Rain: ಇಳೆ ತಂಪೆರೆವ ಮಳೆರಾಯ
Team Udayavani, Sep 17, 2024, 3:30 PM IST
ಕಿಟಕಿಯ ಸಮೀಪ ಕುಳಿತುಕೊಳ್ಳುವಾಗೆಲ್ಲಾ ಬೀಸುವ ತಾಜಾ ಗಾಳಿಯು ನನ್ನಲ್ಲಿ ಭಾವನೆಗಳನ್ನು ಸುರಿಸುತ್ತಲೇ ಇರುತ್ತದೆ. ಸಣ್ಣವರಾಗಿದ್ದಾಗ ಮಳೆಗಾಲದಲ್ಲಿ ಕೊಚ್ಚೆಗುಂಡಿಗಳಲ್ಲಿ ಜಿಗಿಯುತ್ತಾ ಆಟವಾಡುತ್ತಿದ್ದೆವು, ನೀರು ಇರುವಲ್ಲೆಲ್ಲಾ ಬಿಡಲು ಕಾಗದದ ದೋಣಿಗಳನ್ನು ತಯಾರಿಸುತ್ತಿದ್ದ ಬಾಲ್ಯದ ನೆನಪುಗಳು…ಎಲ್ಲವನ್ನೂ ನೆನಪಿಸುವಂತೆ ಮಾಡಿದೆ.
ಮಳೆಗಾಲದ ಮುಂಜಾನೆಯೇ ಬಹಳ ಚಂದ. ಮುಂಜಾನೆ ಚುಮುಚುಮು ಚಳಿಗೆ ಏಳಲು ಮನಸ್ಸಿಲ್ಲದೆ ಸೋಮಾರಿಗಳಾಗಿ ಹೊದಿಕೆಯೊಳಗೆ ಮುದುಡಿ ಮಲಗಿಕೊಳ್ಳುವುದೆಂದರೆ ಆನಂದವೋ ಆನಂದ. ಶಾಲೆಗೆ ರಜೆ ಸಿಕ್ಕರಂತೂ ಹೇಳುವುದೇ ಬೇಡ… ಕಾಟೂìನ್‌ಗಳನ್ನು ನೋಡಿಕೊಂಡು ಮನೆಯಲ್ಲಿಯೇ ಸಮಯವನ್ನು ಕಳೆಯುವುದರ ಮಜಾನೇ ಬೇರೆ.
ಬೇಸಗೆಯಲ್ಲಿ ಸೆಖೆಗೆ ಬಳಲಿ ಬೆಂಡಾಗಿ ಹೋಗಿರುವ ಜನರು ಮಳೆಯ ಆಗಮನದಿಂದ ಅತೀವವಾಗಿ ಸಂತಸಗೊಂಡು, ಮಳೆಯಲ್ಲಿ ಜಿಗಿಯುವುದರ ಮೂಲಕ ತಮ್ಮ ಹರುಷವನ್ನು ವ್ಯಕ್ತಪಡಿಸುತ್ತಾರೆ.
ಮಳೆಗಾಲದಲ್ಲಿ ಮನೆಯವರೆಲ್ಲರೂ ಒಟ್ಟಿಗೆ ಕುಳಿತುಕೊಂಡು ಚಹಾ ಮತ್ತು ಬಿಸಿಬಿಸಿಯಾದ ತಿಂಡಿಗಳನ್ನು ತಿನ್ನುತ್ತಾ ಮಳೆಯನ್ನು ಆಸ್ವಾದಿಸುವುದೆಂದರೆ ಒಂಥರಾ ಖುಷಿ. ಮನೆ ಮಂದಿಯೆಲ್ಲಾ ಒಟ್ಟಿಗೆ ಸೇರಿ ಹರಟೆ ಹೊಡೆಯಲು ಈ ಮಳೆ ಅವಕಾಶ ಕಲ್ಪಿಸುತ್ತಿತ್ತು…ಆ ದಿನಗಳ ನೆನಪುಗಳೇ ಸುಂದರ…ಸುಮಧುರ.
ಶಾಲೆಗೆ ಹೋಗುವ ಸಂದರ್ಭದಲ್ಲಿ ಮಳೆ ನೀರಿನಲ್ಲಿ ಆಟವಾಡುತ್ತಾ, ಅರ್ಧ ಒದ್ದೆಯಾಗಿ, ತಮ್ಮ ಕೊಡೆಯನ್ನು ಇನ್ನೊಬ್ಬರ ಜೊತೆ ಹಂಚಿಕೊಂಡು ಹೋಗುತ್ತಿದ್ದ ನೆನಪಂತೂ ಅತಿ ಮಧುರ.
ಮಳೆಯು ನಮಗೆ ಇಷ್ಟೆಲ್ಲಾ ಸಂತೋಷದ ಕ್ಷಣಗಳನ್ನು ನೀಡಿದ್ದರೆ, ಸಮುದ್ರದ ಬಳಿ ವಾಸಿಸುವ ಜನರ ಅನುಭವವೇ ಬೇರೆ. ಮಳೆಯ ಅತಿ ಭಯಂಕರ ಮುಖವನ್ನು ಆ ಪ್ರದೇಶದ ಜನರು ನೋಡಿರುವ ಕಾರಣ ಮಳೆಯ ಕುರಿತಾಗಿ ಅವರ ಅನುಭವವೇ ಭಯಾನಕವಾಗಿರುತ್ತದೆ. ಮಳೆ ಅವರನ್ನು ಭಯಭೀತರನ್ನಾಗಿಸಿರುತ್ತದೆ.
ಆದರೆ ಕೊನೆಯದಾಗಿ ಇಂತಹ ಭಯಾನಕ ಕ್ಷಣಗಳು ಕರಗಿ ಹಿತವಾದ ವಾತಾವರಣವು ಆಗಮಿಸುತ್ತದೆ. ಸಂತೋಷದ ಕ್ಷಣಗಳು ಮರುಕಳಿಸುತ್ತವೆ. ನಾವು ಪ್ರಕೃತಿಯನ್ನು ಪ್ರೀತಿಸಿದರೆ ಪ್ರಕೃತಿ ನಮ್ಮನ್ನು ಪ್ರೀತಿಸುತ್ತದೆ.
–ಫಿಲಿಶ ಆಲಿನ್ ಕ್ರಾಸ್ತ
ಸಂತ ಅಲೋಶಿಯಸ್ ಪರಿಗಣಿತ ವಿವಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.