NEW YEAR: ಮತ್ತೆ ಬಂತು ಹೊಸ ವರುಷ
Team Udayavani, Jan 6, 2024, 3:16 PM IST
ಅರೆ!! ಮತ್ತೆ ಹೊಸ ವರ್ಷ ಬಂದೇಬಿಡ್ತಾ ! ಮೊನ್ನೆ ತಾನೇ ಹೊಸ ವರ್ಷಕ್ಕೆ ವಿಶ್ ಮಾಡಿದ್ದ ನೆನಪು. ಇಷ್ಟು ಬೇಗ 365 ದಿನಗಳು ಕಳೀತಾ!!. ಏಕೋ ಇತ್ತೀಚಿಗೆ ದಿನಗಳು ವೇಗವಾಗಿ ಸಾಗ್ತಾ ಇದೆ ಅನಿಸ್ತಿದೆ. ಗೋಡೆ ಮೇಲಿದ್ದ ಹಳೆ ಕ್ಯಾಲೆಂಡರ್ ಬದ ಕಿಸಿ ಹೊಸ ಕ್ಯಾಲೆಂಡರ್ ಹಾಕೆºàಕು. ಈ ವರ್ಷದ ರೆಸಲ್ಯೂಷನ್ ಏನು !. ಕಳೆದ ವರ್ಷ ಮಾಡಿದ ರೆಸಲ್ಯೂಶನೇ ಇನ್ನೂ ಪೂರ್ಣವಾಗ್ಲಿಲ್ಲ. ಈ ವರ್ಷ ಇನ್ನೇನು ಮಾಡೋದು ಎಂದು ಹೊಸ ವರ್ಷದ ಪ್ರಾರಂಭದಲ್ಲಿ ನಮಗೆಲ್ಲ ಅನಿಸೋದು ಸರ್ವೇಸಾಮಾನ್ಯ. ರೆಸಲ್ಯೂಶನ್ ಗಳೆÇÉಾ ಹೊಸ ವರ್ಷದ ಮೊದಲ ನಾಲ್ಕು ದಿನಗಳಿಗೆ ಮಾತ್ರ ಸೀಮಿತವಾಗಿಬಿಟ್ಟಿದೆ.
ವರ್ಷದ ಮೊದಲ ದಿನದಂದು ಈ ವರ್ಷ ಇದನ್ನು ಸಾಧಿಸಿಯೇ ತೀರುತ್ತೇನೆ ಎಂಬ ಸಂಕಲ್ಪ ಮಾಡುತ್ತೇವೆ. ಆದರೆ ಕೆಲಸದ ಜಂಜಾಟದ ನಡುವೆ ನಾವು ಸಾಧಿಸಬೇಕಾದ ವಿಷಯವನ್ನೇ ಮರೆತುಬಿಡುತ್ತಿದ್ದೇವೆ. ಆ ರೀತಿ ಮಾಡಿದಾಗ ಕಳೆದ ವರ್ಷಕ್ಕೂ ಈ ವರ್ಷಕ್ಕೂ ಏನಿದೆ ವ್ಯತ್ಯಾಸ. ದಿನಗಳು ಅಥವಾ ವರ್ಷ ನಮಗಾಗಿ ಕಾಯುವುದಿಲ್ಲ. ಅದರ ಪಾಡಿಗೆ ಅದು ಸಾಗುತ್ತಿರುತ್ತದೆ. ನಾವು ಅದರ ಜತೆ ಸಾಗುತ್ತಿರಬೇಕು ಅಷ್ಟೇ. ಆದರೆ ನಾವು ಸಮಯದ ಜತೆ ಎಷ್ಟು ಬಾರಿ ಸರಿಯಾಗಿ ಸಾಗಿದ್ದೇವೆ ಅನ್ನೋದನ್ನು ಮನನ ಮಾಡಿಕೊಳ್ಳಬೇಕು.
ನಾವು ಪ್ರತೀ ವರ್ಷ ಹೊಸ ವರ್ಷದಂದು ಸಂಕಲ್ಪಗಳನ್ನು ಮಾಡುತ್ತೇವೆ. ಆದರೆ ವರ್ಷವಿಡೀ ಅದನ್ನು ಅನುಸರಿಸುವುದು ಕಷ್ಟವಾಗುತ್ತದೆ. ನಾವು ಮಾಡಿಕೊಂಡ ಸಂಕಲ್ಪಗಳ ಪೈಕಿ ವಾಸ್ತವವಾಗಿ ಕಾರ್ಯರೂಪಕ್ಕೆ ಬರುವುದು ಕೆಲವು ಮಾತ್ರ ಎಂಬ ಸತ್ಯ ನಮಗೆÇÉಾ ತಿಳಿದಿದೆ. ಈ ನಿರ್ಣಯಗಳನ್ನು ಗಟ್ಟಿಯಾಗಿ ಅನುಸರಿಸುವುದು ನಮ್ಮ ಕೈಯ್ಯÇÉೇ ಇರುವುದರಿಂದ ಮೊದಲು ನಾವು ದೃಢ ಸಂಕಲ್ಪವನ್ನು ಮಾಡಬೇಕು. ಪ್ರತೀ ದಿನ, ಕ್ಷಣ ಅದನ್ನು ನೆನಪಿಸಿಕೊಳ್ಳುತ್ತಿರಬೇಕು. ಈ ವರ್ಷ ಇದನ್ನು ಮಾಡಬೇಕು ಎಂದುಕೊಂದಿದ್ದರೆ ಮಾರನೇ ದಿನವೇ ಮರೆತುಬಿಡುವುದಲ್ಲ. ಬದಲಾಗಿ ನಾವು ಅದನ್ನು ಸಂಪೂರ್ಣಗೊಳಿಸಲು ಎಡವಿದÇÉೆÇÉಾ ನಾವು ತಲುಪಬೇಕಾದ ಗುರಿಯನ್ನು ನೆನಪಿಸಿಕೊಳ್ಳುತ್ತಿರಬೇಕು. ನಮ್ಮ ಮನಸ್ಸು ನಾವು ಹೇಳಿದಂತೆಯೇ ಇರುತ್ತದೆ. ಈ ವರ್ಷ ಒಳ್ಳೆಯದನ್ನು ಮಾಡಬೇಕು ಎಂದು ಪ್ರತಿ ಕ್ಷಣ ನಮ್ಮ ಮನಸ್ಸಿಗೆ ಹೇಳುತ್ತಾ ಅದನ್ನೇ ಯೋಚಿಸುತ್ತಾ ಇದ್ದರೆ ಖಂಡಿತ ಬದಲಾವಣೆ ಸಾಧ್ಯವಿದೆ.
ಪ್ರತೀ ದಿನವನ್ನು ಹೊಸವರ್ಷವೆಂದು ಭಾವಿಸುವುದು ರೆಸಲ್ಯೂಷನ್ ಗಳನ್ನು ಪೂರ್ಣಗೊಳಿಸಲು ಇರುವ ಇನ್ನೊಂದು ಹಾದಿ. ನಮಗೆ ದಿನದಲ್ಲಿ 24 ಗಂಟೆ ಸಿಗುವುದರಿಂದ ಅಷ್ಟು ಗಂಟೆಯಲ್ಲಿ ಎಷ್ಟು ಸಮಯವನ್ನು ನಾವು ಒಳ್ಳೆಯ ಕೆಲಸಕ್ಕೆ ಸದುಪಯೋಗಪಡಿಸಿಕೊಳ್ಳುತ್ತೇವೆ ಎಂಬುವುದರ ಕಡೆ ಗಮನ ಹರಿಸಬೇಕು. ಹೊಸ ವರ್ಷ ಎಂಬುವುದು ಖಾಲಿ ಪುಸ್ತಕದಂತೆ. ಪೆನ್ನು ನಮ್ಮ ಕೈಯÇÉೇ ಇರುವುದರಿಂದ ಸುಂದರವಾದ ಕಥೆಯನ್ನು ಬರೆಯಲು ಇದು ನಮಗೆ ಉತ್ತಮ ಅವಕಾಶ.
ಹೊಸ ವರ್ಷವೂ ಎಲ್ಲ ದಿನದಂತೆಯೇ ಒಂದು ದಿನಾನೇ ಅಲ್ವಾ. ಇದು ವರ್ಷ ಪ್ರಾರಂಭದ ಮೊದಲ ದಿನ ಅನ್ನೋದಷ್ಟೆ ವಿಶೇಷ. ಅದ್ಯಾಕೆ ಹೊಸ ವರ್ಷಕ್ಕೆ ಪಾರ್ಟಿ ಗಮ್ಮತ್ತು ಮಾಡಿ ಈ ವರ್ಷದಲ್ಲಿ ಹೀಗೆ ಮಾಡಲೇಬೇಕು, ಇದನ್ನು ಸಾಧಿಸಲೇಬೇಕು ಎಂಬ ರೆಸಲ್ಯೂಶನ್. ನಾಲ್ಕೇ ದಿನಕ್ಕೆ ಅದನ್ನೆಲ್ಲ ಮರೆತು ಮುಂದಿನ ವರ್ಷ ಮಾಡಿದರಾಯ್ತು ಅನ್ನೋ ಬದಲಾವಣೆ. ಅದರ ಬದಲಾಗಿ ಪ್ರತೀ ದಿನವನ್ನು ಹೊಸ ವರ್ಷವೆಂದು ಭಾವಿಸಿ ಹೊಸತನವನ್ನು ಕಂಡುಕೊಳ್ಳುವುದು ಉತ್ತಮ ಅಲ್ವಾ?.
-ಲಾವಣ್ಯ ಎಸ್.
ವಿವೇಕಾನಂದ ಕಾಲೇಜು ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.