UV Fusion: ಮಳೆಯಲ್ಲಿ ಕುಂದಾದ್ರಿ ಮಡಿಲಲ್ಲಿ


Team Udayavani, Jan 19, 2024, 7:15 AM IST

18-

ಅದು 2022ರ ಜೂನ್‌ ತಿಂಗಳ ಕೊನೆಯ ವಾರ. ಕಾಲೇಜಿನ ಎನ್‌.ಎಸ್‌.ಎಸ್‌. ಘಟಕದ ವತಿಯಿಂದ ವಿದ್ಯಾರ್ಥಿಗಳಾದ ಪ್ರತೀಕ್‌, ದೀಪಕ್‌, ಅಕ್ಷಯ್, ಆಶೀಶ್‌ ಹಾಗೂ ನನ್ನನ್ನು ಉಡುಪಿಯ ಅಂಬಲಪಾಡಿಯಲ್ಲಿ ನಡೆಯುತ್ತಿದ್ದ ವಿಪತ್ತು ನಿರ್ವಹಣಾ ಶಿಬಿರಕ್ಕೆ ಕಳುಹಿಸಿದ್ದರು. ‌

ಅದು ಹನ್ನೆರಡು ದಿನಗಳ ಶಿಬಿರ. ಅಲ್ಲಿ ನಮಗಿದ್ದ ಕೆಲಸ ಅವರು ಹೇಳಿದ್ದನ್ನು ಕಿವಿಯರಳಿಸಿ ಕೇಳುವುದು ಮಾತ್ರ. ಶಿಬಿರ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾದರೆ ಮುಗಿಯುತ್ತಿದ್ದದ್ದು ಸಂಜೆ 4ರ ಹೊತ್ತಿಗೆ. ಹೆಚ್ಚು ಕಡಿಮೆ ಕಾಲೇಜಿನ ಸಮಯವೇ. ಕಾಲೇಜಿನಲ್ಲಿ ಕೂರಲು ಸಿದ್ಧವಿರದ ಮಾನಸ್ಸುಗಳು ಕೆಲವೊಮ್ಮೆ ಇಲ್ಲಿ ಏಕಾಗ್ರತೆಯಿಂದ ಹೇಳಿದ್ದನ್ನು ಕೇಳುತಿದ್ದವು. ಏಕೆಂದರೆ ಅಲ್ಲಿ ಸಿಗುತ್ತಿದ್ದ ಮಾಹಿತಿ ಅಂತಹದ್ದಾಗಿತ್ತು.

ಆ ಹನ್ನೆರಡು ದಿನದಲ್ಲಿ ಅದು 4ನೇ ದಿನ, ಪ್ರತೀ ದಿನ ಕಾರ್ಯಕ್ರಮದ ನಡುವೆ 11 ಗಂಟೆಗೆ ಚಹಾ ವಿರಾಮ ಎಂದು 10 ನಿಮಿಷಗಳ ಬಿಡುವಿ ರುತ್ತಿತ್ತು. ಅಂದು ಕೂಡ ವಿರಾಮ ಕೊಟ್ಟಿದ್ದರು. ಎಂದಿನಂತೆ ನಾವು ನೇರವಾಗಿ ಚಹಾಗಾಗಿ ಸರತಿ ಸಾಲಿನಲ್ಲಿ ನಿಂತೆವು. ಆದರೆ  ನಮ್ಮಲೊಬ್ಬ ಬಂದಿರಲಿಲ್ಲ. ನೇರವಾಗಿ ಆತ ಉಳಿದುಕೊಂಡಿದ್ದ ಕೊಣೆ ಕಡೆಗೆ ಜಾರಿದೆವು. ಹೋಗುತಿದ್ದಂತೆ ಅಲ್ಲಿದ್ದ ನಾಲ್ವರಲ್ಲಿ ಒಬ್ಬ  ತಿರುಗುವುದಕ್ಕೆ  ಹೋಗೋಣ ಎಂದ.

ಆ ಧ್ವನಿ ಮಾತ್ರ ಯಾರದ್ದು ಎಂಬುದು ಇಂದಿಗೂ ತಿಳಿದಿಲ್ಲ. ಆದರೆ ಅದಕ್ಕೆ ಪ್ರತಿಧ್ವನಿ ನನ್ನದೆ  “ಆಗುಂಬೆ’ ಎಂದು, ಮತ್ತೂಬ್ಬ “ನಾನು ರೆಡಿ’ ಎಂದು, ಮೂವರು ಹೊರಟ ಮೇಲೆ ನಾಲ್ಕನೆಯವನನ್ನು ಒತ್ತಾಯಿಸುವ ಆವಶ್ಯಕತೆ ಇಲ್ಲವೆಂದು ನಮಗೆ ಆದಾಗಲೇ ಅರಿವಾಗಿತ್ತು. ಅಂತೂ ಇಂತೂ ಒಂದೇ ಒಂದು ನಿಮಿಷದ ಯೋಜನೆ ನಮ್ಮನ್ನು ಮೂರು  ನಿಮಿಷದೊಳಗೆ ಬಟ್ಟೆ ಬದಲಾಯಿಸಿ ಬಿಡಾರ ಬಿಟ್ಟ ಜಾಗದಿಂದ ಆಗುಂಬೆ ಕಡೆಗೆ ಗಾಡಿ ತಿರುಗಿಸುವ ಹಾಗೆ ಮಾಡಿತ್ತು.

ಮಳೆಗಾಲ ಆಗಿದ್ದರಿಂದ ಯಾವ ಸಂದರ್ಭದಲ್ಲಿ ಮಳೆ ಸುರಿಯಬಹುದೆಂದು ಹೇಳಲು ಸಾಧ್ಯವಿಲ್ಲ. ಆದರೆ ಅಂದು ಮಾತ್ರ ಉಡುಪಿಯ ಸುತ್ತಮುತ್ತ ಮುಂಜಾನೆಯಿಂದಲೂ ಸೂರ್ಯನ ಕಿರಣಗಳು ಪಿಸುಗುಡುತ್ತಿದ್ದವು. ಅದೇ ಧೈರ್ಯದ ಮೇಲೆ ಪ್ರಯಾಣ ಆರಂಭಿಸಿದೆವು. ನಾಮ್ಮ ನಾಲ್ವರ ತರಗತಿಗಳು ಬೇರೆ ಬೇರೆಯಾಗಿದ್ದರೂ ಗುಣ ಮಾತ್ರ ಒಂದೇ.

ಇದೇ ನಮ್ಮ ತಲೆಹರಟೆಗೆ ಮತ್ತೂಂದು ದಾರಿಯಾಗಿತ್ತು. ನಾವೆಷ್ಟು ಕಡಿಮೆ ಸಮಯದಲ್ಲಿ ಯೋಜನೆಯೊಂದನ್ನು ಹಾಕಿ ಹೊರಟಿದ್ದೆವೊ ಅದೇ ರೀತಿ ಮಳೆಯೂ ನಮ್ಮನ್ನು ಚಳಿಯಲ್ಲಿ ನಡುಗುವಂತೆ ಮಾಡಿತ್ತು. ಹೆಬ್ರಿ ತಲುಪುವ ಮೊದಲೇ ಮಳೆಗೆ ನೆನೆದಾಗಿತ್ತು. ಆ ಹೊತ್ತಿಗೆ ಬಿಸಿಲು ಬಂದರೆ ಅದೇ ಸ್ವರ್ಗದಂತೆ ಕಾಣುವ ಪರಿಸ್ಥಿತಿ ನಮ್ಮದಾಗಿತ್ತು, ಹಾಗೆ ಕಂಡದ್ದು ನಮಗೆ ಹೆಬ್ರಿ. ಅಲ್ಲಿಂದ ಖಾಲಿ ಹೊಟ್ಟೆಯಲ್ಲಿ ಮುಂದೆ ಹೋಗಲು ಹೆಬ್ರಿಯ ಡೋಲ್ಫಿನ್‌ ಹೋಟೆಲ್‌ ಬಿಡಲೇ ಇಲ್ಲ.

ಊಟ ಮುಗಿಸಿ, ಅಲ್ಲಿದ್ದ ಫ್ಯಾನ್‌ ಗಾಳಿಗೆ ಮೈ ಒಡ್ಡಿ ಬಟ್ಟೆ ಒಣಗಿಸಿಕೊಂಡು ಮತ್ತೆ ಮುಂದೆ ಹೊರಟೆವು. ಅದೆಷ್ಟು ದಿನದ ಮಳೆ ಬಾಕಿ ಇತ್ತೇನೋ ಗೊತ್ತಿಲ್ಲ, ನಾವು ಆಗುಂಬೆಯ ನಾಲ್ಕನೇ ತಿರುವು ಏರಿದ್ದೇ ತಡ ಸರ ಸರನೆ ಮಳೆ ಸುರಿಯಲಾರಂಭಿಸಿತು. ಪ್ರತೀ ತಿರುವು ಏರಿದ ಮೇಲೆ  ಈಗ ಮಳೆ ಕಡಿಮೆಯಾಗಬಹುದೇನೊ  ಎಂದಂದುಕೊಳ್ಳುತಿದ್ದೆವು, ಆದರೆ ಪುನಃ ಮಳೆ ಜೋರಾಗುತ್ತಿತ್ತೇ ಹೊರತು ಕಡಿಮೆಯಾಗಲಿಲ್ಲ. ಮೇಲಿನ ಕೊನೆಯ ಎರಡು ತಿರುವುಗಳಲ್ಲಿ ಏನು ಕಾಣದಂತಾಗಿತ್ತು. ಘಾಟಿಯ ಮೇಲೆ ಬಂದದ್ದೇ ತಡ, ಗಾಡಿಯನ್ನು ಬದಿಗೆ ನಿಲ್ಲಿಸಿ ಅಲ್ಲಿದ್ದ ಒಂದು ಶೀಟ್‌ ಹಾಕಿದ ಸಣ್ಣ ಲಗೇಜ್‌  ಕೊಠಡಿಯಂತಿದ್ದ ಗೂಡಲ್ಲಿ ನಿಂತೆವು.

ಎಷ್ಟು ಹೊತ್ತು ಕಾದರೂ ಮಳೆ ನಿಲ್ಲುವಂತೆ ಕಾಣಲಿಲ್ಲ. ಅಲ್ಲಿಯವರೆಗೆ ಆಗುಂಬೆ ಎನ್ನುತ್ತಿದ್ದ ಮನಸ್ಸು, ಮಳೆಯ ಹಠದೆದುರಿಗೆ ಕುಂದಾದ್ರಿ ಕಡೆಗೆ ಹೋಗಲೇಬೇಕು ಎಂದು ಮಳೆಗೆ ಮೈ ಒಡ್ಡಿ ಮೊಬೈಲ್‌ ತೋರಿಸುತಿದ್ದ ದಾರಿಯ ಮೂಲಕ ಮುಂದೆ ಸಾಗಿದೆವು. ಹೋಗುತ್ತಿರುವ ರಸ್ತೆಯ ಎರಡು ಭಾಗದಲ್ಲೂ ಕಾಡು ಆವರಿಸಿಕೊಂಡಿದ್ದರಿಂದ ಆಗೊಮ್ಮೆ ಈಗೊಮ್ಮೆ ಭಯವಾಗುತ್ತಿತ್ತು. ಕುಂದಾದ್ರಿ ಇನ್ನೇನು ಬಂದೇ ಬಿಟ್ಟಿತು ಎಂದುಕೊಂಡರೆ ಅದರ  ಹಿಂದಿದ್ದ ತಿರುವುಗಳು ಮತ್ತೂಮ್ಮೆ ಆಗುಂಬೆಯನ್ನು ಕಣ್ಣೆದುರಿಗೆ ತಂದಿತ್ತು.

ಆ ಕಾಡಿನುದ್ದಕ್ಕೂ ನಮ್ಮ ಎರಡು ಗಾಡಿಗಳು ಬಿಟ್ಟರೆ ಬೇರೆ ಯಾವ ನರ ಮಾನವನೂ ಕಾಣಲೇ ಇಲ್ಲ. ಅಂತೂ ಕೊನೆಗೆ ಕುಂದಾದ್ರಿ ತಲುಪಿದೆವು. ಆದರೆ ಅಲ್ಲೊಂದು ವಿಸ್ಮಯ ನಮ್ಮನ್ನು ಬೆರಗು ಗೊಳಿಸಲು ಕಾತುರದಿಂದ ಕಾದು ಕುಳಿದಿತ್ತು. ಕುಂದಾದ್ರಿ ಸೇರಿದ ಕೂಡಲೇ ಮತ್ತೆ ಮಳೆ ಜೋರಾಗಿತ್ತು. ಆದರೂ ಅದನ್ನು ಲೆಕ್ಕಿಸದೆ ಮಳೆಯಲ್ಲೇ ನೆನೆದೆವು, ಮೊದಲು ಮೊದಲು ಏನು ಗೊತ್ತಾಗಲಿಲ್ಲ, ಆದರೆ ಅನಂತರ ಎಲ್ಲವು ತಿಳಿಯಿತು. ಅಲ್ಲಿ ಒಮ್ಮೆ ಜೋರಾಗಿ ಗಾಳಿ ಬೀಸಿದರೆ ಅದರ ಹಿಂದಿನಿಂದಲೇ ಮಳೆ ಸುರಿಯುತಿತ್ತು, ಇದು ಒಮ್ಮೆಗೆ ನಮಗೆ ಗಾಬರಿಯನ್ನುಂಟು ಮಾಡಿದ್ದರೂ ಅನಂತರ  ಒಂದು ರೀತಿಯಲ್ಲಿ ಖುಷಿ ಕೊಡುತಿತ್ತು.

ಬಹುಷಃ  ನನ್ನ ಬದುಕಿನಲ್ಲಿ ಅಂದು ಮಳೆಯಲ್ಲಿ ನೆನೆದಷ್ಟು ಹಿಂದೆಂದೂ ನೆನೆದಿರಲಿಲ್ಲ. ಎಲ್ಲೋ ಇದ್ದು ಏನೋ ಮಾಡುತಿದ್ದವರು ಇನ್ನೆಲ್ಲಿಗೋ ಹೋಗಿದ್ದೆವು. ನಿರೀಕ್ಷೆಗೂ ಮೀರಿ ಕುಂದಾದ್ರಿ ನಮ್ಮನ್ನು ಸ್ವಾಗತಿಸಿತ್ತು. ಪ್ರತಿಯೊಂದು ಪ್ರವಾಸ ಒಂದೊಂದು ರೀತಿಯ ಅನುಭವ ಕೊಡುತ್ತದೆ, ಆದರೆ ಇದು ಮಾತ್ರ ಎಂದಿಗೂ ಮಾಸಿ ಹೋಗದಂತಹ ಅನುಭವಗಳನ್ನು ಕಟ್ಟಿಕೊಟ್ಟಿದೆ.

ರಾಹುಲ್‌ ಆರ್‌. ಸುವರ್ಣ

ಆಳ್ವಾಸ್‌ ಕಾಲೇಜು, ಮೂಡಬಿದಿರೆ

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.