ಮಳೆ ಎಂಬ ಪ್ರಕೃತಿಯ ಅತ್ಯುನ್ನತ ಕೊಡುಗೆ
Team Udayavani, Jun 5, 2021, 3:53 PM IST
ಮಳೆ ಎಂದರೆ ಸಂಭ್ರಮ. ಆತಂಕ, ಹಸುರು ಹಾಡಿನ ಚರಣ. ಮಳೆ ಬೀಳುವಾಗ ಗಾಳಿ ನವಿರಾಗಿ ಬೀಸಿದರೆ ಮಳೆ ನಿಂತು ಸುರಿಯುತ್ತದೆ. ಹೊಲ, ಗದ್ದೆಗಳು ನೆನೆಯುತ್ತವೆ. ಗಾಳಿ ಜೋರಾದರೆ ಹನಿಗಳು ಮೈಮೇಲೆ ಸೂಸುತ್ತವೆ. ಮಳೆ ಬೀಳುವಾಗ ಪ್ರಕೃತಿ ಹಸುರು ಹಾಸಿಗೆಯಿಂದ ಹಾಸಿದಂತೆ, ಮಳೆ ಬರುವ ಮುಂಚೆ, ಕಪ್ಪೆಗಳು ಮೇಘರಾಜನನ್ನು ಕರೆಯುತ್ತವೆ. ಇಬ್ಬನಿಯ ತಿಳಿ ಗಾಳಿಯಲ್ಲಿ ನಮ್ಮ ಮನಸ್ಸು ಬಾಚಿದಂತೆ, ಆಹಾ !! ಆಹಾ !! ಈ ಮಳೆಯ ಬಗ್ಗೆ ಎಷ್ಟು ವರ್ಣಿಸಿದರೂ ಸಾಲದು.
ಮೋಡ ಕವಿದಾಗ, ಗುಡುಗು ಕೇಳಿಸಿದಾಗ, ಮಿಂಚು ಸಿಡಿದಾಗ, ಒಮ್ಮೆಲೇ ಮನಸ್ಸು ತಳಮಳಗೊಳ್ಳುತ್ತದೆ. ವಿದ್ಯುತ್ ಕಣ್ಮರೆಯಾಗುತ್ತದೆ. ಕತ್ತಲು ಕವಿದು, ಮಳೆಯು ತನ್ನ ಗತಿಯಲ್ಲಿ ಸುರಿಯುತ್ತಿರುವಾಗ ನಮ್ಮೂರಿನಲ್ಲಿ ಗಾಳ ಹಿಡಿದುಕೊಂಡು ನದಿಗಳತ್ತ ಪ್ರಯಾಣ.
ಮಳೆಯಲ್ಲಿ ನೆನೆಯುದೆಂದರೆ ಪ್ರಕೃ ತಿಯ ಜತೆಗೆ ಒಂದಾಗುವ ಕ್ರಮ. ಮಳೆಯಲ್ಲಿ ನೆನೆಯುವುದೇ ಅದ್ಭುತ ಅನುಭವ. ನಾನಂತೂ ಮಳೆ ಸುರಿಯಲು ಆರಂಭಿಸಿದರೆ ನಮ್ಮ ಗದ್ದೆ ಬಯಲು ಪ್ರದೇಶದಲ್ಲಿ ಕುಣಿದು ಕುಪ್ಪಳಿಸಲು ಶುರುಮಾಡುತ್ತೇನೆ. ಮಳೆಯ ಹನಿಗಳಲ್ಲಿ, ಪ್ರಕೃತಿ ಜತೆ ಆನಂದಿಸುವುದು ಸ್ವರ್ಗ. ಸಿನೆಮಾದಲ್ಲಿ ಮಾತ್ರ ನೋಡಿ ಖುಷಿಪಡುತ್ತಿದ್ದೆವು. ಆದರೆ ನಿಜವಾದ ಸ್ವರ್ಗ ನಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿಯೇ ಇದೆ.
ಮಳೆಗಾಲದ ಆರಂಭದಲ್ಲಿ ಶಾಲೆ ಕಾಲೇಜಿನ ಬಾಗಿಲು ತೆರೆಯುತ್ತವೆ. ವಿದ್ಯಾರ್ಥಿಗಳು ಮೆಲ್ಲನೆ ಬರುತ್ತಿರುವ ಮಳೆಯ ಜತೆ, ಯಾವುದೋ ಮೂಲೆಯಲ್ಲಿ ಬಿದ್ದಿರುವ ಕಳೆದ ವರ್ಷದ ಕೊಡೆ ಬಿಡಿಸಿ ಹೋಗುವ ಸಂದರ್ಭ. ಮಳೆ ಜೋರಾಗಿ ಸುರಿದರೆ ಶಾಲೆಗಳಿಗೆ ರಜೆ. ವಿದ್ಯಾರ್ಥಿಗಳ ಪಾಲಿಗೆ ಮಳೆಯೇ ದೇವರು. ಮಳೆ ಜೋರಾಗಿ ಸುರಿದರೆ ಬೆಳಗ್ಗೆ ಬಂದಿರುವ ನೆಂಟರು ಸಂಜೆ ಉಳಿಯುವುದಿಲ್ಲ ಎಂಬ ಗಾದೆಗಳು ಇವೆ.
ಬರಡಾದ ಭೂಮಿಯಲ್ಲಿ ರೈತನೋರ್ವ ತನ್ನ ಕೈಯನ್ನು ತಲೆಮೇಲೆ ಇಟ್ಟು ಮಳೆರಾಯನನ್ನು ಕರೆಯುವ ಕ್ಷಣ. ಒಂದೇ ಸಮನೆ ಬರುವ ಮಳೆಯ ಜತೆಗೆ, ರೈತ ತನ್ನ ಕಣ್ಣೀರಿನ ಮುಖದಲ್ಲಿ, ಇಡೀ ದೇಹವನ್ನೇ ನೀರಲ್ಲಿ ನೆನೆಸಿ ಗದ್ದೆಯಲ್ಲಿ ಭತ್ತ ಬಿತ್ತುವ ಸಮಯ. ಇಳಿ ಸಂಜೆಯ ತಿಳಿ ಮಳೆಯಲ್ಲಿ, ಮೈ ನಡುಗುವ ಚಳಿ. ಚಳಿಗೆ ಒಂದು ಬಿಸಿ ಬಿಸಿ ಕಣ್ಣ ಚಾ (Black Tea) ಈ ಮಳೆಯ ಸುಂದರ ಕ್ಷಣ ಅನುಭವಿಸುವುದೇ ಸ್ವರ್ಗ.
ಈ ಭೂಮಿಯ ಮೇಲೆ ಎಲ್ಲವೂ ಮಳೆಯ ಮೇಲೆ ನಿಂತಿದೆ. ತುಂಬಾ ಕಾಲ ವಿಲವಿಲ ಒದ್ದಾಡುತ್ತಿರುವ ನೆಲವು ಒಂದು ಹನಿ ಬಿದ್ದ ಹೊತ್ತಿಗೆ, ಇನ್ನೂ ನನಗೆ ಬರೀ ತಂಪು ಎಂದು ಕೂಗುತ್ತದೆ. ಹಸುರಿಲ್ಲದೇ ಪ್ರಕೃತಿಗೆ ಉಸಿರಿಲ್ಲ, ನೀರಿಲ್ಲ ಎಂಬ ಕೆಲವು ಚಿಂತೆಗಳು ರೈತನಿಗೆ ಇರಲ್ಲ. ಮಳೆ ಬಂದರೆ, ಕಾಲಚಕ್ರದ ತರ. ರೈತನ ದಿನ ನಿತ್ಯ ಕಾಯಕ ನೆಮ್ಮದಿಯ ವಾತಾವರಣದಲ್ಲಿ ಸಾಗುತ್ತದೆ. ಜೋರಾದ ಮಳೆಯ ಜತೆ, ಒಂದು ಎಲೆ ಅಡಿಕೆ, ಒಂದು ಚಾ ಇದ್ದರೆ ಸಾಕು ಅದೇ ಸ್ವರ್ಗ ಎನ್ನುತ್ತಿದ್ದರು ನಮ್ಮ ತಾತ…
ಆದರೆ ಇಂದಿನ ಪ್ರಕೃತಿಯಲ್ಲಿ ಮಳೆಯು ಊಹೆಗೂ ಸಿಗದ ರಹಸ್ಯವಾಗಿದೆ. ಮಾನವ ಪ್ರಕೃತಿಯನ್ನು ಘೋರವಾಗಿ ನಾಶಮಾಡುತ್ತಿರುವ ಕಾರಣ. ಮಳೆಯೇ ಇಲ್ಲದೆ ಬರಿದಾಗಿದೆ. ಪ್ರಕೃತಿಯ ಅಳಿವಿಗೆ ಮಾನವ ಕಾರಣನಾದರೆ, ಮಾನವನ ಅಳಿವಿಗೆ ಪ್ರಕೃತಿಯೇ ಕಾರಣವಾಗು ತ್ತದೆ. ಪ್ರಕೃತಿಯನ್ನು ಉಳಿಸಿ, ಸುಂದರವಾದ ಉಸಿರಾಟದ ಜತೆಗೆ, ನೆಮ್ಮದಿಯ ಜೀವನ ನಡೆಸಲು ಪ್ರಕೃತಿಯ ಪಾತ್ರ ವಿಭಿನ್ನವಾದದ್ದು….!!
–ಶರತ್ MCL ಮುದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.