ಯುವ ಭಾರತ ನಿರ್ಮಾಣಕ್ಕೆ ಮುನ್ನುಡಿ
Team Udayavani, Aug 15, 2020, 10:45 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬದಲಾದ ಶಿಕ್ಷಣ ವ್ಯವಸ್ಥೆ ಯುವ ಭಾರತದ ನಿರ್ಮಾಣಕ್ಕೆ ಮುನ್ನುಡಿಯಂತಿದೆ.
ಇಂದಿನ ಕಾಲಘಟ್ಟದಲ್ಲಿ ಶಿಕ್ಷಣದಲ್ಲಿನ ಬದಲಾವಣೆ ಬಹಳಷ್ಟು ಅಗತ್ಯವಾಗಿದೆ.
ವೇಗವಾಗಿ ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಂಡು ಯುವ ಜನತೆ ಮುಂದುವರಿಯಬೇಕಿದೆ.
ಹೊಸ ಆವಿಷ್ಕಾರ, ಬೆಳವಣಿಗೆಯಲ್ಲಿ ಯುವಜನತೆ ಪಾತ್ರ ಮಹತ್ವದ್ದು. ಹಾಗಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು.
ಭಾರತದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ನೂತನ ಶಿಕ್ಷಣ ವ್ಯವಸ್ಥೆ ಇದಕ್ಕೆ ಪೂರಕವಾಗಿದೆ.
ವಿದ್ಯಾರ್ಥಿಗಳಲ್ಲಿ ಯೋಚಿಸುವ ಶಕ್ತಿ ಕುಂದಿದೆ. ಏನನ್ನು ಯೋಚಿಸಬೇಕು ಎಂಬುದನ್ನು ತಿಳಿಸುವ ಬದಲು, ಯಾವ ರೀತಿ ಯೋಚಿಸಬೇಕು ಎನ್ನುವುದನ್ನು ತಿಳಿಸಿದರೆ ಮಾತ್ರ ಹೊಸ ವಿಚಾರಧಾರೆಗಳು ಹುಟ್ಟಲು ಸಾಧ್ಯ.
ನೂತನ ಶಿಕ್ಷಣ ವ್ಯವಸ್ಥೆಯಂತೆ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ದೊರೆಯುತ್ತಿರುವುದು ಉತ್ತಮ ಅಂಶ. ಅದೆಷ್ಟೋ ಜನ ತಮ್ಮ ವೃತ್ತಿ, ಘನತೆಗೆ ಅನುಗುಣವಾಗಿ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ದಾಖಲಿಸುತ್ತಾರೆ. ಇಂಗ್ಲಿಷ್ ಶಿಕ್ಷಣ ಪಡೆದವರು ಬುದ್ಧಿವಂತರು ಎಂಬ ಕಲ್ಪನೆ ಬದಲಾಗಲಿದೆ.
ಯಾವುದೇ ಕೆಲಸ ಅಥವಾ ವೃತ್ತಿಪರ ಚಟುವಟಿಕೆಯಲ್ಲಿ ಆಂಗ್ಲ ಭಾಷೆಯ ಅತಿಯಾದ ಬಳಕೆ ಅದೆಷ್ಟೋ ಮಾತೃಭಾಷೆಗಳ ಅಸ್ತಿತ್ವಕ್ಕೆ ಕಳಂಕ ತಂದಿದೆ. ವಿಕಿಪೀಡಿಯ ತಿಳಿಸುವಂತೆ ಸಾವಿರಾರು ಭಾಷೆಗಳು ಇಂದು ಮರೆಯಾಗಿವೆ. ಶಿಕ್ಷಣಕ್ಕೂ, ಭಾಷೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದರೂ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ನೀಡಿದರೆ ವಿದ್ಯಾರ್ಥಿಗಳ ಯೋಚನ ಶಕ್ತಿ ವೃದ್ಧಿಸುತ್ತದೆ. ಬೀಳುವ ಕನಸುಗಳು, ಆಡುವ ಮಾತುಗಳು ನಮ್ಮ ಮಾತೃಭಾಷೆಯಾದರೆ, ಕಲಿಯುವ ಶಿಕ್ಷಣವೇಕೆ ಪರಭಾಷೆಯಲ್ಲಿರಬೇಕು? ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಕೀಳರಿಮೆ ಏಕೆ? ಪರಭಾಷೆಯಿಂದ ಮಂಕಾಗಿರುವ ಮಾತೃಭಾಷೆ ಮೇಲೇಳಲಿ. ಇಂಗ್ಲಿಷ್ ಶಿಕ್ಷಣಕ್ಕೆ ಹೆದರಿ ಅದೆಷ್ಟೋ ಪ್ರತಿಭೆಗಳು ಸರಿಯಾದ ಶಿಕ್ಷಣ ಪಡೆಯಲಾಗದೆ ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಆದರೆ ಇಂದಿನ ಉನ್ನತ ಶಿಕ್ಷಣ ಸುಧಾರಣೆಯಲ್ಲಿ ವಿದ್ಯಾರ್ಥಿ ತನಗೆ ಇಷ್ಟವಿರುವ ಭಾಷೆಯಲ್ಲಿ ಶಿಕ್ಷಣ ಪಡೆಯುವ ಅವಕಾಶವಿದೆ. ಈ ಬದಲಾದ ಶಿಕ್ಷಣ ವ್ಯವಸ್ಥೆಯಿಂದಾಗಿ ಯಾವುದೇ ಎಲ್ಲ ವಿದ್ಯಾರ್ಥಿಗಳಿಗೂ ಸಹಾಯವಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಉನ್ನತ ಶಿಕ್ಷಣದ ಸುಧಾರಣೆ ಪ್ರಬುದ್ಧ ಭಾರತಕ್ಕೆ ಮುನ್ನುಡಿಯಾಗಿದೆ. ಯುವ ಭಾರತ ನಿರ್ಮಾಣದಲ್ಲಿ ಯುವ ಪೀಳಿಗೆಗೆ ಹೊಸ ಶಿಕ್ಷಣ ಪದ್ಧತಿ ಪ್ರೇರಕವಾಗಲಿ. ಯುವ ಭಾರತ ನಿರ್ಮಾಣದಲ್ಲಿ ನಾವು ಕೈ ಜೋಡಿಸೋಣ.
ಶ್ರದ್ಧಾ ಪೂಜಾರಿ, ಎಂಪಿಎಂ ಪ್ರಥಮ ದರ್ಜೆ ಕಾಲೇಜು, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.