NSS Camp: ನೆನಪುಗಳ ಶಿಖರ- ಎನ್‌ಎಸ್‌ಎಸ್ ಶಿಬಿರ
Team Udayavani, Dec 6, 2023, 7:45 AM IST
ಅದೊಂದು ಚೈತ್ರ ಮಾಸದ ಮುಂಜಾವು. ಎಂದಿನಂತೆ ಅಲರಾಂ ಇಟ್ಟು ಏಳುವ ದಿನವಲ್ಲ. ಯಾಕೆಂದರೆ ಇದೊಂದು ಸೇವಾ ಶಿಬಿರದಲ್ಲಿ ಆರಂಭವಾಗುವ ದಿನ. ಬೆಳ್ಳಂಬೆಳಗ್ಗೆ ಎದ್ದು ರಂಗೋಲಿ ಇಟ್ಟು, ಧ್ವಜವಂದನೆ, ಪ್ರಾರ್ಥನೆ, ಕವಾಯತು, ನನಗಾಗಿ ಅಲ್ಲ ನಿನಗಾಗಿ ಎಂದು ಮನೆ ಮನವನ್ನು ಪರಿಸರವನ್ನು ಹಸನುಗೊಳಿಸುವ ಕೆಲಸವದು. ವ್ಯಕ್ತಿಗೆ ಮನಸ್ಸಿನ ಸೌಂದರ್ಯ ಮುಖ್ಯವೆಂದು ತಿಳಿಸುವ ಎನ್‌ಎಸ್‌ಎಸ್ ಶಿಬಿರವದು. ಶಿಬಿರ ಮುಗಿದು ಆರೇಳು ತಿಂಗಳುಗಳು ಉರುಳಿದರೂ ಅಲ್ಲಿ ಕಲಿತ ಪಾಠ, ಹೊಸ ಸ್ನೇಹಿತರ ಬಳಗ, ಶಿಬಿರದ ದಿನಗಳ ನೆನಪುಗಳು ಮನಸ್ಸಿನಲ್ಲಿ ಮರೆಯಾಗದೆ ಉಳಿದಿವೆ.
ಹೊಸ ಪರಿಚಯ, ಹೊಸ ವಿಷಯ ಎಲ್ಲವೂ ಹೊಸತು. ಕ್ಯಾಂಪಸ್‌ನಲ್ಲಿ ನಡೆಯುವ ಕಾರ್ಯಕ್ರಮಗಳು, ಶಿಬಿರಾರ್ಥಿಗಳೊಂದಿಗಿನ ಹೊಂದಾಣಿಕೆ, ಎಲ್ಲರೂ ಒಂದಾಗಿ ಮಾಡಿದ ದ್ವಜಾರೋಹಣ, ಚುಮು ಚುಮು ಚಳಿಯಲ್ಲೂ ಹಾಡಿದ ಎನ್‌ಎಸ್‌ಎಸ್ ಗೀತೆಗಳು, ಘೋಷವಾಕ್ಯಗಳು, ನಾವೇ ನಮ್ಮವರಿಗೆ ಬಡಿಸಿ ತಿಂದ ಊಟ, ಉಪಾಹಾರಗಳು, ಒಂದಾಗಿ ಮಾಡಿದ ಶ್ರಮದಾನ, ನಿದ್ದೆಗಣ್ಣಿನಲ್ಲಿ ಆಲಿಸಲಾಗದಿದ್ದರೂ ಆಲಿಸಿದ ಶೈಕ್ಷಣಿಕ ಕಾರ್ಯಕ್ರಮ, ಅತ್ಯಂತ ಕಡಿಮೆ ಸಮಯದಲ್ಲಿ ತಯಾರಿ ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮ, ಎಲ್ಲರೊಂದಿಗೆ ಸೇರಿ ಆ ದಿನವನ್ನು ಅವಲೋಕಿಸಿದ ಕ್ಷಣ, ನಮ್ಮಿಂದಾದ ತಪ್ಪುಗಳನ್ನು ತಿದ್ದಿ ನಮ್ಮ ಒಳ್ಳೆಯ ಕೆಲಸ ಕಾರ್ಯಗಳಿಗೆ ನೀಡಿದ ಎನ್‌ಎಸ್‌ಎಸ್ ಚಪ್ಪಾಳೆಗಳು, ನಾವು ಮಲಗದೆ, ಶಿಬಿರಾರ್ಥಿಗಳಿಗೂ ಮಲಗಲು ಬಿಡದೆ ಕೊಟ್ಟ ತೊಂದರೆಗಳು, ಒಬ್ಬೊಬ್ಬರ ಮುಖದಲ್ಲಿ ಮೂಡಿಸಿದ ನಗು, ಅಳು. ಶಿಬಿರಜ್ಯೋತಿ, ಭಾರತ ನಕಾಶೆ ರಚಿಸಿ ನಾವೆಲ್ಲರೂ ಒಂದೇ ಎಂದೂ; ಭಾರತವು ಹೊರ ಜಗತ್ತಿಗೆ ಪ್ರಕಾಶಿಸಲೆಂದು ಹಚ್ಚಿದ ಹಣತೆಗಳ ಬೆಳಕು, ಬೆಳಕಿನ ಜತೆಗೆ ಕಂಬನಿ, ಕೊನೆಯ ಬಾರಿಗೆ ಕ್ಯಾಂಪಿನಲ್ಲಿ ಎಲ್ಲರೂ ಒಂದಾಗಿ ಫೋಟೋಗಳನ್ನು ತೆಗೆದು ಒಬ್ಬರನ್ನೊಬ್ಬರು ಬಿಗಿದಪ್ಪಿ ಕಣ್ಣೀರು ಸುರಿಸಿದ ಕ್ಷಣಗಳು ಇಂದಿಗೂ ಮರೆಯಲಾಗದ ನೆನಪುಗಳು.
ಮೊದಲ ದಿನ ಅಪರಿಚಿತರಾಗಿ, ಭೇಟಿಯಾಗಿ, ಹೊಸಬರ ಪರಿಚಯವಾಗಿ ಆ ಪರಿಚಯ ಸ್ನೇಹವಾಗಿ, ಆ ಸ್ನೇಹ ಬಿಟ್ಟಿರಲಾಗದ ಬಂಧವಾಗಿ, ಆ ಬಂಧ ಒಂದು ಪರಿವಾರವಾಗಿ ನಾವೆಲ್ಲರೂ ಒಂದೇ ಎನ್ನುವ ಭಾವನೆಗಳು ಇಂದಿಗೂ ಪ್ರಸ್ತುತವಾಗಿವೆ.
–ಕೆ.ಎಂ. ಪವಿತ್ರಾ
ಎಂಜಿಎಂ ಕಾಲೇಜು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.