Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

ಪಂತ್‌ ಯಶೋಗಾಥೆಯೇ ಯುವಕರಿಗೆ ಸ್ಫೂರ್ತಿ

Team Udayavani, Apr 28, 2024, 8:00 AM IST

14-rishab-pant

ಆತ ಸೋಲರಿಯದ ಛಲಗಾರ. ಸಾವೇ ಎದುರಿಗೆ ಬಂದರೂ, ಹಿಮ್ಮೆಟ್ಟಿಸಿ, ಪುನರ್‌ ಜನ್ಮ ಪಡೆದು, ಯಾರೂ ಊಹಿಸಿರದ ರೀತಿಯಲ್ಲಿ ಚೇತರಿಸಿಕೊಂಡು, ಮತ್ತೆ ಕ್ರಿಕೆಟ್‌ ಅಂಗಳಕ್ಕಿಳಿದ ಅಪ್ರತಿಮ ಸಾಹಸಿ. ಹೌದು ಸಾವನ್ನೇ ಗೆದ್ದು ಬಂದು, ಮತ್ತೆ ಬ್ಯಾಟ್‌ ಹಿಡಿದು ಆಡಳಿಲಿದ ರಿಷಭ್‌ ಪಂತ್‌ ಈಗ ಎಲ್ಲರ ಮನಗೆದ್ದಿರುವ ಸಾಧನೆ ಮಾಡಿದ್ದಾರೆ. ಮಾತ್ರವಲ್ಲ ಬದುಕಿನ ಪಯಣದಲ್ಲಿ ಎದುರಾಗುವ ಅಡೆತಡೆಗಳು, ಅಡ್ಡಿ, ಅಪಘಾತಗಳನ್ನು ಧೈರ್ಯದಿಂದ ಎದುರಿಸಿದರೆ, ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ ಅನ್ನುವುದಕ್ಕೆ ರಿಷಭ್‌ ಪಂತ್‌ ಅವರೇ ದೊಡ್ಡ ಉದಾಹರಣೆಯಾಗಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌, ಬ್ಯಾಟರ್‌ ರಿಷಭ್‌ ಪಂತ್‌ ಅವರು 2022ರ ಡಿ. 29ರಂದು ಹೊಸದಿಲ್ಲಿಯಿಂದ ತನ್ನ ಊರಾದ ಉತ್ತರಾಖಂಡದ ರೂಕಿಗೆ ತೆರಳುತ್ತಿದ್ದ ವೇಳೆ ದಿಲ್ಲಿ- ಡೆಹರಾಡೂನ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು, ಪಲ್ಟಿಯಾಗಿ, ಬೆಂಕಿ ಹೊತ್ತಿಕೊಂಡಿತ್ತು. ಈ ಅಪಘಾತದಲ್ಲಿ ರಿಷಭ್‌ ಪಂತ್‌ ಅವರು ಗಂಭೀರ ಗಾಯಗೊಂಡು, ಪವಾಡ ಸದೃಶ ರೀತಿಯಲ್ಲಿ ಹೋರಾಡಿ ಪಾರಾಗಿದ್ದರು. ಆದರೆ ಬಲ ಮೊಣಕಾಲಿಗೆ ಗಂಭೀರ ಭಾರೀ ಏಟು ಬಿದ್ದಿದ್ದರಿಂದ ನಡೆದಾಡಲು ಸಹ ಕಷ್ಟಕರವಾಗಿತ್ತು. ಹಲವು ತಿಂಗಳುಗಳ ಕಾಲ ಊರುಗೋಲು ಹಿಡಿದುಕೊಂಡೇ ನಡೆಯುತ್ತಿದ್ದರು.

ನಾನು ಮತ್ತೆ ಕ್ರಿಕೆಟ್‌ ಆಡಲು ಇಳಿಯಬೇಕಾದರೆ ಎಷ್ಟು ಸಮಯ ಬೇಕಾಗುತ್ತದೆ ಎಂದು ರಿಷಭ್‌ ವೈದ್ಯರಲ್ಲಿ ಕೇಳಿದಾಗ ಕನಿಷ್ಠ 16 ರಿಂದ 18 ತಿಂಗಳು ಬೇಕಾಗಬಹುದು ಎಂದಿದ್ದರು. ಆದರೆ ರಿಷಭ್‌ ಅವರು ಎಂತಹ ಛಲಗಾರ ಎಂದರೆ ವೈದ್ಯರು ಹೇಳಿದ್ದಕ್ಕಿಂತ 6 ತಿಂಗಳು ಮೊದಲೇ ಗುಣಮುಖರಾಗಿ ತರಬೇತಿಗಾಗಿ ಬೆಂಗಳೂರಿನ ಎನ್‌ಸಿಎಯ ಅಂಗಳಕ್ಕಿಳಿದಿದ್ದರು.

ಐಪಿಎಲ್‌ ಪಂದ್ಯಾವಳಿಯಲ್ಲಿ ಡೆಲ್ಲಿ ತಂಡದ ಚುಕ್ಕಾಣಿಯನ್ನು ಹಿಡಿದಿರುವ ರಿಷಭ್‌ ಪಂತ್‌ ಅವರು ಉತ್ತಮ ರೀತಿಯಲ್ಲಿಯೇ ಆಡುತ್ತಿದ್ದು, ಕೀಪಿಂಗ್‌ನಲ್ಲಿಯೂ ಹಿಂದಿಗಿಂತ ಹೆಚ್ಚಿನ ಚುರುಕುತನ ಕಾಣಿಸುತ್ತಿದೆ. ಇದು ಭಾರತೀಯ ಕ್ರಿಕೆಟ್‌ ದೃಷ್ಟಿಯಿಂದಲೂ, ಕ್ರಿಕೆಟ್‌ ಅಭಿಮಾನಿಗಳಿಗೂ ಸಿಹಿ ಸುದ್ದಿ ಎನ್ನಲಡ್ಡಿಯಿಲ್ಲ.

ಒಮ್ಮೆ ಸೋತರೆ, ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡರೆ, ಪ್ರೀತಿಯಲ್ಲಿ ಸೋತರೆ, ಉದ್ಯಮದಲ್ಲಿ ನಷ್ಟ ಅನುಭವಿಸಿದರೆ ಬದುಕೇ ಮುಗಿಯಿತು, ಇನ್ನು ನನ್ನಿಂದ ಏನೂ ಸಾಧಿಸಲು ಆಗಲ್ಲ ಅನ್ನುವ ಯುವಕರಿಗೆ ರಿಷಭ್‌ ಪಂತ್‌ ಅವರ ಈ ಯಶೋಗಾಥೆಯೇ ಸ್ಫೂರ್ತಿದಾಯಕ.

453 ದಿನಗಳ ಪರಿಶ್ರಮ

ಭೀಕರ ಕಾರು ಅಪಘಾತಕ್ಕೆ ತುತ್ತಾಗಿ ಸಾವಿನ ಕದ ತಟ್ಟಿ ಬದುಕಿ ಬಂದ ರಿಷಭ್‌ ಪಂತ್‌ ಅವರು ಬರೋಬ್ಬರಿ 453 ದಿನಗಳ ಬಳಿಕ ಮತ್ತೆ ಕ್ರಿಕೆಟ್‌ ಅಂಗಳಕ್ಕೆ ಇಳಿದು, ಐಪಿಎಲ್‌ ಪಂದ್ಯವನ್ನು ಆಡುವ ಮೂಲಕ ಮತ್ತೂಮ್ಮೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಈ 453 ದಿನಗಳಲ್ಲಿ ಅವರು ಪಟ್ಟಿರುವ ಯಾತನೆ, ನೋವು, ಮಾನಸಿಕ ತೋಳಲಾಟ, ಹಿಂಸೆ, ಪರಿಶ್ರಮ, ದೈಹಿಕ ಕ್ಷಮತೆ ಹೆಚ್ಚಿಸಲು ಪಟ್ಟಿರುವ ಪ್ರಯತ್ನ ನಿಜಕ್ಕೂ ಎಲ್ಲರಿಗೂ ಪ್ರೇರಣೆ.

ಅಸಾಧಾರಣ ಪ್ರತಿಭೆ

ಮಹೇಂದ್ರ ಸಿಂಗ್‌ ಧೋನಿ ಅವರ ಅನಂತರ ಭಾರತ ತಂಡ ಹಲವಾರು ವಿಕೆಟ್‌ ಕೀಪರ್‌ಗಳನ್ನು ಪ್ರಯೋಗ ನಡೆಸಿತು. ಈ ಪೈಕಿ ಆಡಿದ ಅತ್ಯಲ್ಪ ಅವಧಿಯಲ್ಲೇ ಭರವಸೆ ಮೂಡಿಸಿರುವವರ ಪೈಕಿ ರಿಷಭ್‌ ಪಂತ್‌ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಅಪಘಾತಕ್ಕೆ ಈಡಾಗುವವರೆಗೂ ರಿಷಭ್‌ ಪಂತ್‌ ಅವರೇ ಟೆಸ್ಟ್‌ ಹಾಗೂ ಏಕದಿನ ಮಾದರಿಯಲ್ಲಿ ಮೊದಲ ಪ್ರಾಶಸ್ತ್ಯದ ವಿಕೆಟ್‌ ಕೀಪರ್‌ ಆಗಿದ್ದರು. ಅದಕ್ಕೆ ಕಾರಣವೂ ಇತ್ತು. ತನ್ನ ಭದ್ರಕೋಟೆ “ಗಬ್ಟಾ’ ಅಂಗಳದಲ್ಲಿಯೇ ಬಲಾಡ್ಯ ಆಸ್ಟ್ರೇಲಿಯನ್ನರ ವಿರುದ್ಧ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ಭಾರತ ಟೆಸ್ಟ್‌ ಸರಣಿ ಗೆಲ್ಲುವಲ್ಲಿ, ಆಂಗ್ಲರ ಊರಲ್ಲಿ ನಂಬಲಾರ್ಹವಾದ ರೀತಿಯಲ್ಲಿ ತನ್ನ ಬ್ಯಾಟಿಂಗ್‌ ಸಾಹಸದಿಂದ ಟೆಸ್ಟ್‌ ಗೆಲುವನ್ನು ತಂದಿತ್ತ ಅಪ್ರತಿಮ ವೀರ ಪಂತ್‌.

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

byndoor

Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.