UV Fusion: ಬಿಟ್ಟಿ ಸಲಹೆಗಳು ಬೇಕಿಲ್ಲ
Team Udayavani, Nov 3, 2024, 1:48 PM IST
ಇತ್ತೀಚೆಗೆ ಹಿಂದಿಯ ಕಪಿಲ್ ಶರ್ಮ ನಡೆಸಿಕೊಡುವ ಕಾರ್ಯಕ್ರಮಕ್ಕೆ ಕ್ರಿಕೆಟಿಗ ರೋಹಿತ್ ಶರ್ಮ ಅತಿಥಿಯಾಗಿ ಬಂದಿದ್ದರು. ಅಲ್ಲಿ ಅವರಿಗೆ ‘ನಿಮಗೆ ಕ್ರಿಕೆಟ್ ಆಟದ ವಿಷಯದಲ್ಲಿ ಜನ ಏನಾದರೂ ಅಭಿಪ್ರಾಯಗಳನ್ನು ಕೊಡುತ್ತಾರಾ? ಹೀಗೆ ಆಡಿದರೆ ಚೆನ್ನಾಗಿತ್ತು, ಮೊದಲು ಬ್ಯಾಟಿಂಗ್ ಆರಿಸಿಕೊಂಡರೆ ಗೆಲ್ಲುತ್ತಿದ್ದಿರಿ. ನೀವು ಸಿಕ್ಸರ್ ಅನ್ನು ಈ ರೀತಿ ಹೊಡೆಯಬಹುದಿತ್ತು ಎಂದೆಲ್ಲಾ ಪುಕ್ಕಟೆ ಸಲಹೆ ಕೊಡುತ್ತಾರಾ’ ಎಂದು ರೋಹಿತ್ ಶರ್ಮಾ ಅವರನ್ನು ಕಪಿಲ್ ಶರ್ಮಾ ಪ್ರಶ್ನಿಸಿದ್ದರು. ಅದಕ್ಕೆ ರೋಹಿತ್, ’ಹೌದು ಜನ ಹೆಚ್ಚೆಚ್ಚು ಮಾರ್ಗದರ್ಶನ ಕೊಡುತ್ತಾರೆ. ತಮಗೆ ತಿಳಿದದ್ದು, ತಿಳಿಯದ್ದು ಎಲ್ಲ ಹೇಳಲು ಹಾತೊರೆಯುತ್ತಾರೆ. ನಾವು ಮ್ಯಾಚ್ ನಡೆಯುವ ದಿನಗಳಲ್ಲಿ ಏರ್‌ಪೋರ್ಟ್‌ನಿಂದ ಇಳಿದು ನಮ್ಮ ಬಸ್ಸಿಗೆ ಹತ್ತಲು ಹೋಗುವಾಗ ಕಿವಿಗೆ ಹ್ಯಾಂಡ್ಸ್ ಫ್ರೀ ಹಾಕಿಕೊಂಡಿರುತ್ತೇವೆ ಏಕೆ ಗೊತ್ತಾ? ಜನರ ಯಾವ ಮಾತು ತಾಕಬಾರದೆಂದು ಕಿವಿ ಮುಚ್ಚಿಕೊಂಡಿರುತ್ತೇವೆ. ಜಯಕಾರ, ನಿಂದನೆ, ಪ್ರಶಂಸೆ, ಟೀಕೆ ಈ ಯಾವುದೂ ಆ ಕ್ಷಣದಲ್ಲಿ ಮನಸ್ಸಿಗೆ ನಾಟಬಾರದೆಂದು ಸ್ವಯಂ ನಿರ್ಬಂಧ ಹೇರಿಕೊಳ್ಳುತ್ತೇವೆ. ಎಲ್ಲರೂ ಹೇಳುವುದನ್ನು ಕೇಳುತ್ತಿದ್ದರೇ ನೀವು ಸಂಪೂರ್ಣ ಗೊಂದಲದಲ್ಲಿಯೇ ಮುಳುಗಿ ಬಿಡುತ್ತೀರಿ’ ಎಂದರು.
ತನ್ನ ಕಾರ್ಯವನ್ನು ಹೀಗೆ ಮಾಡಬೇಕು ಎಂದು ನಿಶ್ಚಯಿಸಿ ಹೊರಟವನು ಕೊನೆ ಗಳಿಗೆಯಲ್ಲಿ ಎಲ್ಲರ ಸಲಹೆ, ಸೂಚನೆ, ಹಿತವಚನ ಕೇಳುತ್ತಾ ನಿಲ್ಲುವುದಿಲ್ಲ. ಆಗ ಜನ ದುರಂಹಕಾರಿ ಎಂದರೂ ಅಡ್ಡಿಯಿಲ್ಲ. ಮನಸ್ಸನ್ನು ಚಂಚಲಗೊಳಿಸುವ ಇಲ್ಲವೇ ನೋವುಂಟು ಮಾಡುವ ಎಲ್ಲ ಮಾತುಗಳಿಂದ ಆತ ತಪ್ಪಿಸಿಕೊಳ್ಳುತ್ತಾನೆ. ಪರ ನಿಂದೆ ಮತ್ತು ಸ್ತುತಿಗಳಿಂದ ದೂರವಿರಬೇಕೆಂದು ವಚನಕಾರರು ಹೇಳಿದ್ದು ಈ ಕಾರಣಕ್ಕೆ ಇರಬಹುದು.
ಒಮ್ಮೆ ಅಪಘಾತದಲ್ಲಿ ತನ್ನ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಮಿತ್ರರೊಬ್ಬರನ್ನು ಕಂಡು ಸಾಂತ್ವನ ಹೇಳಿ ಬರಲು ಸ್ನೇಹಿತರ ಜತೆ ಹೋಗಿದ್ದೆ. ಹೀಗೆ ಆಕಸ್ಮಿಕವಾಗಿ ರಕ್ತ ಸಂಬಂಧಿಗಳನ್ನು ಕಳೆದು ಕೊಂಡವರ ಅನೇಕ ಘಟನೆಗಳನ್ನು ಹೇಳಿ ಸಂತೈಸಲು ನನ್ನ ಸ್ನೇಹಿತರು ಯತ್ನಿಸಿದರು. ‘ಇವೆಲ್ಲಾ ಬದುಕಿನ ಅನಿರೀಕ್ಷಿತಗಳು. ಆದಷ್ಟು ಬೇಗ ಈ ಘಟನೆಯಿಂದ ಹೊರಬರಲು ಪ್ರಯತ್ನಿಸಿ, ಮರೆತರೆ ಬಹಳ ಒಳ್ಳೆಯದು ಕೂಡ. ಮನಸ್ಸಿಗೆ ಹೆಚ್ಚು ಹಚ್ಚಿಕೊಂಡರೆ ಖನ್ನತೆ ಬಾಧಿಸಬಹುದು. ನಿಮ್ಮ ಮಕ್ಕಳ ಮೇಲೂ ಅದರ ಪರಿಣಾಮ ಬೀರಬಹುದು. ಒಂಟಿಯಾಗಿ ಕೂತು ಅದೇ ಘಟನೆಗಳ ಮೆಲುಕು ಹಾಕಿ ದುಃಖೀಸುವ ಬದಲು ಬೇರೆ ಕೆಲಸಗಳಲ್ಲಿ ಮಗ್ನರಾಗಿ, ಮುಂದಿನ ಬದುಕಿನ ಬಗ್ಗೆ ಯೋಚಿಸಿ’ ಎಂದೆಲ್ಲಾ ಹೇಳಿ ಸಂತೈಸಿದರು. ಸ್ನೇಹಿತನ ಮಾತನ್ನು ಕೇಳುತ್ತಾ ಕೂತಿದ್ದ ಆತನ ಸೋದರ ಮಾವ ತಟ್ಟನೆ ಎದ್ದರು. ದಿಟ್ಟವಾಗಿ ನಿಂತು ಗಟ್ಟಿ ದನಿಯಲ್ಲಿ, ‘ಈ ಜಗತ್ತಿನಲ್ಲಿ ಉಚಿತವಾಗಿ ಸಿಗುವುದು ಸಲಹೆಗಳು ಮಾತ್ರ. ಹೇಳುವುದು ಪಾಲಿಸುವಷ್ಟು ಸಲೀಸಲ್ಲ. ಆದವರಿಗಷ್ಟೇ ಅದರ ಮರ್ಮ, ಕರ್ಮ, ನೋವು ತಿಳಿಯುವುದು. ತಣ್ಣಗಿರುವವರಿಗೆ ಹೇಳಲು ನೂರು ಮಾತು, ಉದಾಹರಣೆ ಸಿಗುತ್ತವೆ. ತಿಳಿ ಹೇಳುವ ಜನರೂ ಇಂಥ ಸಮಸ್ಯೆಗಳು ಅವರಿಗೆ ಆವರಿಸಿಕೊಂಡಾಗ ಈ ತರಹವೇ ಕುಗ್ಗಿ ಕೂತು ಅಬ್ಬರಿ ಸುತ್ತಾರೆ. ಮನಸ್ಸಿನ ಭಯ, ಆತಂಕ, ಒಗ್ಗರಣೆ ಮಾತುಗಳಿಂದ ಹೋಗುವುದಿಲ್ಲ. ಕಾಲ ಎಲ್ಲವನ್ನೂ ಬದಲಿಸಬೇಕೇ ಹೊರತು ತೋರಿಕೆಯ ಮಾತು, ಪುಕ್ಸಟ್ಟೆ ಉಪದೇಶದಿಂದ ಪ್ರಯೋಜನವಿಲ್ಲ’ ಎಂದರು. ಕೊಂಚ ಒರಟಾಗಿ ನಡೆದುಕೊಂಡ ರೀತಿ ನಮ್ಮಿಬ್ಬ ರಿಗೂ ಇರಿಸುಮುರುಸಾಯಿತು. ಅವರ ಮಾತಿನಲ್ಲಿ ಸತ್ಯವಿತ್ತು. ನಾವು ಆಚರಿಸದ ಅನೇಕ ಸಂಗತಿಗಳನ್ನು ಬೇರೆಯವರಿಗೆ ಉಣಿಸಲು ಹೋಗುತ್ತೇವೆ. ಮತ್ತೂಬ್ಬರ ಸಮಸ್ಯೆ ಬಗೆಹರಿಸಲು ಹೊರಡುವ ನಾವೇ ಅನೇಕ ಭ್ರಾಮಕ ಸ್ವಪ್ನಗಳಲ್ಲಿ ಮುಳುಗಿರುತ್ತೇವೆ.
-ಶೃತಿ ಬೆಳ್ಳುಂಡಗಿ, ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.