ಸಮಾನತೆ, ಸಮೃದ್ಧಿಯ ರೂಪ ಓಣಂ
Team Udayavani, Aug 31, 2020, 2:51 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ. ನಿಸರ್ಗದೊಂದಿಗೆ ನಂಟು ನಮ್ಮದು ಅದ್ಭುತವೇ ಸರಿ.
ಪ್ರಕೃತಿಯನ್ನು ಆರಾಧಿಸುತ್ತಾ ನಾವು ಹಲವು ಹಬ್ಬಗಳನ್ನು ಆಚರಿಸುತ್ತೇವೆ.
ಪ್ರತಿ ಋತುಗಳಿಗೆ ಅದರದ್ದೇ ಆಗಿರುವ ಮಹತ್ವ ಇದೆ.
ಪರಶುರಾಮನ ಸೃಷ್ಟಿಯ ಭೂಮಿಯಲ್ಲಿ ಆಚರಿಸುವ ಒಂದು ವಿಶೇಷವಾದ ಹಬ್ಬವಿದು, ಅದುವೇ ಓಣಂ.
ಕೇರಳ ನಾಡಿನ ಸುಪ್ರಸಿದ್ಧನಾದ ರಾಜ ಮಹಾಬಲಿಯು ತನ್ನ ಪ್ರಜೆಗಳನ್ನು ಕಾಣಲು ಬರುವನೆಂಬ ನಂಬಿಕೆ. ಇದು ಅತಮ್, ಚಿತ್ರ, ಚೋದಿ, ವಿಶಾಖಂ, ಅನೀಷಮ್, ತ್ರಿಕಿಟಾ, ಮೂಲಂ ಪೂರಾಡಂ, ಉತ್ರಾಡಂ ಹಾಗೂ ತಿರುವೋಣಂ ಎಂದು ಹತ್ತು ದಿನಗಳ ಸಂಭ್ರಮ.
ತಿರುವೋಣಂ ಅತಿ ವಿಶೇಷವಾಗಿ ಆಚರಿಸುತ್ತಾರೆ. ಮಹಾರಾಜನ ಆಗಮನವನ್ನು ಸ್ವಾಗತಿಸಲು ಮನೆಯಂಗಳದಲ್ಲಿ ಪೂಕಳಂ ಸಜ್ಜಾಗುತ್ತದೆ. ಮಹಾರಾಜನು ಅತಿಶ್ರೇಷ್ಟನು, ದಯೆ ಹಾಗೂ ಕರುಣೆಯಿಂದ ಕೂಡಿದವನಾಗಿದ್ದು, ಪ್ರಜೆಗಳ ಸುಖ ಹಾಗೂ ಸಂತೋಷಕ್ಕಾಗಿ ಸೇವೆ ಮಾಡುತ್ತಿದ್ದನು. ಮಹಾಬಲಿಯ ಆಳ್ವಿಕೆಯ ಕಾಲಘಟ್ಟದಲ್ಲಿ ತನ್ನ ಸಾಮ್ರಾಜ್ಯದಲ್ಲಿ ಕಳ್ಳರು, ಕೊಲೆಗಾರರು ಇರಲಿಲ್ಲ, ಎಲ್ಲರೂ ಸೌಹಾರ್ದದಿಂದ ಬಾಳುತ್ತಿದ್ದರು. ಸಮಾನತೆ ಹಾಗೂ ಸಹಬಾಳ್ವೆಯೂ ನೆಲೆಯಾಗಿತ್ತು ಎನ್ನುತ್ತಾರೆ ಹಿರಿಯರು.
ರಾಜನನ್ನೇ ದೇವರಿಗೆ ಸಮಾನವಾಗಿ ಪೂಜಿಸುತ್ತಿದ್ದ ಪ್ರಜೆಗಳು, ಇದರಿಂದಾಗಿ ದೇವತೆಗಳು ಅದೆಲ್ಲಿ ತಮ್ಮ ಅಧಿಕಾರವು ಮಹಾಬಲಿಯ ಕೈಸೇರುತ್ತದೆ ಎಂದು ಭಯಭೀತರಾಗಿ ಮಹಾವಿಷ್ಣುವಿನ ಮೊರೆ ಹೋದರು. ನಾರಾಯಣನು ಮಹಾಬಲಿಯ ಕೆಲಸ ಕಾರ್ಯಗಳನ್ನು ಅರಿತವನೇ ತಾನೇ ಸ್ವತಃ ವಾಮನ ರೂಪವನ್ನು ತಾಳಿ ಮಹಾಬಲಿನ್ನು ಪರೀಕ್ಷಿಸಲು ಮುಂದಾಗುತ್ತಾನೆ. ಒಂದು ತುಂಡು ಭೂಮಿಯನ್ನು ಕೇಳಲು ಬರುವ ಒರ್ವ ಕುಬ್ಜ ಬ್ರಾಹ್ಮಣನ ರೂಪದಲ್ಲಿ ಹರಿಯೂ ಪ್ರತ್ಯಕ್ಷವಾಗುವುದಲ್ಲೇ ತನ್ನ ಮೂರು ಪಾದಗಳಿಗೆ ಬೇಕಾದಷ್ಟು ಜಾಗವನ್ನು ನೀಡುವಂತೆ ವಿನಂತಿಸಿಕೊಳ್ಳುತ್ತಾನೆ.
ಮಹಾದಾನಿಯಾಗಿದ್ದ ಮಹಾಬಲಿಯು ಅದಕ್ಕೆ ಸಮ್ಮತಿಯನ್ನು ನೀಡುತ್ತಾನೆ. ಮೊದಲ ಹೆಜ್ಜೆಯಲ್ಲಿ ಭೂಮಿಯನ್ನು, ಎರಡನೆಯ ಹೆಜ್ಜೆಯಲ್ಲಿ ಆಕಾಶವನ್ನು ತನ್ನದಾಗಿಸಿಕೊಳ್ಳುತ್ತಾನೆ ವಾಮನ. ಮೂರನೆಯ ಹೆಜ್ಜೆ ಎಲ್ಲಿಡಲು ಎಂದು ಪ್ರಶ್ನಿಸಿದಾಗ ತನ್ನ ಶಿರವನ್ನು ತೋರಿಸಿದಾಗ ವಾಮನನು ಮಹಾಬಲಿಯನ್ನು ಪಾತಾಳಕ್ಕೆ ನೂಕುತ್ತಾನೆ.ಪದ್ಮನಾಭನ ಪರಮ ಭಕ್ತನಾದ ಮಹಾಬಲಿಯೂ ತನ್ನ ಪ್ರಜೆಗಳನ್ನು ಕಾಣಲು ಭುವಿಗೆ ವರ್ಷದಲ್ಲಿ ಒಂದು ದಿನ ಅವಕಾಶವನ್ನು ನೀಡಬೇಕೆಂಬ ವರವನ್ನು ಕೇಳುತ್ತಾನೆ. ಅದಕ್ಕೆ ಅಸ್ತು ಎಂದ ಮಹಾವಿಷ್ಣು. ಇದರಿಂದಲೇ ಪ್ರತಿ ವರ್ಷ ಓಣಂ ಹಬ್ಬದ ದಿನ ಮಹಾಬಲಿಯೂ ಪ್ರಜೆಗಳನ್ನು ಕಾಣಲು ತನ್ನ ಸಾಮ್ರಜ್ಯಕ್ಕೆ ಬರುತ್ತಾನೆ ಎಂದು ವಿಜೃಂಭಣೆಯಿಂದ ಆಚರಿಸುತ್ತಾರೆ.
ವೆಳ್ಳಂಕಳಿ, ಓಣಪ್ರೋಟಂ, ಪುಲಿಕಳಿ, ಕೈಕೊಟ್ಟಿಕಳಿ ಸೇರಿದಂತೆ ಸಂಪ್ರದಾಯಿಕವಾದ “ಸದ್ಯ” ಯೊಂದಿಗಿನ ಸಂಭ್ರಮ. ಮನೆಯವರಿಗೆಲ್ಲಾ ಹೊಸ ಬಟ್ಟೆ, ಹಾಗೂ ಎಲ್ಲರೂ ಜತೆಯಲ್ಲಿ ಸೇರಿ ಮಾಡುವ ಬಾಳೆಲೆ ಊಟ. ಚಮ್ಮಂದಿ, ರಸಂ, ಪಾಯಸಂ, ಪಪ್ಪಡಂ, ಪುಳಿಶ್ಶೆರಿ ಸೇರಿದಂತೆ ಇಪ್ಪಾತ್ತಾರಕ್ಕೂ ಹೆಚ್ಚಿನ ಬಗೆಯ ತಿಂಡಿ ತಿನಿಸುಗಳನ್ನು ತಯಾರಿ ಕುಟುಂಬ ಸಮೇತವಾಗಿ ಸವಿಯುವುದೇ ಹಬ್ಬದ ವಿಶೇಷತೆ.
ಆದರೆ ಕಳೆದ ಎರಡು ವರ್ಷವೂ ಅತಿವೃಷ್ಟಿಯಿಂದಾಗಿ ಉಂಟಾಗ ಜಲಪ್ರಳಯದಿಂದಾಗಿ ಈ ಹಬ್ಬದ ಸಂಭ್ರಮವನ್ನು ಮರೆತು ಪರಸ್ಪರ ಸಹಾಯ ಹಸ್ತ ಚಾಚಿದರು. ಈ ವರುಷ ಕೋವಿಡ್ ಸೋಂಕಿನಿಂದ ಈ ಹಬ್ಬವು ತನ್ನ ಮೆರುಗನ್ನು ಮಂದಗೊಳಿಸಿದರೂ, ಜನರು ಮನೆಗಳಲ್ಲೇ ಇದ್ದುಕೊಂಡು ಮಹಾಬಲಿಯನ್ನು ಸ್ವಾಗತಿಸುತ್ತಿದ್ದಾರೆ.
ಯಾವುದೇ ಹೆಚ್ಚಿನ ಆಡಂಬರಗಳಿಲ್ಲದಿದ್ದರೂ ಮನೆಯಲ್ಲೇ ಆಗಿರುವ ಜೈವಿಕ ತರಕಾರಿಗಳೂ ಈ ಬಾರಿ ಹಬ್ಬಕ್ಕೆ ಸಾಥ್ ನೀಡಿದೆ ಎನ್ನುವುದು ಶ್ಲಾಘನೀಯ. ಪ್ರಕೃತಿಯನ್ನು ಆರಾಧಿಸಲು ಅದೆಲ್ಲೋ ಮರೆತು ಹೋಗಿದ್ದ ಜನರಿಗೆ ಈ ಹಬ್ಬ ಮತ್ತೊಂದು ಅವಕಾಶವನ್ನು ನೀಡುತ್ತಿದೆ.
ಎಲ್ಲರಿಗೂ ಸಮಾನತೆ ಹಾಗೂ ಸಮೃದ್ಧಿ ತುಂಬಿದ ಓಣಂ ಹಬ್ಬ ಹಾರ್ದಿಕ ಶುಭಾಶಯಗಳು.
ಅನಘಾ ಶಿವರಾಮ್, ವಿವೇಕಾನಂದ ಕಾಲೇಜು ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.