಹಸಿದು ಬಂದವರಿಗೆ ಅನ್ನ ನೀಡಿದ ಅನ್ನಪೂರ್ಣೇಶ್ವರಿ. ನನಗೆ ನನ್ನ ಅಮ್ಮನೇ ಸ್ಫೂರ್ತಿ. ಎಷ್ಟೇ ಕಷ್ಟವಿದ್ದರು ಸದಾ ನಗುತ್ತಾ ನಗಿಸುವ ಸುಂದರಿ, ಪ್ರತಿ ಸಲ ಎಡವಿ ಬಿದ್ದಾಗ ಧೈರ್ಯ ತುಂಬಿ ನನ್ನ ಹೆಜ್ಜೆಯನ್ನು ಹಿಂಬಾಲಿಸಿ ಬರುವವಳು, ಶಾಲೆಯಲ್ಲಿ ಶಿಕ್ಷಕರು ಹೇಳಿದ ಪಾಠಕ್ಕೆ ಉದಾಹರಣೆಯೊಂದಿಗೆ ವಿವರಿಸಿ ಅರ್ಥೈಸಿದಾಕೆ, ಪ್ರಪಂಚದ ಅರಿವೇ ಇಲ್ಲದ ನಮಗೆ ಬಾಲ್ಯದಲ್ಲಿ ಬುದ್ದಿ ಹೇಳಿ ತಿದ್ದಿದಾಕೆ, ಸೋತು ಸುಸ್ತಾಗಿ ಕೂತಾಗ ಶಕ್ತಿ ನೀಡಿ ಹುರಿದುಂಬಿಸಿದವಳು.

ಪುಟ್ಟ ಪ್ರಪಂಚದಲ್ಲಿ ಪಟ್ಟದರಸಿಯಾಗಿ ಮೆರೆ ಸುವವಳು ನಮ್ಮಮ್ಮ. ಎಷ್ಟೇ ಬಂಧುಗಳಿದ್ದರೂ ತಾಯಿಗಿಂತ ಹತ್ತಿರವಾದ ಬಂಧುಗಳು ಯಾರು ಇರಲು ಸಾಧ್ಯವಿಲ್ಲ. ಇತರೆ ಲ್ಲರಿಗಿಂತ  ತಾಯಿಯು ಮಕ್ಕಳ ಕಷ್ಟ ಸುಖಗಳನ್ನು ಹೆಚ್ಚು ತಿಳಿದಿರುತ್ತಾಳೆ. ಸೃಷ್ಟಿಯಲ್ಲಿ ಪ್ರತಿ ಯೊಂದು ಜೀವಿಗೂ ಅಮ್ಮನೇ ಎಲ್ಲ. ಅಮ್ಮನ ಪ್ರೀತಿಗಿಂತ ದೊಡ್ಡ ಪ್ರೀತಿ ಇಲ್ಲ. ಅಮ್ಮನಿಗಿಂತ ಹೆಚ್ಚಿನ ಭದ್ರತೆ ಇಲ್ಲ. ಅಮ್ಮನು ತೋರಿಸುವ ಈ ಪ್ರೀತಿ ಪ್ರಪಂಚದಲ್ಲಿ ಯಾರು ತೋರಿಸಲಾರರು, ಅದಕ್ಕೆ ಹೇಳ್ಳೋದು ಹೆತ್ತಮ್ಮನಿಗಿಂತ ಹಿತರಿಲ್ಲ ಅಂತ. ಆದರಿಂದ  ಹೆತ್ತಮ್ಮನ ಋಣವನ್ನು ಯಾವತ್ತೂ ಮರೆಯಬೇಡಿ.

-ಪ್ರೀತಿ ಬಿ.,

ಸ.ಪ್ರ. ದರ್ಜೆ ಮಹಿಳಾ ಕಾಲೇಜು ಪುತ್ತೂರು

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.