ಅಕ್ಕನೊಂದಿಗೆ ಬಾಲ್ಯದ ಸ್ವಾತಂತ್ರ್ಯದಿನಾಚರಣೆಯ ಮೆಲುಕು


Team Udayavani, Aug 15, 2020, 6:15 AM IST

Childood

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಪ್ರೀತಿಯ ಅಕ್ಕಾ ಹೇಗಿದ್ದೀಯ ನೀನು ವಿದೇಶದಲ್ಲಿ ಸುರಕ್ಷಿತವಾಗಿ ಇರುವೆ ಎಂದು ಭಾವಿಸುವೆ.

ನಾವು ಇಲ್ಲಿ ಕ್ಷೇಮವಾಗಿದ್ದೇವೆ. ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೇವೆ ಆದಷ್ಟು ಬೇಗ ಬಾ.

ದೂರವಾಣಿಯಲ್ಲಿ ಎಷ್ಟು ಹರಟಬಹುದು, ವಿಡಿಯೋ ಕರೆಯಲ್ಲಿ ಮಾತಾಡಬಹುದು. ಆದರೆ ಬರವಣಿಗೆಯಲ್ಲಿ ಉಕ್ಕುವ ಭಾವನೆ ಸರಣಿ ಮಾತುಗಳಲ್ಲಿ ಸಿಗುವುದಿಲ್ಲ. ಅದಕ್ಕಾಗಿ ನಿನ್ನ ನೆನಪಿನ ಹಂದರದಲ್ಲಿ ಈ ಪತ್ರ ಬರೆಯುತ್ತಿದ್ದೇನೆ ಕಣೇ.

ಅಕ್ಕಾ ಸ್ವತಂತ್ರ ಅಂದ್ರೆ ಅದೊಂದು ಹೋರಾಟ, ತ್ಯಾಗ, ಮಾತೃಭೂಮಿ ಎನ್ನುವ ಉನ್ಮತ್ತ ಶಕ್ತಿ. ನಮ್ಮ ಭಾರತದ ದೇಶಕ್ಕಾಗಿ ಸಂಭವಿಸಿದ ಸುಧೀರ್ಘ‌ ಸಂಘರ್ಷ. ಸ್ವಾತಂತ್ರ್ಯ ದೇಶದ ಮಟ್ಟಿಗೆ ಎಷ್ಟು ಪ್ರಮುಖವೊ ಹಾಗೆ ವ್ಯಕ್ತಿಯ ಮಟ್ಟಿಗೂ ಸ್ವಾತಂತ್ರ್ಯ ಅಷ್ಟೇ ಮುಖ್ಯ. ತನ್ನ ಆಲೋಚನೆಗಳನ್ನು ಹಾಗೂ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ಸ್ವಾತಂತ್ರ್ಯ ಆವಶ್ಯಕವಾಗಿದೆ.

ನನಗೂ ನಿನಗೂ ಸ್ವತಂತ್ರ ದಿನಾಚರಣೆ ಎಂದರೆ ಮರೆಯಲಾಗದಷ್ಟು ಸಿಹಿ ನೆನಪುಗಳಿವೆ. ನೆನಪಿದ್ಯಾ ನಿನಗೆ ?ನಾವಿಬ್ಬರೂ ಬಿಳಿ ಸಮವಸ್ತ್ರ ತೊಟ್ಟು ಹಿಂದಿನ ದಿನವೇ ಹತ್ತಾರು ಆಂಗಡಿ ಸುತ್ತಿ ತಂದಿದ್ದ ಕೆಸರಿ ಬಿಳಿ ಹಸಿರು ಬಣ್ಣದ ಬ್ಯಾಂಡ್‌ ಹಾಕಿ ಇಬ್ಬರೂ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದದ್ದು. ತಿಂಗಳಿನಿಂದಲೇ ಅಭ್ಯಾಸ ನಡೆಸಿ ವೆಂಕಟೇಶ್‌ ಸರ್‌ ಹೇಳಿಕೊಡುತ್ತಿದ್ದ ವಂದೇ ಮಾತರಂ ಹಾಡನ್ನು ವೇದಿಕೆಯಲ್ಲಿ ನಿಂತು ಹಾಡುತ್ತಿದ್ದದ್ದು, ಒಮ್ಮೆ ನಾನು ಸಾವರ್ಕರ್‌ ಅವರ ಕುರಿತಾದ ಭಾಷಣಕ್ಕೆ ತಯಾರಾಗಿದ್ದೆ. ವೇದಿಕೆಗೆ ಹೋಗುತಿದ್ದಂತೆ ಗಲಿಬಿಲಿಯಾಗಿ ತಡಬಡಾಯಿಸಿದ್ದು ಹೇಗೊ ಸಂಭಾಳಿಸಿಕೊಂಡು ಭಾಷಣ ಮಾಡಿದ್ದೆ.  ವೇದಿಕೆಯ ಮೇಲಿದ್ದ ಅತಿಥಿಗಳಿಂದ ಬಹುಮಾನ ಪಡೆದಿದ್ದೂ ಸವಿನೆನಪು.

ಆಗಸ್ಟ್‌ ಬಂದರಂತೂ ನೆನಪುಗಳು ಚಿಟಿಚಿಟಿ ಮಳೆಯಂತೆ ಕಾಡುತ್ತೆ. ಇಂದು ಕೊರೊನಾ ಕಾರಣದಿಂದ ಮನೆಯಲ್ಲೇ ಇರಬೇಕಾಗಿದೆ ಪ್ರತೀ ವರ್ಷ ಮನೆಮುಂದೆ ಹೋಗುತ್ತಿದ್ದ ಗಾಂಧಿ, ಸಾವರ್ಕರ್‌ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಚಂದ್ರಶೇಖರ ಅಜಾದ್‌, ವೇಷಭೂಷಣದ ಶಾಲಾ ಪುಟಾಣಿಗಳ ಟ್ಯಾಬ್ಲೋ ಮೆರಣಿಗೆ ಈ ಬಾರಿ ಇಲ್ಲ ಅವರ ಸಂಭ್ರಮ ಚಿತ್ರಕಲಾ, ಭಾಷಣ, ಕಿರುನಾಟಕ ದೇಶಭಕ್ತಿಗೀತೆಗಳ ಸ್ಪರ್ಧೆಗಳೂ ಹಾಡು ನೃತ್ಯಗಳ ತಯಾರಿಯೂ ಇಲ್ಲ.

ಕೊರೊನಾ ಕಾರಣದಿಂದ ಶಾಲಾ ಕಾಲೇಜುಗಳು ಇನ್ನು ತೆರೆದಿಲ್ಲ. ಶಾಲೆಗಳ ಪುನರ್‌ ಪ್ರಾರಂಭದ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ. ಎಲ್ಲ ಕಳೆದು ಮುಂದಿನ ವರ್ಷ ಆಗಸ್ಟ್‌ 15 ಸಂಭ್ರಮ ಮೊದಲಿನಂತೆ ಇರಲಿ. ಮಹನೀಯರ ಆದರ್ಶದಿಂದ ನಮ್ಮ ನಾಳೆಗಳು ಉನ್ನತವಾಗಲಿ ಸಂತೋಷದಿಂದ ಹೆಮ್ಮೆಯಿಂದ ಸ್ವತಂತ್ರ ದಿನಾಚರಣೆಯನ್ನು ಒಟ್ಟಾಗಿ ಎಲ್ಲರೂ ಆಚರಿಸುವಂತಾಗಲಿ. ಕಳೆದ ವರ್ಷಗಳಂತೆ ಎಲ್ಲ ಸಂತಸದ ಕ್ಷಣಗಳು ಮರಳಿ ಎನ್ನುವೇ ಹಾರೈಕೆ ಯಾಗಿದೆ.

– ಸುರಭಿ ಎಸ್‌. ಶರ್ಮಾ

 

 

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.