Nagara Panchami: ನಾಗಾರಾಧನೆ ಪ್ರಕೃತಿ ಆರಾಧನೆ
Team Udayavani, Sep 18, 2024, 3:38 PM IST
ನಾಗರ ಪಂಚಮಿ ಹಬ್ಬವನ್ನು ಕರ್ನಾಟಕ ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾ ಗುತ್ತದೆ. ಈ ದಿನ ನಾಗನಿಗೆ ಹಾಲೆರೆದು, ಪೂಜಿಸಿ, ಸಕಲ ಇಷ್ಟಾರ್ಥಗಳೂ ಪ್ರಾಪ್ತಿ ಆಗುವಂತೆ ನಾಗದೇವನನ್ನು ಬೇಡುವುದು ವಾಡಿಕೆ. ಈ ದಿನ ಶೇಷ ನಾಗ (ಆದಿಶೇಷ) ಮತ್ತು ಶ್ರೀ ವಿಷ್ಣುವನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ಹಬ್ಬವು ಅಣ್ಣ ತಂಗಿ ಇಬ್ಬರೂ ಸೇರಿ ಪೂಜಿಸುವ ಹಬ್ಬವೆಂಬ ಪ್ರತೀತಿಯೂ ಇದೆ.
ನಾಗದೇವರು ಮೋಹ ನಿಯಂತ್ರಕ ಮತ್ತು ಮೋಹ ಸೃಷ್ಟಿಕರ್ತನೂ ಹೌದು. ನಾಗದೇವರು ಮಹಾ ಚೈತನ್ಯದ (ವಿಷ್ಣುವಿನ) ಸಂಕರ್ಷಣಾ ಶಕ್ತಿಯಾಗಿದೆ. ನಾಗದೇವರ ನಾಯಕ ಸುಬ್ರಹ್ಮಣ್ಯ ದೇವರಾಗಿದ್ದು, ಇವನನ್ನು ದೇವ ಸೇನಾನಿ ಎನ್ನುತ್ತಾರೆ. ಪಂಚಮಿಯ ದಿನ ನಾಗ ದೇವರನ್ನು ಆರಾಧಿಸುವ ಮೂಲಕ ಶಕ್ತಿಯನ್ನು ಸಂಪನ್ನಗೊಳಿಸಿ, ಮೋಹಗಳ ನಿಯಂತ್ರಣ ಮಾಡಿಕೊಳ್ಳುವ ಉದ್ದೇಶವೂ ನಾಗರ ಪಂಚಮಿಯ ಆಚರಣೆಯ ಹಿನ್ನೆಲೆಯಲ್ಲಿ ಇದೆ.
ಜನಪದ ಕಥೆಯ ಪ್ರಕಾರ ನಾಗರ ಪಂಚಮಿ ಬರುವುದು ಮುಂಗಾರಿನ ಯಥೇತ್ಛ ಮಳೆ ಬೀಳುವ ದಿನಗಳಲ್ಲಿ. ಈ ಅವಧಿಯಲ್ಲಿ ರೈತನ ಕೃಷಿ ಚಟುವಟಿಕೆಗಳು ಒಂದು ಹಂತ ತಲುಪಿರುತ್ತವೆ. ಈ ಅವಧಿಯಲ್ಲಿ ಕೀಟ, ಮಿಡತೆ ಮತ್ತು ಹುಳುಹುಪ್ಪಟೆಗಳ ಹಾವಳಿ ಅಧಿಕವಾಗಿದ್ದು, ರೈತ ಬೆಳೆದ ಬೆಳೆಗಳನ್ನು ತಿನ್ನಲು ಬರುವ ಇಲಿ ಹೆಗ್ಗಣಗಳಿಂದ ರೈತನ ಫಸಲನ್ನು ಕಾಪಾಡುವುದು ಹಾವುಗಳು. ಇಲಿ, ಕಪ್ಪೆಗಳ ಅತಿಯಾದ ಹಾವಳಿಯನ್ನು ನಿಯಂತ್ರಿಸುವ ನಾಗರನಿಗೆ ರೈತನು ಕೃತಜ್ಞತೆ ಸಲ್ಲಿಸುವ ಸಲು ವಾಗಿ ನಡೆಸುವ ಪೂಜೆಯೇ ನಾಗರ ಪಂಚಮಿ.
ನಾಗರಪಂಚಮಿಯ ದಿನ ನಾಗನ ಕಟ್ಟೆಯ ಮೇಲೆ ಮಣೆಯನ್ನಿಟ್ಟು ಅದರಲ್ಲಿ ಅರಿಶಿನ ಅಥವಾ ರಕ್ತಚಂದನದಿಂದ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು, ಎಳನೀರು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸುತ್ತಾರೆ. ನವನಾಗಗಳು ಪವಿತ್ರಕಗಳ ಒಂಬತ್ತು ಪ್ರಮುಖ ಗುಂಪುಗಳಾಗಿವೆ. ಪವಿತ್ರಕಗಳೆಂದರೆ ಅತಿಸೂಕ್ಷ¾ ದೈವೀಕಣಗಳು. ಜಗತ್ತಿನ ಎಲ್ಲ ಜೀವಜಂತುಗಳು ಒಂದÇÉಾ ಒಂದು ರೀತಿಯಲ್ಲಿ ಪರಸ್ಪರ ಪೂರಕವಾಗಿದ್ದು, ನಾಗರಪಂಚಮಿಯ ದಿನ ನಾಗಗಳ ಪೂಜೆಯಿಂದ ಭಗವಂತನು ಅವುಗಳ ಮೂಲಕ ಸತ್ಕಾರ್ಯಗಳನ್ನು ಮಾಡುತ್ತಿದ್ದಾನೆ ಎಂಬ ವಿಶಾಲ ದೃಷ್ಟಿಕೋನವಿದೆ.
ಈ ನಾಗರ ಪಂಚಮಿಯ ದಿನದಂದು ಭಕ್ತಿ
ಮತ್ತು ಶ್ರದ್ಧೆಯಿಂದ, ನಾಗ ದೇವರ ಪ್ರಾಮುಖ್ಯತೆಯನ್ನು ಅರಿತು, ಶುದ್ಧ ಮನಸ್ಸಿನಿಂದ ಆರಾಧನೆ ಮಾಡಬೇಕು. ನಾಗದೇವರಿಗೆ ಹಾಲುಬಾಯಿ, ಪಂಚಾಮೃತ, ಹಣ್ಣು ಕಾಯಿ, ಅನ್ನ ನೈವೇದ್ಯ, ಕ್ಷೀರ ಪಾಯಸ ಇತ್ಯಾದಿ ಸಮರ್ಪಣೆ ಮಾಡಬಹುದು. ನಾಗರಪಂಚಮಿಯ ದಿನ ಏನನ್ನೂ ಕತ್ತರಿಸ ಬಾರದು, ಕೊಯ್ಯಬಾರದು, ಮತ್ತು ಏನನ್ನೂ ಎಣ್ಣೆಯಲ್ಲಿ ಕರಿಯಬಾರದು ಎಂಬ ನಿಯಮ ಪಾಲಿಸಬೇಕು. ಅದೇ ರೀತಿ ನಾಗರ ಪಂಚಮಿಯ ದಿನ ಭೂಮಿ ಅಗೆಯಬಾರದು ಎಂಬ ನಂಬಿಕೆಯೂ ಇದ್ದು, ಈ ದಿನ ನಾಗರನಿಗೆ ಯಾವುದೇ ಉಪಟಳವಾಗಬಾರದು ಎಂದು ರೈತರು ಗದ್ದೆಯನ್ನು ಉಳುವುದಿಲ್ಲ.
ಪತಿಯ ದೀರ್ಘ ಆಯುಷ್ಯ ಮತ್ತು ಆರೋಗ್ಯಕ್ಕಾಗಿ, ನಾಗ ದೋಷ ನಿವಾರಣೆಗೆ ಮಹಿಳೆಯರು ನಾಗರ ಪೂಜೆಯನ್ನು ಮಾಡುತ್ತಾರೆ. ರಾಹು ಮತ್ತು ಕೇತುವಿನ ದೋಷ ಇದ್ದವರು ನಾಗನ ಪೂಜೆ ಮಾಡುವುದರಿಂದ ಅದು ದೂರಾಗುತ್ತದೆ. ಹಾವಿನ ಕನಸು ಇಲ್ಲವೇ ಹಾವಿನ ಬಗ್ಗೆ ಭಯವನ್ನು ಜನರು ಹೊಂದಿದ್ದರೆ ಅದು ದೂರಾಗುತ್ತದೆ. ನಾಗನ ಪೂಜೆಯಿಂದ ಹೆಂಗಳೆಯರಿಗೆ ಕಂಕಣ ಭಾಗ್ಯ ಮತ್ತು ವಿವಾಹಿತರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯೂ ಇದ್ದು, ನಾಗಾರಾಧನೆಯು ಪ್ರಾಕೃತಿಕ ಅಂಶಗಳನ್ನೂ ಒಳಗೊಂಡಿದೆ.
-ಸಂತೋಷ್ ರಾವ್ ಪೆರ್ಮುಡ
ಬೆಳ್ತಂಗಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.