ಜವಾಬ್ದಾರಿ ಕಲಿಸಿದ ಪ್ರವಾಸ
Team Udayavani, Jul 21, 2020, 1:29 PM IST
ಜೀವನದ ಸುಮಧುರ ಘಳಿಗೆಯಲ್ಲಿ ಸಾಕ್ಷಿಯಾದಾಗ ಬದುಕಿನ ಖುಷಿಯನ್ನು ನಾವು ಕಂಡುಕೊಳ್ಳುತ್ತೇವೆ. ಅನುಭವವನ್ನು ಪಡೆದುಕೊಳ್ಳುತ್ತೇವೆ. ನಾನು ಕಾಲೇಜು ದಿನಗಳಲ್ಲಿ ನಾನು ಪ್ರವಾಸ ಕೈಗೊಂಡಿದ್ದು ಇಂತಹದ್ದೇ ಅನುಭವಕ್ಕೆ ಕಾರಣವಾಯಿತು.
ಪದವಿ ಕೊನೆಯ ಸೆಮಿಸ್ಟರ್‌ನಲ್ಲಿ ಇತಿಹಾಸ ವಿಭಾಗದಿಂದ ಪ್ರವಾಸವನ್ನು ಕೈಗೊಂಡಿದ್ದೆವು. ಈ ಪ್ರವಾಸದಿಂದ ಬೇಕಾದಷ್ಟು ಅನುಭವ, ಪಾಠವನ್ನು ಕಲಿಯುವಂತಾಯಿತು. ಪ್ರವಾಸ ಜವಾಬ್ದಾರಿಯನ್ನು ನಮ್ಮ ಮೇಲೆ ಹಾಕಿಕೊಂಡು ಕೊನೆಗೆ ಉಪನ್ಯಾಸಕರನ್ನು ಒಪ್ಪಿಸಿ ಪ್ರವಾಸಕ್ಕೆ ಹೋಗಲು ಸಿದ್ಧಗೊಂಡೆವು.
ಉತ್ತರ ಕನ್ನಡದ ಕಡೆ ಪ್ರವಾಸಕ್ಕೆ ಹೊರಟೆವು. ಕಾತರ, ಕುತೂಹಲದಿಂದಾಗಿ ಹಿಂದಿನ ದಿನ ನಿದ್ದೆಯೇ ಮಾಡಿರಲಿಲ್ಲ.
ಎಲ್ಲರ ಆಗಮನದ ಬಳಿಕ ಬಸ್ ಹೊರಟಿತು. ಬಸ್‌ನಲ್ಲಿ ಮನೋರಂಜನೆಗೆ ನೃತ್ಯ, ಅಂತ್ಯಾಕ್ಷರಿ ಆರಂಭಗೊಂಡವು. ನಮ್ಮ ಬಸ್ ಮೊದಲಿಗೆ ಕದಂಬರ ರಾಜಧಾನಿ ಬನವಾಸಿ ತಲುಪಿತು.ಬನವಾಸಿಯ ಕಲೆ, ವಾಸ್ತುಶಿಲ್ಪ ಆಡಳಿತದ ಬಗ್ಗೆ ಮಾಹಿತಿ ಪಡೆದೆವು. ಮುಂದೆ ಯಾಣಕ್ಕೆ ಹೋಗಬೇಕು ಅನ್ಕೊಂಡವರು ಪ್ರವಾಸ ಹಾದಿಯನ್ನು ಬದಲಾಯಿಸಿದೆವು. ಶಿರಸಿ-ಗೋಕರ್ಣದ ಮೂಲಕ ಮುರುಡೇಶ್ವರಕ್ಕೆ ಹೋಗಲು ನಿರ್ಧರಿಸಿದೆವು.
ದೇವರ ದರ್ಶನ ಪಡೆದ ಬಳಿಕ ಎತ್ತರದ ಗೋಪುರದಲ್ಲಿ ಲಿಫ್ಟ್ ಮೂಲಕ ಹತ್ತಿ ಅಲ್ಲಿಂದ ಸಮುದ್ರದ ಸುತ್ತಲಿನ ಪ್ರಕೃತಿ ಸೊಬಗನ್ನು ಕಂಡು ಆಹ್ಲಾದಿಸಿದೆವು. ಅನಂತರ ಸಮುದ್ರಕ್ಕಿಳಿದು ನೀರಾಟವಾಡಿ ಸಂತೋಷಗೊಂಡೆವು. ಸಮಯ ಆಗುತ್ತಿರುವುದರಿಂದ ಕೊಲ್ಲೂರುವಿನತ್ತ ಪ್ರಯಾಣ ಬೆಳೆಸಿ, ಅಲ್ಲಿ ದೇವಿಯ ದರ್ಶನ ಪಡೆದು ಹೊಸನಗರ ಮಾರ್ಗವಾಗಿ ವಾಪಸಾದೆವು. ಈ ಪ್ರವಾಸದಿಂದ ನಾವು ಆನಂದ, ಸಂತೋಷ ಪಡೆಯುವ ಜತೆಗೆ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬೇಕು ಎಂದು ಕಲಿತೆವು.
ಪವನ್ ಕುಮಾರ್ ಎಂ. ರಿಪ್ಪನ್ ಪೇಟೆ, ಕುವೆಂಪು ವಿವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.