ಆಕ್ಸಿಜನ್ ಚಾಲೆಂಜ್
Team Udayavani, Jul 22, 2021, 8:00 AM IST
ಭೂಮಿಯ ಮೇಲೆ ವಾಸ ಮಾಡುತ್ತಿರುವ ನಮಗೆ ಸುತ್ತಲೂ ಇರುವ ನೀರಿನ ಸ್ಥಳಗಳು, ಅರಣ್ಯ ಪ್ರದೇಶಗಳು, ಪಶು ಪಕ್ಷಿ, ಮನುಷ್ಯ ತನ್ನ ಸ್ವಾರ್ಥ – ಸುಖಕ್ಕಾಗಿ ಮಾಡಿದ ಕೆಲಸಗಳಿಂದಾಗಿ ಇಂದು ಪರಿಸರ ನಾಶವಾಗುತ್ತಿದೆ. ಇದರ ಬಹುದೊಡ್ಡ ಪರಿಣಾಮ ಮನುಷ್ಯ ಹಾಗೂ ಇನ್ನಿತರ ಜೀವ ಸಂಕುಲಗಳ ಮೇಲೆ ಬೀರುತ್ತಿದೆ. ಹೀಗಾಗಿ ಪರಿಸರವನ್ನು ರಕ್ಷಿಸುವ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಅನಿವಾರ್ಯ.
ನಮ್ಮ ಪೂರ್ವಜರ ಕಾಲದಲ್ಲಿ ಸುಂದರವಾದ ಕಾಡು, ಗುಡ್ಡ, ಪ್ರಾಣಿ -ಪಕ್ಷಿಗಳ ಸಂಕುಲಗಳು ನೈಸರ್ಗಿಕ ಸಂಪನ್ಮೂಲಗಳೊಂದಿಗೆ ಕೂಡಿತ್ತು. ಕಾಲ ಬದಲಾದಂತೆ ಹಾಗೂ ದಿನಗಳು ಬದಲಾದಂತೆ ಜನಸಂಖ್ಯೆ ಹೆಚ್ಚಾದ ಹಾಗೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ತನ್ನ ಕೆಲಸಕ್ಕಾಗಿ ತಂತ್ರಜ್ಞಾನದ ಪ್ರಭಾವದಿದಾಗಿ ಕಾಡುಗಳನ್ನು ನಾಶ ಮಾಡಿ ಮರ ಗಿಡಗಳನ್ನು ಕಡಿದು ಅರಣ್ಯ ಪ್ರದೇಶಗಳನ್ನು ನಾಶ ಮಾಡಿರುವುದರಿಂದ ಅವುಗಳ ರೋಧನೆ ಮಾತ್ರ ಯಾರಿಗೂ ಕೇಳಲಿಲ್ಲ. ಪ್ರಸ್ತುತ ಅರಣ್ಯ ನಾಶದಿಂದಾಗಿ ಆಮ್ಲಜನಕದ ಕೊರತೆ ಅನುಭವಿಸಬೇಕಾಗಿದೆ. ಜತೆಗೆ ಸಹಸ್ರಾರು ಜೀವ ಸಂಕುಲಗಳು ನಾಶವಾಗುತ್ತಿದ್ದು ಮುಂದೊಂದು ದಿನ ಪ್ರಾಣಿ ಪಕ್ಷಿಗಳನ್ನು ಕೇವಲ ಪುಸ್ತಕಗಳಲ್ಲಿ ಮಾತ್ರ ತೋರಿಸುವ ಪರಿಸ್ಥಿತಿ ಎದುರಾಗಬಹುದು. ಇಂದು ಕೊರೊನಾ ಮಹಾಮಾರಿ ರೋಗದಿಂದ ಇಡೀ ದೇಶದಲ್ಲಿ ಆಕ್ಸಿಜನ್ ಅಭಾವದಿಂದ ನಮಗೆ ಆಕ್ಸಿಜನ್ ಆವಶ್ಯಕತೆ ಎಷ್ಟಿದೆ ಎಂಬುದು ಅರಿವಾಗುತ್ತಿದೆ. ಈ ಕಾರಣದಿಂದಾಗಿ ದೇಶಿಯ ಮಟ್ಟದಲ್ಲಿ ಕೆಲವೊಂದು ಸಂಘಸಂಸ್ಥೆಗಳು ಒಟ್ಟಾಗಿ ಸೇರಿ ಅಭಿಯಾನ ಜಾರಿಗೊಳಿಸುತ್ತಿದ್ದು ನಮ್ಮ ಊರಲ್ಲಿಯೂ ಈ ಅಭಿಯಾನ ಪ್ರಸಿದ್ಧಿ ಪಡೆಯಿತು. ಈ ಅಭಿಯಾನ ಹೆಸರೇ ಆಕ್ಸಿಜನ್ ಚಾಲೆಂಜ್. ಪ್ರಕೃತಿ ಉಳಿವಿಗಾಗಿ ಚಾಲೆಂಜ್ ಗಳನ್ನು ಸ್ವೀಕರಿಸಿ ಯುವ ಸಮುದಾಯವನ್ನು ಇದರಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ನಿಟ್ಟಿನಲ್ಲಿ ಈ ಅಭಿಯಾನ ಪ್ರಾರಂಭವಾಯಿತು.
ಪರಿಸರ ದಿನದಂದು ಈ ಅಭಿಯಾನ ಆರಂಭವಾಗಿದ್ದು ಐದು ದಿನಗಳ ಅಭಿಯಾನದಲ್ಲಿ 5 ಲಕ್ಷ ಸಸಿಗಳನ್ನು ನೆಡುವುದು ಆಕ್ಸಿಜನ್ ಚಾಲೆಂಜ್‌ನ ಮುಖ್ಯ ಉದ್ದೇಶವಾಗಿದೆ. ಒಬ್ಬ ವ್ಯಕ್ತಿ 5 ಸಸಿಗಳನ್ನು ನೆಡುವುದು ಮತ್ತು ಇನ್ನೊಬ್ಬ ವ್ಯಕ್ತಿಗೆ ಈ ಚಾಲೆಂಜ್ ಯನ್ನು ಕೊಡುವುದು ಮತ್ತು ಇದು ಸಾಮಾಜಿಕ ಜಾಲತಾಣದಲ್ಲಿ ಆಕ್ಸಿಜನ್ ಚಾಲೆಂಜ್ ಎಂಬ ಟ್ಯಾಗ್ ಬಳಸಿ ತಮ್ಮ ಫೋಟೋಗಳನ್ನು ಹಾಕುವುದು ಇದೆ ರೀತಿಯಾಗಿ ಒಂದು ಚೈನ್ ವ್ಯವಸ್ಥೆಯಲ್ಲಿ ಯುವಕರು ಚಾಲೆಂಜ್ ರೂಪದಲ್ಲಿ ತೆಗೆದುಕೊಂಡು ಐದು-ಐದು ಗಿಡಗಳನ್ನು ಹಚ್ಚುತ್ತಾ ಹೋದರೆ ಇದರಿಂದ ನಮ್ಮ ಪರಿಸರ ಸಮತೋಲನವಾಗುತ್ತದೆ ಎಂಬುದು ಆಶಾಭಾವನೆ. ಹೇಗಿದ್ದರು ಲಾಕ್ ಡೌನ್ ಸಮಯದಲ್ಲಿ ಯುವಕರು ಹಳ್ಳಿಗಳಲ್ಲಿ ವಾಸವಾಗಿದ್ದಾರೆ ಇದರಿಂದಾಗಿ ಅವರಿಗೆ ಇದು ತುಂಬಾ ಅನುಕೂಲವಾಗುತ್ತದೆ ಈ ಗಿಡಗಳನ್ನು ನೆಡುವ ಮೂಲಕ ಪರಿಸರಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದೇ ಆಕ್ಸಿಜನ್ ಚಾಲೆಂಜ್‌ನ ಮುಖ್ಯ ಉದ್ದೇಶ.
ಬೀಜದ ಉಂಡೆ : ವಿವಿಧ ಸಂಘಟನೆಗಳೊಂದಿಗೆ ಸೇರಿಕೊಂಡು ಸುಮಾರು 5ಲಕ್ಷ ಬೀಜವನ್ನು ಗೊಬ್ಬರ ಮಿಶ್ರಿತ ಉಂಡೆಯನ್ನಾಗಿ ತಯಾರಿಸಿ ಬಳಿಕ ಅವುಗಳನ್ನು ಎಲ್ಲಿ ಬಹುಭಾಗವಾದಂತ ಖಾಲಿ ಇರುವ ಪ್ರದೇಶದಲ್ಲಿ, ಸ್ಥಳಗಳಲ್ಲಿ ಅಥವಾ ನಮ್ಮ ಸುತ್ತಲಿನ ಪರಿಸರದಲ್ಲಿ ಬೀಜದ ಉಂಡೆಗಳನ್ನು ಸೆಯುವುದು ಮಳೆ ಬರುವುದರಿಂದ ನೀರು ತಾಗಿಯೇ ಬೆಳೆಯುತ್ತದೆ. ಎಲ್ಲಿ ಗಿಡ ಮರಗಳ ಆವಶ್ಯಕತೆ ಇದೆಯೋ ಆ ಪ್ರದೇಶದಲ್ಲಿ ಈ ಬೀಜದ ಉಂಡೆಗಳನ್ನು ಹಾಕುವ ಕಾರ್ಯ ಇದು.
ಬಸವರಾಜ ಲಗಳಿ
ಬಿಎಲ್‌ಡಿಇ ಕಾಲೇಜು, ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.