ಉತ್ತರ ಭಾರತದ ಸೊಬಗನ್ನು ನೋಡ ಬನ್ನಿರೇ…


Team Udayavani, Sep 23, 2020, 6:18 PM IST

Kedarar

ದೇವಭೂಮಿ ಎಂದೇ ಖ್ಯಾತಿ ಪಡೆದ, ಅತ್ಯಂತ ಸುಂದರ ತಾಣ ಹಾಗೂ ಪ್ರಸಿದ್ಧ ಶ್ರದ್ಧಾ ಕೇಂದ್ರವನ್ನು ಹೊಂದಿರುವ ರಾಜ್ಯ ಉತ್ತರಾಖಂಡ.

ನವೆಂಬರ್‌ 9, 2000 ರಂದು 27ನೇ ರಾಜ್ಯವಾಗಿ ರಚನೆಯಾಗಿದೆ. ರಾಜ್ಯದ ಉತ್ತರಕ್ಕೆ ಟಿಬೆಟ್‌, ಪೂರ್ವಕ್ಕೆ ನೇಪಾಳ ದೇಶವಿದೆ. ಅವುಗಳಲ್ಲಿ ಪ್ರಮುಖವಾಗಿ ಕೇದರನಾಥ್‌ ಒಂದು.

ಪುರಾಣ ಪ್ರಸಿದ್ಧ, ಹಿಂದೂಗಳ ಪ್ರಮುಖ ಶ್ರದ್ಧಾ ಕೇಂದ್ರವಾಗಿರುವ ಕೇದರನಾಥ್‌ ಇರುವುದು ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ್‌ ಜಿಲ್ಲೆಯಲ್ಲಿ. ಹೆಚ್ಚಿನ ಹಿಂದೂಗಳು ಇಲ್ಲಿಗೆ ಭೇಟಿ ನೀಡಬೇಕೆಂಬ ಹಂಬಲವನ್ನು ಹೊಂದಿರುತ್ತಾರೆ. ದಟ್ಟ ಹಿಮಾಲಯ ಪರ್ವತದ ನಡುವೆ ಇರುವ ದೇಗುಲವಾಗಿದೆ. ಚಾರ್‌ ಧಾಮಗಳಲ್ಲಿ ಇದು ಒಂದಾಗಿದೆ.ಕೇದರನಾಥ್‌ ದೇಗುಲ ಸುತ್ತ ಮಂದಾಕಿನಿ ನದಿ ಹರಿಯುತ್ತದೆ. ಇಲ್ಲಿ ಆದಿ ಗುರು ಶಂಕರಾಚಾರ್ಯರ ಸಮಾಧಿಯೂ ಇದೆ. ವಾರ್ಷಿಕವಾಗಿ ಲಕ್ಷಾಂತರ ಭಕ್ತರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ರಿಷಿಕೇಶ
ಉತ್ತರಾಖಂಡ್‌ನ‌ ರಾಜಧಾನಿ ಡೆಹ್ರಾಡೂನ್‌ನಲ್ಲಿ ರಿಷಿಕೇಶ ದೇಗುಲವಿದೆ. ಇಲ್ಲಿ ಪುರಾತನ ದೇಗುಲ ಮತ್ತ ಆಶ್ರಮವಿದೆ. ಇವುಗಳ ಜತೆಗೆ ಯೋಗ ಮತ್ತ ಧ್ಯಾನ ಕೇಂದ್ರಗಳಿವೆ. ಪುರಾಣಗಳ ಪ್ರಕಾರ ರಾವಣನ ಸಂಹಾರ ಮಾಡಿದ ಅನಂತರ ಶ್ರೀರಾಮ ರಿಷಿಕೇಶದಲ್ಲಿ ಧ್ಯಾನಕ್ಕೆ ಕುಳಿತ ಎಂದು ಪ್ರತೀತಿ ಇದೆ.

ಸತ್ತಾಲ್‌ ಸರೋವರ
ಅತ್ಯಂತ ಮನೋಹರವಾದ ಸರೋವರವನ್ನು ನಾವು ಉತ್ತರಾಖಂಡ್‌ನ‌ಲ್ಲಿ ಕಾಣಬಹುದು ಅದುವೇ ಸತ್ತಾಲ್‌ ಸರೋವರ. ಏಳು ಸರೋವರಗಳನ್ನು ಸೇರಿ ಸತ್ತಾಲ್‌ ಎಂದು ಕರೆಯಲಾಗುತ್ತದೆ. ಪೂರ್ಣಾ ಸರೋವರ, ರಾಮ ಸರೋವರ, ಸೀತಾ ಸರೋವರ,ಲಕ್ಷ್ಮಣ್‌ ಸರೋವರ, ನಳ ದಮಯಂತಿ ಸರೋವರ , ಸುಖ ಸರೋವರ ಮತ್ತು ಗರುಡ ಸರೋವರ ಏಳು ಸರೋವರಗಳಿವೆ. ಈ ಸರೋವರಗಳು ವಲಸೆ ಹಕ್ಕಿಗಳ ನೆಚ್ಚಿನ ತಾಣವಾಗಿದೆ. ಇಲ್ಲಿ 500 ಜಾತಿಯ ಪಕ್ಷಿಗಳು, 500 ಹೆಚ್ಚು ಚಿಟ್ಟೆಗಳ ಸಮೂಹವಿದೆ.

ಚಾರ್‌ ದಾಮ್‌( ಬದ್ರೀನಾಥ್‌, ಗಂಗೋತ್ರಿ, ಯಾಮುನೋತ್ರಿ, ಕೇದರನಾಥ್‌)
ಉತ್ತರಾಖಂಡ ರಾಜ್ಯಕ್ಕೆ ಭೇಟಿ ನೀಡುವ ಹೆಚ್ಚಿನ ಜನರು ಚಾರ್‌ ದಾಮ್‌ ಗಳಾದ ಬದ್ರೀನಾಥ್‌, ಗಂಗೋತ್ರಿ, ಯಾಮುನೋತ್ರಿ, ಕೇದರನಾಥ್‌ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ.

ಬದ್ರಿನಾಥ್‌
ಬದ್ರಿನಾಥ್‌ ನಾರಾಯಣ ದೇಗುಲವಿರುವ ಕಾರಣ ಬದ್ರಿನಾಥ್‌ ಹೆಚ್ಚು ಪ್ರಸಿದ್ದಿ ಹೊಂದಿದೆ. ವಿಷ್ಣು ಪುರಾಣದ ಪ್ರಕಾರ ವಿಷ್ಣುವಿನ ಅವತಾರ ನಾರಾಯಣ ಇಲ್ಲಿ ಧಾನ್ಯಸ್ಥನಾಗಿದ್ದ ಎಂದು ಹೇಳಲಾಗುತ್ತದೆ. ಪಾಂಡವರು ಸ್ವರ್ಗಕ್ಕೆ ಬದ್ರಿನಾಥ್‌ ಮೂಲಕ ಹಾದುಹೋದರು ಎಂಬ ನಂಬಿಕೆ ಇದೆ. ಬದ್ರಿನಾಥ್‌ ನಾರಾಯಣ ದೇಗುಲ ಸುತ್ತ ಆಲಕಾನಂದ ನದಿ ಹರಿಯುತ್ತದೆ. ಆದಿ ಶಂ ಕರಾರ್ಚಾಯರಿಂದ ಈ ದೇಗುಲ ಸ್ಥಾಪನೆಯಾಗಿದೆ ಎಂದು ಹೇಳಲಾಗುತ್ತದೆ.ಚಾರಣ ಪ್ರಿಯರಿಗೆ ಈ ಪ್ರದೇಶ ಸೂಕ್ತವಾಗಿದೆ. ನವೆಂಬರ್‌ನಿಂದ ಎಪ್ರಿಲ್‌ ವರೆಗೆ ಬದ್ರಿನಾಥ್‌ ದೇಗುಲ ಮುಚ್ಚಿರುತ್ತದೆ.

ಗಂಗೋತ್ರಿ
ಭಾರತದ ಪವಿತ್ರ ನದಿ ಗಂಗಾ ನದಿ ಯ ಮೂಲ ಸ್ಥಳವೇ ಗಂಗೋತ್ರಿ. ಗಂಗಾ ದೇಗುಲವನ್ನು ಇಲ್ಲಿ ಕಾಣಬಹುದು. ಉತ್ತರಕಾಶಿ ಜಿಲ್ಲೆಯಲ್ಲಿರುವ ಗಂಗೋತ್ರಿ ಅತ್ಯಂತ ರಮಣೀಯ ಸ್ಥಳವಾಗಿದೆ. ಇಲ್ಲಿ ಭಾಗೀರಥಿ ನದಿ ಹರಿಯುತ್ತದೆ. ಗಂಗಾ ನದಿಯೂ ಇಲ್ಲಿ ಆಲಕನಂದ ನದಿಯನ್ನು ಸಂಧಿಸುತ್ತದೆ.

ಯಾಮುನೋತ್ರಿ
ಯಮುನಾ ನದಿಯ ಮೂಲ ಸ್ಥಳವೇ ಯಾಮುನೋತ್ರಿಯಾಗಿದೆ. ಸೂರ್ಯ ಪುತ್ರಿ, ಯಮನ ಸಹೋದರಿ ಯುಮುನಾ ದೇವಿಯ ದೇಗುಲ ಇಲ್ಲಿಯ ಪ್ರಮುಖ ಆರ್ಕಷಣೆಯಾಗಿದೆ. ಪ್ರತಿವರ್ಷ ಅಕ್ಷಯಾ ತೃತೀಯಾದಂದು ಈ ದೇಗುಲ ತೆರೆಯುತ್ತದೆ.  ಚಾರ್‌ ದಾಮ್‌ಗಳಿಗೆ ಮೇ- ಜೂನ್‌ ನಲ್ಲಿ ಭೇಟಿ ನೀಡುವುದು ಸೂಕ್ತ.


ಹೂಗಳ ಕಣಿವೆ ( ವ್ಯಾಲಿ ಆಪ್‌ ಫ್ಲವರ್)
ಹೂಗಳ ಕಣಿವೆ ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಹಾಗೂ ಅತ್ಯುತ್ತಮ ರಾಷ್ಟ್ರಿಯ ಉದ್ಯಾನವಗಳಲ್ಲಿ ಒಂದಾಗಿದೆ. 87.50 ಚದರ ಕಿ,ಮೀ ವಿಸ್ತಿರ್ಣದಲ್ಲಿ ಆಲ್ಪೆçನ್‌ , ಬ್ರಹ್ಮ ಕಮಲ, ಲಿಲ್ಲಿ ಸಹಿತ 650 ಕ್ಕೂ ವಿವಿಧ ಹೂಗಳು ಹರಡಿಕೊಂಡಿವೆ. ರಮ್ಯ ಮನೋಹರವಾದ ಈ ಹೂಗಳ ಕಣಿವೆಗೆ ಒಮ್ಮೆಯಾದರೂ ಭೇಟಿ ನೀಡಬೇಂಕೆದೆನಿಸುತ್ತದೆ.2004ರಲ್ಲಿ ಯುನೆಸ್ಕೋನ ವಿಶ್ವ ಪರಂಪರೆಯ ತಾಣಗಳಲ್ಲಿ ಇದನ್ನು ಸೇರಿಸಲಾಗಿದೆ. ಮನಸ್ಸಿಗೆ ಮುದ ನೀಡುವ ಹೂ ಮತ್ತು ಹಿಮಾದ ಸುಂದರ ತಾಣ ಇದಾಗಿದೆ.

 ಧನ್ಯಶ್ರೀ ಬೋಳಿಯಾರು 

 

 

ಟಾಪ್ ನ್ಯೂಸ್

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.