ವಾಟ್ಸ್ಯಾಪ್ ಬಳಕೆದಾರರು ತಿಳಿದಿರಲೇಬೇಕಾದ ಮಾಹಿತಿ ಇದು
Team Udayavani, Jul 29, 2020, 7:13 PM IST
ಮಣಿಪಾಲ: ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ಯಾಪ್ ತನ್ನ ಪ್ಲಾಟ್ಫಾರ್ಮ್ ಅನ್ನು ನಿರಂತರವಾಗಿ ನವೀಕರಿಸುತ್ತಾ ಬಂದಿದೆ.
ಇದೀಗ ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ಮತ್ತೊಂದು ವೈಶಿಷ್ಟ್ಯವನ್ನು ಜಾರಿಗೆ ತಂದಿದೆ.
ಸಾಮಾನ್ಯವಾಗಿ ಹೆಚ್ಚಿ ಕಿರಿಕಿರಿ ಆಗುವ ಗ್ರೂಪ್‌ಗಳನ್ನು ಇದು ನಿಯಂತ್ರಿಲಿದೆ. ಈ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲಿದೆ.
ವಾಟ್ಸ್ಯಾಪ್ ʼಮ್ಯೂಟ್ ಆಲ್ವೇಸ್’ ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಈ ವಿಶೇಷ ಫೀಚರ್ ನಮಗೆ ಕಿರಿಕಿರಿ ಎನಿಸುವ ಗ್ರೂಪ್‌ಗಳ ನೋಟಿಫಿಕೇಶನ್‌ಗಳನ್ನು ಶಾಶ್ವತವಾಗಿ ನಿರ್ಬಂಧಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
ಈಗಿನಂತೆ ಗ್ರೂಪ್‌ಗಳ ನೋಟಿಫಿಕೇಶನ್‌ಗಳನ್ನು ಮ್ಯೂಟ್ ಮಾಡಲು ವಾಟ್ಸ್ಯಾಪ್ ತನ್ನಬಳಕೆದಾರರಿಗೆ ಮೂರು ಆಯ್ಕೆಗಳನ್ನು ನೀಡುತ್ತದೆ. ಇದು ಎಂಟು ಗಂಟೆ, ಒಂದು ವಾರ ಮತ್ತು ಒಂದು ವರ್ಷವನ್ನು ಒಳಗೊಂಡಿದೆ. ಆದರೆ ಈಗ ಕಂಪನಿಯು ಈ ಮಿತಿಯನ್ನು ವಿಸ್ತರಿಸಲು ಮುಂದಾಗಿದೆ.
ಸದ್ಯದ ಮಾಹಿತಿ ಪ್ರಕಾರ ಈಗಿರುವ ಒಂದು ವರ್ಷದ ಆಯ್ಕೆಯನ್ನು ʼಮ್ಯೂಟ್ ಆಲ್ವೇಸ್’ ಬಟನ್ನೊಂದಿಗೆ ಬದಲಾಯಿಸಲು ವಾಟ್ಸ್ಯಾಪ್ ಯೋಜಿಸುತ್ತಿದೆ. ಅನಾವಶ್ಯಕ ಗ್ರೂಪ್‌ಗಳ ನೋಟಿಪಿಕೇಶನ್‌ಗಳನ್ನು ಶಾಶ್ವತವಾಗಿ ಮ್ಯೂಟ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
ನೀವು ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು ಬಯಸಿದರೆ, ನೀವು ಮಾಡಬೇಕಾದ್ದು Settings > then tap Account > Privacy > Groups and select one of three options: “Everyone,” “My Contacts,” or “My Contacts Except.
ಈ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ. ಆದರೆ ಬೀಟಾ ಆವೃತ್ತಿಯ ಬಳಕೆದಾರರಾಗಿದ್ದರೆ, ಆಂಡ್ರಾಯ್ಡ್ ಆವೃತ್ತಿ 2.20.197.3ಗಾಗಿ ವಾಟ್ಸ್ಯಾಪ್ ಬೀಟಾವನ್ನು ಡೌನ್‌ಲೋಡ್ ಮಾಡುವ ಮೂಲಕ ಇದನ್ನು ಪ್ರಯತ್ನಿಸಬಹುದಾಗಿದೆ. ವಾಟ್ಸ್ಯಾಪ್ ಗುಂಪು ಗೌಪ್ಯತೆ ಸೆಟ್ಟಿಂಗ್‌ಗಳ ವೈಶಿಷ್ಟ್ಯದೊಂದಿಗೆ ಬರುತ್ತದೆ. ಅದು ಹೊಸ ಗುಂಪುಗಳಿಗೆ ಯಾರು ಸೇರಿಸಬಹುದು ಎಂಬುದನ್ನು ನಿರ್ಧರಿಸುವ ಆಯ್ಕೆಗಳನ್ನು ಬಳಕೆದಾರರಿಗೆ ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.