Bamboo: ಬಿದಿರು ಎಂದು ಮೂಗು ಮುರಿಯದಿರಿ
Team Udayavani, Nov 26, 2024, 8:13 PM IST
ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲದವಳೆ ಈ ಹಾಡನ್ನು ನೀವು ಕೂಡ ಕೇಳಿರಬಹುದು. ಒಂದೇ ಹಾಡಿನಲ್ಲಿ ಬಿದಿರಿನ ಪ್ರಾಮುಖ್ಯತೆ ಎಲ್ಲವನ್ನು ಅರಿಯಬಹುದು. ಇಂತಹ ಬಿದಿರಿನ ಬಗ್ಗೆ ಮೂಗು ಮುರಿಯುವ ಮುನ್ನ ಈ ಲೇಖನ ಪೂರ್ತಿ ಓದಿ.
ಬಿದಿರು ಗಿಡವು ಅತ್ಯಂತ ವೇಗವಾಗಿ ಬೆಳೆಯುವ ಹಾಗೂ ಪರಿಸರದೊಂದಿಗೆ ಮಿಳಿತವಾದ ಸಸ್ಯಗಳಲ್ಲಿ ಪ್ರಮುಖವಾಗಿದೆ. ಇದನ್ನು ಹಿಂದಿನ ಕಾಲಚಿದಲ್ಲಿ ಕಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಉದ್ಯಾನವನಗಳು ಮತ್ತು ಮನೆಗಳ ಅಂಗಳಗಳಲ್ಲಿ ಶೃಂಗಾರಿಕೆಗೆಂದು ಬೆಳೆಯಲಾಗುತ್ತಿದೆ.
ಬಿದಿರು “Poaceae” ಕುಟುಂಬದ “Bambusoideae’ ಉಪಕುಟುಂಬಕ್ಕೆ ಸೇರಿದ್ದು, ಸಂಸ್ಕೃತದಲ್ಲಿ “ವಂಶ,” “ವೇಣು,” “ಶತಪರ್ವ” ಇತ್ಯಾದಿ ಹೆಸರಿನಿಂದ ಕರೆಸಿಕೊಳ್ಳುತ್ತದೆ. ಹಿಂದೂಸ್ತಾನಿಯಲ್ಲಿ “ಬಾಸ್” ಎಂದು ಕರೆಯಲ್ಪಡುವ ಈ ಸಸ್ಯದಿಂದ ಬಾಸುರಿ ಅಥವಾ ಕೊಳಲು ತಯಾರಿಸಲಾಗುತ್ತದೆ, ಮತ್ತು ಲ್ಯಾಟಿನ್ ಭಾಷೆಯಲ್ಲಿ ಇದನ್ನು “Bambusa arundinacea” ಎಂದು ಕರೆಯುತ್ತಾರೆ.
ವಿಶ್ವದಲ್ಲಿ ಸುಮಾರು 550 ಪ್ರಭೇದಗಳ ಬಿದಿರು ಪ್ರಜಾತಿಗಳು ಇದ್ದು, ಭಾರತದಲ್ಲಿ 136 ಬಗೆಯ ಬಿದಿರುಗಳು ಕಂಡುಬರುತ್ತವೆ. ಆದರೆ ಸಾಮಾನ್ಯವಾಗಿ ದೇಶದಲ್ಲಿ 40ಕ್ಕೂ ಅಧಿಕ ಬಗೆಯ ಬಿದಿರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಬಿದಿರು ತನ್ನ ಜೀವಕಾಲದಲ್ಲಿ ಸುಮಾರು 32, 60, ಅಥವಾ 120 ವರ್ಷಗಳಲ್ಲಿ ಹೂ ಬಿಟ್ಟ ನಂತರ ಮಣ್ಣಿಗೆ ಮರಳಿ, ಮುಂದಿನ ಪೀಳಿಗೆಗೆ ಸ್ಥಳ ಬಿಡುತ್ತದೆ. ಇದು ದಿನಕ್ಕೆ 3-4 ಅಂಗುಲಗಳಷ್ಟು ಬೆಳೆಯುವ ಸಾಮರ್ಥಯ ಹೊಂದಿದ್ದು, ಗುಂಪುಗುಂಪಾಗಿ ಬೆಳೆಯುವುದು ಇದರ ವಿಶೇಷತೆ.
ಬಿದಿರು ಅತಿ ವಿಭಿನ್ನ ರೀತಿಯ ಬಳಕೆಗಳಲ್ಲಿ ಅನ್ವಯವಾಗುತ್ತದೆ. ಕಾಗದ ಮತ್ತು ರೇಯಾನ್ ಬಟ್ಟೆಯ ತಯಾರಿಕೆಯಲ್ಲಿ ಇದು ಪ್ರಮುಖ ವಸ್ತುವಾಗಿದ್ದು, ಮನೆಯ ನಿರ್ಮಾಣ, ದೋಣಿಗಳ ತಯಾರಿಕೆ, ಹಾಗೂ ಪೀಠೊಪಕರಣಗಳಲ್ಲಿ ಬಿದಿರು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಬಿದಿರು ಮರದಿಂದ ದೀಪದ ಕಂಬ, ಏಣಿ, ತೊಟ್ಟಿಲು, ಕೊಳಲು, ಕುರ್ಚಿ, ಮೇಜು, ಆಟಿಕೆ, ಅಲಂಕಾರಿಕ ವಸ್ತುಗಳು ಮುಂತಾದವುಗಳ ತಯಾರಿಕೆಗೆ ಬಳಕೆಯಾಗುತ್ತದೆ. ಕೃಷಿ ಉಪಕರಣಗಳು ಮತ್ತು ಕಟ್ಟಡಗಳನ್ನು ದುರಸ್ತಿ ಮಾಡಲು ಬಿದಿರು ಉಪಯೋಗಿಯಾಗುತ್ತದೆ.
ಆಯುರ್ವೇದದಲ್ಲಿ ಬಿದಿರು ವಿಶೇಷ ಸ್ಥಾನವನ್ನು ಹೊಂದಿದ್ದು, ಬಿದಿರಿನ ಎಲೆಗಳು ಗಾಯ, ಬಾವು ನಿವಾರಕವಾಗಿ ಬಳಸಲಾಗುತ್ತದೆ. ಬಿದಿರು ಗಿಡದ ತೊಗಟೆ ಅಥವಾ ಕಳಲೆಯನ್ನು ಪಲ್ಯ, ಸಾಂಬಾರು, ಗೊಜ್ಜು ಮುಂತಾದ ಆಹಾರ ತಯಾರಿಕೆಯಲ್ಲಿ ಬಳಸುವವರು ಇದ್ದಾರೆ. ಈ ಕಳಲೆ 3 ದಿನಗಳ ಕಾಲ ನೀರಿನಲ್ಲಿ ನೆನೆಸಿದರೆ ಮಾತ್ರ ಅದು ಹಾನಿಕಾರಕವಾಗದೆ, ಆಹಾರ ದ್ರವ್ಯವಾಗಿ ಪರಿವರ್ತಿಸುತ್ತದೆ. ಬಿದಿರಿನ ಅಕ್ಕಿ ಸಾಮಾನ್ಯ ಅಕ್ಕಿಗಿಂತ ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿದ್ದು, ಬಾಣಂತಿಯರಿಗೂ ಬಹಳ ಉಪಯುಕ್ತವಾಗಿದೆ.
ಆಯುರ್ವೇದ ಔಷಧೀಯ ತಯಾರಿಕೆಯಲ್ಲಿ ಬಿದಿರು ರಸ “ವಂಶಲೋಚನ” ವಿಶೇಷ ಸ್ಥಾನವನ್ನು ಪಡೆದಿದ್ದು, ಇದು ಹಲವಾರು ರೋಗಗಳಿಗೆ ಔಷಧಿಯಾಗಿದೆ. ಇದನ್ನು “ತಾಲೀಸಾದಿಚೂರ್ಣ,” “ಸಿತೋಪಲಾದಿ ಚೂರ್ಣ’ ಮುಂತಾದ ಆಯುರ್ವೇದಿಕ ಚೂರ್ಣಗಳಲ್ಲಿ ಬಳಸಲಾಗುತ್ತದೆ. ವಂಶಲೋಚನವು ಹೃದಯ, ರಕ್ತಪಿತ್ತ, ಚರ್ಮರೋಗ, ವಾಂತಿ, ಅತಿಸಾರ ಮುಂತಾದ ಸಮಸ್ಯೆಗಳನ್ನು ನಿವಾರಿಸಲು ಪೂರಕವಾಗಿದೆ. ಬಿದಿರು ರಕ್ತಶೋಧಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಬಾಣಂತಿಯರಿಗೆ ಲಾಭಕಾರಿ. ಆದರೆ ಮೂಳೆ ರೋಗವಿರುವವರು ಬಿದಿರು ಬಳಕೆ ಮಿತಿಯಲ್ಲಿ ಇರಿಸಬೇಕಾಗಿದೆ.
ಬಿದಿರು ಗಿಡವು ಜಾಗತಿಕ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯಲ್ಲಿದ್ದು, ಅದರ ತ್ವರಿತ ಬೆಳವಣಿಗೆ ಮತ್ತು ಬಲವಾದ ಜೈವಿಕ ಬಾಹ್ಯದಿಂದ ಮೌಲ್ಯವನ್ನು ಹೆಚ್ಚಿಸಿದೆ. ಪ್ಲಾಸ್ಟಿಕ್‌ನ ಪರ್ಯಾಯವಾಗಿ ಬಿದಿರನ್ನು ಬಳಸುವ ಪ್ರವೃತ್ತಿ ಹೆಚ್ಚುತ್ತಿದ್ದು, ಪರಿಸರ ಸ್ನೇಹಿ ಚಲನೆಯ ಭಾಗವಾಗಿದೆ. ಬಿದಿರು ಬೆಳೆಯು ತೇವಾಂಶ, ಸೂರ್ಯನ ಬೆಳಕು, ಮತ್ತು ಸರಿಯಾದ ಪೋಷಕಾಂಶವನ್ನು ಹೊಂದಿರುವ ಮಣ್ಣಿನಲ್ಲಿ ವೇಗವಾಗಿ ಬೆಳೆಯುತ್ತದೆ. ಬಿದಿರು ಬಿತ್ತಿದ 3-5 ವರ್ಷಗಳಲ್ಲಿ ಪೂರ್ಣ ಪ್ರಮಾಣದ ಬೆಳೆಯಾಗುತ್ತದೆ, ಇದರಿಂದಾಗಿ ಇದು ಕಡಿಮೆ ನಿರ್ವಹಣೆಯಲ್ಲಿ ಹೆಚ್ಚಿನ ಫಲಿತಾಂಶ ನೀಡುತ್ತದೆ. ಬಿದಿರು ಮರಗಳು ಬಲವಾದ ಮಣ್ಣು ಕಟ್ಟುವ ಗುಣವನ್ನು ಹೊಂದಿದ್ದು, ಪರಿಸರದ ಸಂರಕ್ಷಣೆಯಲ್ಲಿ ಸಹಕಾರಿಯಾಗಿದೆ.
ಹೀಗಾಗಿ, ಬಿದಿರು ಗಿಡವು ಪ್ರಕೃತಿಗೆ ನಿಸರ್ಗದ ಕೊಡುಗೆ, ಮತ್ತು ಮಾನವ ಸಮಾಜಕ್ಕೆ ಅನೇಕ ಹಿತಕರ ಅಂಶಗಳನ್ನು ಒದಗಿಸುತ್ತದೆ. ಅದು ವೇಗವಾಗಿ, ಶಕ್ತಿಯುತವಾಗಿ ಕಡಿಮೆ ಖರ್ಚಿನಲ್ಲಿ ಬೆಳೆಯುವ ಸಸ್ಯವಾಗಿದ್ದು, ಅದರ ವಿವಿಧ ಬಳಕೆಗಳು ಮತ್ತು ಪರಿಸರ ಸ್ನೇಹಿ ಗುಣಗಳಿಂದಾಗಿ ಜಾಗತಿಕವಾಗಿ ಬಹಳ ಪ್ರಖ್ಯಾತವಾಗಿದೆ.
-ಅಭಿಜ್ಞಾ ಲಕ್ಷ್ಮೀ
ಎಂಜಿನಿಯರಿಂಗ್ ಕಾಲೇಜು, ನಿಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.