Pro Kabaddi: ಗ್ರಾಮೀಣ ಕ್ರೀಡೆಗೆ ಜೀವ ತುಂಬುತ್ತಿರುವ ಪ್ರೊ ಕಬಡ್ಡಿ


Team Udayavani, Feb 3, 2024, 8:00 AM IST

4-pro-kabaddi

ಸುಮಾರು 4,000 ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ಭಾರತೀಯ ಕ್ರೀಡೆ ಕಬಡ್ಡಿ. ಭಾರತೀಯರುಕ್ರಿಕೆಟ್‌ ಅನಂತರ ಅತೀ ಹೆಚ್ಚು ವೀಕ್ಷಿಸುವ ಕ್ರೀಡೆ. ಈ ದೇಶಿ ಕ್ರೀಡೆಗೆ 90ರ ದಶಕದಲ್ಲಿ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕು ಪ್ರಚಲಿತಕ್ಕೆ ಬಂತಾದರೂ, ಅತೀ ಹೆಚ್ಚು ಸದ್ದು ಮಾಡಿತ್ತಿರುವುದು ಪ್ರೋ ಕಬಡ್ಡಿ ಲೀಗ್‌ ಮೂಲಕ.

ಐಪಿಎಲ್‌ ಮಾದರಿಯಲ್ಲಿ ಕಬಡ್ಡಿ ಲೀಗ್‌ ಆರಂಭಿಸಲು ಯೋಚಿಸುವಾಗ ಇದರ ಯಶಸ್ಸಿನ ಬಗ್ಗೆ ಆಯೋಜಕರಿಗೂ ಅನುಮಾನವಿತ್ತು. ಆದರೆ ಇವರೆಲ್ಲರ ನಿರೀಕ್ಷೆಗೂ ಮೀರಿ ಪ್ರೊ ಕಬಡ್ಡಿ ಯಶಸ್ಸು ಸಾಧಿಸಿ, ಗ್ರಾಮೀಣ ಮಟ್ಟದ ಮನೆ ಮನ ತಲುಪಿತು.

ಮೊದಲ ಸೀಸನ್‌ ನಲ್ಲಿಯೇ ಸಾಕಷ್ಟು ಯಶಸ್ಸು ಕಂಡು ಪ್ರತಿಯೊಬ್ಬ ಆಟಗಾರನು ಮನೆಮಾತಾದರು. ಜೈಪುರ ಪಿಂಕ್‌ ಪ್ಯಾಂಥರ್ಸ್‌ ಚೊಚ್ಚಲ ಆವೃತ್ತಿಗೆದ್ದು ಬೀಗಿದರು.ಅಲ್ಲಿಂದ ಶುರುವಾದ ಪಿಕೆಎಲ್‌ ಪಯಣ ಸದ್ಯಕ್ಕೆ 10ನೇ ಆವೃತ್ತಿ¤ಯತ್ತ ಬಂದು ನಿಂತಿದೆ. ಈ ಹತ್ತು ಆವೃತ್ತಿಗಳಲ್ಲಿ ಎಲೆಮರೆಕಾಯಿಯಂತಿದ್ದ ಅದೆಷ್ಟೋ ಪ್ರತಿಭೆಗಳನ್ನು ದೇಶದ ಮೂಲೆ ಮೂಲೆಗಳಿಂದ ಆಯ್ದು ತಂದು ತಮ್ಮ ಪ್ರತಿಭೆ ಅನಾವರಣಗೊಳಿಸಲು ಒಂದು ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದೆ.

ಅದೆಷ್ಟೋ ಜನರ ಬದುಕು ಬದಲಿಸಿದೆ. ದೇಶಕ್ಕೆ ಪ್ರದೀಪ್‌ ನರ್ವಾಲ್‌ , ಪವನ್‌ ಶೆರಾವತ್‌, ಸುರ್ಜಿತ್‌ ಸಿಂಗ್‌, ರೋಹಿತ್‌ ಕುಮಾರ್‌, ರಾಹುಲ್‌ ಚೌಧರಿ, ಸೌರಭ್‌ ನಂದಾಲ್, ನವೀನ್‌ ಕುಮಾರ್‌ ರಂತಹ ಶ್ರೇಷ್ಠ ಆಟಗಾರರನ್ನು ಪರಿಚಯಿಸಿದೆ.

ಪ್ರೊ ಕಬಡ್ಡಿ ಲೀಗ್‌ ಎಂಬ ಒಂದು ವೇದಿಕೆ ಸಾವಿರಾರು ದೇಶಿ ಪ್ರತಿಭೆಗಳ ಕನಸಿಗೆ ನೀರುಣಿಸುವ ಕಾರ್ಯ ಮಾಡುತ್ತಿದೆ. ಈ ಕ್ರೀಡೆಗೆ ಬೆಲೆಯಿಲ್ಲ, ಈ ಕ್ರೀಡೆಗೆ ಭವಿಷ್ಯವಿಲ್ಲ ಎನ್ನುತ್ತಿದ್ದಂತಹ ಅದೆಷ್ಟೋ ಕೊಂಕು ಮಾತುಗಳಿಗೆ ಏಷ್ಯನ್‌ ಗೇಮ್ಸ್, ಕಬಡ್ಡಿ ವಿಶ್ವಕಪ್‌ ನಂತಹ ದೊಡ್ಡ ಮಟ್ಟದ ವೇದಿಕೆಗಳಲ್ಲಿ ಭಾರತ ಪ್ರತಿನಿಧಿಸಿ ಬಂಗಾರ ಗೆದ್ದು ತಂದು ಉತ್ತರ ಕೊಡಲಾಗುತ್ತದೆ. ‌

ಅನೂಪ್‌ ಕುಮಾರ್‌, ಧರ್ಮರಾಜ್‌ ಚೇರಲಾತನ್‌, ಮಂಜೀತ್‌ ಛಿಲ್ಲರ್‌, ಜಶ್ವೀರ್‌ ಸಿಂಗ್‌ ರಂತಹ ಹಿರಿಯ ಆಟಗಾರರು ಕಬಡ್ಡಿಯಲ್ಲೂ ಬದುಕಿದೆ ಎಂಬುದನ್ನು ನಿರೂಪಿಸಿದ್ದಾರೆ. ಇನ್ನೂ ನಮ್ಮ ಹೆಮ್ಮೆಯ ಕನ್ನಡತಿ, ಭಾರತ ತಂಡದ ಮಾಜಿ ನಾಯಕಿ ಮಮತಾ ಪೂಜಾರಿ ಕಬಡ್ಡಿ ಬರೀ ಪುರುಷರ ಕ್ರೀಡೆಯಲ್ಲ ಎಂಬುದನ್ನು ಜಗತ್ತಿಗೆ ಸಾರಿದ್ದಾರೆ.

ಹೀಗೆ ಪ್ರೊ ಕಬಡ್ಡಿ ಲೀಗ್‌ ಎಂಬ ಒಂದು ವೇದಿಕೆಯಿಂದ ಗ್ರಾಮೀಣ ಕ್ರೀಡೆ ಕಬಡ್ಡಿಗೆ ಮರುಜೀವ ಸಿಕ್ಕಂತಾಗಿದೆ. ಮುಂದಿನ ದಿನಗಳಲ್ಲಿ ಖೋ ಖೋ ಸೇರಿದಂತೆ ಇನ್ನೂ ಹಲವು ದೇಶಿ ಕ್ರೀಡೆಗಳನ್ನು ಮುನ್ನೆಲೆಗೆ ತರುವ ಪ್ರಯತ್ನಗಳಾಗಲೀ ಎಂದು ಆಶಿಸುವೆ.

-ಹಣಮಂತ ಎಂ.ಕೆ.

ತುಮಕೂರು

ಟಾಪ್ ನ್ಯೂಸ್

Road Mishap: ತೆಕ್ಕಟ್ಟೆ: ಇನ್ನೋವಾ, ಮೀನಿನ ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಗಂಭೀರ

Road Mishap: ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ… ಇಬ್ಬರು ಗಂಭೀರ

police crime

UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ

Terror 2

Pakistan;ಬಲೂಚಿಸ್ಥಾನದಲ್ಲಿ ಉಗ್ರರ ವಿರುದ್ಧ ಸಮಗ್ರ ಕಾರ್ಯಾಚರಣೆಗೆ ಮುಂದಾದ ಪಾಕ್

Bagheera OTT Release: ಭರ್ಜರಿ ಸಕ್ಸಸ್‌ ಕಂಡ ʼಬಘೀರʼ ಓಟಿಟಿ ಎಂಟ್ರಿಗೆ ಡೇಟ್‌ ಫಿಕ್ಸ್

Bagheera OTT Release: ಭರ್ಜರಿ ಸಕ್ಸಸ್‌ ಕಂಡ ʼಬಘೀರʼ ಓಟಿಟಿ ಎಂಟ್ರಿಗೆ ಡೇಟ್‌ ಫಿಕ್ಸ್

1-eeqweqweqwe

India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ

court

Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

10-uv-fusion

UV Fusion: ಬದುಕಿನಲ್ಲಿ ಭರವಸೆಗಳಿರಲಿ

9-uv-fusion

UV Fusion: ನಿಜವಾದ ಗೆಳೆತನಕ್ಕೆ ಅಂತ್ಯವಿಲ್ಲ

8-uv-fusion

UV Fusion: ಜೀವನದಿ ಕಾವೇರಿ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Road Mishap: ತೆಕ್ಕಟ್ಟೆ: ಇನ್ನೋವಾ, ಮೀನಿನ ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಗಂಭೀರ

Road Mishap: ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ… ಇಬ್ಬರು ಗಂಭೀರ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

police crime

UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ

10-uv-fusion

UV Fusion: ಬದುಕಿನಲ್ಲಿ ಭರವಸೆಗಳಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.