NEW YEAR: ಕಳೆದೇ ಹೋಯಿತು ಕಳೆಯುತ್ತಾ ವರುಷ!
Team Udayavani, Jan 6, 2024, 3:37 PM IST
ಅಂತೂ ಇಂತೂ ವರ್ಷದ ಕೊನೆಯ ಹಂತ ತಲುಪಿದ್ದೇವೆ. ಇನ್ನೇನು 2023 ಮುಗಿದು 2024 ನ್ನು ಎದುರುಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಈ ವರ್ಷ ಘಟಿಸಿದ ಘಟನೆಗಳು ಇನ್ನು ನೆನಪಾಗಿ ಮಾತ್ರ ಉಳಿಯಲಿವೆ. ಅಂತೂ 2023 ನನ್ನ ಪಾಲಿಗೆ ಸಾಕಷ್ಟು ಸಿಹಿ-ಕಹಿ ನೆನಪುಗಳನ್ನು ನೀಡಿದೆ.
ಕಳೆದ ಕೆಲವು ಗಳಿಗೆಗಳು ಕಣ್ಣನ್ನು ಒದ್ದೆಯಾಗಿಸಿದರೆ, ಅವು ಬಾಳಿನಲ್ಲಿ ಘಟಿಸಿ ಮುಂದಿನ ದಿನಗಳನ್ನು ಹೇಗೆ ಎದುರಿಸಬೇಕೆನ್ನುವ ನೀತಿ ಬೋಧಿಸಿವೆ. ಇಲ್ಲಿ ನಡೆಯುವ ನಿರಂತರ ಏಳುಬೀಳಿನ ಹೋರಾಟದ ನಡುವೆಯೂ ಗೆಲುವಿಗಾಗಿ ತವಕಿಸುವ ಮನದೊಳಗೆ ಆಲೋಚನೆಗಳ ಸರಮಾಲೆಯೇ ಇದೆ. ಆ ಆಲೋಚನೆಗಳಲ್ಲಿ ಸಿಹಿ ಕಹಿ ಬೆಸುಗೆಯಿದೆ. ಕೆಲವು ಬಾರಿ ಅತಿಯಾಗಿಯೇ ನೆನಪು ಕಾಡುತ್ತದೆ. ಆದರೆ ಇದನ್ನು ನೆನೆಯುತ್ತಲೇ ಇದ್ದರೆ ಕಷ್ಟ ನಷ್ಟ. ಅಂದುಕೊಂಡಂತಹ ಕಾರ್ಯಗಳು ನಡೆಯುವುದೇ ಇಲ್ಲ. ಕಳೆದು ಹೋದ ವರುಷದಂತೆಯೇ ಈ ಜೀವನ ಹೇಗೆ ಎಂದರೆ ಮಿಂಚಂತೆ ಮರೆಯಾಗುತ್ತದೆ.
ಗೆಳೆಯರೇ, ನಮ್ಮ ಮುಂದೆ ಇರುವುದು ಈಗ ಮೊತ್ತೂಂದು ಹೊಸ ವರ್ಷ. ಈ ವರ್ಷದಲ್ಲಿ ಏನು ಮಾಡಬೇಕೆನ್ನುವ ಆಲೋಚನೆ, ಉಪಾಯ, ಯೋಜನೆಗಳೆಂಬ ಅಸ್ತ್ರಗಳನ್ನು ಮೊದಲೇ ನಮ್ಮ ಬತ್ತಳಿಕೆಯಲ್ಲಿ ಜೋಪಾನವಾಗಿರಿಸಬೇಕು. ಅದನ್ನು ಸಮಯ-ಸಂದರ್ಭ ಬಂದಾಗ ಉಪಯೋಗಿಸಬೇಕು. ಯಶಸ್ಸನ್ನು ಕಾಣಬೇಕು. ಕಳೆದು ಹೋದ ದಿನಗಳಲ್ಲಿ ಆಗದ- ನಡೆಯದ ಅದೆಷ್ಟು ಘಟನೆಗಳು ಇರಬಹುದು. ಆದರೆ ಮುಂಬರುವ ಯೋಜನಾ ದಿನಗಳಲ್ಲಿ ಆ ಆಲೋಚನೆಗಳು ಈಡೇರಲಿ. ಯಾವುದೇ ಚಿಂತೆಯೊಳಗೆ ಈಜಾಡುವ ಬದಲು, ಹೊಸ ಚಿಂತನೆಗಳಿಂದ, ನವ ಆಲೋಚನೆಗಳಿಂದ ನವ ವರ್ಷವೂ ನವ ಉÇÉಾಸವನ್ನು ನೀಡಲಿ. ಎಲ್ಲರ ಬಾಳಿಗೂ ಆಶಾದಾಯಕವಾಗುವ ಆಶಾಕಿರಣವನ್ನು ಮೂಡಿಸುವ ವರ್ಷವಾಗಲಿ.
ಈ ವರ್ಷದಲ್ಲಿ ದಿನಗಳು, ಸೆಕೆಂಡ್‌ಗಳು, ನಿಮಿಷಗಳು, ಗಂಟೆಗಳು, ದಿನಗಳನ್ನು ಕಳೆದಿದ್ದೇವೆ. ಈ ಪಯಣದ ಹಾದಿಯಲ್ಲಿ ಬಂದು ಹೋದವರೆಷ್ಟೋ, ಬಂದು ಶಾಶ್ವತವಾಗಿ ಮನದಲ್ಲಿ ಜಾಗ ಪಡೆದವರೆಷ್ಟೋ. ಹಾಗೆಯೇ ಮನದಲ್ಲಿ ಜಾಗವ ಪಡೆದು ತನು ಮನುವ ತಣಿಸಿದವರಿಗೆ ನನ್ನದೊಂದು ಧನ್ಯವಾದ.
ಇನ್ನೇನು ಹೊಸ ಕ್ಯಾಲೆಂಡರ್ ವರ್ಷದ ಹೊಸ್ತಿಲಲ್ಲಿ, ಹೊಸ ವರ್ಷದ ಆರಂಭದಲ್ಲಿ ನಾವಿದ್ದೇವೆ. ಸ್ನೇಹಮಯ ಜೀವನ, ಶಾಂತಿಯ ತೋಟ ನಮ್ಮದಾಗಲಿ.
-ಗಿರೀಶ್ ಪಿ.
ವಿ.ವಿ., ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.