Rainy Season: ಜಿಟಿ ಜಿಟಿ ಮಳೆಯಲಿ…


Team Udayavani, Sep 18, 2024, 12:09 PM IST

7-Mushroom

ಪ್ರತಿಯೊಬ್ಬರು ತಮ್ಮ ತಮ್ಮ ಬಾಲ್ಯ ಜೀವನದಲ್ಲಿ ಮಳೆಗಾಲದೊಂದಿಗೆ ಸಂತೋಷದ ದಿನಗಳನ್ನು ಕಳೆದಿರುತ್ತಾರೆ. ಮಳೆ ನೀರಿನೊಂದಿಗೆ ಆಟ ಆಡುತ್ತ ಒಬ್ಬರ ಮೇಲೊಬ್ಬರು ನೀರೇರೆಚಿಕೊಳ್ಳುತ್ತ ತುಂಬ ಸಂತೋಷದಿಂದ ಬಾಲ್ಯವನ್ನು ಕಳೆದಿದ್ದೇವೆ.

ಇದರೊಂದಿಗೆ ಮಳೆಗಾಲದಲ್ಲಿ ಸಿಗುವಂತ ಕೆಲವೊಂದು ಆಹಾರ ಪದಾರ್ಥಗಳು ಸಹ ತುಂಬ ವಿಶೇಷವಾಗಿ ಇರುತ್ತದೆ.  ಮಳೆಗಾಲ ಎಂದರೆ ಕೆಲವರಿಗೆ ಎಲ್ಲಿಲ್ಲದ ಖುಷಿ. ಜಿಟಿ ಜಿಟ ಹನಿ ಮಳೆ ಬೀಳುತ್ತಲಿ ಅದನ್ನು ನೋಡುತ್ತಾ ಬಿಸಿ ಕಾಫಿ ಹೀರಿ, ಬಿಸಿ ಬಿಸಿ ತಿಂಡಿ ತಿನ್ನುವುದು ಸ್ವರ್ಗಕ್ಕೆ ಮೂರೇ ಗೇಣು ಎನ್ನಬಹುದು. ಮಳೆಗಾಲದಲ್ಲಿ ಆಹಾರದ ಬಯಕೆ ಕೂಡ ಹೆಚ್ಚಾಗೆ ಆಗಲಿದೆ.

ಈ ಆಹಾರ ಪದಾರ್ಥಗಳನ್ನು ನಮಗೆ ಪ್ರಕೃತಿ ದೇವತೆ ನೀಡುತ್ತಾಳೆ. ಮಳೆಗಾಲದಲ್ಲಿ ಮಾತ್ರ ಸಿಗುವಂತಹ ವಿಶೇಷವಾದ ಆಹಾರ ಪದಾರ್ಥ ಎಂದರೆ ಅದು ಅಣಬೆ. ಅಣಬೆಗಳಲ್ಲಿ ನಾಯಿಕೊಡೆ ಮತ್ತು ಕಲ್ಲಣಬೆ ಎಂಬ ಎರಡು ರೀತಿಯ ಅಣಬೆಗಳನ್ನು ಕಾಣಬಹುದು. ಇದರಲ್ಲಿ ಕೆಲವೊಂದು ಅಣಬೆಗಳು ವಿಷಪೂರಿತ ಅಣಬೆಗಳಗಿರುತ್ತವೆ. ನಾವು ಸರಿಯಾಗಿ ಅವುಗಳನ್ನು ಗಮನಿಸದೆ ಪದಾರ್ಥಗಳಿಗೆ ಬಳಸಿದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಈ ಅಣಬೆಗಳು ಹೆಚ್ಚಾಗಿ ಹಳ್ಳಿಪ್ರದೇಶಗಳಲ್ಲಿ ಕಂಡು ಬರುತ್ತದೆ. ಮಾರುಕಟ್ಟೆಗಳಲ್ಲಿ ಇದನ್ನು ಮಾರಾಟ ಮಾಡುತ್ತಾರೆ ಮತ್ತು ಇದಕ್ಕೆ ಹೆಚ್ಚಿನ ಬೇಡಿಕೆ ಸಹ ಇದೆ. ಅಣಬೆಗಳು ನಮಗೆ ಮಳೆಗಾಲದಲ್ಲಿ ಮಾತ್ರ ಸಿಗುತ್ತದೆ. ಆದರೆ ಕೆಲವರು ಅಣಬೆ ಕೃಷಿ ಮಾಡುವವರು ಎಲ್ಲ ಕಾಲಕ್ಕೂ ಕೂಡ ನೀಡುತ್ತಾರೆ, ಆದರೆ ಪ್ರಾಕೃತಿಕವಾಗಿ ಅಣಬೆಯೂ ಮಳೆಗಾಲಕ್ಕೆ ಸಿಗುವ ಒಂದು ಆಹಾರ ಪದಾರ್ಥ ಎನ್ನಬಹುದು.

ಮಳೆಗಾಲದಲ್ಲಿ ಇಂತಹ ಆಹಾರ ಪದಾರ್ಥಗಳನ್ನು ಸೇವಿಸುವುದೇ ಒಂದು ರೀತಿಯ ಸಂತೋಷ. ಅಲ್ಲದೇ ಇವು ಈ ಸಮಯದಲ್ಲಿ ನಾಲಗೆಗೆ ಒಳ್ಳೆಯ ರುಚಿಯನ್ನು ನೀಡುವಂತಹ ಒಂದು ಆಹಾರ ಪದಾರ್ಥವಾಗಿದೆ. ಇದರ ಜೊತೆಗೆ ಮಳೆಗಾಲದಲ್ಲಿ ಉಪಯೋಗ ಆಗಬೇಕು ಎಂಬ ಉದ್ದೇಶಕ್ಕೆ ಬೇಸಿಗೆ ಕಾಲಕ್ಕೆ ಹಲಸಿನ ಕಾಯಿ ತುಂಡರಿಸಿ ಉಪ್ಪಿಗೆ ಹಾಕಿ ಅದನ್ನು ಮಳೆಗಾಲದಲ್ಲಿ ಬಳಸುವುದನ್ನು ನಾವು ಕಾಣಬಹುದು. ಹೀಗೆ ಮಳೆಗಾಲದಲ್ಲಿ ಬೇಕಾಗುತ್ತದೆ ಎಂದು ಬೇಸಿಗೆ ಕಾಲಕ್ಕೆ ಅಕ್ಕಿ ಹಪ್ಪಳ, ಸಂಡಿಗೆ ಇತ್ಯಾದಿ ಮಾಡಿರುತ್ತಾರೆ ಇವುಗಳು ಮಳೆಗಾಲಕ್ಕೆ ರುಚಿಯಾದ ಆಹಾರಗಳಾಗಿ ನಮ್ಮ ಬಾಯ್‌ರುಚಿಯ ಬಯಕೆಯನ್ನು ತಣಿಸುತ್ತವೆ.

– ಚೈತನ್ಯ ಕೋಟ್ಯಾನ್‌

ಎಂ.ಪಿ.ಎಂ, ಕಾರ್ಕಳ

ಟಾಪ್ ನ್ಯೂಸ್

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-kashmir-msulim-IAS

Kashmir; ಮೊದಲ ಮುಸ್ಲಿಂ ಐಎಎಸ್‌ ಅಧಿಕಾರಿ ನಿಧನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

1-tWWW

Tupperware ಲಂಚ್‌ ಬಾಕ್ಸ್‌ ದಿವಾಳಿ: ಅಮೆರಿಕದ ಕಂಪೆನಿ ಘೋಷಣೆ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.