UV Fusion: ಹೊಸ ಜನರೇಶ‌ನ್‌ ಕುಂಭಕರ್ಣ


Team Udayavani, Sep 19, 2023, 3:00 PM IST

7-uv-fusion

ನಮ್ಮ ಈಗಿನ ತಂತ್ರಜ್ಞಾನ ಯುಗದಲ್ಲೂ, ಬ್ಯುಸಿ ಶೇಡ್ನೂಲ್ನಲ್ಲೂ ನಿದ್ರೆಯನ್ನು ಕದ್ದುಕೊಂಡಿದ್ದಾರೆ ಅನಿಸುತ್ತದೆ. ನಮ್ಮೆಲ್ಲರಾ ನಿದ್ದೆಯು ಈಗಿನ ಕಾಲದಲ್ಲಿ ಬಹಳ ಅದ್ಭುತವೆನಿಸುತ್ತದೆ. ಅದೇಗೆಂದರೆ ಒಬ್ಬ ಅಧಿಕಾರಿಗಳಿಗೆ ಆಫೀಸ್ಸಿನ ಕಚೇರಿನಲ್ಲಿ ಕುಳಿತುಕೊಂಡು ನಿದ್ರೆ, ಶಾಲೆ ಕಾಲೇಜು ಮಕ್ಕಳಿಗೆ ಪಾಠ ಕೇಳುವಾಗ ನಿದ್ರೆ, ರಾಜಕಾರಣಿಗೆ ಸಭೆಯಲ್ಲಿ ನಿದ್ದೆ, ಹೀಗೆ ಹೇಳುತ್ತಾ ಹೋದರೆ ನಿದ್ರೆಯ ಸ್ಥಳದ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಬಸ್‌ನಲ್ಲಂತೂ ದೂರ ಪ್ರಯಾಣ ಮಾಡುವವರನ್ನು ಹಿಡಿದು ಐದು ನಿಮಿಷದ ದಾರಿಗೆ ಹೋಗುವವರು ಕೂಡ ನಿದ್ದೆ ಮಾಡುವವರೇ. ಕಾಲೇಜು ಮಕ್ಕಳಿಂದ ಹಿಡಿದು ವಯಸ್ಸಾದ ಅಂಕಲ್,‌ ಆಂಟಿ ಅವರವರೆಗೂ, ಕಿವಿಗಳಲ್ಲಿ ಇಯರ್‌ ಫೋನ್ಸ್‌ ಅಥವಾ ಹೆಡ್‌ ಫೋನ್ಸ್‌  ಸಿಕ್ಕಿಸಿಕೊಂಡು ಹಾಗೆ, ಸೀಟನ್ನು ತಲೆದಿಂಬಾಗಿಸಿ ಮೆಲ್ಲಗೆ ನಿದ್ರೆ ಜಾರುವರು. ಅವರ ನಿದ್ದೆ ಅವರ ಸ್ಟಾಪ್‌ ಬಂದಿದ್ದು ಗೊತ್ತಾಗದೆ, ಮುಂದೆಲ್ಲೋ ಹೋಗಿ ಸ್ಟಾಪ್‌ನಲ್ಲಿ ಇಳಿದಿದ್ದು ಇದೆ. ಬರಿ ಬಸ್‌ಗಳಲ್ಲಿ ಮಾತ್ರವಲ್ಲದೆ ಕಾರು, ರೈಲು, ರಿಕ್ಷಾ ಹೀಗೆ ಎಲ್ಲೆಂದರಲ್ಲಿ ಹೋಗುವ ವಾಹನಗಳಲ್ಲಿ ನಮ್ಮ ನಿದ್ದೆ ಖಚಿತವಾಗಿರುತ್ತದೆ.

ಎಷ್ಟೋ ಸಾರಿ ನಮ್ಮ ಸುಖ ನಿದ್ರೆ ನಮ್ಮನ್ನು ಎಚ್ಚರದಿಂದ ಇರುವಂತೆ ಮಾಡಿದೆ. ಅದಕ್ಕೆ ಉದಾಹರಣೆ ಎಂದರೆ ನಾನು ಹೀಗೆ ಮೈಸೂರಿನ ರಾತ್ರಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ರಾತ್ರಿಯಲ್ಲಿ ಅಂದರೆ ಕೇಳಬೇಕೇ ಅಂತಹ ಬೆಳಗ್ಗಿನ ಜಾವದಲ್ಲೇ ನಿದ್ದೆ ಮಾಡುವವರಿಗೆ, ರಾತ್ರಿಯ ಹೊತ್ತಲ್ಲಿ ನಿದ್ರೆ ಸೆಳೆಯುವುದು ಎಲ್ಲರಿಗೂ ಸರ್ವೇಸಾಮಾನ್ಯ. ಎಲ್ಲರೂ ಮಲಗಿದ್ದರೂ  ನಿದ್ದೆಯಲ್ಲಿ ಜಾರಿದ್ದರು ಹಾಗೆ ನಾನು ಸಹಿತ ನಿದ್ರೆಗೆ ಜಾರಿದ್ದೆ.

ಅಯ್ಯೋ! ದೇವರೇ, ನನ್ನ ದುಡ್ಡು, ನನ್ನ ಲ್ಯಾಪ್‌ಟಾಪ್‌, ಮೊಬೈಲ್, ಕಾರ್ಡ್‌, ಎಲ್ಲ ಹೋಯ್ತು ಎಂದು ಅಳುತ್ತ ಒಬ್ಬ ಪ್ರಯಾಣಿಕನ ಸದ್ದು ನಮ್ಮ ಕಿವಿಗೆ ಬಿತ್ತು. ಆಗ ಬಸ್‌ ಡ್ರೈವರ್‌ ಅದೇನೆಂದು ಬಸ್ಸನ್ನು ನಿಲ್ಲಿಸುತ್ತಾನೆ. ಏನಾಗಿರಬಹುದೆಂದು ಎಲ್ಲರೂ ಅವನ ಬಳಿ ಹೋಗುತ್ತಾರೆ. ಏನಾಯ್ತು ಎಂದು ಕೇಳಿದರೆ ಆ ಪ್ರಯಾಣಿಕನ ವಸ್ತುಗಳು ಕಳುವಾಗಿದ್ದವೆ ಎಂದು ಹೇಳುತ್ತಾನೆ. ಎಲ್ಲರೂ ಒಮ್ಮೆ ತಮ್ಮ ವಸ್ತುಗಳನ್ನು ಬ್ಯಾಗಿನಲ್ಲಿ ಒಮ್ಮೆ ಬಗ್ಗಿ ನೋಡುತ್ತಾರೆ. ಹಾಗೆ ನಾನೊಮ್ಮೆ ನನ್ನ ಬ್ಯಾಗನ್ನು ನೋಡಿದ್ದು ಇದೆ.‌

ಆದರೆ ಎಲ್ಲರ ವಸ್ತುಗಳು ಇದ್ದ ಹಾಗೇ ಇದ್ದವು. ಆ ಪ್ರಯಾಣಿಕನ ವಸ್ತುವನ್ನು ಯಾರು ಪಕ್ಕದಲ್ಲಿ ಕುಳಿತ ವ್ಯಕ್ತಿ, ಅವನು ಮಲಗಿರುವಾಗಲೇ ಅವನ ವಸ್ತುಗಳನ್ನು ಕದ್ದುಕೊಂಡು, ಅವನು ಬೇರೆ ಯಾವುದೋ ಸ್ಟಾಫ್‌ನಲ್ಲಿ ಇಳಿದು ಹೋಗಿರುತ್ತಾನೆ. ಎಂದು ಡ್ರೈವರ್‌ ತನ್ನ ಅನುಮಾನ ವ್ಯಕ್ತಪಡಿಸುತ್ತಾನೆ. ಅದು ಹಾಗೇ ಆಗಿತ್ತು. ಈ ಒಂದು ಘಟನೆ ನನ್ನನ್ನು ಹಾಗೆ, ಬಸ್‌ನಲ್ಲಿದ್ದ ಪ್ರಯಾಣಿಕರ ನಿದ್ದೆಯನ್ನು ಎಚ್ಚರಗೊಳಿಸುವಂತೆ ಮಾಡಿತ್ತು. ಮೈಸೂರು ಬರುವವರೆಗೂ ಯಾರು ನಿದ್ದೆ ಮಾಡಿರಲಿಲ್ಲ. ಈ ಘಟನೆಯನ್ನು ಈಗಲೂ ನೆನಪಿಸಿಕೊಂಡರೆ ನಗು ತರುವ ಸಂಗತಿಯಾಗಿದೆ.

ನಿದ್ರೆ ಪ್ರತಿಯೊಬ್ಬ ಮನುಷ್ಯನಿಗೂ ಬೇಕೇ ಬೇಕು. ನಿದ್ರೆ ಇಲ್ಲದೇ ಮನುಷ್ಯ ಇರೋಕೆ ಆಗೋದಿಲ್ಲ. ಪ್ರತಿಯೊಂದು ನಿದ್ರೆಯಲ್ಲಿ ಪ್ರತಿಯೊಬ್ಬರ ಒಳ್ಳೆಯ ಕನಸು ಹಾಗೆ, ಕೆಟ್ಟ ಕನಸುಗಳು ಇರುತ್ತವೆ. ನಮ್ಮ ಜೀವನದಲ್ಲಿ ಕನಸುಗಳು ಎಷ್ಟು ಮುಖ್ಯವೋ, ಹಾಗೇ ನಿದ್ರೆಯು ಅಷ್ಟೇ ಮುಖ್ಯವಾಗಿರುತ್ತದೆ. ನಿದ್ರೆ ಎಷ್ಟಿರಬೇಕೆಂದರೆ ನವಜಾತ ಶಿಶುಗಳು ದಿನಕ್ಕೆ 18 ತಾಸು ಮಲಗಿದರೆ,ವಯಸ್ಕರಿಗೆ ಕನಿಷ್ಠ 8 ತಾಸು ನಿದ್ರೆ ತುಂಬಾ ಅತ್ಯವಶ್ಯಕ. ಪ್ರಾಣಿಗಳಲ್ಲೂ ಕೂಡ ನಿದ್ರೆಯನ್ನು ಕಾಣಬಹುದು. ಜಿರಾಫೆ ದಿನಕ್ಕೆ ಕೇವಲ ಎರಡು ಗಂಟೆ ನಿದ್ರೆ ಮಾಡುತ್ತದೆ. ನಾಯಿಗಳು 9 ರಿಂದ 14 ಗಂಟೆ, ಹಸು 4 ಗಂಟೆಗಳ ಕಾಲ ನಿದ್ರಿಸುತ್ತವೆ.

ನಿದ್ರೆ ಇಲ್ಲದೆ ಹೋದರೆ ಅನೇಕ ರೋಗಗಳಿಗೆ ಗೊತ್ತಾಗುವ ಸಾಧ್ಯತೆ ಇರುತ್ತದೆ.  ನಿದ್ರೆಯನ್ನು ಮಾಡುವ ಸ್ಥಳದಲ್ಲೇ ಮಾಡಬೇಕು. ಆದಷ್ಟು ಹೊರಗಡೆ ಇರಬೇಕಾದ್ರೆ ಮೈಯೆಲ್ಲಾ ಕಣ್ಣುಗಳಾಗಿರಬೇಕು. ಇಲ್ಲ ಅಂದರೆ ಇಂತಹ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಈ ಹೊಸ ಜನರೇಶನ್‌ ಕುಂಭಕರ್ಣ ನಾವುಗಳೇ ಆಗಿದ್ದೇವೆ. ಆ ಕುಂಭಕರ್ಣನನ್ನು ಎಬ್ಬಿಸುವ ಪರಿ ನಮ್ಮಲ್ಲಿಯೇ ಇದೆ. ಅವನನ್ನು ಎದ್ದು ಓಡಿಸುವ ಪ್ರಜ್ಞೆ ನಮ್ಮಲ್ಲಿರಬೇಕು.

-ದೀಕ್ಷಿತಾ ನಾಯ್ಕ,

ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ. ಶಿರಸಿ

ಟಾಪ್ ನ್ಯೂಸ್

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

prahlad joshi

Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

3-vitla

Campco ಮಾಜಿ ಅಧ್ಯಕ್ಷ ಎಲ್.ಎನ್. ಕೂಡೂರು ಇನ್ನಿಲ್ಲ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

5-kushtagi

Kushtagi: ಕಳೆದೆರೆಡು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಕೋತಿ ಸೆರೆ

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

prahlad joshi

Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ

Crime: ಸ್ನೇಹಿತನನ್ನು ಕಟ್ಟಡದಿಂದ ಕೆಳಗೆ ದೂಡಿ ಕೊಲೆಗೈದ ಆರೋಪಿ ಸೆರೆ

Crime: ಸ್ನೇಹಿತನನ್ನು ಕಟ್ಟಡದಿಂದ ಕೆಳಗೆ ದೂಡಿ ಕೊಲೆಗೈದ ಆರೋಪಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.