ಅಪಾಯದ ಮುನ್ಸೂಚನೆ ಜಾಗತಿಕ ತಾಪಮಾನ ಏರಿಕೆ


Team Udayavani, Jun 28, 2020, 9:00 AM IST

ಅಪಾಯದ ಮುನ್ಸೂಚನೆ ಜಾಗತಿಕ ತಾಪಮಾನ ಏರಿಕೆ

ಜಗತ್ತು ಹಲವು ಅಪಾಯಗಳನ್ನು ಎದುರಿಸುತ್ತಿದೆ. ಇತ್ತೀಚೆಗಷ್ಟೇ ಅಮೆಜಾನ್‌ ಕಾಡುಗಳಲ್ಲಿ ಕಾಣಿಸಿಕೊಂಡ ಕಾಳಿYಚ್ಚಿನಿಂದಾಗಿ ಲಕ್ಷಾಂತರ ಪ್ರಾಣಿಗಳು ಬೆಂಕಿಗಾಹುತಿಯಾದವು. ಅಂಫಾನ ಎಂಬ ಚಂಡಮಾರುತದಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಈಗೀಗ ಹಿಮನದಿಗಳ ಕರುಗುವಿಕೆ, ಸಮುದ್ರ ಉಬ್ಬರಗಳ ಹೆಚ್ಚಳ, ಭೂ ಕಂಪನ, ಬಿರುಗಾಳಿ, ಅತಿವೃಷ್ಟಿ ..ಹೀಗೆ ಹೇಳುತ್ತಾ ಹೋದರೆ ಪ್ರಕೃತಿ ವಿಕೋಪಗಳ ಪಟ್ಟಿ ಹನುಮನ ಬಾಲದಂತೆ ಬೆಳೆಯುತ್ತದೆ. ಇವುಗಳ ನೇರ ಪರಿಣಾಮವನ್ನು ಜಗತ್ತು ಎದುರಿಸಿ, ಕಣ್ಣೀರು ಹಾಕುತ್ತಿದೆ. ಹಾಗಾದರೆ ಇದಕ್ಕೆ ಕಾರಣವೇನು ಎಂಬ ಪ್ರಶ್ನೆಯನ್ನು ನಾವು ಕೇಳಿಕೊಂಡರೆ ಉತ್ತರ ಅದುವೇ, ಜಾಗತಿಕ ತಾಪಮಾನ ಏರಿಕೆ.

ಜಾಗತಿಕ ತಾಪಮಾನ ಏರಿಕೆ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಜೀವ ಸಂಕುಲವೇ ಸಮಸ್ಯೆ ಎದುರಿಸುವಂತಾಗಿದೆ. 2010-19ರ ದಶಕದಲ್ಲಿ ಅತೀ ಹೆಚ್ಚು ಜಾಗತಿಕ ತಾಪಮಾನ ಏರಿಕೆಯಾಗಿರುವುದು ಇತಿಹಾಸದಲ್ಲಿಯೇ ಮೊದಲು. ಇದು ಅಪಾಯಕಾರಿ ಎಂದು ವಿಶ್ವಸಂಸ್ಥೆ ತಿಳಿಸಿದೆ. ಈ ಬಗ್ಗೆ ಅರಿವು ಕೂಡ ಮೂಡಿಸಲಾಗುತ್ತಿದೆ.

ಸರಳವಾಗಿ ಹೇಳುವುದಾದರೆ ಭೂ ಮಂಡಲದಲ್ಲಿ ತಾಪಮಾನ ಏರಿಕೆಯನ್ನೇ ಜಾಗತಿಕ ತಾಪಮಾನ ಏರಿಕೆ ಎನ್ನಲಾಗುತ್ತದೆ. ಇದರಿಂದ ಹವಾಮಾನದಲ್ಲಿ ಬದಲಾವಣೆ ಉಂಟಾಗುವ ಜತೆಗೆ ಹಲವು ವಿಕ್ಷಿಪ್ತ ಘಟನೆಗಳಿಗೂ ಕಾರಣವಾಗುತ್ತಿದೆ.  ತಾಪಮಾನ ಏರಿಕೆಯಿಂದಾಗಿ ಪರಿಸರದಲ್ಲಿ ಕಾರ್ಬನ್‌ ಡೈ ಆಕ್ಸೆ„ಡ್‌ ಪ್ರಮಾಣ ಹೆಚ್ಚಳವಾಗಿ ವಾಯುಮಾಲಿನ್ಯ ಮತ್ತು ಹಸುರು ಮನೆಯ ಮೇಲೆ ನೇರ ಪರಿಣಾಮ ಉಂಟಾಗು ತ್ತಿದೆ. ಇದರಿಂದ ಭೂಮಿ ತನ್ನ ಸಮತೋಲನ ಕಳೆದುಕೊಂಡು ಹಲವು ಅಪಾಯಗಳನ್ನು ಎದುರಿಸುತ್ತದೆ.

ಕಾರಣ ಏನು?
ಮನುಷ್ಯ ತನ್ನ ವಿಲಾಸಿ ಜೀವನಕ್ಕಾಗಿ ಇಡೀ ಪರಿಸರ ವ್ಯವಸ್ಥೆಯನ್ನು ಬಲಿ ಕೊಟ್ಟಿರುವುದು ಜಾಗತಿಕ ತಾಪಮಾನ ಏರಿಕೆಗೆ ಪ್ರಥಮ ಕಾರಣವಾಗಿದೆ. ಇನ್ನು ಕೈಗಾರಿಕೆಗಳಿಂದ ವಿಷಾನಿಲ ಬಿಡುಗಡೆ, ಪರಿಸರ ನಾಶದಿಂದಾಗಿ ಕೂಡ  ತಾಪಮಾನ ಏರುತ್ತಿದೆ.

ಪರಿಣಾಮಗಳೇನು?
ಜಾಗತಿಕ ತಾಪಮಾನದಿಂದಾಗಿ ಇಂದು ದೇಶದ ಕೃಷಿ ಕ್ಷೇತ್ರವೂ ನೇರ ಪರಿಣಾಮ ಅನುಭವಿಸುತ್ತಿದೆ. ಪ್ರಕೃತಿಯ ಅಸಮತೋಲನದಿಂದ  ಅತಿವೃಷ್ಟಿ-ಅನಾವೃಷ್ಟಿಯಾಗಿ ಕೃಷಿ ಕ್ಷೇತ್ರ ಹಿನ್ನಡೆ ಅನುಭವಿಸುತ್ತದೆ.

ಪರಿಹಾರವೇನು?
ಜಾಗತಿಕ ತಾಪಮಾನ ಇಳಿಕೆ ಮಾಡಲು ವಿಶ್ವಸಂಸ್ಥೆ ಸಹಿತ ಎಲ್ಲ ದೇಶಗಳೂ ಕೂಡ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿವೆ. ಪರಿಸರ ಇದ್ದರೆ ನಾವು ಎಂಬ ಪ್ರಜ್ಞಾಪೂರ್ವಕ ತಿಳಿವಳಿಕೆಯಿಂದ ಈ ಕ್ರಮಕ್ಕೆ ಹಲವು ದೇಶಗಳು ಕೈಜೋಡಿಸಿವೆ. ಪರಿಸರವನ್ನು ಉಳಿಸುವ ಕಾರ್ಯಕ್ಕೆ ಮುಂದಾಗಿವೆ. ಅಲ್ಲದೇ
ಸೌರಶಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಪ್ಯಾರಿಸ್‌ ಒಪ್ಪಂದವೇ ಪರಿಹಾರ
ಕೈಗಾರಿಕೆ ಮತ್ತು ವಾಹನಗಳು ಹೊರಸೂಸುವ ಇಂಗಾಲದ ಡೈ ಆಕ್ಸೆ„ಡ್‌ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ 2015ರಲ್ಲಿ ಹಲವು ದೇಶಗಳು ಪ್ಯಾರಿಸ್‌ ಒಪ್ಪಂದಕ್ಕೆ ಸಹಿ ಹಾಕಿದವು. ನವೀಕರಿಸಲಾಗದ ಇಂಧನಗಳನ್ನು ಹೊರತುಪಡಿಸಿ, ನವೀಕರಿಸಬಹುದಾದ ಇಂಧನಗಳ ಬಳಕೆಗೆ ಈ ಒಪ್ಪಂದದಲ್ಲಿ ಸಲಹೆ ನೀಡಲಾಗಿದೆ. ಆದರೆ ಈ ಒಪ್ಪಂದವನ್ನು ಅದೆಷ್ಟು ರಾಷ್ಟ್ರಗಳು ಸರಿಯಾಗಿ ಪಾಲಿಸುತ್ತಿವೆ ಎಂಬುದು ಯಕ್ಷ ಪ್ರಶ್ನೆ. ಈ ಒಪ್ಪಂದದಿಂದ ಅಮೆರಿಕ ಈಗಾಗಲೇ ಹೊರಬಂದಿದೆ.

ಟಾಪ್ ನ್ಯೂಸ್

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

dw

Padubidri: ಕಾರು ಢಿಕ್ಕಿ; ಪಾದಚಾರಿ ಸಾವು

8

Kasaragod: ಟ್ಯಾಂಕರ್‌ ಲಾರಿಯಿಂದ ರಸ್ತೆಗೆ ಹರಿದ ಎಣ್ಣೆ

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

crime

Siddapura: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.