ಒಂದು ದಿನ ನಾವೂ ಕಸವಾಗುತ್ತೇವೆ


Team Udayavani, Mar 2, 2021, 3:10 PM IST

Garbage

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಅದು ತಿಂಗಳ 5ನೇ ರವಿವಾರ. ಯೋಜನೆಯಂತೆ, ಏನಾದರೂ ಸೇವಾ ಕಾರ್ಯಗಳು ನಡೆಯಬೇಕೆಂದು ನಿಶ್ಚಯವಾಯಿತು.

ಅದಕ್ಕಾಗಿ ಒಂದು ಕಸದ ರಾಶಿ ಬಿದ್ದಿದ್ದ ಪ್ರದೇಶವನ್ನು ಆಯ್ಕೆ ಮಾಡಿ, ಅಲ್ಲಿ ಕಸ ಹೆಕ್ಕಲು ಶುರು ಮಾಡಿದಂತೆ, ಏನೆಲ್ಲ ಸೊತ್ತುಗಳು ಕಸವಾಗುತ್ತದೆ ಎಂಬುವುದು ತಿಳಿಯುತ್ತಾ ಹೋಯಿತು. ತಂಬಾಕು, ಚಾಕಲೇಟಿನ ಪ್ಲಾಸ್ಟಿಕ್‌ನಿಂದ ಹಿಡಿದು, ಗೋಣಿಚೀಲದೊಳಗೆ ಒಂದು ನಾಯಿಯ ಶವವೂ ಅಲ್ಲಿ ಕಸದ ರೂಪದಲ್ಲಿ ಬಿದ್ದಿತ್ತು! ಮನುಷ್ಯ ಎಷ್ಟು ಕೀಳು ಮಟ್ಟಕ್ಕೆ ಇಳಿಯಬಹುದು ಎಂಬುವುದು ಊಹಿಸಲೂ ಅಸಾಧ್ಯ ಎಂಬುವುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ!

ಅಲ್ಲೊಂದು ಸೇತುವೆ. ಅದರ ಬಳಿ ಬಿದ್ದಿದ್ದ ಕಸದ ರಾಶಿಯನ್ನು ಒಂದು ವರ್ಷದ ಹಿಂದೆಯಷ್ಟೇ ಒಂದೆರಡು ಸಂಘ-ಸಂಸ್ಥೆಯವರು ಸೇರಿ ಸ್ವತ್ಛಗೊಳಿಸಿದ್ದರು. ಪರಿಸರದ ಸ್ವತ್ಛತೆ ಎಂಬುವುದು ಒಂದೆಡೆಯಾದರೆ, ಅವರಿಗೆ ಅದೊಂದು ಸಮಾಜ ಸೇವೆ ಮಾಡಿದ ತೃಪ್ತಿ. ಆದರೆ ಮುಂದಿನ ದಿನಗಳಲ್ಲಿ ಆ ಪ್ರದೇಶದಲ್ಲಿ ಯಾರು ಕಸ ಹಾಕುತ್ತಾರೆ ಎಂದು ನೋಡಿಕೊಂಡು ಕುಳಿತುಕೊಳ್ಳಲು ಅಂತೂ ಸಾಧ್ಯವಿಲ್ಲ. ಅದೇನೇ ಇರಲಿ. “ಕಸ’ ಎಂಬುವುದರ ವ್ಯಾಪ್ತಿ ಎಷ್ಟು ವಿಸ್ತಾರವಾಗಿದೆ ಎಂದು ತಿಳಿದುಕೊಂಡು ಅದರಲ್ಲಿ ಪಿಎಚ್‌. ಡಿ.ಯನ್ನೂ ಮಾಡಬಹುದು.

ಚಾಕಲೇಟ್‌ ಬಿಸ್ಕಿಟ್‌ ಪ್ಲಾಸ್ಟಿಕ್‌ಗಳು, ಮದ್ಯದ ಬಾಟಲಿಗಳು ಸರ್ವೇ ಸಾಮಾನ್ಯ!
ಇದು ಎಲ್ಲರಿಗೂ (ಬಿಸಾಕುವವರಿಗೂ, ಹೆಕ್ಕುವವರಿಗೂ..!) ಗೊತ್ತಿರುವಂತದ್ದೇ. ನಮ್ಮಲ್ಲೇ ಯಾರಾದರೂ ಇರುತ್ತಾರೆ. ಚಾಕಲೇಟು ತಿನ್ನುವುದು. ಅಲ್ಲೇ ಬೀದಿಯಲ್ಲಿ ಪ್ಲಾಸ್ಟಿಕ್‌ ಬಿಸಾಡುವುದು. ಕೇಳಿದರೆ, ಅದೊಂದು ಸಣ್ಣ ತುಂಡು ಎಂದು ಹೇಳುತ್ತಾರೆ. ಆದರೆ ಅವರಿಗೆಲ್ಲಿ ಅರ್ಥವಾಗಬೇಕು. ಎಲ್ಲರದ್ದೂ ಸಣ್ಣ ಸಣ್ಣ ತುಂಡು ಸೇರಿದಾಗ ಅದು ದೊಡ್ಡ ಕಸದ ರಾಶಿ ಆಗುವುದೆಂದು..! ಅದಲ್ಲದೆ, ಮದ್ಯಪಾನ, ಧೂಮಪಾನ ಮಾಡಿ ಅದನ್ನೂ ರಸ್ತೆ ಪಕ್ಕದಲ್ಲೆ ಬಿಸಾಡುವವರಿಗೇನೂ ಕಮ್ಮಿಯಿಲ್ಲ. ನಾವು ಕಸ ಹೆಕ್ಕಿ ಮುಗಿದು ನೋಡಿದಾಗ, ನಾಲ್ಕು ಚೀಲ ಮದ್ಯದ ಬಾಟಲಿಗಳೇ ಇದ್ದವು! ಸಾಮಾನ್ಯವಾಗಿ ಸ್ವತ್ಛತ ಕಾರ್ಯಗಳನ್ನು ಮಾಡುವ ಸಂಘ-ಸಂಸ್ಥೆಯವರಿಗೇ ಈ ಕಸಗಳು ಸಿಗುವಂತದ್ದೇ!

ಒಂದಷ್ಟು ಮಾತ್ರೆ-ಔಷಧಗಳೂ ಸಿಕ್ಕಿದವು..!
ಕಸ ಎಂದರೆ ಮನೆಯಲ್ಲಿ ಬೇಡವಾದ ಪ್ಲಾಸ್ಟಿಕ್‌ ವೇಸ್ಟ್‌ ಗಳು, ಹರಿದು ಹೋದ ಬಟ್ಟೆಗಳು, ಚೀಲಗಳು ಎಂಬುವುದು ನಿಮ್ಮ ಮನಸ್ಸಿನಲ್ಲಿದ್ದರೆ ಅದನ್ನೂ ಈ ಕೂಡಲೇ ತೆಗೆದು ಹಾಕಿ! ಓಪನ್‌ ಮಾಡದೇ ಇರುವ ಮಾತ್ರೆಗಳು, ಔಷಧಗಳು, ಐ-ಡ್ರಾಪ್‌ಗ್ಳೂ ಕೆಲವರ ಪಾಲಿಗೆ ಕಸವಾಗಿರುತ್ತವೆ ಎಂಬುವುದು ನಮ್ಮ ಅರಿವಿಗೆ ಬಂತು. ಅದರ ಡೇಟ್‌ ಎಕ್ಸ್‌ ಪಯರಿ ಆಗಿದ್ದಿದ್ದರೆ, ಅದು ಬೇರೆ ಲೆಕ್ಕ. ಆದರೆ, ಎಲ್ಲವೂ ಸರಿಯಾಗಿದ್ದರೂ ಅದನ್ನು ಬಿಸಾಡಿದ್ದಾರೆ ಎಂದರೆ ಏನರ್ಥ!! ಉಚಿತ ಆರೋಗ್ಯ ತಪಾಸಣೆ ನಡೆಸುವವರು, ಒಂದಷ್ಟು ಮಾತ್ರೆ-ಔಷಧಿಗಳನ್ನು ನಾವು ಉಚಿತವಾಗಿ ಜನರಿಗೆ ಕೊಟ್ಟಿದ್ದೇವೆ ಎಂಬ ಲೆಕ್ಕ ಕೊಟ್ಟುಬಿಟ್ಟು, ಆ ಹಣವನ್ನು ಆಯೋಜಕರಿಂದ ವಸೂಲಿ ಮಾಡುವ ತಂತ್ರಗಾರಿಕೆ ಇದಾಗಿರಬಹುದೇನೋ ಎಂದು ನನಗನಿಸಿತು!

ಗೋಣಿಚೀಲದೊಳಗೆ ನಾಯಿಯ ಶವ
ಯಾವುದೋ ಒಂದು ಬೀದಿನಾಯಿ ಎಲ್ಲೋ ರಸ್ತೆ ಮೂಲೆಯಲ್ಲಿ ಸಾವನ್ನಪ್ಪಿದ್ದರೆ ಅದನ್ನು ಅನಾಹುತ ಎಂದು ಒಪ್ಪಬಹುದು. ಆದರೆ ಒಂದು ಗೋಣಿಚೀಲದೊಳಗೆ ಸತ್ತಿರುವ ನಾಯಿಯ ಶವವನ್ನು ಹಾಕಿ, ಚೀಲವನ್ನು ಕಟ್ಟಿ ರಸ್ತೆ ಪಕ್ಕ ಬಿಸಾಡಿದ್ದಾರೆ ಎಂದರೆ ಅವರ ಮನಃಸ್ಥಿತಿ ಎಂತಹದ್ದಾಗಿರಬಹುದು ಅಲ್ವಾ! ತಮ್ಮ ಮನೆಯಲ್ಲಿ ಸಾಕಲು ಆಗುತ್ತೆ. ಆದರೆ, ಅದನ್ನು ತಮ್ಮದೇ ಮನೆಯಲ್ಲಿ ಅಥವಾ ಯಾವುದಾದರು ಒಂದು ಬಯಲು ಪ್ರದೇಶದಲ್ಲಿ ಹೂತು ಹಾಕುವುದಕ್ಕೆ ಆಗುವುದಿಲ್ವಾ ಅವರಿಗೆ!? ಇದನ್ನು ಕಂಡಾಗ, ಕೊರೊನಾ ಸಾಂಕ್ರಾಮಿಕ ರೋಗ ಬಹಳ ವೇಗವಾಗಿ ಹರಡುತ್ತಿದ್ದ ಸಂದರ್ಭ ಮರಣ ಹೊಂದಿದ ಸೋಂಕಿತರ ಮೃತದೇಹವನ್ನು ಕಸದ ರೂಪದಲ್ಲಿ ಬಿಸಾಡುತ್ತಿದ್ದ ಚಿತ್ರಗಳು ನನ್ನ ತಲೆಗೆ ಹೊಳೆದಿರುವುದಂತೂ ಸುಳ್ಳಲ್ಲ..!

ಒಂದೂವರೆ ಗಂಟೆಗಳ ಕಾಲ ನಡೆದ ಸ್ವತ್ಛತೆ ಕಾರ್ಯದಲ್ಲಿ ಒಟ್ಟು ಸುಮಾರು 40 ಗೋಣಿಚೀಲದಷ್ಟು ಕಸಗಳು ಒಟ್ಟುಗೊಂಡವು. ಅವುಗಳನ್ನು ಕಸ ವಿಲೇವಾರಿ ಘಟಕಕ್ಕೆ ತಲುಪಿಸಿ, ಮನೆಗೆ ಬಂದು ರಿಫ್ರೆಶ್‌ ಆದರೂ, ತಲೆಯಲ್ಲಿ ಮೂಡುತ್ತಿದ್ದ ಒಂದೇ ಒಂದು ಪ್ರಶ್ನೆ… ಒಂದು ದಿನ ನಾನೂ ಕಸವಾಗುತ್ತೇನಾ? ಎಂದು!


-ಇಂದೂಧರ್‌ ಹಳೆಯಂಗಡಿ, ಆಳ್ವಾಸ್‌ ಕಾಲೇಜು, ಮೂಡುಬಿದಿರೆ 

ಟಾಪ್ ನ್ಯೂಸ್

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು

7-

UV Fusion: ಧರೆಯ ಮೇಲೊಂದು ಅಚ್ಚರಿ ಧಾರಾವಿ

6-uv-fusion

UV Fusion: ಪುಟ್ಟ ಕಂಗಳ ಕುತೂಹಲ

5-photography

Photography: ಎಲ್ಲೆಲ್ಲೂ ಫೋಟೋಗ್ರಫಿ

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arrest-woman

Mulki: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

POlice

Manipal: ವೇಶ್ಯಾವಾಟಿಕೆ; ನಾಲ್ವರುಪೊಲೀಸರ ವಶಕ್ಕೆ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.