ಕಾವ್ಯ ಮಲ್ಲಿಗೆ : ಮುಂಗಾರ ಕೆಲಸಕ್ಕೆ ಅಣಿಯಾಗಿಹರು
Team Udayavani, Jul 27, 2021, 2:00 PM IST
ಮುಂಗಾರ ಕೆಲಸಕ್ಕೆ ಅಣಿಯಾಗಿಹರು..
ಮೋಡವು ಕವಿದಿದೆ ಮಳೆಯದು ಸುರಿಯುತಿದೆ
ಮುಂಗಾರ ಆರಂಭ ಕೃಷಿ ಕೆಲಸದಾರಂಭ.
ರಾಗಿ ಅಂಬಲಿ ಗಂಜಿ ಊಟವನು ಮಾಡಿಹರು
ಕಂಬಳಿಯ ಹೊದ್ದಿಹರು ಹೊಲಕೆ ನಡೆದಿಹರು.
ಜಡಿಮಳೆಯ ಹೊಡೆತದ ನೀರಲಿ ತೊಯ್ದಿಹರು
ಗಡಗಡ ನಡುಗುತ್ತ ದಿನವಿಡೀ ದುಡಿಯುವರು.
ಎಲೆ ಅಡಿಕೆ ಜಗಿಯುತ್ತ ಬೀಡಿಯ ಸೇದುತ್ತ
ಸುಡುತಿಹ ಚಹವನ್ನು ಗುಟುಕು ಕುಡಿಯುತ್ತ.
ಮೈಯ ಬಿಸಿ ಏರಿದೆ ಚಳಿ ನಡುಕ ತಂದಿದೆ
ಮತ್ತೆ ದುಡಿಯುವ ತುಡಿತ ಉಲ್ಲಾಸ ಬಂದಿದೆ.
ಪಾಡªನವ ಹಾಡುತ್ತ ನೇಜಿಯನು ನೆಡುತಿಹರು
ಎಲ್ಲರೂ ಒಗ್ಗೂಡಿ ಮೈ ಬಗ್ಗಿ ದುಡಿತಿಹರು.
ಸೂರ್ಯಾಸ್ತದ ಸಮಯ ಬಚ್ಚಲಲಿ ಬೆಂಕಿ ಉರಿ ಬಿಸಿನೀರ ಸ್ನಾನದಲಿ ದಣಿವನಾರಿಸುವವರು.
ಸಿರಿತನದ ವೈಭವವು ಇವರಿಗದು ಬೇಕಿಲ್ಲ
ನಾಳೆಯ ಚಿಂತೆ ಅವರಿಗೆಂದೂ ಇಲ್ಲ
ಬಿಸಿಬಿಸಿ ಗಂಜಿಯನು ಸಂಜೆಯೇ ಉಣ್ಣುವರು
ಸುಖದ ನಿದ್ದೆಯ ಮಾಡಿ ನಾಳೆಗಣಿಯಾಗುವರು
-ಭಾರತಿ ಡಿ ತಾಮ್ಹನ್ ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.