ದೇಶಕ್ಕಿಂತ ಮೊದಲು ಯಾವುದೂ ಇಲ್ಲ
Team Udayavani, Jul 10, 2020, 4:15 PM IST
“ಚೀನದ 59 ಆ್ಯಪ್ ಗಳು ನಿಷೇಧಗೊಂಡಿದ್ದು ಒಳ್ಳೆಯದೇ ಆಯಿತು. ಹಲವು ಆ್ಯಪ್ ಗಳನ್ನು ನಾವು ಬಳಸುತ್ತಿದ್ದೆವು, ಬ್ಯಾನ್ ಆದ ಬಳಿಕ ಹೊರಬರಲು ಸ್ವಲ್ಪ ಕಷ್ಟವಾಯಿತು. ಆದರೆ ನಮ್ಮ 20 ಸೈನಿಕರ ಬಲಿದಾನಕ್ಕಿಂತ 59 ಆ್ಯಪ್‌ಗ್ಳ ನಿಷೇಧ ಏನೂ ಅಲ್ಲ. ದೇಶಕ್ಕಾಗಿ ನಾವು ಅದನ್ನು ತ್ಯಜಿಸಿದ್ದೇವೆ’ ಇದು ಯುವಿ ಫ್ಯೂಷನ್ ಓದುಗರ ಅಂತರಾಳದ ಮಾತುಗಳು. ಹೌದು ಗಾಲ್ವಾನ್‌ನಲ್ಲಿ ಘರ್ಷಣೆ ಸಂಭವಿಸಿ 20 ಭಾರತೀಯ ಸೈನಿಕರ ಸಾವಿಗೆ ಚೀನ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಚೀನಕ್ಕೆ ಪರೋಕ್ಷವಾಗಿ ಆರ್ಥಿಕ ಹೊಡೆತ ನೀಡುವ ನಿಟ್ಟಿನಲ್ಲಿ ಅಲ್ಲಿನ 59 ಆ್ಯಪ್ ಗಳನ್ನು ಕೇಂದ್ರ ಸರಕಾರ ನಿಷೇಧಿದೆ. ಅವುಗಳಲ್ಲಿ ಪ್ರಮುಖವಾಗಿ ಟಿಕ್‌ಟಾಕ್ ಮತ್ತು ಹೆಲೋ ಆ್ಯಪ್ ಸೇರಿವೆ. ಈ ನಿಟ್ಟಿನಲ್ಲಿ ತಂತ್ರಜ್ಞಾನಕ್ಕೆ ಹೆಚ್ಚು ಹತ್ತಿರವಾಗಿರುವ ಯುವ ಜನರ ಅಭಿಪ್ರಾಯಗಳನ್ನು ಯುವಿ ಫ್ಯೂಷನ್ ಕೇಳಿತ್ತು. ಇದಕ್ಕೆ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, ಅವುಗಳಲ್ಲಿ ಆಯ್ದವುಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ಬ್ಯಾನ್ ಆಗಿದ್ದು ಒಳ್ಳೆಯದಾಯಿತು
ಟಿಕ್‌ಟಾಕ್‌ನಿಂದಾಗಿ ಅನೇಕ ಕಲಾವಿದರು ಗುರುತಿಸಿಕೊಂಡಿದ್ದರು. ಆದರೆ ದೇಶದ ಭದ್ರತೆ ಮತ್ತು ಸಾರ್ವಭೌಮತೆಗೆ ಅಡ್ಡಿಯಾಗಿರುವ ಈ ಆ್ಯಪ್‌ಗ್ಳಿಗೆ ನಿರ್ಬಂಧ ಹೇರಿರುವುದು ಉತ್ತಮ ನಡೆ. ನಮ್ಮ ಮನೋರಂಜನೆಗಿಂತ ದೇಶ ಮೊದಲು.
-ಪೂರ್ಣಿಮಾ ಬಿ., ವಿ.ವಿ. ಕಲಾ ಕಾಲೇಜು ತುಮಕೂರು
ಚೀನಿ ಸರಕುಗಳನ್ನು ನಿಷೇಧಿಸಲಿ
ಗಡಿಯಲ್ಲಿ ಚೀನ ಆಶಾಂತಿ ಸೃಷ್ಟಿಸಿದ್ದು, ಇದಕ್ಕೆ ಕೇಂದ್ರ ಸರಕಾರವೂ ತಕ್ಕ ಪ್ರತಿಕ್ರಿಯೆ ನೀಡಿದೆ. ಸ್ವದೇಶಿ ಆ್ಯಪ್‌ಗ್ಳಿಗೆ ನಾವು ಮನ್ನಣೆ ನೀಡಬೇಕು. ಆಗ ಮಾತ್ರ ಆತ್ಮ ನಿರ್ಭರ ಭಾರತ ನಿರ್ಮಾಣವಾಗಲು ಸಾಧ್ಯ. ಚೀನಿ ಸರಕುಗಳನ್ನು ಕೂಡ ನಿಷೇಧಿಸಬೇಕು.
– ಸ್ಪರ್ಶಾ ಎಂ. ನೆಲಮಂಗಲ, ತುಮಕೂರು ವಿ.ವಿ.
ನಿಗಾವಹಿಸಬೇಕಿದೆ
ಆ್ಯಪ್‌ಗ್ಳ ನಿಷೇಧ ಶ್ಲಾಘನೀಯ. ಜತೆಗೆ ಪಬ್-ಜಿ ಅಂಥ ಆ್ಯಪ್‌ಗ್ಳನ್ನು ನಿಷೇಧಗೊಳಿಸಬೇಕಾದ ಕಾಲ ಮೀರಿಹೋಗಿದೆ. ಭಾರತದಲ್ಲಿ ಬಳಕೆಯಾಗುವ ಆ್ಯಪ್, ವೆಬ್‌ಸೈಟ್‌ಗಳ ದಾಖಲೀಕರಣ ಮತ್ತು ಪರಿಶೀಲನೆಗೆ ಪ್ರತ್ಯೇಕ ಸಮಿತಿಯನ್ನು ಸರಕಾರ ರಚಿಸುವ ಅಗತ್ಯವಿದೆ.
-ಅಭಿಜಿತ್ ಬಂದಡ್ಕ, ನೆಹರೂ ಮೆಮೋರಿಯಲ್ ಕಾಲೇಜು, ಸುಳ್ಯ
ಸಮಯ ವ್ಯರ್ಥವಾಗುವುದು ತಪ್ಪಿದೆ
ಮನೋರಂಜನ ಉದ್ದೇಶಕ್ಕಾಗಿ ಹಲವು ಚೀನಿ ಆ್ಯಪ್‌ಗ್ಳನ್ನು ಬಳಸಲಾಗುತ್ತಿತ್ತು. ಯುವ ಜನರು ಕೆಲಸ-ಕಾರ್ಯ ಬಿಟ್ಟು ಈ ಆ್ಯಪ್‌ಗ್ಳಲ್ಲಿ ಮುಳುಗಿ ಹೋಗಿರುತ್ತಿದ್ದರು. ಈಗ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದನ್ನು ತಪ್ಪಿಸಲಾಗಿದೆ. ಇದು ಚೀನದ ವಿರುದ್ಧ ಸಾರಿದ ಪರೋಕ್ಷ ಯುದ್ಧ.
-ಶಿವಪ್ರಸಾದ್ ರೈ ಪೆರುವಾಜೆ ವಿವೇಕಾನಂದ ಕಾಲೇಜು, ಪುತ್ತೂರು
ಆ್ಯಪ್ ಬ್ಯಾನ್ ಹೆಮ್ಮೆಯ ಸಂಗತಿ
ಚೀನಿ ಆ್ಯಪ್‌ಗ್ಳನ್ನು ನಿಷೇಧಗೊಳಿಸಿರುವ ಭಾರತ ಸರಕಾರದ ಕ್ರಮ ಹೆಮ್ಮೆಯ ಸಂಗತಿಯಾಗಿದೆ. ಈ ಕ್ರಮದಿಂದ ಭಾರತವೂ ಜಗತ್ತಿಗೆ ಹೊಸ ಸಂದೇಶವನ್ನು ಸಾರಿದೆ. ದೇಶವನ್ನು ಕೆಣಕಿದರೆ ದಿಟ್ಟ ಕ್ರಮ ಗಳನ್ನು ಭಾರತ ತೆಗೆದುಕೊಳ್ಳುತ್ತದೆ ಎಂಬುದಕ್ಕೆ ಈ ನಿರ್ಧಾರವೇ ಸಾಕ್ಷಿ.
-ಶಿಲ್ಪಾ ಹೇರಂಜಾಲ್, ಭಂಡಾರ್‌ಕಾರ್ ಕಾಲೇಜು, ಕುಂದಾಪುರ
ಕೇಂದ್ರದ ಪ್ರಬುದ್ಧ ತೀರ್ಮಾನ
ಭಾರತ ಪ್ರಬುದ್ಧ ರಾಷ್ಟ್ರ. ಬೇರೊಂದು ದೇಶಗಳಿಂದ ಎರವಲು ಪಡೆಯುವ ಅವಶ್ಯ ಏನಿದೆ. ಚೀನ ಭಾರತೀಯ ಸೈನಿಕರ ಮೇಲೆ ದಾಳಿ ಮಾಡಿದ ಪರಿಣಾಮ ದೇಶದಲ್ಲಿ ಚೀನಿ ಆ್ಯಪ್‌ಗ್ಳನ್ನು ನಿಷೇಧಿಸಿಲಾಯಿತು. ಈ ಮುಂಚೆಯೇ ತಿರ್ಮಾನ ಕೈಗೊಂಡಿದ್ದರೆ ಚೆನ್ನಾಗಿರುತ್ತಿತ್ತು.
– ರಮ್ಯಾ ಎನ್.ಆರ್., ಮೈಸೂರು ವಿ.ವಿ.
ನಿಜಕ್ಕೂ ಸ್ವಾಗತಾರ್ಹ
ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಡಿ ಇಡಲು ಇದು ಸಹಕಾರಿ. ಚೀನಿ ಆ್ಯಪ್‌ಗ್ಳ ನಿಷೇಧ ನಿಜಕ್ಕೂ ಸ್ವಾಗತಾರ್ಹ. ನಾನು ಕೂಡ ಚೀನಿ ಆ್ಯಪ್‌ಗ್ಳನ್ನು ಬಳಸುತ್ತಿದ್ದೆ. ಈಗ ನಿಷೇಧದಿಂದ ನನಗೇನೂ ನಷ್ಟ ವಾಗಿಲ್ಲ. ಸ್ವದೇಶಿ ಆ್ಯಪ್ ತಯಾರಿಕೆಯಲ್ಲಿ ಮುಂದಡಿ ಇಡುತ್ತಿದೆ.
– ಪಲ್ಲವಿ ಸಂಜೀವ ಘಟ್ಟೆನ್ನವರ, ಮಹಿಳಾ ವಿ.ವಿ. ವಿಜಯಪುರ
ಸ್ವದೇಶಿ ಆ್ಯಪ್ ಗಳು ಪರಿಚಯವಾಗಲಿ ಈ ಆ್ಯಪ್‌ನಲ್ಲಿ ವೀಡಿಯೋ ಮಾಡಲು ಹೋಗಿ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದು ಇದೆ. ರಾತ್ರೋರಾತ್ರಿ ಜನಪ್ರಿಯರಾಗಿದ್ದು ಇದೆ. ಆದರೆ ಈ ಆ್ಯಪ್ ನಮ್ಮ ದೇಶದ ಭದ್ರತೆ, ಸಾರ್ವಭೌಮತೆಗೆ ಕಂಟಕ ಎಂದು ನಿಷೇಧ ಮಾಡಿರುವುದು ಸೂಕ್ತ ಕ್ರಮವಾಗಿದೆ.
– ಕಾವ್ಯಾ ಎನ್., ತುಮಕೂರು ವಿಶ್ವವಿದ್ಯಾನಿಲಯ
ಚೀನಕ್ಕೆ ಪರೋಕ್ಷ ತಿರುಗೇಟು
ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಇಂದು ಇಡೀ ಭಾರತದ ಚೀನ ಆ್ಯಪ್ ಬಳಕೆದಾರರು ಆ್ಯಪ್ ಡಿಲೀಟ್ ಮಾಡುವ ಮೂಲಕ ದೇಶದ ಪರ ಇದೆ ಎಂಬುದು ಸಾಬೀತಾಗಿದೆ. ಸರಕಾರದ ಈ ನಿರ್ಧಾರ ಕೊರೊನಾ ವೈರಸ್‌ಗಿಂತಲೂ ದೊಡ್ಡ ವೈರಸ್‌ನ್ನು ಚೀನಕ್ಕೆ ಬಿಟ್ಟಂತಾಗಿದೆ.
-ಅಶ್ವಿತಾ ಗಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯ
ದೇಶೀಯ ಆ್ಯಪ್ ಬಳಸುವಂತಾಗಲಿ
ಕೆಲವು ಮನೋರಂಜನ ಆ್ಯಪ್‌ಗ್ಳು ಕಲಾವಿದರಿಗೆ ತಮ್ಮ ಕಲೆಯನ್ನು ಕಲೆಯನ್ನು ಪ್ರಸ್ತುತಪಡಿಸಲು ವೇದಿಕೆಯಾಗಿತ್ತು. ದೇಶಿಯ ಮನೋ ರಂಜನ ಆ್ಯಪ್‌ಗ್ಳು ಬಳಸುವಂತೆ ಒತ್ತು ಕೊಡುವುದು ಆವಶ್ಯಕ.
-ಮಲಿಕ್ ಎಲ್. ಜಮಾದಾರ, ರಾಣಿ ಚೆನ್ಮಮ್ಮ ವಿ.ವಿ. ಬೆಳಗಾವಿ
ದೇಶದ ದಿಟ್ಟತನದ ಪ್ರತೀಕ
ಜನಪ್ರಿಯಗೊಂಡ ಟಿಕ್‌ಟಾಕ್ ಆ್ಯಪ್ ಮನೋರಂಜನಾತ್ಮಕ ದೃಷ್ಟಿಯಲ್ಲಿ ಒಳ್ಳೆಯ ಕಾರ್ಯಕ್ಕೆ ಉಪಯೋಗವಾಗದೇ ಕಂಟಕವಾಗಿ ಪರಿಣಮಿಸಿತು ಎಂದರೆ ಸುಳ್ಳಲ್ಲ. ಗಡಿಯಲ್ಲಿ ಸಂಘರ್ಷದ ಬಳಿಕ ನಿಷೇಧ ಮಾಡಿದ್ದು ದೇಶದ ದಿಟ್ಟತನದ ಪ್ರತೀಕ.
– ಲತಾ ಜಿ. ನಾಯಕ್, ಎಂ.ಜಿ.ಎಂ. ಕಾಲೇಜು
ಚೀನಕ್ಕೆ ತಿರುಗೇಟು
ಚೀನ ನಿಯಂತ್ರಣದ 59 ಆ್ಯಪ್‌ಗ್ಳನ್ನು ಬಹಿಷ್ಕರಿಸಿದ್ದರಿಂದ ಸ್ವಾವಲಂಬನೆಯ ಸಾಧನೆಯಾಗಿದೆ. ಭಾರತ ಕೊರೊನಾ ನಿಯಂತ್ರ ಣಕ್ಕೆ ಆದ್ಯತೆ ನೀಡಿರುವಾಗ ಗಡಿಯಲ್ಲಿ ಉದ್ರೇಕ ವಾತಾವರಣ ನಿರ್ಮಾಣ ಮಾಡಲು ಹೊರಟ ಚೀನಕ್ಕೆ ನೀಡಿದ ತಿರುಗೇಟಾಗಿದೆ.
– ಅಭಿಷೇಕ್ ಅಡೂರು, ಕಾಸರಗೋಡು, ಎನ್.ಎಂ.ಸಿ. ಸುಳ್ಯ
ಸರಕಾರದ ದಿಟ್ಟ ಕ್ರಮ
ಆ್ಯಪ್‌ಗ್ಳನ್ನು ನಿಷೇಧಿಸಿರುವುದು ದಿಟ್ಟ ಕ್ರಮವಾಗಿದೆ. ಈ ಮೂಲಕ ಚೀನದ ಆರ್ಥಿಕತೆಗೆ ಭಾರತ ಪೆಟ್ಟು ನೀಡಿದಂತಾಗಿದೆ. ಮುಂದಿನ ದಿನ ಗಳಲ್ಲಿ ಸ್ವದೇಶಿ ಆ್ಯಪ್‌ಗ್ಳಿಗೆ ಬೆಂಬಲ ದೊರೆಯಲಿದ್ದು ದೇಶದಲ್ಲಿ ನೈಜ ಡಿಜಿಟಲ್ ಕ್ರಾಂತಿಗೆ ಇದು ಮುನ್ನುಡಿಯಾಗಲಿದೆ. ಅಲ್ಲದೇ ಸ್ವದೇಶಿ ಆರ್ಥಿಕ ಚಿಂತನೆಗೆ ಇದು ಪೂರಕ.
– ಶಬರೀಶ್ ಶಿರ್ಲಾಲ್
ಮೌನ ಪ್ರತೀಕಾರ ಸರಿಯಾದ ಕ್ರಮ
ಟಿಕ್‌ಟಾಕ್ ನಂತಹ ಮನೋರಂಜನ ಆ್ಯಪ್‌ಗ್ಳು ಯುವನಜರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿರುವುದು ನಿಜ. ದೇಶದ ಹಿತರಕ್ಷಣೆಗಾಗಿ ಸರಕಾರ ಆ್ಯಪ್ ನಿಷೇಧಗೊಳಿಸಿ ಆದೇಶ ಹೊರಡಿಸಿರುವುದು ಪ್ರತಿಯೊಬ್ಬರೂ ಪ್ರಶಂಸಿಸುವ ಕ್ರಮವಾಗಿದೆ.
-ಸುಶ್ಮಿತಾ ಎಂ. ಸಾಮಾನಿ, ಮಲಾರಬೀಡು
ಸ್ವದೇಶಿ ಮಂತ್ರದತ್ತ ಭಾರತ
ಚೀನಿ ಆ್ಯಪ್ ಗಳ ನಿಷೇಧದಿಂದ ಭಾರತಕ್ಕೆ ಯಾವುದೇ ತೊಂದರೆ ಇಲ್ಲ. ಚರಕದಿಂದಲೇ ಬ್ರಿಟಿಷರನ್ನು ಹೊಡೆದೋಡಿಸಿದ ಭಾರತೀಯರು ಈಗ ಸ್ವದೇಶಿ ಆ್ಯಪ್‌ಗ್ಳ ಮೂಲಕ ಚೀನವನ್ನು ಆರ್ಥಿಕ ಮಟ್ಟದಲ್ಲಿ ಹೊಡೆದೋಡಿಸುವ ಪ್ರತಿಜ್ಞೆ ಮಾಡಿದೆ.
– ಮಂಜುನಾಥ್ ಶೆಟ್ಟಿ , ಸಂತ ಫಿಲೋಮಿನಾ ಕಾಲೇಜು, ಮೈಸೂರು
ರಾಜತಾಂತ್ರಿಕ ಗೆಲುವಿಗೆ ಪೂರಕ
ಮನೋರಂಜನೆಯ ಆ್ಯಪ್‌ಗ್ಳನ್ನು ತ್ಯಜಿಸಲು ನಮಗೆ ಕ್ಲಿಷ್ಟ ಎನಿಸಬ ಹುದು. ಆದರೆ ಅನಿವಾರ್ಯವಾಗಿ ನಾವು ಚೀನಿ ಆ್ಯಪ್‌ಗ್ಳನ್ನು ತ್ಯಜಿಸುವುದು ಮಹತ್ವದ ಪಾತ್ರ ವಹಿಸುತ್ತದೆ. ರಾಜತಾಂತ್ರಿಕವಾಗಿ ಚೀನದೊಂದಿಗೆ ಗೆಲುವು ಸಾಧಿಸಬೇಕಾದರೆ ಈ ಆ್ಯಪ್‌ಗ್ಳ ನಿಷೇಧ ಸೂಕ್ತ ಕ್ರಮವಾಗಿದೆ.
– ಸ್ವಸ್ತಿಕ್ ಹಳೆಪೈರ್ದ ಚಿತ್ತೂರು, ಕುಂದಾಪುರ
ತಂತ್ರಜ್ಞಾನದ ಬೆಳವಣಿಗೆಗೆ ಪೂರಕ
ಮನೋರಂಜನಗೆ ಬಳಸಲಾಗುತ್ತಿದ್ದ ಈ ಆ್ಯಪ್‌ಗ್ಳಿಂದ ವೈಯಕ್ತಿಕವಾಗಿ ನಮಗೆ ನಷ್ಟವೇನಿಲ್ಲ. ಮುಂದೆ ಮನೋರಂಜನೆಗೆ ದೇಶಿಯ ಆ್ಯಪ್‌ಗ್ಳ ಬಳಕೆಗೆ ಮುಂದಾಗಿದ್ದೇವೆ. ಇದು ದೇಶಿಯ ಆರ್ಥಿಕತೆ, ತಂತ್ರಜ್ಞಾನದ ಬೆಳೆವಣಿಗೆಗೆ ಪೂರಕವಾಗಲಿದೆ.
-ಅಂಬರೀಶ್ ನಾಯ್ಕೋಡಿ, ಎಸ್.ಬಿ. ಕಾಲೇಜು ವಿಜಯಪುರ
ಆರ್ಥಿಕತೆಗೆ ದೊಡ್ಡ ಹೊಡೆತ
ಚೀನಿ ಆ್ಯಪ್‌ಗ್ಳು ಬ್ಯಾನ್ ಆದಂತೆ ಚೀನಿಯ ಉತ್ಪನ್ನಗಳನ್ನು ಬ್ಯಾನ್ ಮಾಡಬೇಕು. ಚೀನದ ಉತ್ಪನ್ನಗಳು ಭಾರತದಲ್ಲಿ ಬ್ಯಾನ್ ಆಗಬೇಕು. ಇದು ಚೀನದ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತವನ್ನು ನೀಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.
-ಸದಾಶಿವ ಬಿ.ಎನ್., ಎಂ.ಜಿ.ಎಂ. ಕಾಲೇಜು ಉಡುಪಿ
ಸ್ವದೇಶಿ ಉತ್ಪನ್ನಕ್ಕೆ ಭದ್ರ ಬುನಾದಿ
ಚೀನದ ಆ್ಯಪ್‌ಗ್ಳಿಂದ ಕೆಲವು ಪ್ರಯೋಜನಗಳು ಆಗುತ್ತಿದ್ದವು. ಆದರೆ ಇತ್ತೀಚಿನ ಕ್ರೈಂ ಚರ್ಚೆಗಳನ್ನು ನೋಡುವಾಗ ಪ್ರೈವೇಟ್ ಅಕೌಂಟ್ ಇದ್ದರೂ ಭಯ ಇದ್ದೇ ಇತ್ತು. ಆದರೆ ಈಗ ಸದ್ಯ ಆ್ಯಪ್ ಬ್ಯಾನ್ ಆಗಿದ್ದು ಸ್ವದೇಶಿ, ಸುಭದ್ರ ಆ್ಯಪ್‌ಗ್ಳ ಬಳಕೆಗೆ ಬುನಾದಿಯಾಗಿದೆ.
-ಶುಭಾ ಹತ್ತಳ್ಳಿ, ಕೆ.ಸಿ.ಪಿ.ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ
ಸರಕಾರದ ಒಳ್ಳೆಯ ನಡೆ
ಚೀನಕ್ಕೆ ಭಾರತ ಬಿಗ್ ಟಕ್ಕರ್ ನೀಡಿದೆ. ಇದು ನಮ್ಮ ದೇಶದ ಸಾರ್ವಭೌಮತೆ, ಭದ್ರತೆ, ಸುರಕ್ಷತೆ ದೃಷ್ಟಿಯಿಂದ ಒಳ್ಳೆಯ ನಡೆ ಯಾಗಿದ್ದು, ಇನ್ನಿತರ ಚೀನ ಉತ್ಪನ್ನಗಳನ್ನು ಸರಕಾರ ಬ್ಯಾನ್ ಮಾಡುವ ಮೂಲಕ ಸ್ವದೇಶಿ ಉತ್ಪನ್ನಗಳ ಬಳಕೆಗೆ ದಾರಿ ಮಾಡಿಕೊಟ್ಟಿದೆ. -ವಂದನಾ ಮೋಹನ್ ಗೌಡ, ಎಸ್‌ಡಿಎಂ ಎಂಜಿನಿಯರಿಂಗ್, ಉಜಿರೆ
ದುರುಪಯೋಗ ನಿಷೇಧಕ್ಕೆ ಕಾರಣ
ಅಂತಾರಾಷ್ಟ್ರೀಯ ಕಾನೂನುಗಳು, ಸ್ಥಳೀಯ ಕಾಯ್ದೆಗಳಿಗೆ ಮತ್ತು ನಿಯಂತ್ರಣಗಳಿಗೆ ಚೀನ ಬದ್ಧವಾಗಿರಬೇಕೇ ಹೊರತು ದೇಶದ ಏಕತೆಗೆ ಭಂಗ ತರುವ ಕೆಲಸ ಮಾಡಬಾರದು, ಇದರ ದುರುಪಯೋಗದ ಪರಿಣಾಮವೇ ಚೀನ ಆ್ಯಪ್ ಗಳ ನಿಷೇಧವಾಗಲು ಕಾರಣ.
-ಮಂಜುಳಾ ಎನ್. ಶಿಕಾರಿಪುರ
ಒಳ್ಳೆಯ ಬೆಳವಣಿಗೆ
ಗಡಿಯಲ್ಲಿ ನಮ್ಮ ಸೈನಿಕರು ತಮ್ಮ ಪ್ರಾಣ ತ್ಯಾಗಕ್ಕಿಂತ ನಾವು ಈ ಆ್ಯಪ್ ಗಳನ್ನು ಬ್ಯಾನ್ ಮಾಡುವುದು ದೊಡ್ಡ ವಿಷಯವೇನಲ್ಲ. ಈಗ ನಮ್ಮ ಅಪ್ಪಟ ದೇಶೀಯ ಆ್ಯಪ್‌ಗ್ಳನ್ನು ಬಳಸುವ ಮೂಲಕ ಸಮಯವನ್ನು ಕಳೆಯುತ್ತಿದ್ದೇವೆ.
-ರಾಧಾ ಎ.ಎಲ್., ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ತುಮಕೂರು
ಉತ್ತಮ ನಿರ್ಧಾರ
ಚೀನದ ಆ್ಯಪ್ ನಿಷೇಧವಾಗಿದ್ದು ಖುಷಿಯಾಗಿದೆ. ಸ್ವಾಭಿಮಾನಿ ಭಾರತದ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂಬ ಹೆಮ್ಮೆ ನಮಗಿದೆ. ಈ ಮೂಲಕ ಆ್ಯಪ್ ಬಳಸುವಾಗ ಅದರ ತಯಾರಿಕೆ ಯಾವ ದೇಶದ್ದು ಎನ್ನುವತ್ತ ಚಿತ್ತಹರಿದಿದೆ.
-ಸುರಭಿ ಶರ್ಮ ಎಸ್. ಮಾನಸಗಂಗೋತ್ರಿ ಮೈಸೂರು
ಚೀನಕ್ಕೆ ತಕ್ಕ ಶಾಸ್ತಿ
ದೇಶದ ವಿಚಾರ ಬಂದಾಗ ಆ್ಯಪ್‌ಗ್ಳನ್ನು ನಮ್ಮ ಮೊಬೈಲ್‌ನಿಂದ ತೆಗೆದು ಹಾಕುವುದು ದೊಡ್ಡ ಮಾತಲ್ಲ. ಅದಕ್ಕೆ ಪರ್ಯಾ ಯವಾಗಿರುವ ನಮ್ಮ ದೇಶದ ಆ್ಯಪ್‌ಗ್ಳನ್ನು ಬಳಸುವುದರಿಂದ ನಮ್ಮ ದೇಶಕ್ಕೆ ನಮ್ಮ ಜನಕ್ಕೆ ಹುರಿದುಂಬಿಸುವ ಕೆಲಸ ಮಾಡಿದಂತಾಗುತ್ತದೆ.
ಭರತ ಕಲಗೌಡ್ರ, ಹುಬ್ಬಳ್ಳಿ
ದೇಶದ ನಿರ್ಧಾರ ಖುಷಿ ನೀಡಿದೆ
ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಗಿರುವ ಟಿಕ್‌ಟಾಕ್ ಎಂಬ ಒಂದೇ ಚೀನಿ ಅಡಿಪಾಯದ ಮೇಲೆ ಸೀಮಿತವಾಗಿರಕೂಡದು. ಪ್ರತಿಭೆ ಚೀನೀ ಆ್ಯಪ್‌ನ ಮೂಲಕ ಚಿಗುರಿದರೂ, ಇತರ ವೇದಿಕೆಗಳ ಮೂಲಕ ಹೆಮ್ಮರವಾಗಿ ಬೆಳೆಯಲಿ ಎಂಬುದು ನನ್ನ ಮನದ ಇಚ್ಛೆ.
-ವೃಂದಾ, ಭಂಡಾರ್ಕಾರ್, ಎಸ್‌ಡಿಎಂ ಕಾನೂನು ಕಾಲೇಜು, ಮಂಗಳೂರು
ನಾವು ಕಳೆದುಕೊಂಡಿದ್ದು ಏನೂ ಇಲ್ಲ
ದೇಶದ ಸುಭದ್ರತೆ ವಿಚಾರ ಬಂದರೆ ನಾವುಗಳು ದೇಶದ ಪರವಾಗಿ ನಿಲ್ಲಲು ಸದಾ ಸಿದ್ದ. ನಾವೂ ಏನನ್ನೂ ಕಳೆದುಕೊಂಡಿಲ್ಲ. ಮನರಂಜ ನೆಗಾಗಿ ಬಳಸುತ್ತಿದ್ದೆವು. ಆದರೆ ದೇಶದ ಹಿತಕ್ಕೆ ಧಕ್ಕೆ ಉಂಟಾಗುವ ಕಾರಣ ಚೀನಿ ಆ್ಯಪ್‌ಗ್ಳಿಗೆ ನಿಷೇಧ ಹೇರಿರುವುದು ಸ್ವಾಗತಾರ್ಹ.
-ರಂಜನ್ ಪಿ.ಎಸ್. ಸಂತ ಫಿಲೋಮಿನಾ ಕಾಲೇಜು, ಮೈಸೂರು
ಹೆಮ್ಮೆಯ ನಿರ್ಧಾರ
ಚೀನಿ ಆ್ಯಪ್ ಗಳ ಮೇಲೆ ನಿರ್ಬಂಧ ವಿಧಿಸಿರುವುದು ತುಂಬಾ ಸಂತಸದ ವಿಚಾರ. ಈ ನಿರ್ಧಾರದ ಬಗ್ಗೆ ಹೆಮ್ಮೆಯಿದೆ. ಚೀನ ಈ ಆ್ಯಪ್ ಳಿಂದ ಭಾರೀ ಲಾಭ ಪಡೆದು ಕೊಂಡಿದೆ. ಇದೀಗ ಜನರಿಗೂ ಇದರ ಅರಿವಾಗಿದೆ. ಸ್ವದೇಶಿ ಆ್ಯಪ್‌ಗ್ಳನ್ನು ತಯಾರಿಸುವುದರಿಂದ ದೇಶ ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು.
-ಸುಸ್ಮಿತಾ ಕೆ. ಮಹಿಳಾ ಕಾಲೇಜು, ಪುತ್ತೂರು
ಸ್ವದೇಶಿ ವ್ಯವಹಾರಕ್ಕೆ ಮುನ್ನುಡಿ
ಟಿಕ್‌ಟಾಕ್ ಕೆಲವರ ಪ್ರತಿಭೆಗೆ ವೇದಿಕೆಯಾಗಿತ್ತು ಆದರೆ 59 ಆ್ಯಪ್‌ಗ್ಳನ್ನು ನಿಷೇಧಿಸಿರುವುದು ಶ್ಲಾಘನೀಯ. ನಾವೆಲ್ಲರೂ ಪಕ್ಷ ಭೇದ ಮರೆತು ಇನ್ನಾದರೂ ನಾವು ಸ್ವದೇಶಿ ವಸ್ತುಗಳನ್ನು ಬಳಸಿ ಚೀನಕ್ಕೆ ತಕ್ಕ ಉತ್ತರ ನೀಡಬೇಕು ಮತ್ತು ನಮ್ಮ ಜವಾಬ್ದಾರಿ ನಿಭಾಯಿಸಬೇಕಿದೆ.
-ಚೈತ್ರಾ ಕುಲಾಲ್, ವಿವೇಕಾನಂದ ಕಾಲೇಜು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.